ಅನಂತ ಚತುರ್ದಶಿಯನ್ನು ಈ ವರ್ಷ ಸೆಪ್ಟೆಂಬರ್ 9ರಂದು ಆಚರಿಸಲಾಗುತ್ತಿದೆ. ಈ ದಿನದಂದು ಭಗವಾನ್ ವಿಷ್ಣುವಿನ ಅನಂತ ರೂಪಗಳನ್ನು ಪೂಜಿಸಲಾಗುತ್ತದೆ. 10 ದಿನಗಳ ಕಾಲ ನಡೆಯುವ ಗಣಪತಿ ಹಬ್ಬದ ಕೊನೆಯ ದಿನವಾಗಿದೆ. ಈ ದಿನ ಗಣೇಶನನ್ನು ವಿಜೃಂಭಣೆಯಿಂದ ಬೀಳ್ಕೊಡಲಾಗುತ್ತದೆ.
ಗೌರವಯುತವಾಗಿ ನೀರಿನಲ್ಲಿ ಮುಳುಗಿಸಲಾಗುತ್ತದೆ. ಅಲ್ಲದೇ ಮುಂದಿನ ವರ್ಷ ಗಜಾನನ ಬೇಗ ಬರಲಿ ಎಂದು ಹಾರೈಸುತ್ತಾರೆ. ಈ ಬಾರಿಯ ಅನಂತ ಚತುರ್ದಶಿಯಂದು ಅತ್ಯಂತ ಮಂಗಳಕರವಾದ ಯೋಗವು ರೂಪುಗೊಳ್ಳುತ್ತಿದ್ದು, ಈ ಕಾರಣದಿಂದಾಗಿ ಶ್ರೀ ಹರಿಯ ಆರಾಧನೆ ಮತ್ತು ಗಣಪತಿಯ ನಿಮಜ್ಜನವು ಶುಭ ಫಲವನ್ನು ನೀಡುತ್ತದೆ. ಅನಂತ ಚತುರ್ದಶಿ ಪೂಜೆಯ ಶುಭ ಸಮಯ ಮತ್ತು ಯೋಗವನ್ನು ತಿಳಿಯೋಣ.
ಅನಂತ ಚತುರ್ದಶಿ 2022 ಮುಹೂರ್ತ
ಅನಂತ ಚತುರ್ದಶಿ ದಿನಾಂಕ ಪ್ರಾರಂಭವಾಗುತ್ತದೆ – 8ನೇ ಸೆಪ್ಟೆಂಬರ್ 2022, ರಾತ್ರಿ 9.02 ರಿಂದ
ಅನಂತ ಚತುರ್ದಶಿ ದಿನಾಂಕ ಕೊನೆಗೊಳ್ಳುತ್ತದೆ – 9ನೇ ಸೆಪ್ಟೆಂಬರ್ 2022, ಸಂಜೆ 6.07 ರವರೆಗೆ
ಪೂಜೆಗೆ ಮುಹೂರ್ತ – 06.10 am – 06:07 pm (9 ಸೆಪ್ಟೆಂಬರ್ 2022)
ಪೂಜೆಯ ಅವಧಿ – 11 ಗಂಟೆ 58 ನಿಮಿಷಗಳು
ಅನಂತ ಚತುರ್ದಶಿ 2022 ಶುಭ ಯೋಗ
ಈ ವರ್ಷ, ಅನಂತ ಚತುರ್ದಶಿಯಂದು, ಅತ್ಯಂತ ಮಂಗಳಕರ ಯೋಗದ ಸಂಯೋಜನೆಯು ನಡೆಯುತ್ತಿದೆ, ಇದು ಈ ದಿನದ ಮಹತ್ವವನ್ನು ಹೆಚ್ಚಿಸುತ್ತದೆ.
ಈ ದಿನ ಸುಕರ್ಮ ಮತ್ತು ರವಿಯೋಗವು ರೂಪುಗೊಳ್ಳುತ್ತಿದೆ. ಸುಕರ್ಮ ಯೋಗದಲ್ಲಿ ಮಾಡುವ ಶುಭ ಕಾರ್ಯದಲ್ಲಿ ಯಶಸ್ಸು ಖಂಡಿತ ಸಿಗುತ್ತದೆ ಎಂಬ ನಂಬಿಕೆ ಇದೆ. ಹಾಗೆಯೇ ರವಿಯೋಗದಲ್ಲಿ ಶ್ರೀಹರಿಯನ್ನು ಪೂಜಿಸುವುದರಿಂದ ಪಾಪಗಳು ನಾಶವಾಗುತ್ತವೆ.
ಸುಕರ್ಮ ಯೋಗ – 8ನೇ ಸೆಪ್ಟೆಂಬರ್ 2022, 09.41 ನಿಮಿಷಗಳಿಂದ 9ನೇ ಸೆಪ್ಟೆಂಬರ್ 2022 ರವರೆಗೆ ಸಂಜೆ 06.12 ರವರೆಗೆ
ರವಿ ಯೋಗ – 6.10 am – 11.35 (9 ಸೆಪ್ಟೆಂಬರ್ 2022)
ಅನಂತ ಚತುರ್ದಶಿಯಂದು ಬಪ್ಪನಿಗೆ ವಿದಾಯ ಹೇಳುವುದು ಹೇಗೆ?
ಅನಂತ ಚತುರ್ದಶಿಯಂದು ವಿಧಿವತ್ತಾಗಿ ಗಣಪತಿಯನ್ನು ಪೂಜಿಸಿ. ಕಳುಹಿಸುವ ಮೊದಲು ತಪ್ಪಿಗೆ ಕ್ಷಮೆಯಾಚಿಸಿ. ಮುಂದಿನ ವರ್ಷ ಬೇಗ ಬರಲಿ ಎಂದು ಕೇಳಿಕೊಳ್ಳಿ. ಈ ದಿನ ಗಣಪತಿಯ ವಿಗ್ರಹವನ್ನು ನದಿ, ಕೊಳ ಅಥವಾ ಮನೆಯಲ್ಲಿ ನೀರಿನಲ್ಲಿ ಮುಳುಗಿಸಲಾಗುತ್ತದೆ.
ಗಣೇಶ ವಿಸರ್ಜನೆ ಶುಭ ಮುಹೂರ್ತ 2022
ಬೆಳಗಿನ ಮುಹೂರ್ತ – 6.3 AM -10.44 AM
ಮಧ್ಯಾಹ್ನ ಮುಹೂರ್ತ – 12.18 PM – 1.52 PM
ಸಂಧ್ಯಾ ಮುಹೂರ್ತ – 5.00 PM – 6.31 PM
ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:14 pm, Wed, 7 September 22