ಜೀವನದಲ್ಲಿ ಎಷ್ಟೇ ಕಠಿಣ ಸಮಸ್ಯೆಗಳನ್ನು ಎದುರಿಸುತ್ತಿದ್ದರೂ, ಚಾಣಕ್ಯನ ಈ ತತ್ವಗಳನ್ನು ಅನುಸರಿಸಿ ಎಲ್ಲವೂ ಸರಳವಾದೀತು!

|

Updated on: May 15, 2023 | 6:06 AM

ಚಾಣಕ್ಯನ ಪ್ರಕಾರ ಒಬ್ಬ ವ್ಯಕ್ತಿಯು ತನ್ನ ತಪ್ಪುಗಳಿಂದ ಹೆಚ್ಚು ಕಲಿಯುತ್ತಾನೆ. ತಪ್ಪುಗಳು ಬೆಳವಣಿಗೆ ಮತ್ತು ಸ್ವಯಂ ಸುಧಾರಣೆಗೆ ಅವಕಾಶಗಳನ್ನು ಒದಗಿಸುತ್ತವೆ. ಸಮಸ್ಯೆಗಳಿರುವಾಗ.. ಅವುಗಳಲ್ಲಿ ಏನು ತಪ್ಪಾಗಿದೆ.. ಮುಂದೆ ಇಂತಹ ಸಮಸ್ಯೆಗಳು ಮರುಕಳಿಸದಂತೆ.. ಹಾನಿಯನ್ನು ತಡೆಯುವುದು ಹೇಗೆ.. ಎಂಬ ಕ್ರಮದಲ್ಲಿ ಚಿಂತಿಸಬೇಕು ಎಂದಿದ್ದಾರೆ.

ಜೀವನದಲ್ಲಿ ಎಷ್ಟೇ ಕಠಿಣ ಸಮಸ್ಯೆಗಳನ್ನು ಎದುರಿಸುತ್ತಿದ್ದರೂ, ಚಾಣಕ್ಯನ ಈ ತತ್ವಗಳನ್ನು ಅನುಸರಿಸಿ ಎಲ್ಲವೂ ಸರಳವಾದೀತು!
ಜೀವನದಲ್ಲಿ ಕಠಿಣ ಸಮಸ್ಯೆಗಳನ್ನು ಎದುರಿಸುವುದು ಹೇಗೆ?
Follow us on

ಚಾಣಕ್ಯ ತನ್ನ ನೀತಿಶಾಸ್ತ್ರದಲ್ಲಿ ಜೀವನದಲ್ಲಿ ಕಷ್ಟಕರ ಸಮಯವನ್ನು ಹೇಗೆ ಸುಲಭವಾಗಿ ಜಯಿಸುವುದು ಅಥವಾ ಕಷ್ಟಕರವಾದ ಸಮಸ್ಯೆಗಳನ್ನು ಸುಲಭವಾಗಿ ಪರಿಹರಿಸುವುದು ಹೇಗೆ ಎಂಬ ಪ್ರಮುಖ ತತ್ವಗಳನ್ನು ಉಲ್ಲೇಖಿಸಿದ್ದಾನೆ. ಅಂತಹ ಕೆಲವು ನಿಯಮಗಳ ಬಗ್ಗೆ ತಿಳಿಯೋಣ. ಪ್ರತಿಯೊಬ್ಬ ವ್ಯಕ್ತಿಯು ತನ್ನ ಜೀವನದಲ್ಲಿ ನಿರಂತರ ಸಂತೋಷವನ್ನು ಹೊಂದಲು ಸಾಧ್ಯವಿಲ್ಲ. ಒಂದಲ್ಲ ಒಂದು ರೀತಿಯ ಸಮಸ್ಯೆ ಬರುತ್ತಲೇ ಇರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಆಚಾರ್ಯ ಚಾಣಕ್ಯ ತಮ್ಮ ನೀತಿಗಳಲ್ಲಿ (Chanakya niti) ಅಂತಹ ಕೆಲವು ವಿಷಯಗಳನ್ನು ಪ್ರಸ್ತಾಪಿಸಿದ್ದಾರೆ. ಅವರನ್ನು ಅನುಸರಿಸುವ ಮೂಲಕ ಯಾರಾದರೂ ತಮ್ಮ ಸಮಸ್ಯೆಗಳನ್ನು ಸುಲಭವಾಗಿ ಪರಿಹರಿಸಬಹುದು. ಶಿಕ್ಷಣ ಸೇರಿದಂತೆ ಜೀವನದ ಯಾವುದೇ ವಿಭಿನ್ನ ಅಂಶಗಳಲ್ಲಿ ನೀವು ಈ ಚಾಣಕ್ಯ ಸೂತ್ರಗಳನ್ನು ಅಳವಡಿಸಿಕೊಂಡರೆ ಯಾವುದೇ ಸವಾಲನ್ನು ಸುಲಭವಾಗಿ ಪರಿಹರಿಸಬಹುದು (Chanakya Teachings).

ಮೂಲ ಕಾರಣವನ್ನು ವಿಶ್ಲೇಷಿಸಿ- ಚಾಣಕ್ಯನ ಪ್ರಕಾರ, ಸಮಸ್ಯೆಯ ಮೂಲ ಕಾರಣವನ್ನು ಅರ್ಥ ಮಾಡಿಕೊಳ್ಳುವುದು ಅವಶ್ಯಕ. ಯಾವುದೇ ಕ್ರಮ ತೆಗೆದುಕೊಳ್ಳುವ ಮೊದಲು ಸಂಪೂರ್ಣ ವಿಶ್ಲೇಷಣೆ ಮಾಡಬೇಕು. ಸಮಸ್ಯೆ ಏನೆಂಬುದನ್ನು ತನಿಖೆ ಮಾಡುವ ಮಹತ್ವವನ್ನು ಚಾಣಕ್ಯ ಒತ್ತಿ ಹೇಳಿದ್ದಾರೆ. ಸಮಸ್ಯೆಯ ಮೂಲ ಕಾರಣವನ್ನು ನೀವು ಅರ್ಥ ಮಾಡಿಕೊಂಡರೆ, ನೀವು ಅದನ್ನು ಸುಲಭವಾಗಿ ಸರಿಪಡಿಸಬಹುದು. ಚಾಣಕ್ಯ ಹೇಳಿರುವ ಈ ತಂತ್ರ ಎಲ್ಲರಿಗೂ ರಾಮಬಾಣವಾಗಬೇಕಿದೆ.

ಕ್ಷಿಪ್ರ ಕ್ರಮಗಳನ್ನು ಕೈಗೊಂಡು ಸಮಸ್ಯೆಗಳನ್ನು ಎದುರಿಸಿ: ಸಮಸ್ಯೆಗಳು ಎದುರಾದಾಗ ಅವುಗಳನ್ನು ಎದುರಿಸಲು ಚಾಣಕ್ಯ ಕ್ಷಿಪ್ರ ಕ್ರಮದಲ್ಲಿ ನಂಬಿಕೆ ಇಟ್ಟಿದ್ದರು. ವಿಳಂಬವೇ ವಿಷವಾಗುವ ಸಾಧ್ಯತೆ ಎಂಬ ಮಾತನ್ನು ಅಳವಡಿಸಿಕೊಳ್ಳುವಂತೆ ಹೇಳಿರುವ ಅವರು, ಜೀವನದಲ್ಲಿ ಉದ್ಭವಿಸುವ ಸಮಸ್ಯೆಗಳನ್ನು ಸಮಯೋಚಿತವಾಗಿ ಪರಿಹರಿಸಿಕೊಳ್ಳುವಂತೆ ಸಲಹೆ ನೀಡಿದ್ದಾರೆ. ಸಮಸ್ಯೆ ಎದುರಾದಾಗ ಪರಿಹಾರವನ್ನು ತಡಮಾಡುವುದು… ಕಷ್ಟವನ್ನು ಇನ್ನಷ್ಟು ಹೆಚ್ಚಿಸುತ್ತದೆ ಎಂಬುದನ್ನು ಮರೆಯಬಾರದು.

ಇದನ್ನೂ ಓದಿ: ಈ ಘಟನೆಗಳು ಜೀವನದಲ್ಲಿ ಉತ್ತಮ ಪಾಠಗಳನ್ನು ಕಲಿಸುತ್ತವೆ! ಅಷ್ಟೇ ಅಲ್ಲ ಭವಿಷ್ಯವನ್ನೂ ಉಜ್ವಲವಾಗಿಸುತ್ತದೆ!

ಸಲಹೆ ಮತ್ತು ಮಾರ್ಗದರ್ಶನ ಪಡೆಯಿರಿ: ಜ್ಞಾನ ಮತ್ತು ಅನುಭವ ಇರುವವರಿಂದ ಸಲಹೆ ಪಡೆಯುವುದು ಉತ್ತಮ ಎನ್ನುತ್ತಾರೆ ಚಾಣಕ್ಯ. ಸಮಸ್ಯೆಯೊಂದಿಗೆ ವ್ಯವಹರಿಸುವಾಗ ತಜ್ಞರು ಅಥವಾ ಸಲಹೆಗಾರರಿಂದ ಮಾರ್ಗದರ್ಶನ ಪಡೆಯುವುದು ಸಹಾಯಕವಾಗಬಹುದು. ಚಾಣುಕ್ಯನ ವಿಧಾನವು ನಿಮ್ಮ ಸಮಸ್ಯೆಗೆ ಸುಲಭ ಪರಿಹಾರವಾಗಿದೆ.

ತಪ್ಪುಗಳಿಂದ ಕಲಿಯಿರಿ: ಚಾಣಕ್ಯನ ಪ್ರಕಾರ ಒಬ್ಬ ವ್ಯಕ್ತಿಯು ತನ್ನ ತಪ್ಪುಗಳಿಂದ ಹೆಚ್ಚು ಕಲಿಯುತ್ತಾನೆ. ತಪ್ಪುಗಳು ಬೆಳವಣಿಗೆ ಮತ್ತು ಸ್ವಯಂ ಸುಧಾರಣೆಗೆ ಅವಕಾಶಗಳನ್ನು ಒದಗಿಸುತ್ತವೆ ಎಂದು ಅವರು ನಂಬಿದ್ದರು. ಸಮಸ್ಯೆಗಳಿರುವಾಗ.. ಅವುಗಳಲ್ಲಿ ಏನು ತಪ್ಪಾಗಿದೆ.. ಮುಂದೆ ಇಂತಹ ಸಮಸ್ಯೆಗಳು ಮರುಕಳಿಸದಂತೆ.. ಹಾನಿಯನ್ನು ತಡೆಯುವುದು ಹೇಗೆ.. ಎಂಬ ಕ್ರಮದಲ್ಲಿ ಚಿಂತಿಸಬೇಕು ಎಂದಿದ್ದಾರೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ