Navagrahas: ನವಗ್ರಹ ಪೂಜೆಯ ಮಹತ್ವ, ಪ್ರಯೋಜನಗಳು ಏನೇನು? ಯಾವ ದಿನ ಯಾವ ಗ್ರಹ ಪೂಜೆ ಮಾಡಬೇಕು?

ನವ ಧಾನ್ಯ ದಾನ: ನವಗ್ರಹಗಳನ್ನು ಸಂಪ್ರೀತಗೊಳಿಸುವುದಕ್ಕಾಗಿ ಮಾಡುವ ನವಧಾನ್ಯಗಳ ದಾನ. ಸೂರ್ಯನ ಪ್ರೀತ್ಯರ್ಥ ಗೋಧಿ, ಚಂದ್ರನಿಗೆ ಭತ್ತ, ಕುಜನಿಗೆ ತೊಗರಿ, ಬುಧನಿಗೆ ಹೆಸರು, ಗುರುವಿಗೆ ಕಡಲೆ, ಶುಕ್ರನಿಗೆ ಅವರೆ, ಶನಿಗೆ ಎಳ್ಳು, ರಾಹುವಿಗೆ ಉದ್ದು, ಕೇತುವಿಗೆ ಹುರುಳಿ ಇವನ್ನು ದಾನ ಮಾಡಬೇಕೆಂಬ ವಿಧಿಯಿದೆ. ಅದಕ್ಕೆ ನವಧಾನ್ಯ ದಾನ ಎನ್ನುವರು.

Navagrahas: ನವಗ್ರಹ ಪೂಜೆಯ ಮಹತ್ವ, ಪ್ರಯೋಜನಗಳು ಏನೇನು? ಯಾವ ದಿನ ಯಾವ ಗ್ರಹ ಪೂಜೆ ಮಾಡಬೇಕು?
ನವಗ್ರಹ ಪೂಜೆಯ ಮಹತ್ವ ಹಾಗೂ ಪ್ರಯೋಜನಗಳು ಏನೇನು? ಯಾವ ದಿನ ಯಾವ ಗ್ರಹ ಪೂಜೆ ಮಾಡಬೇಕು?
Follow us
TV9 Web
| Updated By: ಸಾಧು ಶ್ರೀನಾಥ್​

Updated on: Apr 23, 2022 | 6:06 AM

ಭಾರತೀಯ ಖಗೋಳಶಾಸ್ತ್ರ ಮತ್ತು ಜ್ಯೋತಿಷ್ಯಶಾಸ್ತ್ರದಲ್ಲಿ ಸೂರ್ಯ, ಸೋಮ, ಮಂಗಳ, ಬುಧ, ಗುರು, ಶುಕ್ರ, ಶನಿ, ರಾಹು ಮತ್ತು ಕೇತು ಎಂಬ ಒಂಬತ್ತು ಗ್ರಹಗಳು ಮಹತ್ವ ಪಡೆದಿವೆ. ಗ್ರಹ ದೋಷದಿಂದ ಬಳಲುತ್ತಿರುವವರು ನವಗ್ರಹಗಳ ಪೂಜೆ, ಶಾಂತಿ, ಹೋಮ, ದಾನ ಮೊದಲಾದವುಗಳನ್ನು ಮಾಡುತ್ತಾರೆ. ಶುಭ ಗ್ರಹಗಳಾದ ಗುರು ಹಾಗೂ ಶುಕ್ರ ಗ್ರಹಗಳು ಯಾವಾಗಲೂ ಶುಭ ಫಲವನ್ನು ನೀಡುವುದಿಲ್ಲ. ಶನಿ, ಕುಜ, ಕೇತುಗಳಂತೆ ಕೆಲವೊಮ್ಮೆ ಗುರು, ಶುಕ್ರ ಗ್ರಹಗಳ ದೋಷವೂ ಮನುಷ್ಯನನ್ನು ಕಾಡುತ್ತದೆ. ಗ್ರಹಗಳು ಅನುಕೂಲಕರವಾಗಿರಬೇಕೆಂದಾದಲ್ಲಿ ನವಗ್ರಹಗಳ ಪೂಜೆ ಬಹಳ ಮಹತ್ವ ಪಡೆಯುತ್ತದೆ. ಎಲ್ಲಾ ಒಂಬತ್ತು ಗ್ರಹಗಳು ನಮ್ಮನ್ನು ಒಮ್ಮೆಲೇ ಕಾಡುವುದಿಲ್ಲ. ಒಂದು ಗ್ರಹ ಕಾಡಿದರೂ ನವಗ್ರಹಕ್ಕೆ ಪೂಜೆ ಮಾಡಬೇಕು. ಯಾವ ಗ್ರಹ ಅನುಕೂಲಕರ ಆಗಿದೆಯೋ ಆ ಗ್ರಹಕ್ಕೆ ಹೆಚ್ಚಿನ ಪೂಜೆ ಮಾಡಿದಲ್ಲಿ ಉಳಿದ ಗ್ರಹಗಳು ಅನುಕೂಲಕರವಾಗುತ್ತವೆ. ವ್ಯಕ್ತಿಯ ಆರೋಗ್ಯ, ಯಶಸ್ಸು, ಮಾನ-ಸನ್ಮಾನ, ಧನ-ಸಂಪತ್ತು ಎಲ್ಲವೂ ಗ್ರಹ ದೋಷವನ್ನು ಅವಲಂಭಿಸಿದೆ (Significance of 9 Planetary Gods in Hindu Dharma).

ಯಾವ ದಿನ ಯಾವ ಗ್ರಹ ಪೂಜೆ ಮಾಡಬೇಕೆಂದು ಶಾಸ್ತ್ರಗಳಲ್ಲಿ ವಿವರವಾಗಿ ಹೇಳಲಾಗಿದೆ: ಭಾನುವಾರ ಸೂರ್ಯನ ಪ್ರಭಾವವಿರುವುದರಿಂದ ಸೂರ್ಯನಿಗೆ ಅಗ್ರಪೂಜೆ ಮಾಡಬೇಕು. ಸೋಮವಾರ ಚಂದ್ರನಿಗೆ ಸಂಬಂಧಪಟ್ಟಿದ್ದು. ಚಂದ್ರನಿಗೆ ಸೋಮವಾರ ವಿಶೇಷ ಪೂಜೆ ಮಾಡಬೇಕು. ಕುಜನ ಆರಾಧನೆಯನ್ನು ಮಂಗಳವಾರ ಮಾಡಬೇಕು. ವಸ್ತು, ವಾಹನ, ಸಂಪತ್ತು ಕುಜನ ಪ್ರಭಾವಕ್ಕೆ ಬರುವುದರಿಂದ ಅದರ ಅಡಚಣೆಯಾದಲ್ಲಿ ಕುಜನ ಆರಾಧನೆ ಮಾಡಬೇಕು. ಬುಧವಾರ ಭೌತಿಕ ಸುಖ, ಆರೋಗ್ಯ, ಸ್ನೇಹಕ್ಕಾಗಿ ಬುಧನ ಆರಾಧನೆ ಮಾಡಬೇಕು. ಗುರುವಾರ ಆರ್ಥಿಕ ಸ್ಥಿತಿ, ಉನ್ನತ ವ್ಯಾಸಂಗ, ಪದವಿ, ಆಧ್ಯಾತ್ಮಿಕ ಜ್ಞಾನಕ್ಕಾಗಿ ಗುರುವಿನ ಆರಾಧನೆ ಮಾಡಬೇಕು. ಶುಕ್ರವಾರ ಕುಟುಂಬ ಶಾಂತಿ, ವೈಭವ, ಗೃಹ ಶಾಂತಿಗಾಗಿ, ನವಗ್ರಹ ಪೂಜೆ ಮಾಡಬೇಕು. ಕಳ್ಳರ ಭಯ, ಮಂದಸ್ಥಿತಿ, ಹಳೆ ಕಾಯಿಲೆ ಸಮಸ್ಯೆಯಿಂದ ಬಳಲುತ್ತಿರುವವರು ಶನಿವಾರ ನವಗ್ರಹ ಆರಾಧನೆ ಮಾಡಬೇಕು. ಅಪರಾಧಿ ಮನಸ್ಥಿತಿ, ಚರ್ಮದ ಸಮಸ್ಯೆ, ಮನೋವ್ಯಾಧಿ, ಸರ್ಪದೋಷಗಳ, ಇತ್ಯಾದಿ ಸಮಸ್ಯೆಗಳಿಂದ ಬಳಲುತ್ತಿರುವವರು ಶನಿವಾರ ‌ರಾಹುವಿನ ಆರಾಧನೆ ಮಾಡಬೇಕು. ಆಧ್ಯಾತ್ಮ ಜ್ಞಾನ, ದೈವಿಕ ಸೇವೆ, ಮೋಕ್ಷ ಸಾಧನೆ ಬಯಸುವವರು ಮಂಗಳವಾರ ಕೇತು ಗ್ರಹದ ಆರಾಧನೆ ಮಾಡಬೇಕು.

ನವಗ್ರಹ ಜಪ: ಸೂರ್ಯ ಮೊದಲಾದ ಗ್ರಹಗಳ ಅನುಗ್ರಹಕ್ಕಾಗಿ ಶಾಸ್ತ್ರೋಕ್ತವಾದ ವಿಧಾನದಿಂದ ಮಾಡುವ ಆಯಾಯ ಗ್ರಹಗಳ ಮಂತ್ರ ಪುರಶ್ಚರಣೆ. ನವಗ್ರಹ ಜಪ ಮಾಡಿದರೆ ಬಂದ ಪೀಡೆ ಪರಿಹಾರವಾಗುತ್ತದೆ ಎಂಬುದು ಲೋಕಾರೂಢಿ.

ನವ ಧಾನ್ಯ ದಾನ: ನವಗ್ರಹಗಳನ್ನು ಸಂಪ್ರೀತಗೊಳಿಸುವುದಕ್ಕಾಗಿ ಮಾಡುವ ನವಧಾನ್ಯಗಳ ದಾನ. ಸೂರ್ಯನ ಪ್ರೀತ್ಯರ್ಥ ಗೋಧಿ, ಚಂದ್ರನಿಗೆ ಭತ್ತ, ಕುಜನಿಗೆ ತೊಗರಿ, ಬುಧನಿಗೆ ಹೆಸರು, ಗುರುವಿಗೆ ಕಡಲೆ, ಶುಕ್ರನಿಗೆ ಅವರೆ, ಶನಿಗೆ ಎಳ್ಳು, ರಾಹುವಿಗೆ ಉದ್ದು, ಕೇತುವಿಗೆ ಹುರುಳಿ ಇವನ್ನು ದಾನ ಮಾಡಬೇಕೆಂಬ ವಿಧಿಯಿದೆ. ಅದಕ್ಕೆ ನವಧಾನ್ಯ ದಾನ ಎನ್ನುವರು.

ನವಗ್ರಹ ಶಾಂತಿ: ಜಪ, ದಾನ, ಹೋಮಗಳಿಂದ ನವಗ್ರಹಗಳನ್ನು ಪ್ರಸನ್ನಗೊಳಿಸುವ ಪುಣ್ಯಕರ್ಮ. ನವಗ್ರಹ ಹೋಮ: ನವಗ್ರಹಗಳ ಸಂಪ್ರೀತಿಗಾಗಿ ಸೂರ್ಯನಿಗೆ ಅರ್ಕ, ಚಂದ್ರನಿಗೆ ಪಲಾಶ, ಅಂಗಾರಕ(ಕುಜ)ನಿಗೆ ಖದಿರ, ಬುಧನಿಗೆ ಅಪಾಮಾರ್ಗ, ಗುರುವಿಗೆ ಅಶ್ವತ್ಥ, ಶುಕ್ರನಿಗೆ ಔದುಂಬರ, ಶನಿಗೆ ಶಮಿ, ರಾಹುವಿಗೆ ದೂರ್ವಾ, ಕೇತುವಿಗೆ ಕುಶ ಈ ಸಮಿತ್ತುಗಳನ್ನು ಚರು ಮತ್ತು ತುಪ್ಪವನ್ನು ಪ್ರತ್ಯೇಕವಾಗಿ 8 ಅಥವಾ 24 ಇಲ್ಲವೇ 108 ಬಾರಿ ಅಗ್ನಿಯಲ್ಲಿ ಹಾಕುತ್ತಾ ಆಯಾಯ ಗ್ರಹ ಮಂತ್ರೋಚ್ಚಾರಣ ಪೂರ್ವಕ ಹೋಮ ಮಾಡಬೇಕು. ಅಂತೆಯೇ ಅಧಿದೇವತೆ, ಪ್ರತ್ಯಧಿ ದೇವತೆಗಳಿಗೆ ಪ್ರಧಾನ ದೇವತೆಯ ದಶಮಾಂಶ ಸಂಖ್ಯೆಯಲ್ಲಿಯೂ ಕ್ರತು ಸಂರಕ್ಷಣ ದೇವತೆಗಳಿಗೆ ಇಪ್ಪತ್ತನೆಯ ಒಂದು ಅಂಶ ಸಂಖ್ಯೆಯಲ್ಲಿಯೂ ಹೋಮ ಮಾಡಬೇಕು. ಈ ಕ್ರಮದಲ್ಲಿ ಮಾಡುವ ನವಗ್ರಹ ಹೋಮದಿಂದ ಗ್ರಹಜನ್ಯ ದೋಷಗಳು ಹೋಗುತ್ತವೆ.

ನಮಃ ಸೂರ್ಯಾಯ ಚಂದ್ರಾಯ ಮಂಗಳಾಯ ಬುಧಾಯ ಚ | ಗುರು ಶುಕ್ರ ಶನಿಭ್ಯಶ್ಚ ರಾಹವೇ ಕೇತವೇ ನಮಃ || ಈ ಮಂತ್ರವನ್ನು ಪಠಿಸಿ ಬೆಳ್ಳಿ ದೀಪವನ್ನು ಹಚ್ಚುವುದರಿಂದ ನವಗ್ರಹ ಶಾಂತಿಯ ಫಲಪ್ರಾಪ್ತಿಯಾಗುತ್ತದೆ.

  1. 1. ಸೂರ್ಯ (Surya -Sun): ಜಪಾ ಕುಸುಮ ಸಂಕಾಶಂ ಕಾಶ್ಯಪೇಯಂ ಮಹಾದ್ಯುತಿಮ್ | ತಮೋರಿಂ ಸರ್ವ ಪಾಪಘ್ನಂ ಪ್ರಣತೋಸ್ಮಿ ದಿವಾಕರಂ || ಈ ಮಂತ್ರದೊಂದಿಗೆ ಸೂರ್ಯ ದೇವರಿಗೆ ಬೆಳ್ಳಿಯ ನೀರಾಜನ ಬೆಳಗುವುದರಿಂದ ಸೂರ್ಯ ಸಂಪ್ರೀತನಾಗುತ್ತಾನೆ. ಸೂರ್ಯನಿಗೆ ಬೆಳ್ಳಿ ದೀಪ ಬೆಳಗುವುದರಿಂದ ಬಡತನ ನಿವಾರಣೆಯಾಗುತ್ತದೆ, ಆರೋಗ್ಯ ಪ್ರಾಪ್ತಿಯಾಗುತ್ತದೆ, ಶತ್ರು ದಮನವಾಗುತ್ತದೆ. ದೀಪ ಬೆಳಗಿದವನು ತೇಜೋವಂತನಾಗುತ್ತಾನೆ. ಆದಿತ್ಯ ಹೃದಯ ವನ್ನು ಪಠಿಸಿ ಬೆಳ್ಳಿ ದೀಪವನ್ನು ಬೆಳಗಿದರಂತೂ ರಾಜಯೋಗ ದೊರೆತು ಅಧಿಕಾರ ಪ್ರಾಪ್ತವಾಗುತ್ತದೆ.
  2.  2. ಚಂದ್ರ (Chandra -Moon): ಶ್ರೀಮಾನ್ ಶಶಿಧರಶ್ಚಂದ್ರೋ ತಾರಾಧೀಶೋ ನಿಶಾಕರಃ | ಸುಧಾನಿಧಿಸ್ಸದಾರಾಧ್ಯಸ್ಸತ್ಪತಿಸ್ಸಾಧು ಪೂಜಿತಃ || ಈ ಮಂತ್ರದೊಂದಿಗೆ ಚಂದ್ರನಿಗೆ ಬೆಳ್ಳಿ ದೀಪ ಬೆಳಗುವುದರಿಂದ ಬೆಳಗಿದವರು ಕಾಂತಿವಂತರೂ , ತೇಜೋವಂತರೂ ಆಗುತ್ತಾರೆ. ಕಟಕ ಲಗ್ನ ಅಥವಾ ಕಟಕ ರಾಶಿಗೆ ಅಧಿಪತಿ ಚಂದ್ರನಾಗಿರುವುದರಿಂದ ಕಟಕ ರಾಶಿಯವರು ಬೆಳ್ಳಿ ದೀಪಾರಾಧನೆ ಮೂಲಕ ಚಂದ್ರನನ್ನು ಪೂಜಿಸಿದರೆ ಶುಭಫಲಗಳು ಶತಸಿದ್ಧ.
  3. 3. ಮಂಗಳ (Mangal -Mars): ಮಹಿಸುತೋ ಮಹಾಭಾಗೋ ಮಂಗಲೋ ಮಂಗಲಪ್ರದಃ | ಮಹಾವೀರೋ ಮಹಾಶೂರ ಮಹಾಬಲ ಪರಾಕ್ರಮಃ || ಈ ಮಂತ್ರದ ಮೂಲಕ ಮತ್ತು ಕುಜನ ಅಷ್ಟೋತ್ತರ ಸ್ತೋತ್ರಗಳ ಪಠನದ ಮೂಲಕ ಬೆಳ್ಳಿ ದೀಪ ಬೆಳಗಿದಲ್ಲಿ ಕುಜ ದೋಷದ ಪರಿಹಾರ ಸಾಧ್ಯ ಮತ್ತು ಮನದ ಉದ್ವೇಗ ಕಡಿಮೆಯಾಗುತ್ತದೆ. ಯಾರಿಗೆ ಅಧಿಕ ರಕ್ತದೊತ್ತಡ ಇದೆಯೋ ಅವರು ದೀಪ ಬೆಳಗಿದಲ್ಲಿ ರಕ್ತದೊತ್ತಡ ಕಡಿಮೆ ಮಾಡಬಹುದು.
  4. 4. ಬುಧ Budha (Mercury): ಬುಧೋ ಬುಧಾರ್ಚಿತಃ ಸೌಮ್ಯಃ ಚಿತ್ತಃ ಶುಭಪ್ರದಃ | ದೃಢವ್ರತೋ ದೃಢಫಲಃ ಶ್ರುತಿಚಾಲ ಪ್ರಭೋಧಕಃ || ಈ ಮಂತ್ರದ ಪಠನದ ಮೂಲಕ ದೀಪ ಬೆಳಗಿದಲ್ಲಿ ಶುಭಫಲ ಲಭ್ಯವಾಗುವುದು. ಬುದ್ಧಿಶಕ್ತಿಗೆ ಕಾರಕ ಗ್ರಹ ಬುಧ. ಮಿಥುನ ಮತ್ತು ಕನ್ಯಾರಾಶಿಯವರಿಗೆ ಬುಧ ಅಧಿಪತಿ. ಈ ಜಾತಕರು ಬುಧನ ಆರಾಧನೆ ಮಾಡಿದರೆ ಉತ್ತಮ. ಇತರ ಜಾತಕರಿಗೂ ಒಳ್ಳೆ ಫಲ ಇದೆ, ಸ್ವಂತ ವ್ಯವಹಾರ ಮಾಡುವವರು ಬೆಳ್ಳಿ ದೀಪ ಬೆಳಗಿದಲ್ಲಿ ಅಭಿವೃಧ್ಹಿ ಕಾಣುವರು, ವಿದ್ಯಾರ್ಥಿಗಳಿಗೆ ಪರೀಕ್ಷೆಯಲ್ಲಿ ನಿರೀಕ್ಷಿತ ಫಲಿತಾಂಶ ಸಿಗುತ್ತದೆ.
  5. 5. ಗುರು (Guru -Brihaspati -Jupiter): ದೇವಾನಾಂಚ ಋಷೀಣಾಂಚ ಗುರುಂ ಕಾಂಚನ ಸನ್ನಿಭಂ | ಬುದ್ದಿಭೂತಂ ತ್ರಿಲೋಕೇಶಂ ತಂ ನಮಾಮಿ ಬೃಹಸ್ಪತಿಂ || ದೇವಮಂತ್ರೀ ವಿಶಾಲಾಕ್ಷಃ ಸದಾ ಲೋಕಹಿತೇರತಃ | ಅನೇಕ ಶಿಷ್ಯ ಸಂಪೂರ್ಣಂ ಪೀಡಾಂ ಹರತು ಮೇ ಗುರುಃ || ಈ ಮಂತ್ರ ಪಠಿಸಿ ಬೆಳ್ಳಿ ದೀಪವನ್ನು ಕಡಲೆಕಾಯಿ ಎಣ್ಣೆ ಬಳಸಿ ಬೆಳಗಿಸಿದರೆ ಗುರು ಸಂಪ್ರೀತನಾಗುತ್ತಾನೆ. ಎಲ್ಲಾ ವಿಧದ ಜಯಗಳನ್ನು ಕೊಡುತ್ತಾನೆ ಮತ್ತು ಉದರ ಸಂಬಂಧೀ ಕಾಯಿಲೆಗಳು ಶಮನವಾಗುತ್ತದೆ.
  6. 6. ಶುಕ್ರ (Sukra -Venus): ಹಿಮಕುಂದ ಮೃಣಾಲಾಭಂ ದೈತ್ಯಾನಾಂ ಪರಮಂ ಗುರುಂ | ಸರ್ವಶಾಸ್ತ್ರ ಪ್ರವಕ್ತಾರಂ ಭಾರ್ಗವಂ ಪ್ರಣಮಾಮ್ಯಹಂ || ದೈತ್ಯ ಮಂತ್ರೀ ಗುರುಸ್ತೇಷಾಂ ಪ್ರಾಣದಸ್ಯ ಮಹಾಮತಿಃ | ಪ್ರಭುಸ್ತಾರಾ ಗ್ರಹಾಣಾಂಚ ಪೀಡಾಂ ಹರತು ಮೇ ಭೃಗು || ಈ ಮಂತ್ರದ ಮೂಲಕ ಬೆಳ್ಳಿ ದೀಪ ಬೆಳಗಿಸಿದಲ್ಲಿ ಕೌಟುಂಬಿಕ ಸಮಸ್ಯೆಗಳ ಪರಿಹಾರ ಸಾಧ್ಯ ಮತ್ತು ಪತಿ ಪತ್ನಿಯರ ಭಿನ್ನಾಭಿಪ್ರಾಯ ದೂರವಾಗಿ ಸಾಮರಸ್ಯ ಏರ್ಪಡುತ್ತದೆ. ಶುದ್ಧ ತುಪ್ಪವನ್ನು ಬಳಸಿ ದೀಪ ಬೆಳಗುವುದರಿಂದ ಪಿತ್ರಾರ್ಜಿತ ಆಸ್ತಿಯು ದೊರಕುತ್ತದೆ.
  7. 7. ಶನಿ (Sani -Saturn): ನೀಲಾಂಜನ ಸಮಾಭಾಸಂ ರವಿಪುತ್ರಂ ಯಮಾಗ್ರಜಂ | ಛಾಯಾ ಮಾರ್ತಾಂಡ ಸಂಭೂತಂ ತಂ ನಮಾಮಿ ಶನೈಶ್ಚರಂ || ಸೂರ್ಯಪುತ್ರೋ ದೀರ್ಘದೇಹೋ ವಿಶಾಲಾಕ್ಷ ಶಿವಪ್ರಿಯಃ | ಮಂದಾಚಾರ ಪ್ರಸನ್ನಾತ್ಮ ಪೀಡಾಂ ಹರತು ಮೇ ಶನಿಃ || ಶನಿ ದೇವರಿಗೆ ಪ್ರಿಯವಾದ ಧಾನ್ಯ ಎಳ್ಳು ಹಾಗಾಗಿ ಎಳ್ಳೆಣ್ಣೆಯಿಂದ ಬೆಳ್ಳಿದೀಪ ಬೆಳಗಿದರೆ ಶುಭಫಲ ಮತ್ತು ಗುಪ್ತರೋಗಗಳು ಪರಿಹಾರವಾಗುವುದು. 19 ಶನಿವಾರ ಈ ರೀತಿ ದೀಪ ಬೆಳಗಿಸಿದಲ್ಲಿ ನ್ಯಾಯಾಲಯದಲ್ಲಿರುವ ವ್ಯಾಜ್ಯಗಳಿಗೆ ಪರಿಹಾರ ದೊರಕುವುದು, ನಿರುದ್ಯೋಗಿಗಳಿಗೆ ಉದ್ಯೋಗ ಪ್ರಾಪ್ತಿ, ವ್ಯಾಪಾರದಲ್ಲಿ ನಷ್ಟ ಅನುಭವಿಸುತ್ತಿರುವವರಿಗೆ ಆರ್ಥಿಕವಾಗಿ ಚೇತರಿಕೆ ಕಂಡು ಬರುತ್ತದೆ.
  8. 8. ರಾಹು (Rahu -Shadow planet, Snake head): ಅರ್ಧಕಾಯಂ ಮಹಾವೀರ್ಯಂ ಚಂದ್ರಾದಿತ್ಯ ವಿಮರ್ಧನಂ | ಸಿಂಹಕಾ ಗರ್ಭ ಸಂಭೂತಂ ತಂ ರಾಹುಂ ಪ್ರಣಮಾಮ್ಯಹಂ || ಈ ಮಂತ್ರದ ಮೂಲಕ ಬೆಳ್ಳಿ ದೀಪ ಬೆಳಗಿದಲ್ಲಿ ಪೂರ್ವಜರಿಂದ ಬಂದ ಪಾಪಗಳ ನಿವಾರಣೆಯಾಗುತ್ತದೆ, ಸರ್ಪದೋಷ ನಿವಾರಣೆ, ಬಡತನ ನಿವಾರಣೆ ಆಗುತ್ತದೆ. ತುಪ್ಪ ಬಳಸಿ ದೀಪ ಹಚ್ಚಿದಲ್ಲಿ ನಾಗಹತ್ಯಾ ದೋಷ ನಿವಾರಣೆ ಆಗುತ್ತದೆ, ಪುರಾತನ ರೋಗ ನಿವಾರಣೆ, ಅನಾರೋಗ್ಯ, ನರ ದೌರ್ಬಲ್ಯ ಇತ್ಯಾದಿ ತೊಂದರೆಗಳಿಂದ ಮುಕ್ತಿ ದೊರೆಯುತ್ತದೆ.
  9. 9. ಕೇತು (Ketu, Shadow Planet, Snake tail): ಫಲಾಶ ಪುಷ್ಪ ಸಂಕಾಶಂ ತಾರಕಾಗ್ರಹ ಮಸ್ತಕಂ | ರೌದ್ರಂ ರೌದ್ರಾತ್ಮಕಂ ಘೋರಂ ತಂ ಕೇತುಂ ಪ್ರಣಮಾಮ್ಯಹಂ || ಈ ಮಂತ್ರದ ಮೂಲಕ ಬೆಳ್ಳಿ ದೀಪ ಬೆಳಗಿದಲ್ಲಿ ಅಪಘಾತ ಭೀತಿ ದೂರವಾಗುತ್ತದೆ, ಕೆಲಸ ಕಾರ್ಯಗಳಲ್ಲಿನ ವಿಘ್ನ ದೂರವಾಗುತ್ತದೆ, ಪುತ್ರ ಸಂತಾನದ ಅಪೇಕ್ಷೆ ಇದ್ದವರು 21 ದಿನಗಳ ಕಾಲ ತುಪ್ಪದಿಂದ ಬೆಳ್ಳಿ ದೀಪ ಬೆಳಗಿಸಿದರೆ ಮನೋಭಿಲಾಷೆ ಪೂರ್ಣವಾಗುತ್ತದೆ. ಕೇತುವಿನ ಎದುರು ಬೆಳ್ಳಿ ದೀಪ ಬೆಳಗಿದರೆ ಮೋಕ್ಷ ಪ್ರಾಪ್ತಿಯಾಗುತ್ತದೆ. ಹಾಗೆಯೇ, ಗಂಗಾಸ್ನಾನದ ಫಲದೊರೆಯುತ್ತದೆ ಎಂದು ಶಾಸ್ತ್ರ ಹೇಳುತ್ತದೆ. (ಬರಹ -ವಾಟ್ಸಪ್ ಸಂದೇಶ)

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್