1/7

ಟೀಂ ಇಂಡಿಯಾದ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ, ಕ್ರೀಡಾ ನಿರೂಪಕಿ ಸಂಜನಾ ಗಣೇಶನ್ ಅವರನ್ನು ಇಂದು ವರಿಸಿದ್ದಾರೆ. ಇಬ್ಬರೂ ಆಪ್ತ ಸ್ನೇಹಿತರು ಮತ್ತು ಸಂಬಂಧಿಕರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು.
2/7

ಈ ಬಗ್ಗೆ ಟ್ವೀಟ್ ಮಾಡಿರುವ ಜಸ್ಪ್ರೀತ್ ಬುಮ್ರಾ, ಪ್ರೀತಿಯ ಜೊತೆಗೆ ಮುಂದೆ ಸಾಗುತ್ತಾ, ನಾವಿಬ್ಬರು ಒಟ್ಟಿಗೆ ಹೊಸ ಪ್ರಯಾಣವನ್ನು ಪ್ರಾರಂಭಿಸಿದ್ದೇವೆ. ಇಂದು ನಮ್ಮ ಜೀವನದ ಅತ್ಯಂತ ಸಂತೋಷದಾಯಕ ದಿನಗಳಲ್ಲಿ ಒಂದಾಗಿದೆ. ನಮ್ಮ ವಿವಾಹದ ಸುದ್ದಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ನಾವು ಸಂತೋಷಪಡುತ್ತೇವೆ ಎಂದಿದ್ದಾರೆ.
3/7

ಬುಮ್ರಾ ಮದುವೆಗೆ ಸಿದ್ಧತೆಯಲ್ಲಿ ನಿರತರಾಗಿದ್ದಾರೆ ಎಂದು ವರದಿಯಾಗಿತ್ತು. ಆದರೆ, ಆ ಹೊತ್ತಿಗೆ ವೇಗದ ಬೌಲರ್ ಯಾರನ್ನು ಮದುವೆಯಾಗುತ್ತಿದ್ದಾರೆ ಎಂಬುದು ಸ್ಪಷ್ಟವಾಗಿರಲಿಲ್ಲ.
4/7

28 ವರ್ಷದ ಸಂಜನಾ ಗಣೇಶನ್ ಮೂಲತಃ ಪುಣೆಯವರು. ಮಾಡೆಲಿಂಗ್ ಕ್ಷೇತ್ರದಲ್ಲಿ ಆಸಕ್ತಿ ಹೊಂದಿದ್ದ ಸಂಜನಾ 2014ರಲ್ಲಿ ಫೆಮಿನಾ ಮಿಸ್ ಇಂಡಿಯಾ ಸೌಂದರ್ಯ ಸ್ಪರ್ಧೆಯ ಫೈನಲಿಸ್ಟ್ ಕೂಡ ಆಗಿದ್ದಾರೆ.
5/7

2014ರಲ್ಲಿ ಎಂಟಿವಿಯ ರಿಯಾಲಿಟಿ ಶೋ ಒಂದರಲ್ಲಿ ಭಾಗವಹಿಸಿದ್ದ ಸಂಜನಾಗೆ ಅವರ ಪ್ರತಿಸ್ಪರ್ಧಿಯಾಗಿದ್ದ ಅಶ್ವಿನಿ ಕೌಲ್ ಜತೆ ಅಫೇರ್ ಇತ್ತು. ಆದರೆ ಅವರಿಬ್ಬರ ರಿಲೇಶನ್ಶಿಪ್ ತುಂಬ ದಿನ ಇರಲಿಲ್ಲ ಎಂಬ ರೂಮರ್ ಕೂಡ ಇದೆ.
6/7

ಸಂಜನಾ, ಗಣೇಶನ್ ರಾಮಸ್ವಾಮಿಯವರ ಪುತ್ರಿಯಾಗಿದ್ದಾರೆ. ರಾಮಸ್ವಾಮಿ ಪುಣೆ ಮೂಲದ ಅಲ್ಲಾನಾ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಸೈನ್ಸ್ನ ನಿರ್ದೇಶಕರಾಗಿದ್ದಾರೆ
7/7

ಸಂಜನಾ ಗಣೇಶನ್
Jasprit Bumrah Marriage Five interesting facts about cricketer Jasprit Bumrahs wife