ಒಬ್ಬೊಬ್ಬರಿಗೆ ಒಂದೊಂದು ರೀತಿಯ ಅಭ್ಯಾಸವಿರುತ್ತೆ. ಕೆಲವರು ಕುಳಿತಿದ್ದಾಗ ಕಾಲನ್ನು ಅಲ್ಲಾಡಿಸಿದ್ರೆ, ಕೆಲವರಿಗೆ ಕೂದಲು ಬಾಯಲ್ಲಿ ಇಟ್ಟುಕೊಳ್ಳುವ ಅಭ್ಯಾಸ. ಇಂತಹ ಅಭ್ಯಾಸಗಳಲ್ಲಿ ಒಂದು ಉಗುರು ಕಚ್ಚೋದು. ಕೆಲವರು ತೀವ್ರ ಒತ್ತಡವಿರುವಾಗ ಉಗುರು ಕಚ್ಚುವ ಕೆಟ್ಟ ಅಭ್ಯಾಸ ಬೆಳೆಸಿಕೊಂಡಿರುತ್ತಾರೆ.
ಉಗುರು ಕಚ್ಚುವುದು ರಾಕ್ಷಸ ಗುಣವನ್ನು ಪ್ರೇರೇಪಿಸುತ್ತೆ. ಅಲ್ಲದೇ ಉಗುರಿನಲ್ಲಿರುವ ಮಣ್ಣು, ಕ್ರಿಮಿಕೀಟಗಳು ದೇಹದಲ್ಲಿ ಪ್ರವೇಶಿಸಿ ನಮಗೆ ಅಶಾಂತಿಯನ್ನು ಉಂಟುಮಾಡುತ್ತೆ. ನಮ್ಮ ದೇಹದ ಕೈಕಾಲುಗಳಲ್ಲಿರುವ ಉಗುರುಗಳು ಅತ್ಯಂತ ವಿಷಪೂರಿತವಾಗಿರುತ್ತವೆ. ಹೀಗಾಗೇ ನಮ್ಮ ಧರ್ಮಶಾಸ್ತ್ರ ಉಗುರು ಕಚ್ಚುವ ಅಭ್ಯಾಸವು ದಾರಿದ್ರ್ಯದ ಪ್ರತಿರೂಪವೆಂದು ಹೇಳುತ್ತೆ.
ವೈದ್ಯಶಾಸ್ತ್ರದ ಪ್ರಕಾರ, ಉಗುರು ಕಚ್ಚುವುದು ಕ್ಯಾಲ್ಸಿಯಂ ಕೊರತೆಯ ಲಕ್ಷಣ ಎನ್ನಲಾಗುತ್ತೆ. ಕೆಲವರು ಮಾಡಲು ಕೆಲಸವಿಲ್ಲದೇ ಕೂತಾಗ, ಇಲ್ಲವೇ ತೀವ್ರ ಒತ್ತಡದಲ್ಲಿದ್ದಾಗ ಉಗುರು ಕಚ್ಚುವುದನ್ನು ರೂಢಿಸಿಕೊಳ್ತಾರೆ. ಇದು ಒತ್ತಡದಿಂದ ಹೊರಬರುವ ಒಂದು ಕ್ರಿಯೆ ಅಷ್ಟೇ. ಉಗುರು ಕಚ್ಚುವುದರಿಂದ ನಮ್ಮ ಆರೋಗ್ಯದ ಮೇಲೆ ಗಂಭೀರವಾದ ಪರಿಣಾಮಗಳು ಉಂಟಾಗುತ್ತವೆ.
ಉಗುರು ಕಚ್ಚುವುದರಿಂದಾಗುವ ಆರೋಗ್ಯ ಸಮಸ್ಯೆಗಳು:
-ಉಗುರಿನಲ್ಲಿರುವ ಕಲ್ಮಶ ಹೊಟ್ಟೆ ಸೇರುವುದರಿಂದ ಜಂತು ಹುಳದ ತೊಂದರೆ ಅನುಭವಿಸಬೇಕಾಗುತ್ತೆ
-ಹಲ್ಲು ಬಲಹೀನವಾಗಬಹುದು
-ಕರುಳಿನ ಸಮಸ್ಯೆ ಕಾಡುತ್ತೆ
-ಜೀರ್ಣಕ್ರಿಯೆ ಸರಿಯಾಗಿ ಆಗೋದಿಲ್ಲ
-ಉಗುರು ತುಂಡಾದ್ರೆ ಚರ್ಮಕ್ಕೆ ನೋವಾಗುತ್ತೆ
Published On - 11:21 am, Fri, 13 December 19