
ಪ್ರತಿಯೊಬ್ಬ ವ್ಯಕ್ತಿಗೂ ಸ್ವಂತ ಮನೆ ಹೊಂದುವ ಆಸೆ ಇರುತ್ತದೆ. “ಮದುವೆ ಮಾಡಿ ನೋಡು, ಮನೆ ಕಟ್ಟಿ ನೋಡು” ಎಂಬ ಗಾದೆಯು ಸ್ವಂತ ಮನೆ ಕಟ್ಟುವುದರ ಶ್ರಮ ಮತ್ತು ಮಹತ್ವವನ್ನು ತಿಳಿಸುತ್ತದೆ. ಸಾಲ ಮಾಡಿ ಮನೆ ಕಟ್ಟಿದರೂ ಅದರಲ್ಲಿ ಶ್ರಮ ಮತ್ತು ಕಷ್ಟ ಇರುತ್ತದೆ. ಅನೇಕರು ಬಾಡಿಗೆ ಮನೆಗಳಲ್ಲಿ ಅಥವಾ ಅಪಾರ್ಟ್‌ಮೆಂಟ್‌ಗಳಲ್ಲಿ ವಾಸಿಸುತ್ತಿದ್ದು, ಸ್ವಂತ ಮನೆಗಾಗಿ ನಿರಂತರವಾಗಿ ಪ್ರಯತ್ನಿಸುತ್ತಿರುತ್ತಾರೆ. ಕೆಲವರಿಗೆ ಪೂರ್ವಿಕರ ಆಸ್ತಿ, ಭೂಮಿ ಇದ್ದರೂ ಸಹ ಮನೆ ಕಟ್ಟಲು ಸಾಧ್ಯವಾಗದೆ ಅಪಾರ್ಟ್‌ಮೆಂಟ್‌ಗಳಲ್ಲಿ ಅಥವಾ ಬಾಡಿಗೆ ಮನೆಗಳಲ್ಲಿ ಉಳಿದಿರುವುದನ್ನು ಕಾಣಬಹುದು. ಇನ್ನು ಕೆಲವರಿಗೆ ಹಣ ಕೂಡಿಟ್ಟರೂ ಸಹ ಅದನ್ನು ಮನೆ ನಿರ್ಮಾಣಕ್ಕೆ ಬಳಸಲು ಸಾಧ್ಯವಾಗುವುದಿಲ್ಲ. ಸಿಮೆಂಟ್, ಕಬ್ಬಿಣದ ಬೆಲೆ ಏರಿಕೆಯಂತಹ ಕಾರಣಗಳಿಂದ ನಿರ್ಮಾಣ ಕಾರ್ಯ ಮುಂದೂಡಲ್ಪಟ್ಟು, ಅಂತಿಮವಾಗಿ ಅಪಾರ್ಟ್‌ಮೆಂಟ್ ಖರೀದಿಗೆ ಹೋಗುವ ಸನ್ನಿವೇಶಗಳು ಇರುತ್ತವೆ.
ಈ ಎಲ್ಲಾ ಸವಾಲುಗಳ ನಡುವೆ, ಸ್ವಂತ ಮನೆ ಯೋಗವಿದೆಯೇ ಅಥವಾ ಅದನ್ನು ಹೇಗೆ ಪಡೆದುಕೊಳ್ಳಬೇಕು ಎಂಬುದಕ್ಕೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ತಜ್ಞರಾದ ಡಾ. ಬಸವರಾಜ ಗುರೂಜಿ ತಮ್ಮ ನಿತ್ಯ ಭಕ್ತಿಯಲ್ಲಿ ಕಾರ್ಯಕ್ರಮದಲ್ಲಿ ಮಾಹಿತಿ ನೀಡಿದ್ದಾರೆ.
ಗುರೂಜಿಯವರು ಹೇಳುವಂತೆ, ಜ್ಯೋತಿಷ್ಯದ ಪ್ರಕಾರ, ಒಬ್ಬರ ಜಾತಕದಲ್ಲಿ ಮನೆ ಕಟ್ಟುವುದು ಅಥವಾ ಖರೀದಿಸುವ ಯೋಗವಿದೆಯೇ ಎಂದು ಪರೀಕ್ಷಿಸಿಕೊಳ್ಳುವುದು ಮುಖ್ಯ. ಜಾತಕದಲ್ಲಿ ಮನೆ ಕಟ್ಟುವುದು ಅಥವಾ ಹೊಂದುವುದಕ್ಕೆ ಪ್ರೋತ್ಸಾಹ ನೀಡುವ ಪ್ರಮುಖ ಗ್ರಹಗಳೆಂದರೆ ಕುಜ (ಮಂಗಳ), ಶುಕ್ರ ಮತ್ತು ಬುಧ. ಈ ಮೂರು ಗ್ರಹಗಳ ಅನುಗ್ರಹವು ಸ್ವಂತ ಮನೆ ಕನಸನ್ನು ನನಸಾಗಿಸಲು ಸಹಾಯಕ.
ಕುಜ ಗ್ರಹದ ಅನುಗ್ರಹ ಅತ್ಯಗತ್ಯ. ಕುಜ ಗ್ರಹದ ಅಧಿಪತಿ ಸುಬ್ರಹ್ಮಣ್ಯ ಸ್ವಾಮಿ. ಜಾತಕದಲ್ಲಿ ನಾಲ್ಕನೆಯ ಮನೆಯು ಮನೆ, ಆಸ್ತಿ ಮತ್ತು ವಾಹನಗಳ ಬಗ್ಗೆ ಸೂಚಿಸುತ್ತದೆ. ನಾಲ್ಕನೆಯ ಮನೆಯ ಅಧಿಪತಿ, ನಾಲ್ಕನೆಯ ಮನೆಯಲ್ಲಿರುವ ಗ್ರಹಗಳು, ಅವುಗಳ ಸ್ಥಿತಿಗತಿಗಳು ಮತ್ತು ನಾಲ್ಕನೇ ಮನೆಯ ಮೇಲೆ ಬೀಳುವ ದೃಷ್ಟಿ – ಇವೆಲ್ಲವೂ ಮನೆ ಯೋಗವನ್ನು ನಿರ್ಧರಿಸುತ್ತವೆ. ಮನೆಯನ್ನು ಅಂದವಾಗಿ ನಿರ್ಮಿಸಲು ಶುಕ್ರನ ಅನುಗ್ರಹ ಮತ್ತು ಸರಿಯಾದ ಯೋಜನೆಗೆ ಬುಧನ ಅನುಗ್ರಹ ಬೇಕು.
ಇದನ್ನೂ ಓದಿ: ವಾಸ್ತು ಪ್ರಕಾರ, ಮನೆಯಲ್ಲಿ ಕಾಮಧೇನುವಿನ ವಿಗ್ರಹ ಇಡುವುದರಿಂದ ಸಿಗುವ ಅದ್ಭುತ ಲಾಭಗಳಿವು!
ಈ ಎಲ್ಲಾ ಪರಿಹಾರಗಳು ನಂಬಿಕೆಯ ಆಧಾರದಲ್ಲಿರುತ್ತವೆ. ಜಾತಕ ಪರಿಶೀಲನೆ ಮಾಡಿಸಿ, ಈ ಕ್ರಮಗಳನ್ನು ಶ್ರದ್ಧೆಯಿಂದ ಅನುಸರಿಸುವುದರಿಂದ ಸ್ವಂತ ಮನೆ ಕನಸು ನನಸಾಗುತ್ತದೆ ಎಂದು ಗುರೂಜಿ ಸಲಹೆ ನೀಡಿದ್ದಾರೆ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ