ಓಹ್! ಇವತ್ತು ವಿಶ್ವ ಪೋಹಾ ದಿನವಂತೆ.. ಒಗ್ಗರಣೆ ಅವಲಕ್ಕಿಗೆ ಜೈ ಜೈ

|

Updated on: Jun 07, 2020 | 3:38 PM

ಜೂನ್ 7, ಇವತ್ತು ವಿಶ್ವ ಪೋಹಾ ದಿನ. ಭಾರತದಲ್ಲಿ ಪ್ರತಿವರ್ಷ ಜೂನ್ 7ರಂದು ವಿಶ್ವ ಪೋಹಾ ದಿವಸ್ ಆಚರಿಸಲಾಗುತ್ತದೆ. ಭಾರತೀಯರು ಇಷ್ಟಪಡುವ ಅತ್ಯಂತ ನೆಚ್ಚಿನ ಉಪಹಾರವನ್ನು ಉತ್ತೇಜಿಸಲು ಈ ದಿನವನ್ನು ಆಚರಿಸಲಾಗುತ್ತದೆ. ಅದರಂತೆ, ಈ ದಿನದ ಆಚರಣೆಯ ಹಿಂದೆ ಯಾವುದೇ ಇತಿಹಾಸ ಅಥವಾ ರೋಚಕ ಕಥೆ, ಹಿನ್ನೆಲೆಗಳಿಲ್ಲ. ಪೋಹಾ ರುಚಿಯಾದ ಆರೋಗ್ಯಕರವಾದ ತಿಂಡಿ. ಇದರಲ್ಲಿ ಕಬ್ಬಿಣ, ಆರೋಗ್ಯಕರ ಕಾರ್ಬೋಹೈಡ್ರೇಟ್‌ಗಳು, ಜೀವಸತ್ವಗಳು ತುಂಬಿರುತ್ತವೆ. ಅಲ್ಲದೆ ಇದು ದೇಹಕ್ಕೆ ಪ್ರಯೋಜನಕಾರಿ ಎಂದು ಸಾಬೀತಾಗಿದೆ. ಹಾಗೂ ಸುಲಭವಾಗಿ ಜೀರ್ಣಿಸಿಕೊಳ್ಳಬಹುದು. ಪೋಹಾ ಭಾರತೀಯರು […]

ಓಹ್! ಇವತ್ತು ವಿಶ್ವ ಪೋಹಾ ದಿನವಂತೆ.. ಒಗ್ಗರಣೆ ಅವಲಕ್ಕಿಗೆ ಜೈ ಜೈ
Follow us on

ಜೂನ್ 7, ಇವತ್ತು ವಿಶ್ವ ಪೋಹಾ ದಿನ. ಭಾರತದಲ್ಲಿ ಪ್ರತಿವರ್ಷ ಜೂನ್ 7ರಂದು ವಿಶ್ವ ಪೋಹಾ ದಿವಸ್ ಆಚರಿಸಲಾಗುತ್ತದೆ. ಭಾರತೀಯರು ಇಷ್ಟಪಡುವ ಅತ್ಯಂತ ನೆಚ್ಚಿನ ಉಪಹಾರವನ್ನು ಉತ್ತೇಜಿಸಲು ಈ ದಿನವನ್ನು ಆಚರಿಸಲಾಗುತ್ತದೆ. ಅದರಂತೆ, ಈ ದಿನದ ಆಚರಣೆಯ ಹಿಂದೆ ಯಾವುದೇ ಇತಿಹಾಸ ಅಥವಾ ರೋಚಕ ಕಥೆ, ಹಿನ್ನೆಲೆಗಳಿಲ್ಲ.

ಪೋಹಾ ರುಚಿಯಾದ ಆರೋಗ್ಯಕರವಾದ ತಿಂಡಿ. ಇದರಲ್ಲಿ ಕಬ್ಬಿಣ, ಆರೋಗ್ಯಕರ ಕಾರ್ಬೋಹೈಡ್ರೇಟ್‌ಗಳು, ಜೀವಸತ್ವಗಳು ತುಂಬಿರುತ್ತವೆ. ಅಲ್ಲದೆ ಇದು ದೇಹಕ್ಕೆ ಪ್ರಯೋಜನಕಾರಿ ಎಂದು ಸಾಬೀತಾಗಿದೆ. ಹಾಗೂ ಸುಲಭವಾಗಿ ಜೀರ್ಣಿಸಿಕೊಳ್ಳಬಹುದು.

ಪೋಹಾ ಭಾರತೀಯರು ಇಷ್ಟಪಟ್ಟು ಮಾಡುವ ಒಂದು ಮಾದರಿಯ ಅಕ್ಕಿ ಖಾದ್ಯವಾಗಿದ್ದು ಅದನ್ನು ತಯಾರಿಸುವುದು ತುಂಬಾ ಸುಲಭ. ಅವಲಕ್ಕಿ ಒಗ್ಗರಣೆ, ದಿನ ಶುರು ಮಾಡಲು ದಿನಕ್ಕೆ ಪರಿಪೂರ್ಣ ಕಿಕ್‌ಸ್ಟಾರ್ಟ್ ನೀಡುತ್ತದೆ. ಈ ಖಾದ್ಯವು ಬಟಾಣಿ, ಈರುಳ್ಳಿ, ಕೊತ್ತಂಬರಿ ಮತ್ತು ಕಡಲೆಕಾಯಿಯಂತಹ ವಿವಿಧ ಪದಾರ್ಥಗಳನ್ನು ಒಳಗೊಂಡಿರುತ್ತದೆ.

ಅದು ಹೆಚ್ಚು ಪೌಷ್ಠಿಕಾಂಶವನ್ನು ನೀಡುತ್ತದೆ. ಪೊಹಾ ಖಾದ್ಯದಲ್ಲಿ ಫೈಬರ್​ನ ಅಂಶಗಳು ಸಮೃದ್ಧವಾಗಿದೆ. ಇದು ರಕ್ತಕ್ಕೆ ನಿಧಾನವಾಗಿ ಮತ್ತು ಸ್ಥಿರವಾಗಿ ಸಕ್ಕರೆಯನ್ನು ಬಿಡುಗಡೆ ಮಾಡುವುದನ್ನು ಉತ್ತೇಜಿಸುತ್ತದೆ. ಇದರಿಂದ ರಕ್ತದೊತ್ತಡ, ಸಕ್ಕರೆ ಕಾಯಿಲೆ ನಿಯಂತ್ರಣಕ್ಕೆ ಸಹಾಯಕಾರಿ. ಬೆಳಗ್ಗಿನ ಉಪಹಾರಕ್ಕೆ ಪೋಹಾದ ತಿಂದರೆ ಅದು ಹೊಟ್ಟೆ ತುಂಬಿದ ಹಾಗೂ ಹೆಚ್ಚು ಚುರುಕಾಗಿಸುತ್ತದೆ.

Published On - 12:11 pm, Sun, 7 June 20