
ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ಪ್ರಯಾಣಕ್ಕೆ ಶುಭ ದಿನಗಳು ಮತ್ತು ದಿಕ್ಕುಗಳ ಕುರಿತು ಪ್ರಮುಖ ಸಲಹೆ ನೀಡಿದ್ದಾರೆ. ಗುರೂಜಿ ಹೇಳುವಂತೆ, ಜೀವನದಲ್ಲಿ ಪ್ರಯಾಣವು ನಿರಂತರ ಪ್ರಕ್ರಿಯೆಯಾಗಿದೆ. ಉದ್ಯೋಗದ ಕಾರಣದಿಂದಾಗಲಿ, ಧಾರ್ಮಿಕ ಯಾತ್ರೆಗಳಿಗಾಗಲಿ, ವ್ಯಾಪಾರ ವ್ಯವಹಾರಗಳಿಗಾಗಲಿ ಅಥವಾ ಯಾವುದೇ ಪ್ರಮುಖ ಕೆಲಸ ಕಾರ್ಯಗಳಿಗಾಗಲಿ ನಾವು ನಿರಂತರವಾಗಿ ಪ್ರಯಾಣಿಸುತ್ತೇವೆ. ಆದರೆ, ಆಧುನಿಕ ಜೀವನದಲ್ಲಿ ನಾವು ಯಾವುದೇ ಪೂರ್ವಯೋಜನೆ ಇಲ್ಲದೆ, ಸಿದ್ಧತೆಗಳಿಲ್ಲದೆ ಪ್ರಯಾಣಗಳನ್ನು ಕೈಗೊಳ್ಳುವುದು ಸಾಮಾನ್ಯವಾಗಿದೆ. ಇಂತಹ ಯಾಂತ್ರಿಕ ಪ್ರಯಾಣಗಳು ಕೆಲವೊಮ್ಮೆ ಅನಿರೀಕ್ಷಿತ ಘಟನೆಗಳಿಗೆ ಕಾರಣವಾಗಬಹುದು ಎಂದು ಜ್ಯೋತಿಷ್ಯ ಶಾಸ್ತ್ರವು ಹೇಳುತ್ತದೆ.
ಹಿಂದಿನ ಕಾಲದಲ್ಲಿ ಜನರು ಯಾವುದೇ ಪ್ರಮುಖ ಪ್ರಯಾಣವನ್ನು ಕೈಗೊಳ್ಳುವ ಮುನ್ನ ದಿನಾಂಕ, ಸಮಯ ಮತ್ತು ದಿಕ್ಕಿನ ಬಗ್ಗೆ ಜ್ಯೋತಿಷ್ಯಶಾಸ್ತ್ರದ ಪ್ರಕಾರ ಯೋಜನೆ ಮಾಡುತ್ತಿದ್ದರು. “ಮುಂದಿನ ತಿಂಗಳು ಇಂತಹ ದಿನಾಂಕದಂದು ನಾನು ಪ್ರಯಾಣ ಮಾಡುತ್ತಿದ್ದೇನೆ” ಎಂದು ಮನೆಯಲ್ಲಿ ಚರ್ಚಿಸುತ್ತಿದ್ದರು. ಆದರೆ ಇಂದು “ಈಗ ಅಂದುಕೊಂಡೆವು, ಇನ್ನೇನು ಹೊರಟೆವು” ಎಂಬ ಧಾವಂತದ ನಿರ್ಧಾರಗಳು ಹೆಚ್ಚಾಗಿವೆ. ಜ್ಯೋತಿಷ್ಯದ ದೃಷ್ಟಿಯಿಂದ ಇಂತಹ ನಿರ್ಧಾರಗಳು ಅಷ್ಟೊಂದು ಶುಭವಲ್ಲ ಎಂದು ಗುರೂಜಿ ತಿಳಿಸಿದ್ದಾರೆ.
ಪ್ರಯಾಣವನ್ನು ಸುಖಕರ ಮತ್ತು ಯಶಸ್ವಿಯಾಗಿಸಲು ಕೆಲವು ನಿರ್ದಿಷ್ಟ ದಿನಗಳನ್ನು ಶುಭವೆಂದು ಪರಿಗಣಿಸಲಾಗುತ್ತದೆ. ಧಾರ್ಮಿಕ ಕಾರ್ಯಕ್ರಮಗಳು, ದೇವಸ್ಥಾನಗಳಿಗೆ ಭೇಟಿ, ಧರ್ಮಕ್ಷೇತ್ರಗಳಿಗೆ ಯಾತ್ರೆ, ಅಥವಾ ಯಾವುದೇ ಆಧ್ಯಾತ್ಮಿಕ ಹಾಗೂ ಪ್ರಮುಖ ಕಾರ್ಯಗಳಿಗೆ ಹೊರಡುವಾಗ ಸೋಮವಾರ, ಬುಧವಾರ, ಗುರುವಾರ ಮತ್ತು ಶುಕ್ರವಾರಗಳು ಅತ್ಯಂತ ಶ್ರೇಷ್ಠವಾಗಿವೆ. ಈ ದಿನಗಳಲ್ಲಿ ಪ್ರಾರಂಭಿಸಿದ ಪ್ರಯಾಣಗಳು ಶುಭ ಫಲಿತಾಂಶಗಳನ್ನು ನೀಡುತ್ತವೆ ಎಂದು ನಂಬಲಾಗಿದೆ.
ದಿನಗಳ ಜೊತೆಗೆ, ಪ್ರಯಾಣಿಸುವಾಗ ದಿಕ್ಕುಗಳ ಜ್ಞಾನವೂ ಅಷ್ಟೇ ಮುಖ್ಯ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಪ್ರತಿ ದಿನಕ್ಕೂ ಒಂದು ನಿರ್ದಿಷ್ಟ ದಿಕ್ಕಿನಲ್ಲಿ ಪ್ರಯಾಣಿಸುವುದು ಶುಭವಲ್ಲ.
ಈ ನಿಯಮಗಳನ್ನು ಪಾಲಿಸುವುದರಿಂದ ಅನಪೇಕ್ಷಿತ ಘಟನೆಗಳು ಮತ್ತು ಅಡೆತಡೆಗಳನ್ನು ತಪ್ಪಿಸಬಹುದು ಎಂಬ ನಂಬಿಕೆ ಇದೆ.
ಯಾವುದೇ ದೇವಸ್ಥಾನ ಅಥವಾ ಧಾರ್ಮಿಕ ಕಾರ್ಯಗಳಿಗೆ ಪ್ರಯಾಣಿಸುವಾಗ ಮನೆಯಿಂದ ಹೊರಡುವ ಮುನ್ನ ಒಂದು ನಿಂಬೆಹಣ್ಣನ್ನು ಕೈಯಲ್ಲಿ ಹಿಡಿದುಕೊಂಡು ಹೋಗುವಂತೆ ಗುರೂಜಿ ಸಲಹೆ ನೀಡಿದ್ದಾರೆ. ಈ ನಿಂಬೆಹಣ್ಣನ್ನು ದಾರಿಯಲ್ಲೇ ಅಥವಾ ನೀವು ತಲುಪಿದ ಸ್ಥಳಕ್ಕೆ ಪ್ರವೇಶಿಸುವ ಮೊದಲು ಬಿಸಾಡಬೇಕು. ಹೀಗೆ ಮಾಡುವುದರಿಂದ ಒಂದು ಅದ್ಭುತವಾದ ಶಕ್ತಿ ನಿಮ್ಮೊಂದಿಗಿರುತ್ತದೆ ಮತ್ತು ನೀವು ಕ್ಷೇಮವಾಗಿ ಮನೆಗೆ ಹಿಂದಿರುಗುತ್ತೀರಿ ಎಂದು ನಂಬಲಾಗಿದೆ. ಕಾರಿನಲ್ಲಿ ಪ್ರಯಾಣಿಸುವಾಗ, ಡ್ರೈವರ್ ಕೂರುವ ಮೊದಲ ಟೈರ್‌ನ ಕೆಳಗೆ (ಬಲಬದಿಯ ಮುಂಭಾಗದ ಟೈರ್) ನಿಂಬೆಹಣ್ಣನ್ನು ಇಟ್ಟು ಹೊರಡುವುದು ಕೂಡ ಶುಭವೆಂದು ಪರಿಗಣಿಸಲಾಗುತ್ತದೆ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:47 am, Wed, 3 December 25