Garuda Purana: ಗರುಡ ಪುರಾಣದ ಈ ವಿಷಯಗಳು ನಿಮ್ಮ ಜೀವನ ಬದಲಾಯಿಸುವುದರಲ್ಲಿ ಸಂಶಯವೇ ಇಲ್ಲ!
ಗರುಡ ಪುರಾಣವು ವಿಷ್ಣುವಿನ ಭಕ್ತಿ ಮತ್ತು ಜ್ಞಾನವನ್ನು ಆಧರಿಸಿದೆ. ಈ ಪುರಾಣದಲ್ಲಿ ಬದುಕಿಗೆ ಬೇಕಾದ ಅನೇಕ ವಿಷಯಗಳನ್ನು ಹೇಳಲಾಗಿದೆ, ಅದರ ಮೂಲಕ ವ್ಯಕ್ತಿಯು ತನ್ನ ಜೀವನದ ಸ್ಥಿತಿಯನ್ನು ಸುಧಾರಿಸಿಕೊಳ್ಳಬಹುದು. ಅಂತಹ ಕೆಲವು ವಿಷಯಗಳ ಬಗ್ಗೆ ಇಲ್ಲಿದೆ ಮಾಹಿತಿ.
ಗರುಡ ಪುರಾಣವು (Garuda Purana) ಹಿಂದೂ ಧರ್ಮದ ಪ್ರಸಿದ್ಧ ಧಾರ್ಮಿಕ ಗ್ರಂಥಗಳಲ್ಲಿ ಒಂದಾಗಿದೆ. ಈ ಪುರಾಣವನ್ನು ಹಲವು ಕಡೆಗಳಲ್ಲಿ ವ್ಯಕ್ತಿಯ ಮರಣದ ನಂತರ ಪಠಿಸಲಾಗುತ್ತದೆ. ಇದನ್ನು ಪ್ರತಿದಿನ ಓದುವುದರಿಂದ ಒಬ್ಬ ವ್ಯಕ್ತಿಯು ಧಾರ್ಮಿಕ ಕೆಲಸಗಳನ್ನು ಮಾಡಲು ಪ್ರೇರೇಪಿಸಲ್ಪಡುತ್ತಾನೆ. ಇದರಲ್ಲಿ ಹೇಳಿರುವ ಪ್ರಕಾರ ಮನುಷ್ಯನು ಭೂಮಿಯ ಮೇಲೆ ಮಾಡುವ ಕೆಲಸದ ಆಧಾರದ ಮೇಲೆ, ಪ್ರತಿಫಲ ಪಡೆಯುತ್ತಾನೆ ಎನ್ನಲಾಗಿದೆ. ಈ ಪುರಾಣದಲ್ಲಿ, ಮನುಷ್ಯನ ಕಾರ್ಯಗಳ ವಿವರಗಳನ್ನು ಹೇಳಲಾಗಿದೆ. ಅದರಲ್ಲಿ ಕೆಲವನ್ನು ಇಲ್ಲಿ ಹಂಚಿಕೊಳ್ಳಲಾಗಿದೆ. ಇವುಗಳನ್ನು ಮಾಡುವುದರಿಂದ ನಿಮ್ಮ ಬದುಕೇ ಬದಲಾಗಬಹುದು.
ಏಕಾದಶಿ ಉಪವಾಸದ ಮಹಿಮೆ:
ಏಕಾದಶಿ ಉಪವಾಸದ ಮಹಿಮೆಯನ್ನು ಗರುಡ ಪುರಾಣದಲ್ಲಿ ಹೇಳಲಾಗಿದೆ. ಇದರ ಪ್ರಕಾರ, ಏಕಾದಶಿ ಉಪವಾಸವನ್ನು ಪೂರ್ಣ ಭಕ್ತಿ, ನಂಬಿಕೆಯಿಂದ ಆಚರಣೆ ಮಾಡಿದಲ್ಲಿ, ವ್ಯಕ್ತಿಯ ಎಲ್ಲಾ ದುಃಖಗಳು ಮತ್ತು ನೋವುಗಳು ಕೊನೆಗೊಳ್ಳುತ್ತವೆ. ಇದರೊಂದಿಗೆ, ತುಳಸಿಯ ಮಹಿಮೆಯನ್ನು ಸಹ ಪುರಾಣಗಳಲ್ಲಿ ವಿವರಿಸಲಾಗಿದೆ. ತುಳಸಿಯನ್ನು ಪ್ರತಿದಿನ ಸೇವನೆ ಮಾಡುವುದರಿಂದ ಆರೋಗ್ಯ ಚೆನ್ನಾಗಿರುತ್ತದೆ ಎಂದು ಹೇಳಲಾಗಿದೆ.
ಈ ತಪ್ಪನ್ನು ಎಂದಿಗೂ ಮಾಡಬೇಡಿ:
ಕೊಳಕು ಅಥವಾ ತೊಳೆಯದ ಬಟ್ಟೆಗಳನ್ನು ಧರಿಸುವವರು ತಮ್ಮ ಅದೃಷ್ಟವನ್ನು ಕಳೆದುಕೊಳ್ಳುತ್ತಾರೆ ಮತ್ತು ಬಡವರಾಗುತ್ತಾರೆ ಎಂದು ಗರುಡ ಪುರಾಣದಲ್ಲಿ ಹೇಳಲಾಗಿದೆ. ಲಕ್ಷ್ಮೀಯು ಅಂತವರ ಮನೆಯಲ್ಲಿ ವಾಸಿಸುವುದಿಲ್ಲ. ಅದಕ್ಕಾಗಿಯೇ ಸ್ವಚ್ಛವಾದ ಬಟ್ಟೆಗಳನ್ನು ಧರಿಸಲು ಯಾವಾಗಲೂ ಸಲಹೆ ನೀಡಲಾಗುತ್ತದೆ.
ಇದನ್ನೂ ಓದಿ: Garuda Purana: ಜೀವನದಲ್ಲಿ ನೀಡಲೇಬೇಕಾದ ದಾನಗಳೆಷ್ಟು? ಆ ಕುರಿತಾಗಿ ಗರುಡ ಪುರಾಣದಲ್ಲಿ ಏನು ಹೇಳಿದೆ?
ಈ ಕೃತ್ಯಗಳಿಂದ ನರಕ ಎದುರಿಸಬೇಕಾಗುತ್ತದೆ:
ಯಾವ ರೀತಿಯ ಕಾರ್ಯಗಳು ನರಕಕ್ಕೆ ಕಾರಣವಾಗುತ್ತವೆ ಎಂದು ಗರುಡ ಪುರಾಣದಲ್ಲಿ ಉಲ್ಲೇಖಿಸಲಾಗಿದೆ. ದೇವರು ಮತ್ತು ದೇವತೆಗಳನ್ನು ಅವಮಾನಿಸುವವರು, ಧಾರ್ಮಿಕ ಸ್ಥಳಗಳಲ್ಲಿ ಅನುಚಿತ ಕೆಲಸಗಳನ್ನು ಮಾಡುವವರು ನರಕಕ್ಕೆ ಹೋಗುವುದು ಖಚಿತ ಅಥವಾ ಬದುಕಿನಲ್ಲಿ ಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಅದಲ್ಲದೆ ಗರುಡ ಪುರಾಣದಲ್ಲಿ ವಿವಿಧ ಕಾರ್ಯಗಳಿಗೆ ವಿಭಿನ್ನ ಶಿಕ್ಷೆಗಳನ್ನು ವಿಧಿಸಲಾಗಿದೆ.
ಈ ಲೇಖನದಲ್ಲಿ ಒಳಗೊಂಡಿರುವ ಮಾಹಿತಿಯನ್ನು ಪಂಚಾಂಗಗಳು/ಪ್ರವಚನಗಳು/ನಂಬಿಕೆಗಳು/ಧರ್ಮಗ್ರಂಥಗಳಿಂದ ಸಂಗ್ರಹಿಸಿಲಾಗಿದೆ. ಆದರೆ ಬಳಕೆದಾರರು ಅದನ್ನು ಮಾಹಿತಿಯಾಗಿ ಮಾತ್ರ ತೆಗೆದುಕೊಳ್ಳಬೇಕು.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ