AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Jasprit Bumrah Marriage: ಸುಂದರಿ ಸಂಜನಾಗೆ ಜಸ್ಪ್ರೀತ್ ಬುಮ್ರಾ ಕ್ಲೀನ್ ಬೌಲ್ಡ್! ಅಷ್ಟಕ್ಕೂ ಯಾರು ಈ ಸಂಜನಾ ಗಣೇಶನ್​?

Jasprit Bumrah Marriage: ಹೌದು, ಸಂಜನಾ 2014 ರಲ್ಲಿ ಸ್ಪ್ಲಿಟ್ಸ್‌ವಿಲ್ಲಾ ಎಂಬ ಡೇಟಿಂಗ್ ರಿಯಾಲಿಟಿ ಶೋನ ಒಂದು ಭಾಗವಾಗಿದ್ದರು. ಸನ್ನಿ ಲಿಯೋನ್ ಮತ್ತು ನಿಖಿಲ್ ಚಿನಾಪಾ ಆಯೋಜಿಸಿದ್ದ ಎಂಟಿವಿ ಸ್ಪ್ಲಿಟ್ಸ್‌ವಿಲ್ಲಾದ ಏಳನೇ ಆವೃತ್ತಿಯಲ್ಲಿ ಬುಮ್ರಾ ಅವರ ಪತ್ನಿ ಕಾಣಿಸಿಕೊಂಡಿದ್ದರು.

Jasprit Bumrah Marriage: ಸುಂದರಿ ಸಂಜನಾಗೆ ಜಸ್ಪ್ರೀತ್ ಬುಮ್ರಾ ಕ್ಲೀನ್ ಬೌಲ್ಡ್! ಅಷ್ಟಕ್ಕೂ ಯಾರು ಈ ಸಂಜನಾ ಗಣೇಶನ್​?
ಸಂಜನಾ ಗಣೇಶನ್
ಪೃಥ್ವಿಶಂಕರ
|

Updated on:Mar 17, 2021 | 11:04 AM

Share

ಕ್ರೀಡಾ ನಿರೂಪಕಿಯ ಸೌಂದರ್ಯಕ್ಕೆ ಕ್ಲೀನ್ ಬೌಲ್ಡ್ ಆಗಿರೋ ಯಾರ್ಕರ್ ಕಿಂಗ್ ಬುಮ್ರಾ, ಸಪ್ತಪದಿ ತುಳಿದಿದ್ದಾರೆ. ಗೋವಾದಲ್ಲಿ ನಡೆದ ಅದ್ಧೂರಿ ವಿವಾಹದಲ್ಲಿ ಸಂಜನಾ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಆನ್ಫೀಲ್ಡ್​ನಲ್ಲಿ ಡೆಡ್ಲಿ ಯಾರ್ಕರ್ನಿಂದಲೇ ಎದುರಾಳಿ ಬ್ಯಾಟ್ಸ್​ಮನ್​ಗಳನ್ನ ಬಲಿ ಪಡೆಯೋ ಜಸ್ಪ್ರೀತ್ ಬುಮ್ರಾ, ಚೆಂದುಳ್ಳಿ ಚೆಲುವೆಯೊಬ್ಳಿಗೆ ಕ್ಲೀನ್ ಬೌಲ್ಡ್ ಆಗಿದ್ದಾರೆ. ಖಾಸಗಿ ಕ್ರೀಡಾ ವಾಹಿನಿ ನಿರೂಪಕಿಯಾಗಿರೋ ಸೌದರ್ಯವತಿ ಸಂಜನಾ ಗಣೇಶನ್ ಜೊತೆ ಬುಮ್ರಾ, ಸಪ್ತಪದಿ ತುಳಿದಿದ್ದಾರೆ.

ಗೋವಾದಲ್ಲಿ ನಡೆದ ಅದ್ಧೂರಿ ವಿವಾಹದಲ್ಲಿ ಬುಮ್ರಾ, ಸಂಜನಾ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಯಾರ್ಕರ್ ವೇಗಿ, ತಮ್ಮ ಮದುವೆಗೆ ಕೇವಲ 20ಜನರಿಗೆ ಮಾತ್ರ ಆಹ್ವಾನಿ ನೀಡಿದ್ರು. ಟೀಂ ಇಂಡಿಯಾದ ಯಾವ ಆಟಗಾರರು ಸಹ ಮದುವೆಯಲ್ಲಿ ಪಾಲ್ಗೊಂಡಿರಲಿಲ್ಲ. ಇಬ್ಬರೂ ಆಪ್ತ ಸ್ನೇಹಿತರು ಮತ್ತು ಸಂಬಂಧಿಕರ ಸಮ್ಮುಖದಲ್ಲಿ ಬುಮ್ರಾ ಮತ್ತು ಸಂಜನಾ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ರು.

ತನ್ನ ಮದುವೆಯ ಫೋಟೋಗಳನ್ನ ಸ್ವತಃ ಮದುಮಗ ಜಸ್ಪ್ರೀತ್, ಸೋಶಿಯಲ್ ಮೀಡಿಯಾಗಳಲ್ಲಿ ಶೇರ್ ಮಾಡಿಕೊಂಡು ಸಂತಸವನ್ನ ಹಂಚಿಕೊಂಡಿದ್ದಾರೆ. ಪ್ರೀತಿಯಿಂದ ಪ್ರೇರಿತವಾದ ನಾವು ಒಟ್ಟಿಗೆ ಹೊಸ ಪ್ರಯಾಣವನ್ನು ಪ್ರಾರಂಭಿಸಿದ್ದೇವೆ. ಇಂದು ನಮ್ಮ ಜೀವನದ ಅತ್ಯಂತ ಸಂತೋಷದಾಯಕ ದಿನಗಳಲ್ಲಿ ಒಂದಾಗಿದೆ. ಮತ್ತು ನಮ್ಮ ವಿವಾಹದ ಸುದ್ದಿ ಮತ್ತು ನಮ್ಮ ಸಂತೋಷವನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ನಾವು ಸಂತೋಷಪಡುತ್ತೇವೆ ಎಂದು ಬುಮ್ರಾ ಟ್ವಿಟರ್​ನಲ್ಲಿ ಬರೆದುಕೊಂಡಿದ್ದಾರೆ.

ಗಾಸಿಪ್​ಗಳಿಗೆ ತೆರೆ ಎಳೆದ ಯಾರ್ಕರ್ ವೇಗಿ! ಇನ್ನೂ ಬುಮ್ರಾ ತಮ್ಮ ಮದುವೆ ಯಾರ ಜೊತೆ ಅನ್ನೋದನ್ನ ಎಲ್ಲೂ ಬಾಯಿಬಿಟ್ಟಿರಲಿಲ್ಲ. ಗೋವಾದಲ್ಲಿ ಮಾರ್ಚ್ 14-15ರಂದು ಮದುವೆ ಆಗುತ್ತೆ ಅನ್ನೋದು ಸುದ್ದಿಯಾಗಿತ್ತು. ಆದ್ರೆ, ಯಾರ ಜೊತೆ ಮದುವೆಯಾಗ್ತಾರೆ ಅನ್ನೋದು ಯಾರೋಬ್ಬರಿಗೂ ಗೊತ್ತಿರಲಿಲ್ಲ. ಆದ್ರೆ, ಮದುವೆ ಸಂಬಂಧ ಯಾರ್ಕರ್ ಕಿಂಗ್, ಇಂಗ್ಲೆಂಡ್ ವಿರುದ್ಧದ 4ನೇ ಟೆಸ್ಟ್ ಪಂದ್ಯದಿಂದ ದಿಢೀರ್ನೇ ಹೊರಬಂದಿದ್ರು. ಅಲ್ಲದೇ, ಟಿ-ಟ್ವೆಂಟಿ ಸರಣಿಗೂ ಬುಮ್ರಾ ಅಲಭ್ಯರಾದಾಗ, ಮದುವೆಯಾಗೋದು ನಿಶ್ಚತ ಅಂತ ಅಭಿಮಾನಿಗಳಿಗೂ ಗೊತ್ತಾಗಿತ್ತು.

ಜಸ್ಪ್ರೀತ್ ಸಂಜನಾ ಗಣೇಶನ್ ಕೈಹಿಡಿಯೋದಕ್ಕೆ ಮುನ್ನ, ದಕ್ಷಿಣ ಭಾರತದ ನಟಿ ಅನುಪಮಾ ಪರಮೇಶ್ವರನ್ ಅವರನ್ನು ಮದುವೆಯಾಗುತ್ತಿದ್ದಾರೆ ಎಂದು ಹೇಳಲಾಗುತ್ತಿತ್ತು. ಆದ್ರೆ, ವಿಷಯ ಎಲ್ಲೆಡೆ ಹಬ್ಬುತ್ತಿದಂತೆ ಮಾತಾನಾಡಿದ ಅನುಪಮಾ ಅವರ ತಾಯಿ, ಈ ವದಂತಿಗಳೆಲ್ಲಾ ಸತ್ಯಕ್ಕೆ ದೂರವಾಗಿವೆ ಎಂದಿದ್ದರು. ನಂತರ ಸಂಜನಾ ಗಣೇಶನ್ ಹೆಸರಿನ ಜೊತೆ ಬುಮ್ರಾ ಅವರ ಹೆಸರನ್ನು ತಳುಕು ಹಾಕಲಾಗುತ್ತಿತ್ತು. ಅಂದುಕೊಂಡಹಾಗೇ, ಬೂಮ್ರಾ ಸಂಜನಾರನ್ನ ವರಿಸಿದ್ದಾರೆ.

ಯಾರು ಈ ಸೌಂದರ್ಯವತಿ ಸಂಜನಾ ಗಣೇಶನ್? 28 ವರ್ಷದ ಸಂಜನಾ ಗಣೇಶನ್ ಮೂಲತಃ ಪುಣೆಯವರು. ಸಂಜನಾ ಭಾರತದ ಅತ್ಯಂತ ಜನಪ್ರಿಯ ಕ್ರೀಡಾ ಪತ್ರಕರ್ತರಲ್ಲಿ ಒಬ್ಬರು. ಡಿಜಿಟಲ್ ಹೋಸ್ಟ್ ಸ್ಟಾರ್ ಸ್ಪೋರ್ಟ್ಸ್ ಚಾನೆಲ್‌ನ ಪ್ರಸಿದ್ಧ ಟಿವಿ ನಿರೂಪಕಿ. ಪ್ರಶಸ್ತಿ ಪ್ರದಾನ ಸಮಾರಂಭಗಳಿಂದ ಹಿಡಿದು ಟಾಕ್ ಶೋಗಳವರೆಗೆ, ಸಂಜನಾ ಅವರು ಕ್ರೀಡಾ ನಿರೂಪಕಿಯಾಗಿ ತಮ್ಮ ವೃತ್ತಿಜೀವನದಲ್ಲಿ ಹಲವಾರು ಕ್ರೀಡಾ ಕ್ರೀಡಾಪಟುಗಳನ್ನು ಸಂದರ್ಶನ ಮಾಡಿದ್ದಾರೆ. ಕುತೂಹಲಕಾರಿ ಸಂಗತಿಯೆಂದರೆ, ಸಂಜನಾ ಒಮ್ಮೆ 2019 ರಲ್ಲಿ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕಾರ್ಯಕ್ರಮದ ಸಂದರ್ಭದಲ್ಲಿ ಬುಮ್ರಾ ಅವರನ್ನು ಸಂದರ್ಶಿಸಿದ್ದರು.

ಎಂಟಿವಿಯ ಸ್ಪ್ಲಿಟ್ಸ್‌ವಿಲ್ಲಾ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಂಡಿದ್ದರು ನಿನಗೆ ಗೊತ್ತೆ? ಬುಮ್ರಾ ಅವರ ಪತ್ನಿ ಸಂಜನಾ ಜನಪ್ರಿಯ ಟಿವಿ ಶೋ ಸ್ಪ್ಲಿಟ್ಸ್‌ವಿಲ್ಲಾದ ಮಾಜಿ ಸ್ಪರ್ಧಿ. ಹೌದು, ಸಂಜನಾ 2014 ರಲ್ಲಿ ಸ್ಪ್ಲಿಟ್ಸ್‌ವಿಲ್ಲಾ ಎಂಬ ಡೇಟಿಂಗ್ ರಿಯಾಲಿಟಿ ಶೋನ ಒಂದು ಭಾಗವಾಗಿದ್ದರು. ಸನ್ನಿ ಲಿಯೋನ್ ಮತ್ತು ನಿಖಿಲ್ ಚಿನಾಪಾ ಆಯೋಜಿಸಿದ್ದ ಎಂಟಿವಿ ಸ್ಪ್ಲಿಟ್ಸ್‌ವಿಲ್ಲಾದ ಏಳನೇ ಆವೃತ್ತಿಯಲ್ಲಿ ಬುಮ್ರಾ ಅವರ ಪತ್ನಿ ಕಾಣಿಸಿಕೊಂಡಿದ್ದರು.

ಫೆಮಿನಾ ಮಿಸ್ ಇಂಡಿಯಾ ಫೈನಲಿಸ್ಟ್ ಸಂಜನಾ ಅವರ ಮಾಡೆಲಿಂಗ್ ವೃತ್ತಿಜೀವನದ ಬಗ್ಗೆ ಹೇಳುವುದಾದರೆ, ಬುಮ್ರಾ ಅವರ ಪತ್ನಿ 2014 ರಲ್ಲಿ ಎಂಟಿವಿಯ ಸ್ಪ್ಲಿಟ್ಸ್ವಿಲ್ಲಾ ಸೀಸನ್ 7 ರಲ್ಲಿ ಕಾಣಿಸಿಕೊಳ್ಳುವ ಮೊದಲು ‘ಫೆಮಿನಾ ಗಾರ್ಜಿಯಸ್’ ಸ್ಪರ್ಧೆಯಲ್ಲಿ ವಿಜೇತರಾಗಿದ್ದರು. ಜೊತೆಗೆ ಸಂಜನಾ, ಫೆಮಿನಾ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿಯೂ ಸಹ ಭಾಗವಹಿಸಿ ಆ ಸ್ಪರ್ಧೆಯ ಆವೃತ್ತಿಯಲ್ಲಿ ಸಂಜನಾ ಫೈನಲಿಸ್ಟ್ ಆಗಿದ್ದರು.

ಸಂಜನಾಗೆ ಐಪಿಎಲ್​ ನಂಟು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನ 2020 ಆವೃತ್ತಿಯಲ್ಲಿ ಕೋಲ್ಕತಾ ನೈಟ್ ರೈಡರ್ಸ್ (ಕೆಕೆಆರ್) ಫ್ರ್ಯಾಂಚೈಸ್‌ನ ಒಂದೆರಡು ವಿಶೇಷ ಟಾಕ್ ಶೋಗಳನ್ನು ಸಂಜನಾ ನಡೆಸಿಕೊಟ್ಟಿದ್ದರು. ಎರಡು ಬಾರಿ ಐಪಿಎಲ್ ಚಾಂಪಿಯನ್‌ಗಳ ಅಭಿಮಾನಿಗಳು ತಂಡದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಅವಕಾಶವನ್ನು ಪಡೆಯುವ ಕೆಕೆಆರ್‌ನ ‘ದಿ ನೈಟ್ ಕ್ಲಬ್’ ಕಾರ್ಯಕ್ರಮವನ್ನು ಸಂಜನಾ ಆಯೋಜಿಸಿದ್ದರು.

ಒಟ್ನಲ್ಲಿ ಟೀಂ ಇಂಡಿಯಾದ ಮತ್ತೊಬ್ಬ ಕ್ರಿಕೆಟಿಗ, ಬ್ಯಾಚೂಲರ್ ಲೈಫ್​ಗೆ ಗುಡ್​ಬೈ ಹೇಳಿದ್ದಾರೆ. ಬುಮ್ರಾ ಏಪ್ರಿಲ್ 9ಕ್ಕೆ ಆರಂಭವಾಗೋ ಐಪಿಎಲ್ ಟೂರ್ನಿ ಮೂಲಕ ಕ್ರಿಕೆಟ್​ಗೆ ಕಮ್ಬ್ಯಾಕ್ ಮಾಡಲಿದ್ದಾರೆ.

ಇದನ್ನೂ ಓದಿ: Jasprit Bumrah Marriage: ಕ್ರಿಕೆಟರ್​ ಬುಮ್ರಾ ವರಿಸಿದ ಕ್ರೀಡಾ ನಿರೂಪಕಿ ಸಂಜನಾ ಗಣೇಶನ್​ ಯಾರು? ಫೋಟೋ ನೋಡಿ

Published On - 11:02 am, Wed, 17 March 21

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್