ಆರೋಗ್ಯ ಸ್ನೇಹಿ ಗರಿಗರಿ ದೋಸೆ.. ಈ ದೋಸೆ ತೂಕ ಇಳಿಸುತ್ತಂತೆ..!
ದಕ್ಷಿಣ ಭಾರತದ ಪ್ರತಿ ಮನೆಯಲ್ಲಿ ಅತಿ ಸಾಮಾನ್ಯವಾದ ಎರಡು ತಿಂಡಿಗಳೆಂದರೆ ಇಡ್ಲಿ ಮತ್ತು ದೋಸೆ. ದೋಸೆಯಲ್ಲಿ ಹಲವಾರು ವಿಧಗಳಿವೆ. ಸಾಮಾನ್ಯವಾಗಿ ಉದ್ದಿನ ದೋಸೆ ಹೆಚ್ಚು ಜನಪ್ರಿಯ ಇನ್ನುಳಿದಂತೆ ಕಾಯಿ ದೋಸೆ, ನೀರು ದೋಸೆ, ಮೆಂತೆ ದೋಸೆ ಮೊದಲಾದ ಹಲವಾರು ವೈವಿಧ್ಯಗಳಿವೆ. ಅಕ್ಕಿಯನ್ನು ಬಹುಕಾಲ ನೆನೆಸಿಟ್ಟು ಕಡೆಯುವ ಕಾರಣ ಇದರಲ್ಲಿರುವ ಪೋಷಕಾಂಶಗಳು ನಷ್ಟವಾಗದೇ ದೇಹಕ್ಕೆ ಲಭಿಸುವುದೇ ಇದರ ಪೌಷ್ಟಿಕತೆಯ ಗುಟ್ಟು. ಇದರಲ್ಲಿ ಉತ್ತಮ ಪ್ರಮಾಣದ ಕಾರ್ಬೋಹೈಡ್ರೇಟುಗಳು, ವಿಟಮಿನ್ ಗಳು, ಪ್ರೋಟೀನುಗಳು ಮತ್ತು ವಿವಿಧ ಖನಿಜಗಳಿವೆ. ದೋಸೆಹಿಟ್ಟನ್ನು ನೆನೆಸಿಟ್ಟ ಬಳಿಕ […]
ದಕ್ಷಿಣ ಭಾರತದ ಪ್ರತಿ ಮನೆಯಲ್ಲಿ ಅತಿ ಸಾಮಾನ್ಯವಾದ ಎರಡು ತಿಂಡಿಗಳೆಂದರೆ ಇಡ್ಲಿ ಮತ್ತು ದೋಸೆ. ದೋಸೆಯಲ್ಲಿ ಹಲವಾರು ವಿಧಗಳಿವೆ. ಸಾಮಾನ್ಯವಾಗಿ ಉದ್ದಿನ ದೋಸೆ ಹೆಚ್ಚು ಜನಪ್ರಿಯ ಇನ್ನುಳಿದಂತೆ ಕಾಯಿ ದೋಸೆ, ನೀರು ದೋಸೆ, ಮೆಂತೆ ದೋಸೆ ಮೊದಲಾದ ಹಲವಾರು ವೈವಿಧ್ಯಗಳಿವೆ. ಅಕ್ಕಿಯನ್ನು ಬಹುಕಾಲ ನೆನೆಸಿಟ್ಟು ಕಡೆಯುವ ಕಾರಣ ಇದರಲ್ಲಿರುವ ಪೋಷಕಾಂಶಗಳು ನಷ್ಟವಾಗದೇ ದೇಹಕ್ಕೆ ಲಭಿಸುವುದೇ ಇದರ ಪೌಷ್ಟಿಕತೆಯ ಗುಟ್ಟು. ಇದರಲ್ಲಿ ಉತ್ತಮ ಪ್ರಮಾಣದ ಕಾರ್ಬೋಹೈಡ್ರೇಟುಗಳು, ವಿಟಮಿನ್ ಗಳು, ಪ್ರೋಟೀನುಗಳು ಮತ್ತು ವಿವಿಧ ಖನಿಜಗಳಿವೆ. ದೋಸೆಹಿಟ್ಟನ್ನು ನೆನೆಸಿಟ್ಟ ಬಳಿಕ ಬುರುಗು ಬರಲು ಇದರಲ್ಲಿರುವ ಪ್ರೋಬಯೋಟಿಕ್ಸ್ ಎಂಬ ಕಣಗಳು ಕಾರಣ. ಇವು ದೋಸೆಯನ್ನು ಉಬ್ಬಿಸಿ ಗರಿಗರಿಯಾಗಿಸಲು ನೆರವಾಗುವುದಲ್ಲದೇ ಹೊಟ್ಟೆ ಸೇರಿದ ಬಳಿಕ ಸುಲಭವಾಗಿ ಜೀರ್ಣವಾಗಲೂ ನೋಡಿಕೊಳ್ಳುತ್ತದೆ.
ಒಂದು ಅಥವಾ ಎರಡು ದೋಸೆಗಳನ್ನು ಬೆಳಗ್ಗಿನ ಉಪಾಹಾರವಾಗಿ ಸೇವಿಸಿದರೆ ಸಾಕು, ಮದ್ಯಾಹ್ನದವರೆಗೂ ಬೇರೇನೂ ತಿನ್ನುವ ಅಗತ್ಯವಿಲ್ಲ. ಇದರಲ್ಲಿರುವ ಉತ್ತಮ ಪ್ರಮಾಣದ ಕಾರ್ಬೋಹೈಡ್ರೇಟುಗಳು ನಿಧಾನವಾಗಿ ರಕ್ತಕ್ಕೆ ಬಿಡುಗಡೆಯಾಗುತ್ತಾ ಚಟುವಟಿಕೆಯಿಂದಿರಲು ನೆರವಾಗುತ್ತವೆ. ಒಂದು ವೇಳೆ ಅತಿ ಹೆಚ್ಚಿನ ಚಟುವಟಿಕೆ ಇದ್ದರೆ ಮಾತ್ರ ಮಸಾಲೆ ದೋಸೆ ಸವಿಯುವುದು ಉತ್ತಮ.
ದೋಸೆಯಲ್ಲಿ ಹಲವು ಖನಿಜಗಳಿವೆ, ಆದರೆ ಅತಿ ಕಡಿಮೆ ಪ್ರಮಾಣದಲ್ಲಿವೆ. ಒಂದು ದೋಸೆಯಲ್ಲಿ ಕಡಿಮೆ ಪ್ರಮಾಣದ ಕಬ್ಬಿಣ, ವಿಟಮಿನ್ ಸಿ ಮತ್ತು ಕ್ಯಾಲ್ಸಿಯಂ ಇವೆ. ಸಾಂಬಾರ್ ನೊಂದಿಗೆ ದೋಸೆಯನ್ನು ತಿಂದಾಗ ಇತರ ಪ್ರೋಟೀನುಗಳು ಮತ್ತು ಖನಿಜಗಳು ದೊರಕುವ ಕಾರಣ ಈ ಜೋಡಿ ಆರೋಗ್ಯಕರ ಆಹಾರವಾಗಿದೆ.
ದೋಸೆಯಲ್ಲಿ ಎಣ್ಣೆ ಇಲ್ಲವೇ ಇಲ್ಲ. ಇರುವುದೇನಿದ್ದರೂ ದೋಸೆ ಕಾವಲಿಗೆ ಹಚ್ಚುವ ಎಣ್ಣೆಯ ಪಸೆಯೇ ಹೊರತು ಬೇರೆ ಎಣ್ಣೆ ಸೇರಿಸುವ ಅಗತ್ಯವಿಲ್ಲ. ಇಂದು ನಾನ್ ಸ್ಟಿಕ್ ಕಾವಲಿಗಳನ್ನು ಬಳಸಿ ಈ ಎಣ್ಣೆಯನ್ನೂ ಬಳಸುವ ಅಗತ್ಯವಿಲ್ಲದೇ ದೋಸೆ ಮಾಡಬಹುದು. ಅಳೆದೂ ಸುರಿದೂ ಲೆಕ್ಕಾಚಾರ ಮಾಡಿದರೆ ಒಂದು ದೋಸೆಯಲ್ಲಿ ಗರಿಷ್ಟ ಎಂದರೆ ಎರಡು ಗ್ರಾಂ ಸಂತುಲಿತ ಕೊಬ್ಬು ಕಂಡುಬರಬಹುದು. ಆದರೆ ಅಸಂತುಲಿತ ಕೊಬ್ಬು ಇಲ್ಲವೇ ಇಲ್ಲದ ಕಾರಣ ಇದರಿಂದ ಹೃದಯಕ್ಕೆ ಹೆಚ್ಚಿನ ಒತ್ತಡ ನೀಡುವ ಅಗತ್ಯವಿಲ್ಲವಾಗುತ್ತದೆ. ಈ ಮೂಲಕ ದೋಸೆ ಹೃದಯಸ್ನೇಹಿಯಾಗಿ
ಸಾಮಾನ್ಯವಾಗಿ ದೈಹಿಕ ಕೆಲಸ ಮಾಡುವವರಿಗೆ ಹೆಚ್ಚಿನ ಪೌಷ್ಟಿಕ ಆಹಾರದ ಅಗತ್ಯವಿದೆ. ದೋಸೆಯಲ್ಲಿ ಉತ್ತಮ ಪ್ರಮಾಣದ ಪೋಷಕಾಂಶಗಳಿದ್ದರೂ ಹೆಚ್ಚಿನ ಚಟುವಟಿಕೆಗೆ ಸಾಲದೇ ಹೋಗಬಹುದು. ಆಗ ದೋಸೆ ಹಿಟ್ಟಿನಲ್ಲಿ ಕೆಲವು ಹಸಿ ತರಕಾರಿಗಳು, ಉದಾಹರಣೆಗೆ ಕ್ಯಾರೆಟ್, ಬೀನ್ಸ್ ಮೊದಲಾದವು ಅಥವಾ ಮಾಂಸಾಹಾರಿಗಳು ದೋಸೆಯ ಮೇಲೆ ಒಂದು ಮೊಟ್ಟೆಯನ್ನು ಹರಡಿ ಹೊಸರುಚಿಯನ್ನು ಸವಿಯಬಹುದು. ಇದರಿಂದ ದೈಹಿಕ ಕೆಲಸ ಸುಲಭ ಮತ್ತು ಹೆಚ್ಚಿನ ಶ್ರಮವಿಲ್ಲದೇ ಸಾಧ್ಯವಾಗುತ್ತದೆ.
ಸ್ನಾಯುಗಳ ಬೆಳವಣಿಗೆಗೆ ಪ್ರೋಟೀನುಗಳು ಮುಖ್ಯವಾಗಿ ಬೇಕಾಗಿದೆ. ಆದರೆ ಒಮ್ಮೆಲೇ ಅತಿ ಹೆಚ್ಚಿನ ಪ್ರೋಟೀನು ಸಿಕ್ಕರೂ ಅದು ಆರೋಗ್ಯಕ್ಕೆ ಹಾನಿಕರ. ಮಾಂಸಾಹಾರದ ಮೂಲಕ ಪ್ರೋಟೀನುಗಳ ಭಂಡಾರವೇ ಲಭ್ಯವಾಗುತ್ತದೆ. ಆದರೆ ಇದನ್ನು ಬಳಸಿಕೊಳ್ಳಲು ದೇಹ ಸೋಲುತ್ತದೆ. ಬದಲಿಗೆ ದೋಸೆಯಲ್ಲಿ ದಿನಕ್ಕೆ ದೇಹ ಎಷ್ಟು ಪಡೆದುಕೊಳ್ಳಬಹುದೋ ಅಷ್ಟೇ ಪ್ರೋಟೀನುಗಳಿರುವ ಕಾರಣ ಇದು ಸ್ನಾಯುಗಳನ್ನು ಬೆಳೆಸಲು ಪೂರಕವಾಗಿದೆ. ಉತ್ತಮ ಪರಿಣಾಮಕ್ಕಾಗಿ ದೋಸೆಯನ್ನು ಸಾಂಬಾರ್ ಜೊತೆಗೆ ಸೇರಿಸಬಹುದು. ಕ್ರೀಡಾಪಟುಗಳು ಮತ್ತು ಕಾರ್ಮಿಕರು ದೋಸೆಯೊಂದಿಗೆ ಮೊಟ್ಟೆಯನ್ನು ಸೇವಿಸಿದರೆ ಇನ್ನೂ ಹೆಚ್ಚಿನ ಪ್ರೋಟೀನುಗಳು ದೊರಕುತ್ತವೆ
ಇದರಲ್ಲಿರುವ ಕಡಿಮೆ ಕ್ಯಾಲೋರಿ ಹಾಗೂ ಹೆಚ್ಚಿನ ಪ್ರಮಾಣದ ಪಿಷ್ಟ ತೂಕವನ್ನು ಏರಿಸದಿರಲು ನೆರವಾಗುತ್ತವೆ. ಇದೇ ಕಾರಣಕ್ಕೆ ದೋಸೆ ತೂಕ ಇಳಿಸುವವರಿಗೆ ಉತ್ತಮವಾದ ಆಹಾರವಾಗಿದೆ. ಆದರೆ ತಯಾರಿಸುವಾಗ ಇದರಲ್ಲಿ ಎಣ್ಣೆ ಇಲ್ಲದಂತೆ ನೋಡಿಕೊಳ್ಳುವುದು ಮುಖ್ಯ.
ಇದರಲ್ಲಿ ಸಕ್ಕರೆ ಅತಿ ಕಡಿಮೆ ಪ್ರಮಾಣದಲ್ಲಿರುವ ಕಾರಣ ಮಧುಮೇಹಿಗಳೂ ದೋಸೆಯನ್ನು ಸವಿಯಬಹುದು. ಆದರೆ ಸಾದಾ ಅಥವಾ ಸೆಟ್ ದೋಸೆಯನ್ನು ಸೇವಿಸಿವುದು ಉತ್ತಮ. ಮಸಾಲೆ ದೋಸೆಯನ್ನು ಮಾತ್ರ ಕಣ್ಣಿನಿಂದ ಸವಿದು ಆನಂದಿಸಿದರೆ ಸಾಕು.
Published On - 10:48 am, Sat, 28 September 19