Vastu Tips: ವಾಸ್ತು ಪ್ರಕಾರ ಈ ವಸ್ತುಗಳನ್ನು ಸಾಲ ಕೊಟ್ಟರೂ, ಸಾಲ ಪಡೆದರೂ ಅದರೊಟ್ಟಿಗೆ ಕಷ್ಟಗಳು ಬರುತ್ತವೆ! ಜಾಗ್ರತೆಯಿರಲಿ

ಶಾಸ್ತ್ರದ ಪ್ರಕಾರ ಲೇಖನಿಯು ವ್ಯಕ್ತಿಯ ಒಳ್ಳೆಯ ಮತ್ತು ಕೆಟ್ಟ ಕಾರ್ಯಗಳ ಮೇಲೆ ನಿಗಾ ಇಡುತ್ತದೆ. ಈ ಮೂಲಕ ಅವರ ಒಳ್ಳೆಯ ಮತ್ತು ಕೆಟ್ಟ ಕರ್ಮಗಳ ಫಲ ನಿಮಗೆ ಸಿಗುತ್ತದೆ.

Follow us
ಸಾಧು ಶ್ರೀನಾಥ್​
|

Updated on:Jun 27, 2023 | 5:29 PM

ನಾವು ನಮ್ಮ ಸ್ನೇಹಿತರು ಅಥವಾ ಸಂಬಂಧಿಕ ಮಧ್ಯೆ ಒಂದಷ್ಟು ವಸ್ತುಗಳನ್ನು ವಿನಿಮಯ ಮಾಡಿಕೊಳ್ಳುವುದು ಸಾಮಾನ್ಯ. ಆದರೆ ಹೆಚ್ಚಿನವರಿಗೆ ಏನು ತೆಗೆದುಕೊಳ್ಳಬೇಕು. ಯಾವುದನ್ನು ತೆಗೆದುಕೊಳ್ಳಬಾರದು ಎಂಬುದು ತಿಳಿದಿರುವುದಿಲ್ಲ. ಆದರೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ನಾವು ಕೆಲವು ವಸ್ತುಗಳನ್ನು ಎರವಲು ಪಡೆದರೆ (Borrow) ಅದರಿಂದ ನಮಗೆ ದೊಡ್ಡ ನಷ್ಟವಾಗಬಹುದು ಎಂದು ಹೇಳಲಾಗುತ್ತದೆ. ಇದು ನಮ್ಮ ದೈನಂದಿನ ಜೀವನದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ಹೇಳಲಾಗುತ್ತದೆ. ಜ್ಯೋತಿಷ್ಯ ಮತ್ತು ವಾಸ್ತು ಶಾಸ್ತ್ರದ ಪ್ರಕಾರ (Vastu Tips) ಯಾವ ವಸ್ತುಗಳನ್ನು ಎರವಲು ಪಡೆಯಬಾರದು (Lend) ಎಂಬುದನ್ನು ಮುಖ್ಯವಾಗಿ ಇಲ್ಲಿ ತಿಳಿಯೋಣ (spiritual).

ಬಟ್ಟೆ ಮತ್ತು ಕೈಗಡಿಯಾರಗಳು: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಬಳಸಿದ ಬಟ್ಟೆಗಳನ್ನು ಎಂದಿಗೂ ಎರವಲಾಗಿ ಪಡೆದು, ಧರಿಸಬಾರದು. ಹೀಗೆ ಮಾಡುವುದರಿಂದ ದೈಹಿಕ ಸಮಸ್ಯೆಗಳು ಉಂಟಾಗಬಹುದು. ಸ್ನೇಹಿತರೊಂದಿಗಿನ ಸಂಬಂಧಗಳು ಹದಗೆಡಬಹುದು. ಬೇರೊಬ್ಬರ ಗಡಿಯಾರವನ್ನು ಎಂದಿಗೂ ಧರಿಸಬೇಡಿ. ಹೀಗೆ ಮಾಡುವುದರಿಂದ ತೊಂದರೆಗೆ ಆಹ್ವಾನ ನೀಡಿದಂತಾಗುತ್ತದೆ. ಅವರ ಕೆಟ್ಟ ಸಮಯವು ನಿಮಗೆ ಅನ್ವಯಿಸುತ್ತದೆ.

ಕರವಸ್ತ್ರ, ಪೆನ್: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಒಬ್ಬ ಸ್ನೇಹಿತ ಅಥವಾ ಸಂಬಂಧಿಕರಿಂದ ಕರವಸ್ತ್ರವನ್ನು ಎರವಲು ಪಡೆಯಬಾರದು. ಹಾಗೆ ಮಾಡುವುದರಿಂದ ಸ್ನೇಹಿತ ಅಥವಾ ಸಂಬಂಧಿಕರೊಂದಿಗಿನ ಸಂಬಂಧ ಹಾಳಾಗಬಹುದು. ಅಲ್ಲದೆ, ಇತರರಿಂದ ಪೆನ್ನು ಎರವಲು ಪಡೆಯಬೇಡಿ. ಶಾಸ್ತ್ರದ ಪ್ರಕಾರ ಲೇಖನಿಯು ವ್ಯಕ್ತಿಯ ಒಳ್ಳೆಯ ಮತ್ತು ಕೆಟ್ಟ ಕಾರ್ಯಗಳ ಮೇಲೆ ನಿಗಾ ಇಡುತ್ತದೆ. ಈ ಮೂಲಕ ಅವರ ಒಳ್ಳೆಯ ಮತ್ತು ಕೆಟ್ಟ ಕರ್ಮಗಳ ಫಲ ನಿಮಗೆ ಸಿಗುತ್ತದೆ.

ಉಂಗುರ, ಚಪ್ಪಲಿ, ಶೂ: ಬೇರೊಬ್ಬರ ಉಂಗುರವನ್ನು ಧರಿಸಬೇಡಿ. ಕೆಲವು ಉಂಗುರಗಳು ರತ್ನದ ಗ್ರಹದೊಂದಿಗೆ ಸಂಬಂಧ ಹೊಂದಿರುವುದರಿಂದ, ಅದು ನಿಮಗೆ ಸೂಕ್ತವಾಗಿದೆಯೇ ಎಂದು ನೀವು ಪರಿಶೀಲಿಸಬೇಕು. ಬೇರೆಯವರು ಬಳಸಿದ ಶೂ ಅಥವಾ ಚಪ್ಪಲಿಗಳನ್ನು ಧರಿಸಬೇಡಿ. ವಾಸ್ತು ಶಾಸ್ತ್ರದಲ್ಲಿ ಇದನ್ನು ಅಶುಭ ಎಂದು ಪರಿಗಣಿಸಲಾಗಿದೆ.

ಹಾಸಿಗೆ, ಪೊರಕೆ: ಬೇರೆಯವರ ಹಾಸಿಗೆ ಬಳಸುವುದರಿಂದ ಕಲಹ ಉಂಟಾಗುತ್ತದೆ. ಇದರಿಂದ ಪತಿ ಪತ್ನಿಯರ ಸಂಬಂಧದಲ್ಲಿ ಬಿರುಕು ಮೂಡುತ್ತದೆ. ಪೊರಕೆಯನ್ನು ಮನೆಯ ಲಕ್ಷ್ಮಿ ಎಂದೂ ಕರೆಯುತ್ತಾರೆ. ಬೇರೆಯವರ ಮನೆಯಿಂದ ಪೊರಕೆ ತಂದರೆ ನಿಮ್ಮ ಮನೆಯ ಲಕ್ಷ್ಮಿಯನ್ನು ಕೆಣಕಿದಂಗಾಉತ್ತದೆ. ಆದ್ದರಿಂದ ಯಾವತ್ತೂ ಪೊರಕೆಯನ್ನು ಎರವಲು ಪಡೆಯಬೇಡಿ.

ಸಾಮಾನ್ಯವಾಗಿ ನಮ್ಮ ಅಡುಗೆ ಮನೆಯಲ್ಲಿ ಅಡುಗೆ ಸಾಮಾಗ್ರಿ/ ಪದಾರ್ಥ ಖಾಲಿಯಾದಾಗ, ನಾವು ಅವುಗಳನ್ನು ನೆರೆಹೊರೆಯವರಲ್ಲಿ ಕೇಳುತ್ತೇವೆ. ಆದರೆ ಉಪ್ಪನ್ನು ಎರವಲು ಪಡೆದರೆ ಸಾಲದ ಬಾಧೆಯಾಗುತ್ತದೆ ಎನ್ನುತ್ತಾರೆ ಜ್ಯೋತಿಷಿಗಳು. ಶಾಸ್ತ್ರದ ಪ್ರಕಾರ ಉಪ್ಪನ್ನು ಯಾರಿಗೂ ಸಾಲ ನೀಡಬಾರದು. ಸಾಲವಾಗಿಯೂ ಪಡೆಯಬಾರದು. ಇದು ನಿಮ್ಮ ಜೀವನದಲ್ಲಿ ಆರ್ಥಿಕ ಬಿಕ್ಕಟ್ಟಿಗೆ ಕಾರಣವಾಗುತ್ತದೆ. ಯಾರಿಗೂ ಉಪ್ಪು ಕೊಡಬೇಡಿ. ಯಾರಿಂದಲೂ ಉಪ್ಪು ತೆಗೆದುಕೊಳ್ಳಬೇಡಿ.

ವಾಸ್ತು ಶಾಸ್ತ್ರದ ಪ್ರಕಾರ.. ಮೇಲಿನ ವಸ್ತುಗಳನ್ನು ಇತರರಿಗೆ ಸಾಲವಾಗಿ ನೀಡಬಾರದು ಮತ್ತು ತೆಗೆದುಕೊಳ್ಳಲೂ ಬಾರದು. ಇದು ನಮ್ಮ ಜೀವನದಲ್ಲಿ ಸಮಸ್ಯೆಗಳನ್ನು ಉಂಟುಮಾಡುತ್ತದೆ.

ಆಧ್ಯಾತ್ಮ ಕುರಿತಾದ ಹೆಚ್ಚಿನ ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:26 pm, Tue, 27 June 23

ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್