AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಹಾಲಯ ಅಮಾವಾಸ್ಯೆಯ ಮಹತ್ವವೇನು..? ಆಚರಣೆ ಹೇಗೆ..?

ಇಂದು ಭಾದ್ರಪದ ಮಾಸದ ಕೃಷ್ಣಪಕ್ಷದ ಅಮಾವಾಸ್ಯೆ. ಈ ದಿನವನ್ನು ಮಹಾಲಯ ಅಮಾವಾಸ್ಯೆ ಎಂದು ಕರೆಯಲಾಗುತ್ತೆ. ಕಳೆದ ಹದಿನೈದು ದಿನಗಳ ಪಿತೃಪಕ್ಷದ ಪಿತೃಕಾರ್ಯಕ್ಕೆ ಇಂದು ಕೊನೆಯ ದಿನ. ಪಿತೃಪಕ್ಷದ ಕೊನೆಯ ದಿನ ಮಹಾಲಯ ಅಮಾವಾಸ್ಯೆ ಬರುವುದರಿಂದ ಈ ದಿನವನ್ನು ಸರ್ವಪಿತೃ ಅಮಾವಾಸ್ಯೆ ಎಂತಲೂ ಕರೆಯುತ್ತಾರೆ. ನಮ್ಮನ್ನು ಅಗಲಿದ ಪಿತೃಗಳಿಗೆ ಪಿತೃಪಕ್ಷದ 14 ದಿನಗಳಲ್ಲಿ ಯಾವ ದಿನವೂ ಪಿತೃ ಕಾರ್ಯ ಮಾಡೋಕೆ ಸಾಧ್ಯವಾಗದೇ ಇದ್ರೆ ಕೊನೆಯ ಪಕ್ಷ ಈ ದಿನವಾದ್ರೂ ಸ್ಮರಿಸೋದು ರೂಢಿಯಲ್ಲಿದೆ.  ಈ ದಿನ, ಅಗಲಿದ ನಮ್ಮವರನ್ನು ಸ್ಮರಿಸಿ, […]

ಮಹಾಲಯ ಅಮಾವಾಸ್ಯೆಯ ಮಹತ್ವವೇನು..? ಆಚರಣೆ ಹೇಗೆ..?
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​|

Updated on:Sep 27, 2019 | 1:50 PM

Share

ಇಂದು ಭಾದ್ರಪದ ಮಾಸದ ಕೃಷ್ಣಪಕ್ಷದ ಅಮಾವಾಸ್ಯೆ. ಈ ದಿನವನ್ನು ಮಹಾಲಯ ಅಮಾವಾಸ್ಯೆ ಎಂದು ಕರೆಯಲಾಗುತ್ತೆ. ಕಳೆದ ಹದಿನೈದು ದಿನಗಳ ಪಿತೃಪಕ್ಷದ ಪಿತೃಕಾರ್ಯಕ್ಕೆ ಇಂದು ಕೊನೆಯ ದಿನ. ಪಿತೃಪಕ್ಷದ ಕೊನೆಯ ದಿನ ಮಹಾಲಯ ಅಮಾವಾಸ್ಯೆ ಬರುವುದರಿಂದ ಈ ದಿನವನ್ನು ಸರ್ವಪಿತೃ ಅಮಾವಾಸ್ಯೆ ಎಂತಲೂ ಕರೆಯುತ್ತಾರೆ. ನಮ್ಮನ್ನು ಅಗಲಿದ ಪಿತೃಗಳಿಗೆ ಪಿತೃಪಕ್ಷದ 14 ದಿನಗಳಲ್ಲಿ ಯಾವ ದಿನವೂ ಪಿತೃ ಕಾರ್ಯ ಮಾಡೋಕೆ ಸಾಧ್ಯವಾಗದೇ ಇದ್ರೆ ಕೊನೆಯ ಪಕ್ಷ ಈ ದಿನವಾದ್ರೂ ಸ್ಮರಿಸೋದು ರೂಢಿಯಲ್ಲಿದೆ.

 ಈ ದಿನ, ಅಗಲಿದ ನಮ್ಮವರನ್ನು ಸ್ಮರಿಸಿ, ಪಿಂಡ ಪ್ರದಾನ, ತಿಲ ತರ್ಪಣ ಅರ್ಪಿಸಿ ಸ್ಮರಿಸುತ್ತಾರೆ. ಇನ್ನು, ಈ ಮಹಾಲಯ ಅಮಾವಾಸ್ಯೆಗೆ ಪುರಾಣದ ಪ್ರಕಾರ ವಿಶೇಷ ಮಹತ್ವವಿದೆ. ಅದೇನಂದ್ರೆ ಸ್ವರ್ಗಕ್ಕೆ ಹೋದ ಕರ್ಣ ಯಮನ ಆದೇಶದಂತೆ ಮತ್ತೆ ಭೂ ಲೋಕಕ್ಕೆ ಬರ್ತಾನೆ. ಹಾಗೇ ಬಂದ ಕರ್ಣ ಭೂ ಲೋಕದಲ್ಲಿ ಇದ್ದು ಹಿರಿಯರಿಗೆ, ಬಡವರಿಗೆ ಅನ್ನ, ವಸ್ತ್ರದಾನವನ್ನು ಮಾಡ್ತಾನೆ. ಕರ್ಣನಿಂದ ದಾನ ಪಡೆದ ಎಲ್ಲರೂ ಆತನನ್ನು ಹರಸ್ತಾರೆ. ಹಿರಿಯರ ಆಶೀರ್ವಾದ ಪಡೆದ ಕರ್ಣ ಮತ್ತೆ ಸ್ವರ್ಗಕ್ಕೆ ತೆರಳುತ್ತಾನೆ. ಹೀಗೆ ಕರ್ಣ ಭೂಲೋಕದಿಂದ ಸ್ವರ್ಗಲೋಕಕ್ಕೆ ತೆರಳುವ ದಿನವೇ ಮಹಾಲಯ ಅಮಾವಾಸ್ಯೆ ಎಂದು ಪುರಾಣದಲ್ಲಿ ಉಲ್ಲೇಖವಿದೆ.

ಅಲ್ಲದೇ ಹಿಂದೂ ಪುರಾಣದ ಪ್ರಕಾರ, ಮೂರು ತಲೆಮಾರಿನವರೆಗಿನ ಪಿತೃಗಳ ಆತ್ಮವು ಭೂಮಿ ಮತ್ತು ಸ್ವರ್ಗಲೋಕದ ನಡುವೆ ಇರುವ ಪಿತೃಲೋಕಕ್ಕೆ ಈ ದಿನದಂದು ಬರ್ತಾರೆ ಅನ್ನೋ ನಂಬಿಕೆ ಇದೆ. ಇದೇ ಕಾರಣಕ್ಕೆ ಪಿಂಡಪ್ರದಾನ, ತರ್ಪಣ ಬಿಡುವಾಗ ಕೇವಲ ಮೂರು ತಲೆಮಾರಿನವರೆಗಿನ ಪಿತೃಗಳನ್ನು ಮಾತ್ರ ಸ್ಮರಿಸಲಾಗುತ್ತೆ. ಪಿತೃ ಪಕ್ಷದಲ್ಲಿ ಮತ್ತು ಪಿತೃ ಪಕ್ಷದ ಕೊನೆಯ ದಿನವಾದ ಮಹಾಲಯ ಅಮಾವಾಸ್ಯೆಯಂದು ಮಾಡುವ ಪಿತೃಕಾರ್ಯ ಅಥವಾ ಶ್ರಾದ್ಧ ಕಾರ್ಯಕ್ಕೆ ವಿಶೇಷ ಫಲ ಪ್ರಾಪ್ತಿಯಾಗುತ್ತೆ ಎನ್ನಲಾಗುತ್ತೆ.

ಇದನ್ನೂ ಓದಿ:  ಮಹಾಲಯ ಅಮಾವಾಸ್ಯೆ ದಿನ ಶ್ರಾದ್ಧ ಕಾರ್ಯ ಹೇಗೆ ಮಾಡಬೇಕು? 

Published On - 1:09 pm, Fri, 27 September 19

Follow Us
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್