Devshayani Ekadashi 2023: ದೇವಶಯನಿ ಏಕಾದಶಿಯ ಮಹತ್ವ, ಆಚರಣೆಯ ಹಿಂದಿನ ಕಥೆ ಇಲ್ಲಿದೆ

ಹಿಂದೂ ಧರ್ಮದಲ್ಲಿ ಅನೇಕ ವ್ರತ ಮತ್ತು ಹಬ್ಬಗಳನ್ನು ಆಚರಿಸಲಾಗುತ್ತದೆ. ಅದರಲ್ಲಿ ಏಕಾದಶಿ ಉಪವಾಸವನ್ನು ಬಹಳ ವಿಶೇಷವೆಂದು ಪರಿಗಣಿಸಲಾಗಿದೆ. ವರ್ಷದಲ್ಲಿ ಒಟ್ಟು 24 ಏಕಾದಶಿಯನ್ನು ಆಚರಿಸಲಾಗುತ್ತದೆ. ಈಗ ಆಷಾಢ ಮಾಸ ನಡೆಯುತ್ತಿದ್ದು, ಈ ಮಾಸದಲ್ಲಿ ಬರುವ ಏಕಾದಶಿಯನ್ನು ದೇವಶಯನಿ ಏಕಾದಶಿ ಎಂದು ಕರೆಯಲಾಗುತ್ತದೆ. ಈ ದೇವಶಯನಿ ಏಕಾದಶಿಯ ಆಚರಣೆಯ ಹಿಂದಿನ ಕಥೆ ಹಾಗೂ ಮಹತ್ವದ ಕುರಿತು ಮಾಹಿತಿ ಇಲ್ಲಿದೆ.

Devshayani Ekadashi 2023: ದೇವಶಯನಿ ಏಕಾದಶಿಯ ಮಹತ್ವ, ಆಚರಣೆಯ ಹಿಂದಿನ ಕಥೆ ಇಲ್ಲಿದೆ
ಸಾಂದರ್ಭಿಕ ಚಿತ್ರ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Jun 29, 2023 | 11:39 AM

ಹಿಂದೂ ಧರ್ಮದಲ್ಲಿ ಏಕಾದಶಿಯ ಉಪವಾಸ ಬಹಳ ಮಹತ್ವವನ್ನು ಪಡೆದಿದೆ. ಆಷಾಡ ಮಾಸದ ಶುಕ್ಷ ಪಕ್ಷದ ಬರುವ ಏಕಾದಶಿಯ ದಿನವನ್ನು ದೇವಶಯಾನಿ ಎಂದು ಕರೆಯಲಾಗುತ್ತದೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ಈ ಶುಭ ದಿನದಂದು ವಿಷ್ಣು ದೇವರನ್ನು ಪೂಜಿಸುವುದರಿಂದ, ಭಕ್ತರು ಅನೇಕ ಶುಭ ಲಾಭವನ್ನು ಪಡೆಯುತ್ತಾರೆ ಎಂದು ನಂಬಲಾಗಿದೆ. ದೇವಶಯನಿ ಏಕಾದಶಿಯು ಅರ್ಥವನ್ನು ನೋಡುವುದಾದರೆ ದೇವ ಎಂದರೆ ದೇವರು ಮತ್ತು ಶಯನಿ ಎಂದರೆ ಮಲಗುವುದು ಎಂದರ್ಥ. ಈ ಶುಭ ದಿನ ವಿಷ್ಣು ದೇವರು ಕ್ಷೀರ ಸಾಗರದಲ್ಲಿ ನಾಲ್ಕು ತಿಂಗಳುಗಳ ಕಾಲ ಯೋಗ ನಿದ್ರೆಗೆ ಜಾರುತ್ತಾರೆ ಹಾಗೂ ಕಾರ್ತಿಕ ಮಾಸದ ಪ್ರಬೋಧಿನಿ ಏಕಾದಶಿಯಂದು ಎಚ್ಚರಗೊಳ್ಳುತ್ತಾರೆ ಎಂದು ಹೇಳಲಾಗುತ್ತದೆ. ವಿಷ್ಣು ದೇವರು ಯೋಗ ನಿದ್ರೆಗೆ ಜಾರಿದ ನಾಲ್ಕು ತಿಂಗಳುಗಳನ್ನು ಚತುರ್ಮಾಸ ಎಂದು ಕರೆಯಲಾಗುತ್ತದೆ. ಈ ಸಮಯದಲ್ಲಿ ಯಾವುದೇ ಶುಭ ಮತ್ತು ಮಂಗಳಕಾರ್ಯಗಳನ್ನು ಮಾಡಲಾಗುವುದಿಲ್ಲ. ಚತುರ್ಮಾಸದಲ್ಲಿ ಪೂಜೆ, ಪುನಸ್ಕಾರ ಮತ್ತು ಉಪವಾಸ ಹಾಗೂ ಇತ್ಯಾದಿ ದೇವರ ಕಾರ್ಯದಲ್ಲಿ ತೊಡಗಿಕೊಳ್ಳುವುದು ಉತ್ತಮವೆಂದು ಪರಿಗಣಿಸಲಾಗಿದೆ. ಈ ಬಾರಿಯ ದೇವಶಯಾನಿ ಏಕಾದಶಿಯನ್ನು ಜೂನ್ 29 ಅಂದರೆ ಇಂದು ಆಚರಿಸಲಾಗುತ್ತಿದೆ.

ದೇವಶಯಾನಿ ಏಕಾದಶಿಯ ಮಹತ್ವ:

ಹರಿ ಶಯನಿ ಏಕಾದಶಿ, ಪದ್ಮ ಏಕಾದಶಿ ಎಂದೂ ಕರಯಲ್ಪಡುವ ದೇವಶಯನಿ ಏಕಾದಶಿಯು ಸನಾತನ ಧರ್ಮದಲ್ಲಿ ಅಪಾರ ಮಹತವವನ್ನು ಹೊಂದಿದೆ. ದೇವಶಯಾನಿ ಏಕಾದಶಿಯ ಈ ಶುಭದಿನದಂದು ವಿಷ್ಣು ದೇವರನ್ನು ಪೂಜಿಸುವ ಅಥವಾ ಉಪವಾಸ ಮಾಡುವ ವ್ಯಕ್ತಿಯು ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ಪಡೆಯುತ್ತಾನೆ, ಎಲ್ಲಾ ರೀತಿಯ ಪಾಪಗಳಿಂದ ಮುಕ್ತಿ ಸಿಗುತ್ತದೆ ಎಂದು ನಂಬಲಾಗಿದೆ. ಈ ದಿನದಂದು ‘ಓಂ ನಮೋ ಭಗವತೇ ವಾಸುದೇವಾಯ ನಮಃ’ ಎಂಬ ಮಂತ್ರವನ್ನು ನಿರಂತರವಾಗಿ ಜಪಿಸುವುದರಿಂದ ಎಲ್ಲಾ ರೀತಿಯ ಭಯ, ರೋಗಗಳು ದೋಷ ಇತ್ಯಾದಿಗಳು ದೂರವಾಗುತ್ತದೆ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ. ಆದ್ದರಿಂದ ಈ ದಿನ ಭಕ್ತರು ಶ್ರದ್ಧಾ ಭಕ್ತಿಯಿಂದ ಉಪವಾಸ ಹಾಗೂ ಪೂಜೆಯನ್ನು ಮಾಡುತ್ತಾರೆ.

ದೇವಶಯನಿ ಏಕಾದಶಿಯ ಕಥೆ:

ಪುರಾಣಗಳ ಪ್ರಕಾರ ಸೂರ್ಯವಂಶದಲ್ಲಿ ಮಾಂಧಾತನೆಂಬ ರಾಜನಿದ್ದ. ದಕ್ಷ ರಾಜನಾಗಿದ್ದ ಆತ ಪ್ರಜೆಗಳನ್ನು ಮಕ್ಕಳಂತೆ ನೋಡಿಕೊಳ್ಳುತ್ತಿದ್ದನು. ಹಾಗೂ ಇತನ ರಾಜ್ಯ ಶ್ರೀಮಂತಿಕೆ ಮತ್ತು ಸಮೃದ್ಧಿಯಿಂದ ಕೂಡಿತ್ತು. ಆದರೆ ಒಮ್ಮೆ ರಾಜ ಮಾಂಧಾತನ ರಾಜ್ಯದಲ್ಲಿ ಮೂರು ವರ್ಷಗಳ ಮಳೆಯಾಗದೆ ಬರಗಾಲದ ಪರಿಸ್ಥಿತಿ ತಲೆದೂರಿತ್ತು. ಇದರಿಂದ ಯಾವುದೇ ಬೆಳೆಗಳಿಲ್ಲದೆ, ರಾಜ್ಯದಲ್ಲಿ ಕ್ರಮೇಣ ಆಹಾರ ಧಾನ್ಯಗಳ ದಾಸ್ತಾನು ಖಾಲಿಯಾಯಿತು. ಜನರು ಬಡವರಾದರು ಮತ್ತು ಹಸಿವಿನಿಂದ ನರಳುವಂತಹ ಪರಿಸ್ಥಿತಿ ಎದುರಾಯಿತು. ಪ್ರಜೆಗಳ ಈ ಪರಿಸ್ಥಿತಿಯು ರಾಜನಿಗೆ ಅಸಮಾಧಾನವನ್ನು ಉಂಟುಮಾಡಿತು. ರಾಜನು ತನ್ನ ಪ್ರಜೆಗಳನ್ನು ಸಮಧಾನಪಡಿಸಿ ಮತ್ತು ಶೀಘ್ರದಲ್ಲೇ ಇದಕ್ಕೆ ಪರಿಹಾರ ಕಂಡುಕೊಳ್ಳುವುದಾಗಿ ಭರವಸೆ ನೀಡಿದನು. ಪರಿಹಾರಕ್ಕಾಗಿ ಋಷಿ ಮುನಿಗಳನ್ನು ಹುಡುಕಲು ಹೊರಟನು. ಹುಡುಕಾಟದಲ್ಲಿ ಕಾಡುಗಳಲ್ಲಿ ಅಲೆಯುತ್ತಿರುವಾಗ, ರಾಜ ಅಂಗೀರ ಎಂಬ ಮಹಾನ್ ಋಷಿಯನ್ನು ಭೇಟಿಯಾದನು. ಹಾಗೂ ಅವನು ಋಷಿಯ ಮುಂದೆ ತಲೆಬಾಗಿ ರಾಜ್ಯದಲ್ಲಿ ಉಂಟಾದ ಬರಗಾಲದ ಪರಿಸ್ಥಿತಿಯನ್ನು ನಿವಾರಿಸಲು ಋಷಿಯ ಬಳಿ ಪರಿಹಾರವನ್ನು ಕೇಳಿದನು.

ಇದನ್ನೂ ಓದಿ: Ekadashi 2023: ಪ್ರಥಮ ಏಕಾದಶಿ ವೈಶಿಷ್ಟ್ಯ ಏನು? ಆಚರಣೆ ಕ್ರಮಗಳೇನು? ಇಲ್ಲಿದೆ ನೋಡಿ

ಆಗ ಅಂಗೀರ ಋಷಿ ಈ ಬಿಕ್ಕಟ್ಟಿನಿಂದ ಹೊರಬರಲು ಉತ್ತಮ ಮಾರ್ಗವೆಂದರೆ ಆಷಾಡ ಶುಕ್ಷ ಏಕಾದಶಿಯಂದು ದೇವಶಯನಿ ಉಪವಾಸವನ್ನು ಕ್ರಮಬದ್ಧವಾಗಿ ಆಚರಿಸುವುದು. ಅದರ ಪುಣ್ಯದ ಫಲವಾದ ನಿನ್ನ ರಾಜ್ಯದಲ್ಲಿ ಮಳೆಯಾಗುತ್ತದೆ. ಇದರಿಂದ ಸಮೃದ್ಧಿ ಬರುತ್ತದೆ. ಮತ್ತು ಆಹಾರದ ಬಿಕ್ಕಟ್ಟು ಕೊನೆಗೊಳ್ಳುತ್ತದೆ. ಹಾಗಾಗಿ ರಾಜ್ಯದ ಪ್ರತಿಯೊಬ್ಬ ಜರು ಕೂಡಾ ಈ ಉಪವಾಸವನ್ನು ಮಾಡಿ ಎಂದು ಸಲಹೆ ನೀಡುತ್ತಾರೆ.

ಋಷಿಯ ಸಲಹೆಯನ್ನು ಅನುಸರಿಸಿ, ರಾಜನು ತನ್ನ ಅರಮನೆಗೆ ಹಿಂತಿರುಗಿದನು. ಮತ್ತು ಪ್ರಜೆಗಳ ಜೊತೆಗೂಡಿ ದೇವಶಯನಿ ಏಕಾದಶಿಯನ್ನು ವಿಧಿವತ್ತಾಗಿ ಆಚರಿಸಿದನು. ಈ ವ್ರತ ಫಲವಾಗಿ ಬಹುಬೇಗನೆ ಮಳೆ ಬಂದು ಬರಗಾಲ ನಿವಾರಣೆಯಾಯಿತು. ರಾಜ್ಯವು ತನ್ನ ಕಳೆದುಹೋದ ವೈಭವವನ್ನು ಮರಳಿ ಪಡೆಯಿತು ಹಾಗೂ ಸಮೃದ್ಧವಾದ ಮಳೆ, ಬೆಳೆಯ ಪರಿಣಾಮವಾಗಿ ಪ್ರಜೆಗಳು ನೆಮ್ಮದಿಯ ಜೀವನ ಸಾಗಿಸಿದರು.

ಹೆಚ್ಚಿನ ಆಧ್ಯಾತ್ಮಿಕ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ
ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ