ಭಾರತೀಯ ಸಂಪ್ರದಾಯದ ಪ್ರಕಾರ, ವಿವಾಹವಾದ ಸ್ತ್ರೀಯರು ಧರಿಸುವ ಒಂದೊಂದು ಆಭರಣಕ್ಕೂ ಅದರದ್ದೇ ಆದ ಮಹತ್ವವಿದೆ. ಹಾಗೇ ಈ ಆಭರಣಗಳು ಸೌಭಾಗ್ಯದ ಸಂಕೇತವೂ ಹೌದು. ವಿವಾಹವಾದ ಸ್ತ್ರೀಯರು ಧರಿಸುವ ಆಭರಣಗಳಲ್ಲಿ ಕಾಲುಂಗುರವೂ ಒಂದು. ಮಹಿಳೆಯರು ಕಾಲುಂಗುರ ಧರಿಸುವುದರಿಂದ ಹಿಂದೆ ಹತ್ತಾರು ಲಾಭಗಳಿವೆ ಎನ್ನಲಾಗುತ್ತೆ. ಕಾಲುಂಗುರ ತೊಡುವುದು ಕೇವಲ ಸಂಪ್ರದಾಯವಷ್ಟೇ ಅಲ್ಲ ಇದರ ಹಿಂದೆ ವೈಜ್ಞಾನಿಕ ಕಾರಣವೂ ಇದೆ.
ಮದುವೆ ಸಂದರ್ಭದಲ್ಲಿ ಸಂಪ್ರದಾಯದ ಭಾಗವಾಗಿ ಪತಿ, ಪತ್ನಿಗೆ ಕಾಲುಂಗುರ ತೊಡಿಸುತ್ತಾನೆ. ಅದು ವಿವಾಹಿತೆ ಅನ್ನೋದರ ಸಂಕೇತ ಕೂಡ ಹೌದು. ಸಾಮಾನ್ಯವಾಗಿ ಕಾಲಿನ ಎರಡನೇ ಬೆರಳಿಗೆ ಬೆಳ್ಳಿ ಕಾಲುಂಗುರವನ್ನು ತೊಡಿಸಲಾಗುತ್ತೆ. ಕಾಲುಂಗುರ ಕೇವಲ ಸಂಪ್ರದಾಯ ಪದ್ಧತಿಯಷ್ಟೇ ಅಲ್ಲ. ಹಾಗೇ ಕಾಲುಂಗುರವನ್ನು ಹಾಕಿಕೊಳ್ಳೋದು ಕೇವಲ ಮದುವೆ ಆಗಿದೆ ಎಂದು ತೋರಿಸಿಕೊಳ್ಳೋಕೆ ಮಾತ್ರವಲ್ಲ. ಅದರ ಹಿಂದೆ ಕೆಲವು ವೈಜ್ಞಾನಿಕ ಕಾರಣಗಳಿವೆ. ಅವು ಯಾವುವುವೆಂದರೆ
1)ಕಾಲಿನ ಎರಡನೇ ಬೆರಳು, ನಾಡಿ ಗರ್ಭಕೋಶಕ್ಕೆ ಸಂಬಂಧಪಟ್ಟಿರುವುದರಿಂದ ನಿರ್ದಿಷ್ಟ ಪ್ರಮಾಣದ ಶಾಖ ಅಥವಾ ಉಷ್ಣದ ನಾಡಿಯನ್ನು ನಿಯಂತ್ರಣದಲ್ಲಿಡಲು ಕಾಲುಂಗುರ ಸಹಾಯ ಮಾಡುತ್ತೆ ಎನ್ನಲಾಗುತ್ತೆ.
2)ಕಾಲುಂಗುರ ಋತು ಚಕ್ರ ಸಮಸ್ಯೆಯನ್ನು ಪರಿಹರಿಸುವಲ್ಲಿ ಸಹಾಯ ಮಾಡುತ್ತೆ.
3)ಕಾಲುಂಗುರ ಸಂತಾನ ಸಮಸ್ಯೆಯನ್ನು ದೂರಮಾಡುತ್ತೆ.
4)ಕಾಲುಂಗುರ ನರಕ್ಕೆ ತಾಗುವುದರಿಂದ ರಕ್ತದೊತ್ತಡ ನಿಯಂತ್ರಣದಲ್ಲಿರುತ್ತೆ.
5)ಒತ್ತಡದ ಜೀವನ ಶೈಲಿಯನ್ನು ಹೊಂದಿರುವ ಮಹಿಳೆಯರಿಗೆ ಕಾಲುಂಗುರ ಅತ್ಯುತ್ತಮ.
ಕಾಲುಂಗುರಗಳು ಬೆಳ್ಳಿಯದ್ದೇ ಆಗಿರಬೇಕು ಏಕೆ?
1)ಬೆಳ್ಳಿ ಎಲ್ಲ ಲೋಹಗಳಿಗಿಂತಲೂ ಹೆಚ್ಚು ಉಷ್ಣವಾಹಕ.
2)ದೇಹದಲ್ಲಿನ ಅಧಿಕ ಉಷ್ಣತೆಯನ್ನು ಬೆಳ್ಳಿ ತಗ್ಗಿಸುತ್ತೆ.
3)ದೇಹದಲ್ಲಿ ರಕ್ತ ಪರಿಚಲನೆ ಸುಲಭವಾಗಿ ಆಗುತ್ತೆ.
4)ದೇಹದ ಆರೋಗ್ಯ ಹೆಚ್ಚಿಸಲು ಬೆಳ್ಳಿ ಸಹಾಯ ಮಾಡುತ್ತೆ.
5)ಬೆಳ್ಳಿ ಕಾಲುಂಗುರ, ಭೂಮಿಯಿಂದ ಸಿಗುವ ಧ್ರುವ ಶಕ್ತಿಯನ್ನು ದೇಹಕ್ಕೆ ನೀಡುತ್ತೆ.
ಕೆಲ ಪುರಾಣಗಳ ಪ್ರಕಾರ, ಕಾಲುಂಗುರ ಧರಿಸುವುದರಿಂದ ಸ್ತ್ರೀಯರು ಸ್ವೇಚ್ಛಾಚಾರಿಗಳಾಗದೇ ಧರ್ಮ ಪಾಲನೆ ಮಾಡ್ತಾರೆ ಎನ್ನಲಾಗುತ್ತೆ. ಕಾಲುಂಗುರಗಳಿಂದ ಸ್ತ್ರೀಯರ ದೇಹ ಶುದ್ಧಿಯಾಗಿರುತ್ತೆ.
ಕಾಲುಂಗುರಗಳು ಸುತ್ತಲಿನ ಪರಿಸರದ ಕೆಟ್ಟ ಶಕ್ತಿಗಳ ನಿರ್ಮೂಲನೆ ಮಾಡುತ್ತೆ. ಹೆಬ್ಬೆರಳಿನ ಸಮೀಪದ ಬೆರಳು ವಾಯುತತ್ವವನ್ನು ಪ್ರೆರೇಪಿಸುವುದರಿಂದ ಸ್ತ್ರೀಯರಲ್ಲಿನ ಜಾಗೃತ ಶಕ್ತಿ ಹೆಚ್ಚಾಗಿರುತ್ತೆ. ಇದರಿಂದ ವಾಯುಮಂಡಲದಲ್ಲಿನ ಕೆಟ್ಟ ಶಕ್ತಿಗಳು ಸ್ತ್ರೀಯರ ಕಾಲುಗಳಿಂದ ಅವರ ಶರೀರದಲ್ಲಿ ಪ್ರವೇಶಿಸುವ ಪ್ರಮಾಣ ಕಡಿಮೆ ಆಗುತ್ತೆ ಎನ್ನುತ್ತೆ ನಮ್ಮ ವೈದ್ಯಶಾಸ್ತ್ರ.
Published On - 11:45 am, Tue, 19 November 19