ಆಚಾರ್ಯ ಚಾಣಕ್ಯರು ತಮ್ಮ ಚಾಣಕ್ಯ (Chanakya) ನೀತಿ ಶಾಸ್ತ್ರ ಪುಸ್ತಕದಲ್ಲಿ ಬುದ್ಧಿವಂತರು, ತಿಳಿವಳಿಕೆ ಇರುವವರು ಮತ್ತು ವಿವೇಕವಂತರು ಯಾವುದೇ ಪರಿಸ್ಥಿತಿಯನ್ನು ದೃಢವಾಗಿ ಎದುರಿಸಬೇಕು ಎಂದು ಹೇಳಿದ್ದಾರೆ. ಆದರೆ ಕೆಲವು ಅಸಾಮಾನ್ಯ ಸಂದರ್ಭಗಳಿದ್ದರೆ.. ಅವುಗಳನ್ನು ಬದಲಾಯಿಸುವುದು ಅಸಾಧ್ಯವಾದರೆ.. ಅಲ್ಲಿಗೆ ನೀವು ಪ್ರಯಾಣ ಮಾಡುವುದನ್ನು ನಿಲ್ಲಿಸುವುದು ಉತ್ತಮ. ಜೊತೆಗೆ ನೀವು ಆ ಮಾರ್ಗ ಅಥವಾ ಗಮ್ಯ ತಲುಪುವ ಬದಲು ಬೇರೆಯದ್ದೇ ಗಮ್ಯ ಕಂಡುಕೊಳ್ಳುವ ನಿಟ್ಟಿನಲ್ಲಿ ಆಲೋಚಿಸಬೇಕು. ಅಥವಾ ಕೆಲವು ಸ್ಥಳಗಳಲ್ಲಿ ವಾಸಿಸುವುದು ಕಷ್ಟಕರವಾದರೆ ಅಲ್ಲಿಂದ ದೂರವಾಗುವುದು ಕ್ಷೇಮಕರ. (Chanakya Niti).
ದೇಶದ ಮೇಲೆ ದಾಳಿ: ನಮ್ಮ ದೇಶ ಅಥವಾ ನಾವಿರುವ ಒಂದು ನಿರ್ದಿಷ್ಟ ಪ್ರದೇಶದ ಮೇಲೆ ಇನ್ನೊಂದು ಪ್ರದೇಶದವರು ದಾಳಿ ಮಾಡಿದರೆ ವೃಥಾ ಅಂತಹ ಪರಿಸ್ಥಿತಿ ಎದುರಿಸುವುದು ಸಮಂಜಸವಲ್ಲ.. ಅಲ್ಲಿಂದ ದೂರವಾಗುವುದು ಒಳಿತು ಎಂದು ಆಚಾರ್ಯ ಚಾಣಕ್ಯ ಹೇಳಿದರು. ಇಂತಹ ದಾಳಿಗಳಿಂದ ಸ್ಥಳೀಯರ ಬದುಕು ನರಕಮಯವಾಗುತ್ತದೆ. ಆಹಾರ ಮತ್ತು ಪಾನೀಯಗಳ ಕೊರತೆ ಇರುತ್ತದೆ.. ಅವರು ತೊಂದರೆಗೆ ಒಳಗಾಗುತ್ತಾರೆ. ಒಮ್ಮೊಮ್ಮೆ ಒಬ್ಬರಿಗೊಬ್ಬರು ಯುದ್ಧಕ್ಕೂ ಮುಂದಾಗುವ ಪರಿಸ್ಥಿತಿ ಎದುರಾಗುತ್ತದೆ.
ಬರ ಪರಿಸ್ಥಿತಿ: ಬರಗಾಲ ಬಂದರೆ ಯಾವುದೇ ಪ್ರದೇಶ ಅಥವಾ ರಾಜ್ಯದಲ್ಲಿ ವಾಸಿಸುವುದರಲ್ಲಿ ಅರ್ಥವಿಲ್ಲ ಎಂದು ಚಾಣಕ್ಯನ ನೀತಿಶಾಸ್ತ್ರ ಹೇಳುತ್ತದೆ. ಅಂತಹ ಪ್ರದೇಶದಿಂದ ಬೇರೆ ಪ್ರದೇಶಕ್ಕೆ ವಲಸೆ ಹೋಗುವುದು ಉತ್ತಮ. ಬರಪೀಡಿತ ಪ್ರದೇಶದಲ್ಲಿ ವಾಸಿಸುವುದರಿಂದ ಕುಟುಂಬ ಜೀವನ ಅಪಾಯಕ್ಕೆ ಸಿಲುಕುತ್ತದೆ.
ಕಾನೂನು ಸುವ್ಯವಸ್ಥೆ ಕೊರತೆಯಾದರೆ: ಚಾಣಕ್ಯನ ಪ್ರಕಾರ ಯಾವುದೇ ಸ್ಥಳದಲ್ಲಿ ಹಿಂಸಾಚಾರ ನಡೆದರೆ.. ಕಾನೂನು ಸುವ್ಯವಸ್ಥೆಗೆ ಭಂಗ ಬಂದರೆ.. ಅಪ್ಪಿತಪ್ಪಿಯೂ ಅಂತಹ ಸ್ಥಳದಲ್ಲಿ ನಿಲ್ಲಬಾರದು. ಅಂತಹ ಜಾಗದಲ್ಲಿ ನಿಂತರೆ.. ಜೀವ ಬೆದರಿಕೆ ಎದುರಾಗುತ್ತದೆ. ಹಾಗಾಗಿ ಅಂತಹ ಸ್ಥಳದಿಂದ ಗೂರವಾಗುವುದು ಉತ್ತಮ.
ಇದನ್ನೂ ಓದಿ: ಚಾಣಕ್ಯ ನೀತಿ: ಚಾಣಕ್ಯನ ಈ ಕ್ರಮಗಳನ್ನು ಅನುಸರಿಸಿ ಜೀವನದಲ್ಲಿ ಸಂಕಷ್ಟ, ಬಿಕ್ಕಟ್ಟಿನಿಂದ ಹೊರಬನ್ನಿ
ಶತ್ರುಗಳ ದಾಳಿ: ಆಚಾರ್ಯ ಚಾಣಕ್ಯ ಪ್ರಕಾರ ಶತ್ರು ಯಾರಿಗೇ ಆದರೂ ತೊಂದರೆಯನ್ನೇ ಕೊಡುವುದು.. ಶತ್ರು ಯಾವಾಗ ಬೇಕಾದರೂ ದಾಳಿ ಮಾಡಬಹುದು. ಶತ್ರುವು ನಿಮ್ಮ ಮೇಲೆ ಹಠಾತ್ತನೆ ದಾಳಿ ಮಾಡಿದರೆ, ಅದನ್ನು ಎದುರಿಸಲು ನಿಮಗೆ ಯಾವುದೇ ತಂತ್ರವಿಲ್ಲದಿದ್ದರೆ ಪರಿಸ್ಥಿತಿ ಕಠಿಣವಾಗುತ್ತದೆ. ಹಾಗಾಗಿ ಅಂತಹ ಶತ್ರುವಿನ ಮೇಲೆ ಸೇಡು ತೀರಿಸಿಕೊಳ್ಳಬೇಡಿ.. ಕೂಡಲೇ ಆ ಸ್ಥಳವನ್ನು ತೊರೆಯಬೇಕು ಎಂದು ಚಾಣಕ್ಯ ಸೂಚಿಸಿದ್ದಾರೆ.
ಆತ್ಮರಕ್ಷಣೆ: ಶತ್ರುವನ್ನು ಎದುರಿಸಲು ಸಾಧ್ಯವಾಗದಿದ್ದರೆ, ಆತ್ಮರಕ್ಷಣೆ ಅನಿವಾರ್ಯವಾಗುತ್ತದೆ. ಪ್ರಾಣ ಉಳಿದುಕೊಂಡರೆ ಮತ್ತೆ ದಾಳಿಗೆ ಸಜ್ಜಾಗಬಹುದು ಎಂದು ಚಾಣಕ್ಯ ಹೇಳುತ್ತಾರೆ. ಅದಕ್ಕಾಗಿಯೇ ಸುರಕ್ಷಿತವಾಗಿರುವುದು ಮುಖ್ಯವಾಗುತ್ತದೆ. ಆದ್ದರಿಂದ ಯಾವುದೇ ಸಂದರ್ಭದಲ್ಲೂ ಸಂಯಮದಿಂದ ವರ್ತಿಸಿ. ಮೊದಲು ನಿಮ್ಮನ್ನು ನೀವು ರಕ್ಷಿಸಿಕೊಳ್ಳಿ.
ಆಧ್ಯಾತ್ಮ ಕುರಿತಾದ ಹೆಚ್ಚಿನ ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ