Kannada News Spiritual According to chanakya neeti these four characteristics are enemy for young people
ಯುವಜನತೆಯ ಯಶಸ್ಸಿಗೆ ಈ ನಾಲ್ಕು ಗುಣಲಕ್ಷಣಗಳೇ ಪರಮ ಶತ್ರು!
Chanakya Niti: ಆಚಾರ್ಯ ಚಾಣಕ್ಯರು ಕ್ರೋಧದಂತೆ ಅಸೂಯೆಯು ಮನುಷ್ಯನ ದೊಡ್ಡ ಶತ್ರು ಎಂದು ಹೇಳುತ್ತಾರೆ. ಅಸೂಯೆ ಮನುಷ್ಯನನ್ನು ಮುನ್ನಡೆಯಲು ಬಿಡುವುದಿಲ್ಲ. ಅಸೂಯೆ ಪಟ್ಟ ವ್ಯಕ್ತಿಯು ಯಾವಾಗಲೂ ತನ್ನಂತೆಯೇ ಇತರರ ಯಶಸ್ಸನ್ನು ತಡೆಯುತ್ತಾನೆ.
ಆಚಾರ್ಯ ಚಾಣಕ್ಯ ಯುವಜನತೆಯ ಯಶಸ್ಸಿಗೆ ಈ ಗುಣಲಕ್ಷಣಗಳೇ ಮೊದಲ ಶತ್ರು!
Follow us on
Chanakya Niti: ಆಚಾರ್ಯ ಚಾಣಕ್ಯರ ನೀತಿಗಳು ಆಡಳಿತದಲ್ಲಿ ಮಾತ್ರವಲ್ಲದೆ ಮಾನವನ ಜೀವನದಲ್ಲೂ ಬಹಳ ಸಹಾಯಕವಾಗಿವೆ. ಅಂತಹ ಪರಿಸ್ಥಿತಿಯಲ್ಲಿ ಚಾಣಕ್ಯ ತನ್ನ ನೈತಿಕತೆ, ಯಶಸ್ವಿ ವ್ಯಕ್ತಿಯ ಬಗ್ಗೆ ಸಾಕಷ್ಟು ಹೇಳಿದ್ದಾರೆ. ಇಂದಿನ ಯುವಜನತೆ ಇವುಗಳಿಂದ ದೂರ ಉಳಿಯುವಂತೆ ಚಾಣಕ್ಯ ಸಲಹೆ ನೀಡಿದ್ದಾರೆ.
ಸೋಮಾರಿತನ: ಯುವ ಪೀಳಿಗೆಯ ದೊಡ್ಡ ಶತ್ರು ಸೋಮಾರಿತನ. ಸೋಮಾರಿತನ ಯುವಕರನ್ನು ಯಶಸ್ಸಿನಿಂದ ದೂರವಿಡುತ್ತದೆ ಎಂದು ಚಾಣಕ್ಯ ಹೇಳಿದ್ದಾರೆ. ಯಶಸ್ಸು ಶಿಸ್ತಿನ ವ್ಯಕ್ತಿಯ ಪಾದಗಳಿಗೆ ಮುತ್ತಿಡುತ್ತದೆ. ಸಮಯ ಅಮೂಲ್ಯವಾದುದು. ಅದನ್ನು ಬುದ್ಧಿವಂತಿಕೆಯಿಂದ ಬಳಸಿ.
ಕೋಪ: ಕೋಪ ಎಂಬುದು ಯಶಸ್ಸಿನ ದಾರಿಯಲ್ಲಿ ದೊಡ್ಡ ಅಡಚಣೆಗಾಗಿ ನಿಂತುಬಿಡುತ್ತದೆ. ಕೋಪಗೊಂಡ ವ್ಯಕ್ತಿಯ ಬುದ್ಧಿಯನ್ನು ದುರ್ಬಲಗೊಳಿಸಿಬಿಡುತ್ತದೆ. ಕೋಪವು ದೊಡ್ಡವರಾಗಲಿ, ಚಿಕ್ಕವರಾಗಲಿ ಯಾರ ಮೇಲೂ ಪರಿಣಾಮ ಬೀರಬಹುದು. ನಿಮ್ಮ ಕೋಪವನ್ನು ಹತೋಟಿಯಲ್ಲಿಟ್ಟುಕೊಳ್ಳಲು ಕಲಿಯದಿದ್ದರೆ ನಿಮ್ಮ ಪ್ರಗತಿಗೆ ಅದುವೇ ದೊಡ್ಡ ಅಡ್ಡಿ ಆಗುತ್ತದೆ ಎಂದು ಚಾಣಕ್ಯ ಹೇಳಿದ್ದಾರೆ.
ಒಳ್ಳೆಯದು ಮತ್ತು ಕೆಟ್ಟದ್ದರ ನಿರ್ಣಯ: ಒಳ್ಳೆಯ ಮತ್ತು ಕೆಟ್ಟ ಸಹವಾಸವು ಮಾನವ ಜೀವನದ ಮೇಲೆ ಬಹಳಷ್ಟು ಪರಿಣಾಮ ಬೀರುತ್ತದೆ. ತಪ್ಪು ಜನರ ಸಹವಾಸವು ವ್ಯಕ್ತಿಯನ್ನು ಕೆಟ್ಟ ಕೆಲಸಗಳನ್ನು ಮಾಡಲು ಯೋಚಿಸುವಂತೆ ಮಾಡುತ್ತದೆ. ಡ್ರಗ್ಸ್, ಸೆಕ್ಸ್ ಮತ್ತು ಜಗಳಗಳಿಂದ ದೂರವಿದ್ದಷ್ಟೂ ನೀವು ಯಶಸ್ಸಿಗೆ ಹತ್ತಿರವಾಗುತ್ತೀರಿ.
ಅಸೂಯೆ:ಆಚಾರ್ಯ ಚಾಣಕ್ಯರು ಕ್ರೋಧದಂತೆ ಅಸೂಯೆಯು ಮನುಷ್ಯನ ದೊಡ್ಡ ಶತ್ರು ಎಂದು ಹೇಳುತ್ತಾರೆ. ಅಸೂಯೆ ಮನುಷ್ಯನನ್ನು ಮುನ್ನಡೆಯಲು ಬಿಡುವುದಿಲ್ಲ. ಅಸೂಯೆ ಪಟ್ಟ ವ್ಯಕ್ತಿಯು ಯಾವಾಗಲೂ ತನ್ನಂತೆಯೇ ಇತರರ ಯಶಸ್ಸನ್ನು ತಡೆಯುತ್ತಾನೆ. To read more in Telugu click here