AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ಸ್ಥಳಗಳಲ್ಲಿ, ಇಂತಹ ಪರಿಸ್ಥಿತಿಗಳಲ್ಲಿ ವಾಸವಿರುವುದು ಅತ್ಯಂತ ಅಪಾಯಕಾರಿ.. ಅಂತಹ ಜಾಗದಲ್ಲಿ ಒಂದು ಕ್ಷಣವೂ ನಿಲ್ಲಬೇಡಿ

Chanakya Niti: ಯಾವುದೇ ಸಂದರ್ಭದಲ್ಲೂ ಸಂಯಮದಿಂದ ವರ್ತಿಸಿ. ಮೊದಲು ನಿಮ್ಮನ್ನು ನೀವು ರಕ್ಷಿಸಿಕೊಳ್ಳಿ.

ಈ ಸ್ಥಳಗಳಲ್ಲಿ, ಇಂತಹ ಪರಿಸ್ಥಿತಿಗಳಲ್ಲಿ ವಾಸವಿರುವುದು ಅತ್ಯಂತ ಅಪಾಯಕಾರಿ.. ಅಂತಹ ಜಾಗದಲ್ಲಿ ಒಂದು ಕ್ಷಣವೂ ನಿಲ್ಲಬೇಡಿ
Chanakya Niti: ಚಾಣಕ್ಯ ನೀತಿ ಶಾಸ್ತ್ರ
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​|

Updated on: Jun 27, 2023 | 3:34 PM

Share

ಆಚಾರ್ಯ ಚಾಣಕ್ಯರು ತಮ್ಮ ಚಾಣಕ್ಯ  (Chanakya) ನೀತಿ ಶಾಸ್ತ್ರ ಪುಸ್ತಕದಲ್ಲಿ ಬುದ್ಧಿವಂತರು, ತಿಳಿವಳಿಕೆ ಇರುವವರು ಮತ್ತು ವಿವೇಕವಂತರು ಯಾವುದೇ ಪರಿಸ್ಥಿತಿಯನ್ನು ದೃಢವಾಗಿ ಎದುರಿಸಬೇಕು ಎಂದು ಹೇಳಿದ್ದಾರೆ. ಆದರೆ ಕೆಲವು ಅಸಾಮಾನ್ಯ ಸಂದರ್ಭಗಳಿದ್ದರೆ.. ಅವುಗಳನ್ನು ಬದಲಾಯಿಸುವುದು ಅಸಾಧ್ಯವಾದರೆ.. ಅಲ್ಲಿಗೆ ನೀವು ಪ್ರಯಾಣ ಮಾಡುವುದನ್ನು ನಿಲ್ಲಿಸುವುದು ಉತ್ತಮ. ಜೊತೆಗೆ ನೀವು ಆ ಮಾರ್ಗ ಅಥವಾ ಗಮ್ಯ ತಲುಪುವ ಬದಲು ಬೇರೆಯದ್ದೇ ಗಮ್ಯ ಕಂಡುಕೊಳ್ಳುವ ನಿಟ್ಟಿನಲ್ಲಿ ಆಲೋಚಿಸಬೇಕು. ಅಥವಾ ಕೆಲವು ಸ್ಥಳಗಳಲ್ಲಿ ವಾಸಿಸುವುದು ಕಷ್ಟಕರವಾದರೆ ಅಲ್ಲಿಂದ ದೂರವಾಗುವುದು ಕ್ಷೇಮಕರ. (Chanakya Niti).

ದೇಶದ ಮೇಲೆ ದಾಳಿ: ನಮ್ಮ ದೇಶ ಅಥವಾ ನಾವಿರುವ ಒಂದು ನಿರ್ದಿಷ್ಟ ಪ್ರದೇಶದ ಮೇಲೆ ಇನ್ನೊಂದು ಪ್ರದೇಶದವರು ದಾಳಿ ಮಾಡಿದರೆ ವೃಥಾ ಅಂತಹ ಪರಿಸ್ಥಿತಿ ಎದುರಿಸುವುದು ಸಮಂಜಸವಲ್ಲ.. ಅಲ್ಲಿಂದ ದೂರವಾಗುವುದು ಒಳಿತು ಎಂದು ಆಚಾರ್ಯ ಚಾಣಕ್ಯ ಹೇಳಿದರು. ಇಂತಹ ದಾಳಿಗಳಿಂದ ಸ್ಥಳೀಯರ ಬದುಕು ನರಕಮಯವಾಗುತ್ತದೆ. ಆಹಾರ ಮತ್ತು ಪಾನೀಯಗಳ ಕೊರತೆ ಇರುತ್ತದೆ.. ಅವರು ತೊಂದರೆಗೆ ಒಳಗಾಗುತ್ತಾರೆ. ಒಮ್ಮೊಮ್ಮೆ ಒಬ್ಬರಿಗೊಬ್ಬರು ಯುದ್ಧಕ್ಕೂ ಮುಂದಾಗುವ ಪರಿಸ್ಥಿತಿ ಎದುರಾಗುತ್ತದೆ.

ಬರ ಪರಿಸ್ಥಿತಿ: ಬರಗಾಲ ಬಂದರೆ ಯಾವುದೇ ಪ್ರದೇಶ ಅಥವಾ ರಾಜ್ಯದಲ್ಲಿ ವಾಸಿಸುವುದರಲ್ಲಿ ಅರ್ಥವಿಲ್ಲ ಎಂದು ಚಾಣಕ್ಯನ ನೀತಿಶಾಸ್ತ್ರ ಹೇಳುತ್ತದೆ. ಅಂತಹ ಪ್ರದೇಶದಿಂದ ಬೇರೆ ಪ್ರದೇಶಕ್ಕೆ ವಲಸೆ ಹೋಗುವುದು ಉತ್ತಮ. ಬರಪೀಡಿತ ಪ್ರದೇಶದಲ್ಲಿ ವಾಸಿಸುವುದರಿಂದ ಕುಟುಂಬ ಜೀವನ ಅಪಾಯಕ್ಕೆ ಸಿಲುಕುತ್ತದೆ.

ಕಾನೂನು ಸುವ್ಯವಸ್ಥೆ ಕೊರತೆಯಾದರೆ: ಚಾಣಕ್ಯನ ಪ್ರಕಾರ ಯಾವುದೇ ಸ್ಥಳದಲ್ಲಿ ಹಿಂಸಾಚಾರ ನಡೆದರೆ.. ಕಾನೂನು ಸುವ್ಯವಸ್ಥೆಗೆ ಭಂಗ ಬಂದರೆ.. ಅಪ್ಪಿತಪ್ಪಿಯೂ ಅಂತಹ ಸ್ಥಳದಲ್ಲಿ ನಿಲ್ಲಬಾರದು. ಅಂತಹ ಜಾಗದಲ್ಲಿ ನಿಂತರೆ.. ಜೀವ ಬೆದರಿಕೆ ಎದುರಾಗುತ್ತದೆ. ಹಾಗಾಗಿ ಅಂತಹ ಸ್ಥಳದಿಂದ ಗೂರವಾಗುವುದು ಉತ್ತಮ.

ಇದನ್ನೂ ಓದಿ: ಚಾಣಕ್ಯ ನೀತಿ: ಚಾಣಕ್ಯನ ಈ ಕ್ರಮಗಳನ್ನು ಅನುಸರಿಸಿ ಜೀವನದಲ್ಲಿ ಸಂಕಷ್ಟ, ಬಿಕ್ಕಟ್ಟಿನಿಂದ ಹೊರಬನ್ನಿ

ಶತ್ರುಗಳ ದಾಳಿ: ಆಚಾರ್ಯ ಚಾಣಕ್ಯ ಪ್ರಕಾರ ಶತ್ರು ಯಾರಿಗೇ ಆದರೂ ತೊಂದರೆಯನ್ನೇ ಕೊಡುವುದು.. ಶತ್ರು ಯಾವಾಗ ಬೇಕಾದರೂ ದಾಳಿ ಮಾಡಬಹುದು. ಶತ್ರುವು ನಿಮ್ಮ ಮೇಲೆ ಹಠಾತ್ತನೆ ದಾಳಿ ಮಾಡಿದರೆ, ಅದನ್ನು ಎದುರಿಸಲು ನಿಮಗೆ ಯಾವುದೇ ತಂತ್ರವಿಲ್ಲದಿದ್ದರೆ ಪರಿಸ್ಥಿತಿ ಕಠಿಣವಾಗುತ್ತದೆ. ಹಾಗಾಗಿ ಅಂತಹ ಶತ್ರುವಿನ ಮೇಲೆ ಸೇಡು ತೀರಿಸಿಕೊಳ್ಳಬೇಡಿ.. ಕೂಡಲೇ ಆ ಸ್ಥಳವನ್ನು ತೊರೆಯಬೇಕು ಎಂದು ಚಾಣಕ್ಯ ಸೂಚಿಸಿದ್ದಾರೆ.

ಆತ್ಮರಕ್ಷಣೆ: ಶತ್ರುವನ್ನು ಎದುರಿಸಲು ಸಾಧ್ಯವಾಗದಿದ್ದರೆ, ಆತ್ಮರಕ್ಷಣೆ ಅನಿವಾರ್ಯವಾಗುತ್ತದೆ. ಪ್ರಾಣ ಉಳಿದುಕೊಂಡರೆ ಮತ್ತೆ ದಾಳಿಗೆ ಸಜ್ಜಾಗಬಹುದು ಎಂದು ಚಾಣಕ್ಯ ಹೇಳುತ್ತಾರೆ. ಅದಕ್ಕಾಗಿಯೇ ಸುರಕ್ಷಿತವಾಗಿರುವುದು ಮುಖ್ಯವಾಗುತ್ತದೆ. ಆದ್ದರಿಂದ ಯಾವುದೇ ಸಂದರ್ಭದಲ್ಲೂ ಸಂಯಮದಿಂದ ವರ್ತಿಸಿ. ಮೊದಲು ನಿಮ್ಮನ್ನು ನೀವು ರಕ್ಷಿಸಿಕೊಳ್ಳಿ.

ಆಧ್ಯಾತ್ಮ ಕುರಿತಾದ ಹೆಚ್ಚಿನ ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್