AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಾಣಕ್ಯ ನೀತಿ: ಜೀವನದಲ್ಲಿ ನೀವು ಇದನ್ನು ಮಾಡಿದರೆ ನೀವು ಬಯಸಿದ ಸಂತೋಷ ಮತ್ತು ಯಶಸ್ಸು ಸಿಗುತ್ತದೆ!

ಧರ್ಮದಿಂದ ಬದುಕುವವರು ಯಾವಾಗಲೂ ಸಂತೋಷವಾಗಿರುತ್ತಾರೆ. ವ್ಯಕ್ತಿಯ ಆಧ್ಯಾತ್ಮಿಕ ಚಿಂತನೆ ಮತ್ತು ಧಾರ್ಮಿಕ ಚಿಂತನೆಯು ಅವರನ್ನು ಜೀವನದ ಸರಿಯಾದ ಹಾದಿಯಲ್ಲಿ ಕೊಂಡೊಯ್ಯುತ್ತದೆ.

ಚಾಣಕ್ಯ ನೀತಿ: ಜೀವನದಲ್ಲಿ ನೀವು ಇದನ್ನು ಮಾಡಿದರೆ ನೀವು ಬಯಸಿದ ಸಂತೋಷ ಮತ್ತು ಯಶಸ್ಸು ಸಿಗುತ್ತದೆ!
ಚಾಣಕ್ಯ ನೀತಿ: Chanakya Niti
ಸಾಧು ಶ್ರೀನಾಥ್​
|

Updated on: Jun 28, 2023 | 1:45 PM

Share

Chanakya Niti: ಆಚಾರ್ಯ ಚಾಣಕ್ಯರು ತಮ್ಮ ನೀತಿಶಾಸ್ತ್ರ ಗ್ರಂಥದಲ್ಲಿ ಜೀವನಕ್ಕೆ ಉಪಯೋಗವಾಗುವ ಅನೇಕ ಅಗತ್ಯ ಸಲಹೆಗಳನ್ನು ಉಲ್ಲೇಖಿಸಿದ್ದಾರೆ. ಕ್ರಿ. ಪೂ. 375-283 ರ ನಡುವೆ ಬರೆದ ಈ ಪುಸ್ತಕ ಆ ಕಾಲದಿಂದ ಇಂದಿನವರೆಗೂ ಎಲ್ಲರಿಗೂ ಪ್ರಸ್ತುತವಾಗಿದೆ. ಒಬ್ಬ ವ್ಯಕ್ತಿಯು ತನ್ನ ಜೀವನದಲ್ಲಿ ಯಶಸ್ವಿಯಾಗಲು ಏನು ಮಾಡಬೇಕು? ಏನು ಮಾಡಬಾರದು ಎಂಬ ಸಲಹೆಯನ್ನೂ ನೀಡಿದ್ದಾರೆ ಅದರಲ್ಲಿ. ಅದರ ವಿವರಗಳನ್ನು ಇಂದು ತಿಳಿದುಕೊಳ್ಳೋಣ… (Spiritual)

ಕೋಪ: ಸಮುದ್ರವು ನೋಡಲು ಗಂಭೀರ ಮತ್ತು ಶಾಂತವಾಗಿದೆ. ಆದರೆ, ಪ್ರಳಯ ಬಂದರೆ… ಅದು ಎಷ್ಟು ಭೀಕರವಾಗಿರುತ್ತದೆ ಎಂಬುದು ನಮಗೆ ಗೊತ್ತು. ಅದೇ ರೀತಿ ಸಿಟ್ಟಿನಿಂದ ಕೂಡಿದವನು, ತನ್ನ ವಿವೇಚನೆಯನ್ನು ಮರೆತು ಕೋಪದಿಂದ ಕೂಗಾಡುತ್ತಾನೆ. ಇತರರೊಂದಿಗೆ ಜಗಳವೂ ಆಡುತ್ತಾನೆ ಎಂದಿದ್ದಾರೆ ಚಾಣಕ್ಯ.

ಗುರಿ-ಗಮ್ಯ ಹೊಂದಾಣಿಕೆ: ಮನುಷ್ಯನ ಜೀವನದಲ್ಲಿ ಹಣ ಕೂಡಿಡುವುದು ಬಹಳ ಮುಖ್ಯ, ಹಣ ಸಂಪಾದಿಸಲು ಒಬ್ಬ ವ್ಯಕ್ತಿಯು ತನ್ನ ಗುರಿ-ಗಮ್ಯವನ್ನು ಹೊಂದಿಸಿಕೊಳ್ಳಬೇಕು. ಗಳಿಸಿದ ಹಣವನ್ನು ಸರಿಯಾಗಿ ಬಳಸುವುದು ಸಹ ಅಗತ್ಯ. ಎಂದು ತಿಳಿದಾಗ ಮಾತ್ರ.. ಸುಖ ಸಂತೋಷದ ಜೀವನ ಸಿಗುತ್ತದೆ. ಉಳಿಸಿ, ಹೂಡಿಕೆ ಮಾಡಿ, ಗಳಿಸಿದ ಹಣವನ್ನು ದಾನಕ್ಕೆ ಬಳಸಿಕೊಳ್ಳುವಂತೆಯೂ ಚಾಣಕ್ಯ ಸಲಹೆ ನೀಡಿದರು.

ಇದನ್ನೂ ಓದಿ: ಚಾಣಕ್ಯ ನೀತಿ: ಚಾಣಕ್ಯನ ಈ ಕ್ರಮಗಳನ್ನು ಅನುಸರಿಸಿ ಜೀವನದಲ್ಲಿ ಸಂಕಷ್ಟ, ಬಿಕ್ಕಟ್ಟಿನಿಂದ ಹೊರಬನ್ನಿ

ಧರ್ಮದ ಅನುಸರಣೆ: ಧರ್ಮದಿಂದ ಬದುಕುವವರು ಯಾವಾಗಲೂ ಸಂತೋಷವಾಗಿರುತ್ತಾರೆ. ಜೀವನದಲ್ಲಿ ಸಮಸ್ಯೆಗಳು ಬರುತ್ತವೆ. ಆದರೆ ಅವು ಸ್ವಲ್ಪ ಸಮಯದವರೆಗೆ ಇರುತ್ತವೆ. ವ್ಯಕ್ತಿಯ ಆಧ್ಯಾತ್ಮಿಕ ಚಿಂತನೆ ಮತ್ತು ಧಾರ್ಮಿಕ ಚಿಂತನೆಯು ಅವರನ್ನು ಜೀವನದ ಸರಿಯಾದ ಹಾದಿಯಲ್ಲಿ ಕೊಂಡೊಯ್ಯುತ್ತದೆ. ಹೀಗೆ ಧರ್ಮ ಮತ್ತು ಧಾರ್ಮಿಕ ಆಚರಣೆಗಳನ್ನು ಅನುಸರಿಸುವ ವ್ಯಕ್ತಿ ಎಂದಿಗೂ ಕೆಟ್ಟ ಕೆಲಸಗಳನ್ನು ಮಾಡುವುದಿಲ್ಲ.

ಮೋಕ್ಷ: ಯಾವುದೇ ವ್ಯಕ್ತಿಯ ಜೀವನದಲ್ಲಿ ಮೋಕ್ಷವು ಕೊನೆಯ ಹಂತವಾಗಿದೆ ಎಂದು ಚಾಣಕ್ಯ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬ ವ್ಯಕ್ತಿಯು ತನ್ನ ಧ್ಯೇಯ, ಕೆಲಸ ಮತ್ತು ಕರ್ಮದ ಮೂಲಕ ಮೋಕ್ಷವನ್ನು ಪಡೆಯಲು ಬಯಸುತ್ತಾನೆ. ಆದರೆ, ಜೀವನದಲ್ಲಿ ಒಳ್ಳೆಯ ಕೆಲಸ ಮಾಡಿದವರಿಗೆ ಮಾತ್ರ ಮೋಕ್ಷ ಸಿಗುತ್ತದೆ.

ಆಧ್ಯಾತ್ಮ ಕುರಿತಾದ ಹೆಚ್ಚಿನ ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ