ನಾವೆಲ್ಲಾ ದೇವಸ್ಥಾನಗಳಿಗೆ ಹೋದಾಗ ದೇವರ ದರ್ಶನ ಪಡೆದ ನಂತರ ದೇವಾಲಯದ ಸುತ್ತ ಪ್ರದಕ್ಷಿಣೆ ಹಾಕ್ತೀವಿ. ಕೆಲವರು ದೇವಾಲಯದ ಬಳಿ ನದಿ, ಹೊಳೆ ಇದ್ದರೆ ಅಲ್ಲಿ ಮುಳುಗಿ ಒದ್ದೆ ಬಟ್ಟೆಯಲ್ಲಿ ಬಂದು ದೇವಾಲಯವನ್ನು ಪ್ರದಕ್ಷಿಣೆ ಮಾಡ್ತಾರೆ. ದೇವರ ಕೃಪೆಯನ್ನು ಪಡೆಯಲು ಹೀಗೆ ಪೂಜೆ, ಹರಕೆಗಳನ್ನು ಮಾಡ್ತಾರೆ.
ದೇವರು ತನ್ನ ಭಕ್ತರಿಂದ ಇಚ್ಚಿಸುವುದು ಒಂದೇ ಅದು ನಿಷ್ಕಲ್ಮಷವಾದ ಭಕ್ತಿ. ಹೀಗಾಗೇ ದೇವರ ಕೃಪೆ ಪಡೆಯಲು ಹೋದಾಗ ಪ್ರತಿಯೊಬ್ಬರೂ ಕೂಡ ಮಾನಸಿಕವಾಗಿ, ದೈಹಿಕವಾಗಿ ಶುದ್ಧವಾಗಿರಬೇಕು. ನಾವು ಒದ್ದೆ ಬಟ್ಟೆಯನ್ನು ಧರಿಸಿದಾಗ ಮನಸ್ಸು ಸಂಪೂರ್ಣವಾಗಿ ನಮ್ಮ ಹಿಡಿತದಲ್ಲಿರುತ್ತೆ.
ಏಕಾಗ್ರತೆಯಿಂದಿರಲು ಸಹಕಾರಿ:
ಮನಸ್ಸು ಭಕ್ತಿಭಾವದಲ್ಲಿ ಮುಳುಗಿರಲು, ಏಕಾಗ್ರತೆಯಿಂದ ಇರಲು ತಣ್ಣೀರಿನ ಸ್ನಾನ, ಒದ್ದೆ ಬಟ್ಟೆಗಳು ಸಹಕಾರಿ ಆಗುತ್ತವೆ ಅಂತಾ ನಮ್ಮ ಶಾಸ್ತ್ರಗಳಲ್ಲಿ ಉಲ್ಲೇಖವಿದೆ. ಹೀಗಾಗೇ ದೇವರ ದರ್ಶನವನ್ನು ಪಡೆಯಲು ಹೋಗುವ ಮೊದಲು ಕಲ್ಯಾಣಿ, ಕೊಳ ಅಥವಾ ನದಿಗಳಲ್ಲಿ ಸ್ನಾನ ಮಾಡುವ ವಾಡಿಕೆ ಇದೆ. ನಮ್ಮ ಪೂರ್ವಜರು ಮಾಡಿರುವ ಇಂತಹ ನಿಯಮಗಳು ಸತ್ಯದ ನಡೆ-ನುಡಿಗಳು, ವರ್ತನೆ, ವಾಸ್ತವಿಕ ನೆಲೆಗಟ್ಟಿನಲ್ಲಿ ಆಚರಿಸುವ ನಂಬಿಕೆಗಳು, ವೈಚಾರಿಕತೆಯ ಬಗ್ಗೆ ತಿಳಿಸುತ್ತವೆ. ಹಿಂದಿನ ಕಾಲದಲ್ಲಿ ಮಾಡಿರುವ ಶಾಸ್ತ್ರದಲ್ಲಿ ನೈಜತೆ, ವಾಸ್ತವಿಕತೆ ಹಾಗೂ ಸಕಾರಾತ್ಮಕ ಚಿಂತನೆಗಳಿಂದ ಕೂಡಿರುತ್ತೆ.
ಅಜೀರ್ಣ ಸಮಸ್ಯೆ ನಿವಾರಣೆ:
ವೈಜ್ಞಾನಿಕವಾಗಿ ನೋಡುವುದಾದರೆ ಒದ್ದೆ ಬಟ್ಟೆ ಧರಿಸಿ ದೇವಾಲಯದಲ್ಲಿ ಪ್ರದಕ್ಷಿಣೆ ಮಾಡುವುದರಿಂದ ಹಲವಾರು ರೀತಿಯ ಲಾಭಗಳಾಗುತ್ತವೆ ಎನ್ನಲಾಗುತ್ತೆ. ನಾವು ಸೇವನೆ ಮಾಡುವ ಆಹಾರ ಜೀರ್ಣವಾದ ನಂತರ ಉಳಿದಿರುವ ಕಲ್ಮಶಗಳು ಅನೇಕ ಬಾರಿ ದೇಹದಲ್ಲಿ ಉಳಿದು ಮಲಬದ್ಧತೆ ಸಮಸ್ಯೆ ಕಾಡುತ್ತೆ. ಹೀಗೆ ಅಜೀರ್ಣ ಉಂಟಾಗಲು ಕಾರಣ ಏನೆಂದರೆ ನಾವು ಸೇವಿಸಿದ ಆಹಾರ ಸಕ್ರಮವಾಗಿ ಜೀರ್ಣ ಆಗದಿರುವುದು.
ಹೀಗಾಗೇ ನಾವು ದೇವಸ್ಥಾನಕ್ಕೆ ಭೇಟಿ ನೀಡುವ ಸಮಯದಲ್ಲಿ ಮಡಿಯ ಹೆಸರಿನಲ್ಲಿ ಒದ್ದೆ ಬಟ್ಟೆಗಳನ್ನು ಧರಿಸುವುದರಿಂದ ನಮ್ಮ ಅಜೀರ್ಣ ಹಾಗೂ ಮಲಬದ್ಧತೆ ಸಮಸ್ಯೆ ನಿವಾರಣೆಯಾಗುತ್ತೆ. ಜೊತೆಗೆ ಒದ್ದೆ ಬಟ್ಟೆಯನ್ನೂ ಧರಿಸಿಕೊಂಡು ದೇವಸ್ಥಾನದ ಸುತ್ತಲೂ ಪ್ರದಕ್ಷಿಣೆ ಹಾಕುವುದರಿಂದ ಆರೋಗ್ಯ ಕೂಡಾ ಸುಧಾರಿಸುತ್ತೆ ಎಂಬ ನಂಬಿಕೆ ಇದೆ.
Published On - 3:40 pm, Sat, 16 November 19