AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Navagraha: ನವಗ್ರಹ ದೋಷಗಳಿಗೆ ನವ ಪರಿಹಾರ ಇಲ್ಲಿದೆ ನೋಡಿ

ಆಕಾಶದಲ್ಲಿ ಸಂಚರಿಸುತ್ತಿರುವ ಗ್ರಹರು ತಮ್ಮ ಚಲನೆಗನುಗುಣವಾಗಿ ಜಗತ್ತಿನ ಜೀವಿಗಳಿಗೆ ಶುಭಾಶುಭ ಫಲವನ್ನು ನೀಡುತ್ತಿರುತ್ತಾರೆ. ಹಾಗೆ ಸಂಚಾರ ಮಾಡುತ್ತಿರುವ ಗ್ರಹರು ನಮ್ಮ ಜನ್ಮ ಕುಂಡಲಿಯಲ್ಲಿ ಮಿತ್ರ ಸ್ಥಾನದಲ್ಲಿದ್ದರೆ ಶುಭವನ್ನೂ ಶತ್ರು ಸ್ಥಾನದಲ್ಲಿದ್ದರೆ ಅಶುಭವನ್ನೂ ಉಂಟುಮಾಡುತ್ತಾರೆ.

Navagraha: ನವಗ್ರಹ ದೋಷಗಳಿಗೆ ನವ ಪರಿಹಾರ ಇಲ್ಲಿದೆ ನೋಡಿ
ಸಾಂದರ್ಭಿಕ ಚಿತ್ರ
ಅಕ್ಷಯ್​ ಪಲ್ಲಮಜಲು​​
|

Updated on: May 15, 2023 | 1:04 PM

Share

ನವಗ್ರಹ (Navagraha) ದೋಷಗಳಿಂದ ಸೋತಿರಿರುವಿರೇ ಅಥವಾ ಪರಿಹಾರ ಮಾಡಲು ಕಷ್ಟ ಪಡುತ್ತಿರುವಿರೇ ಇಲ್ಲಿದೆ ನೋಡಿ ಸುಲಭ ಪರಿಹಾರೋಪಾಯ. ಆಕಾಶದಲ್ಲಿ ಸಂಚರಿಸುತ್ತಿರುವ ಗ್ರಹರು ತಮ್ಮ ಚಲನೆಗನುಗುಣವಾಗಿ ಜಗತ್ತಿನ ಜೀವಿಗಳಿಗೆ ಶುಭಾಶುಭ ಫಲವನ್ನು ನೀಡುತ್ತಿರುತ್ತಾರೆ. ಹಾಗೆ ಸಂಚಾರ ಮಾಡುತ್ತಿರುವ ಗ್ರಹರು ನಮ್ಮ ಜನ್ಮ ಕುಂಡಲಿಯಲ್ಲಿ ಮಿತ್ರ ಸ್ಥಾನದಲ್ಲಿದ್ದರೆ ಶುಭವನ್ನೂ ಶತ್ರು ಸ್ಥಾನದಲ್ಲಿದ್ದರೆ ಅಶುಭವನ್ನೂ ಉಂಟುಮಾಡುತ್ತಾರೆ. ಈಗ ನೀವು ಕೇಳಬಹುದು ಕೆಲವರು ಏನೂ ಮಾಡುವುದಿಲ್ಲ ಅವರಿಗೆ ಯಾವ ಸಮಸ್ಯೆಯೂ ಇರುವುದಿಲ್ಲ. ಇನ್ನು ಕೆಲವರು ಸದಾ ದುಷ್ಟ ಕಾರ್ಯವನ್ನೇ ಮಾಡುತ್ತಿರುತ್ತಾರೆ ಅವರಿಗೆ ಶುಭವೇ ಆಗುವುದು. ಅತ್ಯಂತ ಧಾರ್ಮಿಕ ಮನೋಭಾವದಿಂದ ಭಗವತ್ಕಾರ್ಯ ಮಾಡಿದವರಿಗೆ ಕಷ್ಟವೇ ಹೆಚ್ಚು ಯಾಕೆ ಹೀಗೆ ಎಂದು. ಒಂದು ಉದಾಹರಣೆ ನೀಡುತ್ತೇನೆ ನೋಡಿ, ನೀರು ಕುಡಿದರೆ ಉತ್ತಮ ಎಂದು ವೈದ್ಯಕೀಯ ಶಾಸ್ತ್ರ ಹೇಳುತ್ತದೆ. ಸಕ್ಕರೆ ತಿನ್ನಬಾರದು ಅದು ಕೊಬ್ಬು ಹೆಚ್ಚಿಸುತ್ತದೆ ಎನ್ನುತ್ತಾರೆ ಅಲ್ಲವೇ? ಆದರೆ ಕೆಲವರು ನೀರು ಕುಡಿಯುವುದು ಅಪರೂಪ ಆದರು ಅತ್ಯಂತ ಕ್ಷೇಮವಾಗಿರುತ್ತಾರೆ. ಹಾಗೆಯೇ ಕೆಲವರು ಹೇಗಿರುವ ನೀರನ್ನಾದರೂ ಅರಗಿಸಿಕೊಳ್ಳುತ್ತಾರೆ. ಆದರೆ ಕೆಲವರಿಗೆ ಕಾದಾರಿದ ನೀರೇ ಬೇಕು ಇಲ್ಲವಾದಲ್ಲಿ ನೆಗಡಿ ಜ್ವರ ಇತ್ಯಾದಿ ನಿಶ್ಚಿತ. ಹಾಗೆಯೇ ಅದರಲ್ಲಿ ಕೆಲವರಿಗೆ ಸಕ್ಕರೆ ತಿಂದರೆ ಏನೂ ಆಗುವುದಿಲ್ಲ. ಇದಕ್ಕೆ ಕಾರಣ ಕೇಳಿದರೆ ಉತ್ತರ ಒಂದೆ ಅವರವರ ದೇಹದ ರೋಗನಿರೋಧಕ ಶಕ್ತಿ ಮತ್ತು ದೇಹ ಸ್ಥಿತಿ ಎಂಬುದಾಗಿ ಅಲ್ಲವೇ?

ಅಂತಯೇ ನಮ್ಮ ಕುಂಡಲಿಯಲ್ಲಿ ಗ್ರಹಸ್ಥಿತಿ ಅಷ್ಟೊಂದು ಶುಭವಿಲ್ಲದ್ದರೂ ಅದನ್ನು ಸಹಿಸುವ ಶಕ್ತಿ ಜನ್ಮಾಂತರದಿಂದ ಬಂದಿರುತ್ತದೆ. ಆದ ಕಾರಣ ಅಂತವರನ್ನು ಅಶುಭ ಅಷ್ಟಾಗಿ ಬಾಧಿಸುವುದಿಲ್ಲ. ಇನ್ನು ಕೆಲವರ ಮನಸ್ಸು ಅತ್ಯಂತ ದುರ್ಬಲವಾಗಿರುತ್ತದೆ ಅಂತವರು ಸಣ್ಣ ಸಮಸ್ಯೆಯನ್ನೂ ದೊಡ್ಡದಾಗಿ ಭಾವಿಸಿ ಪರಿತಪಿಸಿ ಸೋತುಬಿಡುತ್ತಾರೆ. ಹೀಗೆ ವ್ಯಕ್ತಿಯ ಶಕ್ತಿಗನುಗುಣವಾಗಿ ಶುಭಾಶುಭ ಗೋಚರಿಸುತ್ತದೆ.

ಅಂತಹ ಗ್ರಹರ ಅಶುಭಫಲವನ್ನು ನಿಗ್ರಹಿಸುವುದಕ್ಕೆ ಏನು ಸಾಮಾನ್ಯ ಸುಲಭ ಪರಿಹಾರವೆಂದರೆ ಅದಕ್ಕೆ ಧರ್ಮಶಾಸ್ತ್ರ ಸ್ಪಷ್ಟವಾಗಿ ಉತ್ತರನೀಡಿದೆ.

ಇದನ್ನೂ ಓದಿ:Navagrahas: ನವಗ್ರಹ ಪೂಜೆಯ ಮಹತ್ವ, ಪ್ರಯೋಜನಗಳು ಏನೇನು? ಯಾವ ದಿನ ಯಾವ ಗ್ರಹ ಪೂಜೆ ಮಾಡಬೇಕು?

ಕ್ರಮವಾಗಿ ನವಗ್ರಹರ ಅಶುಭ ಫಲದ ಪರಿಹಾರೋಪಾಯ ಇಂತಿದೆ.

1. ರವಿ ಸಂಬಂಧಿತ ದೋಷಕ್ಕೆ ಈಶ್ವರ ದೇವರಿಗೆ ಎಳ್ಳೆಣ್ಣೆ ಸಮರ್ಪಣೆ ಅಥವಾ ರುದ್ರಾಭಿಷೇಕ ಅಥವಾ ಬಿಲ್ವಾರ್ಚನೆ ಅಥವಾ ಆದಿತ್ಯಹೃದಯ ಪಾರಾಯಣ.

2. ಚಂದ್ರ ಸಂಬಂಧಿತ ದೋಷಕ್ಕೆ ದೇವಿಗೆ ಕುಂಕುಮಾರ್ಚನೆ ಅಥವಾ ಹೂವಿನ ಅಲಂಕಾರ ಅಥವಾ ಹಾಲುಪಾಯಸ ನೈವೇದ್ಯ.

3. ಕುಜ ಸಂಬಂಧಿತ ದೋಷಕ್ಕೆ – ಸುಬ್ರಹ್ಮಣ್ಯನಿಗೆ ಪಂಚಾಮೃ ಅಭಿಷೇಕ ಅಥವಾ ಅಪೂಪ ನೈವೇದ್ಯ ಅಥವಾ ಭೂಮಿ ಪೂಜೆ.

4. ಬುಧ ಸಂಬಂಧಿತ ದೋಷಕ್ಕೆ ಶ್ರೀಕೃಷ್ಣ ಅಥವಾ ಶ್ರೀರಾಮನಿಗೆ ಅರ್ಚನೆ ಅಥವಾ ವಿಷ್ಣುಸಹಸ್ರನಾಮ ಪಠಣ ಅಥವಾ ರಾಮ ತಾರಕ ಜಪ.

5. ಗುರು ಸಂಬಂಧಿತ ದೋಷಕ್ಕೆ – ಮಹಾವಿಷ್ಣುವಿಗೆ ಅರ್ಚನೆ ಅಥವಾ ಗುರುಸೇವೆ ಅಥವಾ ಸತ್ಯನಾರಾಯಣ ಪೂಜೆ.

6. ಶುಕ್ರ ಸಂಬಂಧಿತ ದೋಷಕ್ಕೆ ಮಹಾಲಕ್ಷ್ಮೀ ಅಷ್ಟಕ ಪಠಣ ಅಥವಾ ಲಲಿತಾ ಸಹಸ್ರನಮ ಪಠಣ ಅಥವಾ ತುಪ್ಪದೀಪ ಹಚ್ಚುವುದು ಅಥವಾ ಮುತ್ತೈದೆ ಪೂಜೆ.

7. ಶನಿ ಸಂಬಂಧಿತ ದೋಷಕ್ಕೆ ಹನುಮಂತನಿಗೆ ತೈಲಾಭ್ಯಂಗ ಅಥವಾ ಹನುಮಾನ್ ಚಾಲೀಸ್ ಪಠಣ ಅಥವಾ ಅಶ್ವತ್ಥ ಪ್ರದಕ್ಷಿಣೆ ಮತ್ತು ಶನಿಪೂಜೆ ಅಲ್ಲದೇ ವಿಷ್ಣುಸಹಸ್ರನಾಮ ಪಠಣವೂ ಮಾಡಬಹುದು.

8. ರಾಹು ಸಂಬಂಧಿತ ದೋಷಕ್ಕೆ – ನಾಗದೇವರಿಗೆ ಪೂಜೆ ಅಥವಾ ತಂಬಿಲಸೇವೆ ಅಥವಾ ಆಶ್ಲೇಷಾ ಬಲಿ.

9. ಕೇತು ಸಂಬಂಧಿತ ದೋಷಕ್ಕೆ ಗಣಪತಿಗೆ ಪಂಚಕಜ್ಜಾಯ ಸೇವೆ ಅಥವಾ ಗಣಪತಿಗೆ ಮೋದಕ ಸಮರ್ಪಣೆ ಅಥವಾ ದೂರ್ವಾರ್ಚನೆ.

ಇದರೊಂದಿಗೆ ಆಯಾಯ ಗ್ರಹರ ಕುರಿತಾದ ದೇವತೆಗಳ ದೇವಾಲಯಕ್ಕೂ ಹೋಗಿ ದರ್ಶನ ಮಾಡುವುದರಿಂದ ಒಳಿತಾಗುತ್ತದೆ. ಇವುಗಳಲ್ಲಿ ಯಾವುದೇ ಕಾರ್ಯವನ್ನಾದರೂ ಭಕ್ತಿಯಿಂದ ನಂಬಿಕೆಯಿಟ್ಟು ಮಾಡಬೇಕು ಆಗ ಅದರ ಫಲ ಉತ್ತಮವಾಗಿರುತ್ತದೆ. ಇನ್ನೂ ಹೆಚ್ಚಿನ ಸಂದರ್ಭಗಳಲ್ಲಿ ಒಳ್ಳೆಯ ಚಿಂತಕರನ್ನು ಸಂಪರ್ಕಿಸಿ ಪರಿಹಾರವನ್ನು ಕಂಡುಕೊಳ್ಳಿರಿ ಕ್ಷೇಮವಾಗುವುದು.

ಡಾ.ಗೌರಿ ಕೇಶವಕಿರಣ ಬಿ

ಧಾರ್ಮಿಕಚಿಂತಕರು

ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ