ಹನಿಮೂನ್​ಗೆ ಗೋವಾಗೇ ಏಕೆ ಹೋಗ್ತಾರೆ? ನೀವೂ ತಿಳಿದುಕೊಳ್ಳಿ ಹನಿಮೂನ್ ಬೀಚ್​ನ ವಿಶೇಷತೆ

|

Updated on: Mar 16, 2021 | 3:52 PM

ಗೋವಾದಲ್ಲಿ ಕೆಲ ಜನರಿಗೆ ಮಾತ್ರ ತಿಳಿದಿರುವ ಬೀಚ್​ವೊಂದು ಇದೆ. ಆದೇ ಬಟರ್‌ ಫ್ಲೈ ಬೀಚ್. ಬಟರ್‌ ಫ್ಲೈ ಬೀಚ್ ಗೋವಾದ ಕೆನಕೋನಾ ಪ್ರದೇಶದ ಪಲೋಲೆಮ್​ನ ದಕ್ಷಿಣದಲ್ಲಿದೆ. ಬಟರ್‌ ಫ್ಲೈ ಬೀಚ್ ಅನ್ನು ಹನಿಮೂನ್ ಬೀಚ್ ಎಂದೇ ಕರೆಯಲಾಗುತ್ತೆ...

ಹನಿಮೂನ್​ಗೆ ಗೋವಾಗೇ ಏಕೆ ಹೋಗ್ತಾರೆ? ನೀವೂ ತಿಳಿದುಕೊಳ್ಳಿ ಹನಿಮೂನ್ ಬೀಚ್​ನ ವಿಶೇಷತೆ
ಗೋವಾ ಬೀಚ್
Follow us on

ಗೋವಾ ಎಂದಾಕ್ಷಣ ಎಲ್ಲರಿಗೂ ಕಣ್ಣ ಮುಂದೆ ಬರೋದೆ ಸುಂದರವಾದ ಕಡಲತೀರಗಳು, ಬೆಳ್ಳಿ ಮರಳು, ಹೊಳೆಯುವ ನೀಲಿ ಬಣ್ಣದ ನೀರು, ಕೆಳಗಿನ ಸಮುದ್ರವನ್ನು ಪ್ರತಿಬಿಂಬಿಸುವ ಆಕಾಶ, ಹಸಿರು ಭತ್ತದ ಗದ್ದೆಗಳು, ಬಿಳಿ ಚರ್ಚುಗಳು ಮತ್ತು ತೆಂಗಿನ ಮರಗಳು. ಅದರಂತೆ ಗೋವಾದಲ್ಲಿ ಬಾಗಾ ಬೀಚ್, ಕೊಲ್ವ ಬೀಚ್, ಅಂಜುನಾ ಬೀಚ್ ಮತ್ತು ಪಲೋಲೆಮ್ ಬೀಚ್‌’ ನಂತಹ ಅನೇಕ ಸುಂದರವಾದ ಕಡಲತೀರಗಳನ್ನು ನೋಡಲು ಜನರು ಅದೆಷ್ಟೋ ದೂರ ದೂರದ ಪ್ರದೇಶಗಳಿಂದ ಗೋವಾಗೆ ಬರುತ್ತಾರೆ.

ಆದರೆ, ಗೋವಾದಲ್ಲಿ ಕೆಲ ಜನರಿಗೆ ಮಾತ್ರ ತಿಳಿದಿರುವ ಬೀಚ್​ವೊಂದು ಇದೆ. ಆದೇ ಬಟರ್‌ ಫ್ಲೈ ಬೀಚ್. ಬಟರ್‌ ಫ್ಲೈ ಬೀಚ್ ಗೋವಾದ ಕೆನಕೋನಾ ಪ್ರದೇಶದ ಪಲೋಲೆಮ್​ನ ದಕ್ಷಿಣದಲ್ಲಿದೆ. ಬಟರ್‌ ಫ್ಲೈ ಬೀಚ್ ಅನ್ನು ಹನಿಮೂನ್ ಬೀಚ್ ಎಂದೇ ಕರೆಯಲಾಗುತ್ತೆ. ಇದು ಗೋವಾದ ಅತ್ಯಂತ ಏಕಾಂತ ಮತ್ತು ಕಡಿಮೆ ಪ್ರಸಿದ್ಧಿಪಡೆದಿರುವ ಕಡಲತೀರಗಳಲ್ಲಿ ಒಂದಾಗಿದೆ. ಇನ್ನೂ, ಈ ಬೀಚ್​ನ ವಿಶೇಷತೆಯೆಂದರೆ ಇಲ್ಲಿಗೆ ವಾಹನಗಳು ನೇರವಾಗಿ ಹೋಗುವುದಿಲ್ಲ. ಇಲ್ಲಿಗೆ, ಹೋಗಲು ನೀವು ದೋಣಿ ಮೂಲಕವೇ ಹೋಗಬೇಕು. ಇನ್ನೂ, ಈ ಬೀಚ್‌’ಗೆ ಬಟರ್‌ಫ್ಲೈ ಬೀಚ್ ಎಂದು ಹೆಸರಿಡಲು ಕಾರಣವಿದೆ. ಏಕೆಂದರೆ, ಬೀಚ್‌’ನ ಸುತ್ತಲಿನ ಮರಗಳಲ್ಲಿ ವಿವಿಧ ಬಣ್ಣದ ಚಿಟ್ಟೆಗಳಿದ್ದು ಅವು ಪ್ರವಾಸಿಗರನ್ನು ಬಹಳಷ್ಟು ಆಕರ್ಷಿಸುತ್ತವೆ.

ಬಟರ್ ಫ್ಲೈ ಬೀಚ್‌’ನಲ್ಲಿ ಡಾಲ್ಫಿನ್‌

ಚಿಟ್ಟೆ ಮಾತ್ರವಲ್ಲ, ಗೋಲ್ಡ್ ಫಿಷ್‌’ಗಳನ್ನೂ ನೋಡಬಹುದು
ಹೆಸರೇ ಸೂಚಿಸುವಂತೆ ಈ ಬಟರ್ ಫ್ಲೈ ಬೀಚ್ ಅನೇಕ ಸುಂದರವಾದ ಚಿಟ್ಟೆಗಳಿಗೆ ನೆಲೆಯಾಗಿದೆ. ಆದರೆ, ಈ ಕಡಲತೀರವು ಏಡಿಗಳು ಮತ್ತು ವಿಶೇಷವಾದ ಗೋಲ್ಡ್ ಫಿಷ್‌ಗಳಿಂದ ಕೂಡಿದೆ ಎಂಬುದು ಕೆಲವರಿಗೆ ಮಾತ್ರ ಗೊತ್ತಿದೆ. ಇನ್ನು ಸಮುದ್ರ ಅರ್ಚಿನ್​ಗಳು, ರೆಡ್ ಫಿಶ್ ಸಹ ಇಲ್ಲಿ ಸಾಮಾನ್ಯವಾಗಿ ಕಾಣಸುವುದರಿಂದ ಈ ತಾಣ ಬಹಳಷ್ಟು ಸುಂದರ ಹಾಗೂ ಮನೋಹರ. ಸಂಗಾತಿಯೊಂದಿಗೆ ದಿನ ಕಳೆದರೆ ನಮ್ಮನ್ನು ನಾವೇ ಮರೆತು ಬಿಡ್ತೀವಿ. ಬಟರ್ ಫ್ಲೈ ಬೀಚ್​ನಲ್ಲಿ ನೀವು ಡಾಲ್ಫಿನ್​ಗಳನ್ನು ಸಹ ಕಾಣಬಹುದು. ಗೋವಾದಲ್ಲಿ ಡಾಲ್ಫಿನ್‌’ಗಳನ್ನು ನೋಡಲು ಹೆಚ್ಚಿನ ಸ್ಥಳಗಳಿದ್ದರೂ, ಗೋವಾದ ಇತರ ಕಡಲತೀರಗಳಿಗಿಂತ ಈ ಬೀಚ್ ನಲ್ಲಿ ಹೆಚ್ಚು ಡಾಲ್ಫಿನ್​ಗಳನ್ನು ನೋಡಲು ಸಾಧ್ಯ.

ಅದ್ಭುತ ಸೂರ್ಯಾಸ್ತ, ಚಾರಣ
ಬಟರ್ ಫ್ಲೈ ಬೀಚ್‌ನ ಒಂದು ವಿಶೇಷತೆಯೆಂದರೆ ಇಲ್ಲಿ ನೀವು ಅದ್ಭುತ ಸೂರ್ಯಾಸ್ತ ನೋಡಬಹುದು. ಇದಲ್ಲದೆ, ನೀವು ಹತ್ತಿರದ ಕಡಲತೀರಗಳಲ್ಲಿ ದೋಣಿ ಸವಾರಿ, ಸೂರ್ಯಸ್ತ, ಕಡಲತೀರಗಳಲ್ಲಿ ನಡೆಯುವುದು, ಬಂಡೆ ಹತ್ತುವುದು ಮತ್ತು ಅರಣ್ಯ ವ್ಯಾಪ್ತಿಯ ಮೂಲಕ ಚಾರಣ ಮಾಡುವುದು ಮುಂತಾದ ಚಟುವಟಿಕೆಗಳನ್ನು ಸಹ ಇಲ್ಲಿ ಮಾಡಬಹುದು.


ಇನ್ನು ಗೋವಾದ ಬಟರ್‌ಫ್ಲೈ ಬೀಚ್ ಅನ್ನು ರಹಸ್ಯ ಬೀಚ್ ಎಂದು ಪರಿಗಣಿಸಲಾಗಿದೆ. ಕಾರಣವೆಂದರೆ ಈ ಬೀಚ್ ತಲುಪಲು ನೇರ ಸಂಪರ್ಕವಿಲ್ಲ. ಯಾವುದೇ ದ್ವಿಚಕ್ರ ವಾಹನ ಸಹ ಇಲ್ಲಿಗೆ ಹೋಗಲು ಸಾಧ್ಯವಿಲ್ಲ. ನೀವು ಬಟರ್ರ್ ಫ್ಲೈ ಬೀಚ್‌ಗೆ ಹೋಗಲು ಬಯಸಿದರೆ, ಮೊದಲು ಪಂಜಿಮ್‌ನಿಂದ ಪಲೋಲೆಮ್ ಬೀಚ್ ತಲುಪಲು ಕ್ಯಾಬ್ ಅಥವಾ ಟ್ಯಾಕ್ಸಿಯನ್ನು ಬಾಡಿಗೆಗೆ ತೆಗೆದುಕೊಳ್ಳಬೇಕು. ಪಲೋಲೆಮ್ ಬೀಚ್‌ನಿಂದ, ನೀವು ಬಟರ್‌ಫ್ಲೈ ಬೀಚ್‌ನಲ್ಲಿ ದೋಣಿ ವಿಹಾರ ಮಾಡಬಹುದು. ನೇರವಾಗಿ ವಾಹನವಿಲ್ಲದ ಕಾರಣ ಹೆಚ್ಚಿನ ಜನರು ಈ ಬೀಚ್‌ಗೆ ಹೋಗುವುದಿಲ್ಲ. ಈ ಕಾರಣಕ್ಕಾಗಿ, ನೀವು ಬಟರ್ ಫ್ಲೈ ಬೀಚ್’ನಲ್ಲಿ ಪಾರ್ಟಿ ಮಾಡಬಹುದು ಅಥವಾ ಇದು ದಂಪತಿಗಳಿಗೆ ಉತ್ತಮ ಸ್ಥಳವಾಗಿದೆ. ಹೀಗಾಗಿಯೇ, ಈ ಬೀಚ್ ಗೆ ಹನಿಮೂನ್ ಬೀಚ್ ಎಂದು ಸಹ ಹೆಸರು ಬಂದಿದೆ. ಮತ್ತೆ ಈ ಭಾರಿ ನೀವು ಗೋವಾಕ್ಕೆ ಹೋದರೇ ಈ ಸುಂದರವಾದ ಬಟರ್‌ಫ್ಲೈ ಬೀಚ್ ನೋಡಲು ಮರೆಯಬೇಡಿ.

ಇದನ್ನೂ ಓದಿ: Jasprit Bumrah Marriage: ಗೋವಾದಲ್ಲಿ ಈ ವಾರ ಜಸ್ಪ್ರೀತ್​ ಬೂಮ್ರಾ ಮದುವೆ? ವಧು ಯಾರು? ಇಲ್ಲಿದೆ ಉತ್ತರ