ಯಾವುದೇ ಕಾಯಿಲೆಯನ್ನು ಓಡಿಸುವ ಪುರಾತನ, ಸಾರ್ವಕಾಲಿಕ ಸರಳ ಚಿಕಿತ್ಸಾ ಸೂತ್ರಗಳು ಇಲ್ಲಿವೆ
ನೀವು ಶಿವಲಿಂಗದ ಮೇಲಿರುವ ಧಾರಾಪಾತ್ರೆಯನ್ನು ನೋಡಿದ್ದೀರಾ? ಆದರಿಂದ ಹನಿ ಹನಿಯಾಗಿ ಬೀಳುವ ಜಲದಂತೆ ದಿನ ನಿತ್ಯವೂ ಹಟ ತೊಟ್ಟು ಈ ಕೆಳಗಿನ ಭಾವನೆಗಳನ್ನು ನಿಮ್ಮದಾಗಿಸಿಕೊಂಡರೆ ಮನಸ್ಸು ಪ್ರಸನ್ನವಾಗಿ ಇರಲು ಸಾಧ್ಯ. ಯಾವುದೇ ಟಾನಿಕ್ಕು, ಮಾತ್ರೆಗಳಿಗಿಂತ ಇದು ಹೆಚ್ಚು ಆರೋಗ್ಯಕಾರಿ. ಸದ್ಭಾವನೆಗಳಿಂದ ಆರೋಗ್ಯಕ್ಕೆ ಎಂದಿಗೂ ಕೆಡಕು ಆಗದು (Everyday Spiritual Health Practices).
- ಜೀವಿಗಳಲ್ಲಿ ಅನುಕಂಪ, ದಯೆ, ಸಹಾನುಭೂತಿಗಳನ್ನು ಬೆಳೆಸಿ ಉಳಿಸಿಕೊಂಡಲ್ಲಿ ತನ್ಮೂಲಕ ಆಂತರಿಕ ಸುಖ ಸಂತೋಷ ಹೆಚ್ಚುತ್ತದೆ ಮಾತ್ರವಲ್ಲ, ಎಲ್ಲ ಜೀರ್ಣರಸಗಳ ನಿರಾತಂಕ ಉತ್ಪಾದನೆಯಿಂದ ಸಂಬಂಧಿತ ರೋಗರುಜಿನಗಳು ದೂರವಾಗುತ್ತವೆ.
- ಮಾತು ಕಡಿಮೆ – ಜಾಸ್ತಿ ದುಡಿಮೆ ಎಂಬ ತತ್ವದ ಅನ್ವಯ ಅನವಶ್ಯಕ ಮಾತುಕತೆ, ಕ್ಷುಲ್ಲಕ ವ್ಯವಹಾರಗಳನ್ನು ನಿಲ್ಲಿಸಿ ಕಾರ್ಯೋನ್ಮುಖರಾದಲ್ಲಿ ಆಸ್ಪತ್ರೆಯ ಒಳ ರೋಗಿಯಾಗಿ ನರಳುವ ಪ್ರಮೇಯವೇ ಬಾರದು, ಬಂಗಾರದ ಬದುಕು ಕನ್ನಡಿಯೊಳಗಿನ ಗಂಟಿನಂತೆ ಎಂದೆಂದಿಗೂ ಆಗದು.
- ಪರೋಪಕಾರ ಗುಣ, ಉದಾರತೆ ಹಾಗೂ ಸಹಕಾರ ಮನೋಭಾವವನ್ನು ದೇಹದ ಕಣಕಣದಲ್ಲೂ ತುಂಬಿಕೊಂಡು, ಹೃದಯದ ಮಿಡಿತದೊಂದಿಗೆ ಪ್ರತಿಸ್ಪಂದಿಸುತ್ತಿದ್ದರೆ, ಕಳ್ಳತನ, ಕೊಲೆ, ಸುಲಿಗೆ, ಅನ್ಯಾಯ, ಅನಾಚಾರಗಳ ಯಾವ ಸಾಂಕ್ರಾಮಿಕ ರೋಗವೂ ಬಂದು ತಟ್ಟದು.
- ಬಿಗುಮಾನವನ್ನು ತೊರೆದು ನಗುವನ್ನು ಹೊರಸೂಸುತ್ತಾ, ಆತ್ಮವಿಶ್ವಾಸದ ಕೆಚ್ಚಿನಿಂದ ಮುನ್ನಡೆದಲ್ಲಿ ಪರಸ್ಪರ ವ್ಯಷಮ್ಯದ, ವಿರೋಧದ ಯಾವುದೇ ಗಾಯವನ್ನೂ ಬೇಗ ವಾಸಿಮಾಡಬಹುದು.
- ತಾಳಿದವನು ಬಾಳಿಯಾನು ಎಂಬುದನ್ನು ನೆಚ್ಚಿ ಸಹನೆಯನ್ನು ಹೆಚ್ಚಿಸಿಕೊಂಡು ವರ್ತಿಸಿದಲ್ಲಿ ದೂರದೃಷ್ಟಿಯೊಂದಿಗೆ ಅಂತದೃಷ್ಟಿಯೂ ವೃದ್ಧಿಸಿ ಬಾಳು ಬೆಳಗುತ್ತಾ ಹೋದೀತು, ಜೀವನ ಜೇನಾದೀತು!
- ಪೂರ್ವಾಪರ ವಿಮರ್ಶೆ ಹಾಗೂ ವಿವೇಕಗಳನ್ನು ನಿಮ್ಮದಾಗಿಸಿಕೊಂಡಲ್ಲಿ ಎಂಥ ವಿಷಮ ಪರಿಸ್ಥಿತಿಯನ್ನೂ, ಸಂದಿಗ್ಧ ಸನ್ನಿವೇಶಗಳಲ್ಲೂ ಯಶಸ್ಸು ನಿಮ್ಮದಾಗಬಹುದು. ಎಂಥ ವಿಷಮ ಪರಿಸ್ಥಿತಿಯನ್ನೂ ಸರಿಪಡಿಸುವ ನವಶಕ್ತಿ ಸಂಜೀವಿನಿಯ ರಸಭರಿತ ಟಾನಿಕ್ ಇದಲ್ಲದೆ ಬೇರೆ ಇರದು.
- ದಿನನಿತ್ಯವೂ ಮಾಡುವ ಕ್ರಮಬದ್ಧ ಪ್ರಾರ್ಥನೆಯಿಂದ ದೇಹದ ಸರ್ವೋತೋಮುಖ ಏಳಿಗೆ ಸುಲಭ ಸಾಧ್ಯವಾಗಿ, ಆಂತರಿಕ ಶಕ್ತಿ ಚ್ಯೆತನ್ಯ ಹಾಗು ಸ್ಥಿರತೆ ಹೆಚ್ಚುತ್ತದೆ. ತನ್ಮೂಲಕ ಇತರರಲ್ಲೂ ಈ ಹೊಸತನ ಹಾಗೂ ಸ್ಪೂರ್ತಿಯನ್ನು ಹೆಚ್ಚಿಸುವ ಸಾಮರ್ಥ್ಯ ಪುಟಿದೇಳುತ್ತದೆ. (ಬರಹ – ವಾಟ್ಸಪ್ ಸಂದೇಶ)