Kannada News Spiritual Adhik Shravana, which charity in Adhik Masa gives great results? Here are the rules of fasting Spiritual news
Adhik Shravana: ಅಧಿಕ ಮಾಸದಲ್ಲಿ ಯಾವ ದಾನ ಮಾಡಿದರೆ ಶ್ರೇಷ್ಠ ಫಲ? ಇಲ್ಲಿದೆ ವ್ರತಾಚರಣೆಯ ನಿಯಮಗಳು
ಈ ವರ್ಷ ಅಧಿಕ ಮಾಸ ಬಂದಿದೆ. ಇದು ಅಧಿಕ ಶ್ರಾವಣ ಮಾಸವಾಗಿದೆ. ಇದನ್ನು ‘ಮಲಮಾಸ’ ಅಂತಲೂ ಕರೆಯುವ ಪರಿಪಾಠ ಇದೆ. ಹಾಗೆ ನೋಡಿದರೆ ಪ್ರತಿ ತಿಂಗಳೂ ಸಂಕ್ರಮಣ ಆಗುತ್ತದೆ. ಮೇಷ, ವೃಷಭ, ಮಿಥುನ ಹೀಗೆ ಸಂಕ್ರಮಣ ಸಂಭವಿಸುತ್ತದೆ.
ಈ ವರ್ಷ ಅಧಿಕ ಮಾಸ ಬಂದಿದೆ. ಇದು ಅಧಿಕ ಶ್ರಾವಣ ಮಾಸವಾಗಿದೆ. ಇದನ್ನು ‘ಮಲಮಾಸ’ ಅಂತಲೂ ಕರೆಯುವ ಪರಿಪಾಠ ಇದೆ. ಹಾಗೆ ನೋಡಿದರೆ ಪ್ರತಿ ತಿಂಗಳೂ ಸಂಕ್ರಮಣ ಆಗುತ್ತದೆ. ಮೇಷ, ವೃಷಭ, ಮಿಥುನ ಹೀಗೆ ಸಂಕ್ರಮಣ ಸಂಭವಿಸುತ್ತದೆ. ಯಾವ ಮಾಸದಲ್ಲಿ ಸಂಕ್ರಮಣ ಆಗುವುದಿಲ್ಲವೋ ಅದನ್ನು ಅಧಿಕ ಮಾಸ ಎಂದು ಕರೆಯಲಾಗುತ್ತದೆ. ಈ ಬಾರಿಯ ಅಧಿಕ ಶ್ರಾವಣ ಮಾಸವು ಜುಲೈ ತಿಂಗಳ 18ನೇ ತಾರೀಕಿನಿಂದ ಆಗಸ್ಟ್ 16ನೇ ತಾರೀಕಿನ ತನಕ ಇರುತ್ತದೆ ಇನ್ನು ಪುರುಷೋತ್ತಮ ಸ್ವರೂಪಿಯಾದ ಆ ಪರಮಾತ್ಮನು ಮಾಸದ ನಿಯಾಮಕನಾಗುತ್ತಾನೆ. ಆದ್ದರಿಂದ ಪುರುಷೋತ್ತಮ ಮಾಸ ಎಂದೂ ಕರೆಯಲಾಗುತ್ತದೆ. ಈ ಅಧಿಕ ಮಾಸದಲ್ಲಿ ಮಂಗಳ ಕಾರ್ಯಗಳನ್ನು ಮಾಡುವಂತಿಲ್ಲ ಎಂದೂ ನಿಷೇಧ ಮಾಡಲಾಗಿದೆ. ಮದುವೆ, ಉಪನಯನಾದಿ ಕಾರ್ಯಕ್ರಮಗಳನ್ನು ಅಧಿಕ ಮಾಸ ಬಂದಾಗ ಮಾಡುವುದಿಲ್ಲ.
ಮೂವತ್ತಾಮೂರು ತಿಂಗಳಿಗೆ ಒಮ್ಮೆ ಅಧಿಕ ಮಾಸ ಬರುತ್ತದೆ. ಹೀಗೆ ಅಧಿಕ ಮಾಸ ಬಂದಾಗ ಕೆಲ ವಿಶಿಷ್ಟ ವ್ರತಗಳು, ಅನೇಕ ದಾನಗಳನ್ನು ಮಾಡಿದಲ್ಲಿ ಉತ್ತಮ ಫಲಗಳು ದೊರೆಯುತ್ತವೆ. ಹಾಗೆ ಹೇಳಿದ ವ್ರತ, ದಾನಗಳ ವಿವರ ಹೀಗಿವೆ:
ಉಪವಾಸ ವ್ರತ
– ಏನೂ ಆಹಾರ ಸೇವಿಸದೇ ಇರುವುದು
– ಏಕಭುಕ್ತ – ಹಗಲು ಒಂದು ಹೊತ್ತು ಮಾತ್ರ ಆಹಾರ ಸೇವನೆ ಮಾಡುವುದು
– ನಕ್ತಭೋಜನ- ಕೇವಲ ರಾತ್ರಿ ಒಂದು ಹೊತ್ತು ಮಾತ್ರ ಆಹಾರ ಸೇವನ
– ಅಯಾಚಿತ- ಏನು ದೊರೆಯುತ್ತದೋ ಅಷ್ಟನ್ನು ಮಾತ್ರ ಭುಂಜಿಸುವುದು, ಏನನ್ನೂ ಬೇಡುವಂತಿಲ್ಲ
– ಧಾರಣ ಪಾರಣ- ಇದರಲ್ಲಿ ಒಂದು ದಿನ ಊಟ, ಇನ್ನೊಂದು ದಿನ ಉಪವಾಸ ಹೀಗೆ ತಿಂಗಳಿಡೀ ಮಾಡುವುದು
– ಒಂದು ತಿಂಗಳಿಡೀ ಗುರುಗಳು ಮತ್ತು ಗುರುಗಳ ಸನ್ನಿಧಿಯಲ್ಲಿ ಅಖಂಡ ದೀಪದಾನ
– ಪ್ರತಿ ದಿನ ಪ್ರಾತಃ ಕಾಲದಲ್ಲಿ ಗಂಗಾ ಮೊದಲಾದ ಮಹಾ ನದಿಗಳಲ್ಲಿ ಸ್ಬಾಬ
– ಪ್ರತಿ ದಿನ ಮೂವತ್ಮೂರು ಅಪ್ಪೂಪ (ಅತಿರಸ ಅಥವಾ ಕಜ್ಜಾಯ) ದಾನ ಮಾಡಬೇಕು ಅಥವಾ ಈ ತಿಂಗಳಲ್ಲಿ ಒಂದು ದಿನವಾದರೂ ಮೂವತ್ಮೂರು ಅಪ್ಪೂಪವನ್ನು ಪಾತ್ರೆ ಸಹಿತವಾಗಿ ಕೊಡಬೇಕು.
– ಈ ದಾನವನ್ನು ಅಧಿಕ ಮಾಸದಲ್ಲಿನ ಶುಕ್ಲ, ಕೃಷ್ಣ ಪಕ್ಷದ ದ್ವಾದಶಿ, ಹುಣ್ಣಿಮೆ, ಅಮಾವಾಸ್ಯೆ, ನವಮಿ, ಚತುರ್ದಶಿ ತಿಥಿಗಳಲ್ಲಿ, ವೈಧೃತಿ, ವ್ಯತೀಪಾತ ಯೋಗಗಳು ಇರುವಂಥ ದಿನದಂದು ಮಾಡಿದರೆ ಶ್ರೇಷ್ಠ.
ಅಧಿಕಸ್ಯ ಅಧಿಕ ಫಲಂ ಎಂಬ ಮಾತಿದೆ. ಶುಭ ಅಥವಾ ಮಂಗಳ ಕಾರ್ಯಗಳನ್ನು ಹೊರತು ಪಡಿಸಿದಂತೆ ಮಾಡುವ ದಾನ ಮೊದಲಾದ ಕಾರ್ಯಗಳಿಗೆ ಹೆಚ್ಚಿನ ಫಲ ದೊರೆಯುತ್ತದೆ. ಈ ದಾನ ಮಾಡುವ ಮುನ್ನ ಸಂಕಲ್ಪ ಮಾಡಿ, ಆ ನಂತರ ನೀಡಬೇಕು.