ಶಾಸ್ತ್ರದ ಪ್ರಕಾರ ಸ್ನಾನ ಮಾಡುವುದು ಹೇಗೆ? ಯಾವ ರೀತಿ ಸ್ನಾನ ಮಾಡಿದರೆ ಬದುಕೇ ಬದಲಾಗಬಹುದು!
ಹಿಂದೂ ಶಾಸ್ತ್ರದಲ್ಲಿ, ಜ್ಯೋತಿಷ್ಯ ಶಾಸ್ತ್ರದಲ್ಲಿ ನಾವು ಹೇಗೆ ಸ್ನಾನ ಮಾಡಬೇಕು? ಸ್ನಾನ ಮಾಡುವಾಗ ಯಾವ ಮಂತ್ರ ಪಠಿಸಬೇಕು? ಸ್ನಾನ ಮಾಡುವುದರ ಪ್ರಯೋಜನವೇನು? ಹಿಂದೂ ಶಾಸ್ತ್ರದ ಪ್ರಕಾರ ಸ್ನಾನ ಮಾಡುವುದು ಹೇಗೆ? ಸ್ನಾನ ಮಾಡುವುದರಿಂದ ಗ್ರಹ ದೋಷವೂ ಮಾಯವಾಗುತ್ತದೆ. ಈ ಎಲ್ಲಾ ವಿಷಯಗಳ ಬಗ್ಗೆ ಇಲ್ಲಿ ಸಂಪೂರ್ಣ ಮಾಹಿತಿ ನೀಡಲಾಗಿದೆ.
- ನದಿಯಲ್ಲಿ ಸ್ನಾನ ಮಾಡಿದರೆ ಈ ಪ್ರಯೋಜನ:
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಒಬ್ಬ ವ್ಯಕ್ತಿಯು ನದಿಯಲ್ಲಿ ಸ್ನಾನ ಮಾಡಿದರೆ ನಮ್ಮ ಸುತ್ತಲೂ ಇರುವ ನಕಾರಾತ್ಮಕ ಶಕ್ತಿಯು ನಾಶವಾಗುತ್ತದೆ. ಗ್ರಹದೋಷಗಳಿದ್ದರೆ ಪರಿಹಾರವಾಗುತ್ತವೆ. ಯಾರಾದರೂ ನಮ್ಮ ಮೇಲೆ ಕೆಟ್ಟ ದೃಷ್ಟಿ ಬೀರಿದರೆ ಅದೂ ಕೂಡ ಕಡಿಮೆಯಾಗುತ್ತದೆ.
- ಸ್ನಾನ ಮಾಡುವ ಮೊದಲು ನೀರನ್ನು ಈ ರೀತಿ ಮಾಡಿ:
ಈ ಪರಿಹಾರವು ತುಂಬಾ ಸರಳವಾಗಿದೆ. ನೀವು ಸ್ನಾನಕ್ಕೆ ಹೋಗುವ ಮೊದಲು ನೀರನ್ನು ಬಕೆಟ್‌ನಲ್ಲಿ ತುಂಬಿಸಿ ನಿಮ್ಮ ತೋರು ಬೆರಳಿನಿಂದ ನೀರಿನ ಮೇಲೆ ತ್ರಿಕೋನ ಚಿಹ್ನೆ ಬರೆಯಿರಿ. ಅದರ ನಂತರ, ತ್ರಿಕೋನದ ಮಧ್ಯದಲ್ಲಿ ‘ಹ್ರೀಂ’ ಎಂಬ ಬೀಜ ಮಂತ್ರವನ್ನು ಬರೆಯಿರಿ. ನಿಮ್ಮ ನೆಚ್ಚಿನ ದೇವತೆಗೆ ನಿಮ್ಮ ಆಸೆಯನ್ನು ಹೇಳಿ ಮತ್ತು ಅದೇ ಸಮಯದಲ್ಲಿ ನಿಮ್ಮ ತೊಂದರೆಗಳ ಪರಿಹಾರಕ್ಕಾಗಿ ಪ್ರಾರ್ಥಿಸಿ. ನಿಯಮಿತವಾಗಿ ಹೀಗೆ ಮಾಡುವುದರಿಂದ ಸಮಸ್ಯೆಗಳು ಪರಿಹಾರವಾಗಲಿದೆ.
- ಈ ಮಂತ್ರಗಳಿಗೆ ಸ್ನಾನದಲ್ಲಿ ಹೆಚ್ಚಿನ ಪ್ರಾಮುಖ್ಯತೆ ಇದೆ:
ಈ ಮಂತ್ರಗಳು ವಿಶೇಷ ಪ್ರಾಮುಖ್ಯತೆ ಹೊಂದಿವೆ ಎಂದು ಸನಾತನ ಧರ್ಮದಲ್ಲಿ ತಿಳಿಸಲಾಗಿದೆ. ಆದರೆ ಪ್ರತಿ ಕಾರ್ಯಕ್ಕೂ ವಿಭಿನ್ನ ಮಂತ್ರಗಳಿವೆ. ಅದೇ ರೀತಿ ಸ್ನಾನದ ಸಮಯ ಮಂತ್ರವನ್ನೂ ಸೂಚಿಸಲಾಗಿದೆ. ಇದರ ಪ್ರಕಾರ ಸ್ನಾನ ಮಾಡುವಾಗ ಈ ಕೆಳಗಿನ ಮಂತ್ರವನ್ನು ಪಠಿಸಿ, ಅಥವಾ ಕೀರ್ತನೆ ಅಥವಾ ಭಜನೆ ಜೊತೆಗೆ, ನಿಮ್ಮ ಇಷ್ಟವಾದ ದೇವರ ಹೆಸರನ್ನು ಸ್ಮರಿಸಬಹುದು.
ಗಂಗೇ ಚ ಯಮುನೇ ಚ ಕೃಷ್ಣೇ ಗೋದಾವರೇ ಸರಸ್ವತೀ | ನರ್ಮದೇ ಸಿಂಧು ಕಾವೇರೀ ಜಲೇಸ್ಮಿನ್ ಸನ್ನಿಧಿಂ ಕುರು ||
ಶಾಸ್ತ್ರದ ಪ್ರಕಾರ, ಸ್ನಾನ ಮಾಡುವ ವಿಧಾನ:
ನಿಂತು ಸ್ನಾನವನ್ನು ಮಾಡುವುದರಿಂದ ನಮ್ಮ ಶರೀರದ ಮೇಲಿನ ಮಾಲಿನ್ಯದೊಂದಿಗೆ ನೆಲದ ಮೇಲೆ ಬೀಳುವ ನೀರು ಭೂಮಿಯಲ್ಲಿನ ತ್ರಾಸದಾಯಕ ಶಕ್ತಿಯ ಸ್ಥಾನಗಳನ್ನು ಜಾಗೃತ ಗೊಳಿಸುತ್ತದೆ. ಇದರಿಂದ ಭೂಮಿಯಿಂದ ತ್ರಾಸದಾಯಕ ಶಕ್ತಿಯು ಕಾರಂಜಿಯಂತೆ ಹೊರಗೆ ಚಿಮ್ಮಿ ಮತ್ತೊಮ್ಮೆ ನಮ್ಮ ದೇಹವನ್ನು ರಜ-ತಮಯುಕ್ತಗೊಳಿಸುತ್ತದೆ. ಆದುದರಿಂದ ಸ್ನಾನವನ್ನು ಮಾಡುವಾಗ ಕಾಲುಗಳನ್ನು ಮಡಚಿಕೊಂಡು ಕುಳಿತುಕೊಳ್ಳಬೇಕು. ಅದರ ಲಾಭಗಳು ಹೀಗಿವೆ:
- ಕಾಲುಗಳನ್ನು ಮಡಚಿಕೊಂಡು ಕುಳಿತಾಗ ದೇಹವು ತ್ರಿಕೋನಾಕಾರವಾಗುತ್ತದೆ. ಇದು ನಮಗೆ ಸಂರಕ್ಷಣಾ ಕವಚದಂತೆ ಕಾರ್ಯ ನಿರ್ವಹಿಸುತ್ತದೆ.
- ಕಾಲುಗಳನ್ನು ಮಡಚಿ ಕುಳಿತುಕೊಂಡು ಸ್ನಾನವನ್ನು ಮಾಡುವುದರಿಂದ ಜೀವಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಚೈತನ್ಯ ಸಿಗುತ್ತದೆ.
- ಕಾಲುಗಳನ್ನು ಮಡಚಿ ಕುಳಿತುಕೊಳ್ಳುವುದರಿಂದ ಸ್ವಲ್ಪ ಪ್ರಮಾಣದಲ್ಲಿ ಸುಷುಮ್ನಾ ನಾಡಿಯೂ ಜಾಗೃತವಾಗುತ್ತದೆ. ಇದರಿಂದ ದೇಹದಲ್ಲಿ ಚೈತನ್ಯವು ಹೆಚ್ಚು ಕಾಲ ಉಳಿಯುತ್ತದೆ.
- ಪೂರ್ವಾಭಿಮುಖವಾಗಿ ಕುಳಿತು ಸೂರ್ಯ ದೇವರನ್ನು ಸ್ಮರಿಸುತ್ತಾ ಸ್ನಾನ ಮಾಡುವುದರಿಂದ ಆರೋಗ್ಯ ಮತ್ತು ತೇಜಸ್ಸು ಇತ್ಯಾದಿ ಪ್ರಾಪ್ತಿಯಾಗುತ್ತದೆ.
- ಇದನ್ನೂ ಓದಿ: ನೀವು ಸ್ನಾನ ಮಾಡುವ ಸಮಯ ನಿಮ್ಮ ಸುಖ, ಸಂತೋಷ, ಆರ್ಥಿಕತೆ, ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ -ತಿಳಿದುಕೊಳ್ಳಿ