
ಗ್ರಹಣ ಕಾಲವು ಧಾರ್ಮಿಕ ಮತ್ತು ವೈಜ್ಞಾನಿಕವಾಗಿ ಸಾಕಷ್ಟು ಮಹತ್ವವನ್ನು ಹೊಂದಿದೆ. ವೈಜ್ಞಾನಿಕ ದೃಷ್ಟಿಕೋನದಿಂದ, ಸೂರ್ಯಗ್ರಹಣವನ್ನು ಕೇವಲ ಖಗೋಳ ವಿದ್ಯಮಾನವೆಂದು ಪರಿಗಣಿಸಲಾಗುತ್ತದೆ. ಆದರೆ ಧರ್ಮಗ್ರಂಥಗಳ ಪ್ರಕಾರ, ಸೂರ್ಯ ಗ್ರಹಣವೆಂಬುದು ರಾಹು ತನ್ನ ಸೇಡು ತೀರಿಸಿಕೊಳ್ಳಲು ಸೂರ್ಯನನ್ನು ನುಂಗುತ್ತಾನೆ, ಇದರಿಂದ ಸೂರ್ಯಗ್ರಹಣ ಸಂಭವಿಸುತ್ತದೆ ಎಂದು ಹೇಳಲಾಗುತ್ತದೆ. ಇದೀಗ ಆಗಸ್ಟ್ 2ರಂದು ದೀರ್ಘ ಕಗ್ಗತ್ತಲಿನ ಸೂರ್ಯಗ್ರಹಣ ಸಂಭವಿಸಲಿದೆ ಎಂಬ ಸುದ್ದಿ ಸಖತ್ ವೈರಲ್ ಆಗುತ್ತಿದೆ. ಹಾಗಿದ್ರೆ ನಾಳೆ ಅಂದರೆ ಆಗಸ್ಟ್ 2 ನಿಜವಾಗಿಯೂ ಗ್ರಹಣ ಸಂಭವಿಸಲಿದೆಯೇ? ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.
ಇತ್ತೀಚಿನ ದಿನಗಳಲ್ಲಿ ಸುದ್ದಿಯಾಗುತ್ತಿರುವ ಪ್ರಕಾರ ಆಗಸ್ಟ್ 2 ರಂದು ಅತಿದೊಡ್ಡ ಸೂರ್ಯಗ್ರಹಣ ಸಂಭವಿಸಲಿದೆ ಎಂದು ಹೇಳಲಾಗುತ್ತಿದೆ. ಈ ಸಮಯದಲ್ಲಿ, ಸುಮಾರು 6 ನಿಮಿಷಗಳ ಕಾಲ ಕಗ್ಗತ್ತಲಿನಿಂದ ಕೂಡಿರುತ್ತದೆ ಎಂದು ಹೇಳಲಾಗುತ್ತಿದೆ. ಆದರೆ ನಿಜಾಂಶ ಏನೆಂದರೆ ಆಗಸ್ಟ್ 2 ರಂದು ಎಲ್ಲಿಯೂ ಸೂರ್ಯಗ್ರಹಣ ಸಂಭವಿಸುತ್ತಿಲ್ಲ.
ಈ ವರ್ಷ ಅಲ್ಲ ಬದಲಾಗಿ 2027ರ ಆಗಸ್ಟ್ 2 ರಂದು ಸಂಪೂರ್ಣ ಸೂರ್ಯಗ್ರಹಣ ಸಂಭವಿಸಲಿದೆ ಎಂದು ಸಾಕಷ್ಟು ಜ್ಯೋತಿಷಿಗಳು ಮಾಹಿತಿ ನೀಡಿದ್ದಾರೆ. ಈ ಗ್ರಹಣ ಭಾರತದ ಮೇಲೆ ಪ್ರಭಾವ ಬೀರದಿದ್ದರೂ ಕೂಡ ಈ ಸಮಯದಲ್ಲಿ ಸುಮಾರು 6 ನಿಮಿಷಗಳ ವರೆಗೆ ಎಲ್ಲೆಡೆ ಭಾರೀ ಕಗ್ಗತಲು ಆವರಿಸಲಿದೆ ಎಂದು ಹೇಳಲಾಗಿದೆ.
ಇದನ್ನೂ ಓದಿ: 2025 ರ ಎರಡನೇ ಸೂರ್ಯಗ್ರಹಣ ಯಾವಾಗ? ಭಾರತದಲ್ಲಿ ಗೋಚರಿಸುತ್ತಾ?
2025ರಲ್ಲಿ ನಾಲ್ಕು ಗ್ರಹಣಗಳು ಸಂಭವಿಸಲಿವೆ. ಇವುಗಳಲ್ಲಿ ಎರಡು ಸೂರ್ಯ ಗ್ರಹಣ ಮತ್ತು ಎರಡು ಚಂದ್ರ ಗ್ರಹಣ. ಆದರೆ ಇವುಗಳಲ್ಲಿ ಒಂದು ಮಾತ್ರ ಭಾರತದಲ್ಲಿ ಗೋಚರಿಸಲಿದೆ. ಒಟ್ಟು ನಾಲ್ಕು ಗ್ರಹಣಗಳಲ್ಲಿ ಈಗಾಗಲೇ ಎರಡು ಸಂಭವಿಸಿವೆ. ಈ ವರ್ಷದ ಎರಡನೇ ಸೂರ್ಯಗ್ರಹಣ ಸೆಪ್ಟೆಂಬರ್ 21 ರ ಅಮಾವಾಸ್ಯೆಯಂದು ಸಂಭವಿಸಲಿದೆ. ಈ ಸೂರ್ಯಗ್ರಹಣವು ಸೆಪ್ಟೆಂಬರ್ 21 ರಂದು ರಾತ್ರಿ 11 ಗಂಟೆಯಿಂದ ಸೆಪ್ಟೆಂಬರ್ 22 ರಂದು ಬೆಳಗಿನ ಜಾವ 3:24 ರವರೆಗೆ ಇರುತ್ತದೆ, ಅಂದರೆ ಈ ಸೂರ್ಯಗ್ರಹಣವು ಒಟ್ಟು 4 ಗಂಟೆ 24 ನಿಮಿಷಗಳ ಕಾಲ ಇರುತ್ತದೆ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:24 am, Fri, 1 August 25