ಕರ್ನಾಟಕ ಅಸೆಂಬ್ಲಿ ಚುನಾವಣೆ ಫಲಿತಾಂಶದ ಬಗ್ಗೆ ಖ್ಯಾತ ಹಿಂದೂ ಧರ್ಮ ವಿಶ್ಲೇಷಕ ದೇವದತ್ತ ಪಟ್ಟನಾಯಿಕ್ ಮಾಡಿರುವ ವ್ಯಾಖ್ಯಾನ ಹೀಗಿದೆ!

ಧಾರ್ಮಿಕ, ಸಾಹಿತ್ಯ ಮತ್ತು ಸಾಂಸ್ಕೃತಿಕ ವಲಯದಲ್ಲಿ ಅಪಾರವಾಗಿ ಗುರುತಿಸಿಕೊಂಡಿರುವ ಮುಂಬೈ ಮೂಲದ ಪುರಾಣಶಾಸ್ತ್ರಜ್ಞ, 52 ವರ್ಷದ ದೇವದತ್ತ ಪಟ್ಟನಾಯಿಕ್ ಅವರು ಕರ್ನಾಟಕ ಅಸೆಂಬ್ಲಿ ಚುನಾವಣೆ ಫಲಿತಾಂಶಕ್ಕೆ ಧಾರ್ಮಿಕ ಟಚ್​ ಕೊಟ್ಟಿದ್ದಾರೆ.

ಕರ್ನಾಟಕ ಅಸೆಂಬ್ಲಿ ಚುನಾವಣೆ ಫಲಿತಾಂಶದ ಬಗ್ಗೆ ಖ್ಯಾತ ಹಿಂದೂ ಧರ್ಮ ವಿಶ್ಲೇಷಕ ದೇವದತ್ತ ಪಟ್ಟನಾಯಿಕ್ ಮಾಡಿರುವ ವ್ಯಾಖ್ಯಾನ ಹೀಗಿದೆ!
ಕರ್ನಾಟಕ ಅಸೆಂಬ್ಲಿ ಫಲಿತಾಂಶದ ಬಗ್ಗೆ ಧಾರ್ಮಿಕ ಚಿಂತಕ ದೇವದತ್ತ ಪಟ್ಟನಾಯಿಕ್ ವ್ಯಾಖ್ಯಾನ ಹೀಗಿದೆ!
Follow us
ಸಾಧು ಶ್ರೀನಾಥ್​
|

Updated on:May 16, 2023 | 2:42 PM

ಬೆಂಗಳೂರು: ದೇವದತ್ತ ಪಟ್ಟನಾಯಿಕ್ (Devdutt Pattanaik)​ ಧಾರ್ಮಿಕ, ಸಾಹಿತ್ಯ ಮತ್ತು ಸಾಂಸ್ಕೃತಿಕ ವಲಯದಲ್ಲಿ ರಾಷ್ಟ್ರಮಟ್ಟದಲ್ಲಿ ಹೆಗ್ಗುರುತಾಗಿ ಕಾಣಬರುವ ವ್ಯಕ್ತಿ. ಹಿಂದೂ ಧರ್ಮ ವಿಶ್ಲೇಷಕ -ಪ್ರಕಾಂಡ ಪಂಡಿತರು. ಕರ್ನಾಟಕದ ಮಟ್ಟಿಗೆ ಅವರು ಸದ್ಯ ಸುದ್ದಿಗೆ ಬಂದಿದ್ದಾರೆ. ಏನಿಲ್ಲಾ ಇತ್ತೀಚೆಗೆ ರಾಜ್ಯದಲ್ಲಿ ಅಸೆಂಬ್ಲಿ ಮಹಾಚುನಾವಣೆ (Karnataka Assembly Election Results) ನಡೆದು ಬಿಜೆಪಿ ಪಕ್ಷ ಹೀನಾಯವಾಗಿ ಸೋತು ಕಾಂಗ್ರೆಸ್​​ ಅಗ್ರ ಪಕ್ಷವಾಗಿ ಹೊರಹೊಮ್ಮಿದೆ. ಇದರ ಸಮ್ಮುಖದಲ್ಲಿ ದೇವದತ್ತ ಪಟ್ಟನಾಯಿಕ್ ಅವರು ಧಾರ್ಮಿಕವಾಗಿ, ಕ್ಲುಪ್ತವಾಗಿ, ಮಾರ್ಮಿಕವಾಗಿ, ನಿಖರವಾಗಿ, ಚಿಕ್ಕದಾಗಿ, ಚೊಕ್ಕದಾಗಿ ವ್ಯಾಖ್ಯಾನಿಸಿದ್ದಾರೆ.

ಕರ್ನಾಟಕ ವಿಧಾನಸಭಾ ಚುನಾವಣೆ ಮಹಾಮಹಿಮ ರಾಜಕೀಯ ನಾಯಕರು ಮಣ್ಣುಮುಕ್ಕಿದ್ದಾರೆ. ಜೊತೆಗೆ ಬಂಡೆ ಕಟ್ಟಿಕೊಂಡು ನೀರಿಗೆ ಧುಮುಕಿದಂತೆ ಬಿಜೆಪಿ ಪಕ್ಷವನ್ನೂ ಮುಳುಗಿಸಿದ್ದಾರೆ. ಜನ ಅಂದರೆ ಮತದಾರ ಮಹಾಪ್ರಭು ಕರಾರುವಕ್ಕಾಗಿ, ಅತಿರಥ ನಾಯಕರು ಮುಟ್ಟಿನೋಡಿಕೊಳ್ಳುವಂತೆ ಕೆಡವಿದ್ದಾನೆ. ಇದೆ ವೇಳೆ ಮತ್ತೊಂದು ಪಕ್ಷದ ನಾಯಕರಿಗೆ ಆಶೀರ್ವಾದವನ್ನೂ ಮಾಡಿದ್ದಾರೆ ಇದೇ ಮತದಾರ ಪ್ರಭುಗಳು. ಇದು ರಾಜ್ಯ ಅಸೆಂಬ್ಲಿ ಚುನಾವಣೆ ಫಲಿತಾಂಶ ನೋಡಿದ ಯಾರೇ ಆಗಲಿ ಮಾಡಿರಬಹುದಾದ ಸಾಮಾನ್ಯ ವಿಶ್ಲೇಷಣೆ.

ಇದನ್ನೂ ಓದಿ: ಬಂಡೆ ಮಾಮ ಸಿಎಂ ನೀವೇ ಆಗಬೇಕು ಎಂದು ಆಶಿಸಿದ ಬೆಂಗಳೂರಿನ ಸಾಮಾನ್ಯ ಗೃಹಿಣಿ, ಅದನ್ನು ಸಾಧಿಸಿಕೊಳ್ಳುವುದು ಹೇಗೆ ಎಂಬ ಕುತೂಹಲಕಾರಿ ಐಡಿಯಾ ಸಹ ಕೊಟ್ಟಿದ್ದಾರೆ! 

ಆದರೆ ಧಾರ್ಮಿಕ, ಸಾಹಿತ್ಯ ಮತ್ತು ಸಾಂಸ್ಕೃತಿಕ ವಲಯದಲ್ಲಿ ಅಪಾರವಾಗಿ ಗುರುತಿಸಿಕೊಂಡಿರುವ ಮುಂಬೈ ಮೂಲದ ಪುರಾಣಶಾಸ್ತ್ರಜ್ಞ, 52 ವರ್ಷದ ದೇವದತ್ತ ಪಟ್ಟನಾಯಿಕ್ ಅವರು ಅದಕ್ಕೆ ಧಾರ್ಮಿಕ ಟಚ್​ ಕೊಟ್ಟಿದ್ದಾರೆ. ಅದೂ ಚುನಾವಣೆಗೆ ಕೆಲವೇ ದಿನಗಳು ಇರುವಾಗ ಭಾರೀ ಚರ್ಚೆಗೆ ಗ್ರಾಸವಾದ ಬಜರಂಗಬಲಿ ವಿಷಯವನ್ನೇ ಇಟ್ಟುಕೊಂಡು ಅದನ್ನು ಚಲಾವಣೆಗೆ ತಂದುಬಿಟ್ಟ ಎರಡೂ ಪಕ್ಷಗಳಿಗೆ ಬಿಸಿಮುಟ್ಟಿಸಿದ್ದಾರೆ. ಅದರಲ್ಲೂ ಆಂಜನೇಯನನ್ನು ಆರಾಧಿಸುವ ಬಿಜೆಪಿ ಪಕ್ಷಕ್ಕೆ ಬಿಸಿಮುಟ್ಟಿಸಿದ್ದಾರೆ. ಕರ್ನಾಟಕದಲ್ಲಿ ಹನುಮಂತ (Anjaneya swamy) ಸದಾ ತನ್ನ ಹಸ್ತವನ್ನು ಭಕ್ತರಿಗೆ ತೋರಿಸುತ್ತಾನೆ. ಹಸ್ತದ ಮೂಲಕ ಆಶಿರ್ವದಿಸುವ ರೀತಿ ಆಂಜನೇಯನ ವಿಗ್ರಹಗಳನ್ನು ಕೆತ್ತಿರುತ್ತಾರೆ. ಫೋಟೊಗಳಲ್ಲಿಯೂ ಹಾಗೆಯೆ ಕಾಣುತ್ತದೆ ಎಂದಿರುವ ಹಿಂದೂ ಧರ್ಮ ವಿಶ್ಲೇಷಕ ದೇವದತ್ತ ಪಟ್ಟನಾಯಿಕ್ ಅದನ್ನು ಅರ್ಥಗರ್ಭಿತವಾಗಿ ವಿಶ್ಲೇಷಿಸಿದ್ದಾರೆ.

ಆಂಜನೇಯ ಸ್ವಾಮಿ ಒಳ್ಳೆಯವರಿಗೆ ಆಶಿರ್ವಾದ ಮಾಡಿದರೆ, ಅದೇ ಕೈಯಿಂದ ಕೆನ್ನೆಗೆ ಬಾರಿಸಿದ್ದಾರೆ. ಅದೇ ಹಸ್ತದಿಂದ ಬೇರೆಯವರಿಗೆ ಬಿಸಿ ಮುಟ್ಟಿಸಿದ್ದಾರೆ ಎಂದಿದ್ದಾರೆ. Hanuman in Karnataka region always shows his PALM to devotees. For good people – blessing For bad people – a slap

ಇನ್ನು ಇದು ಅವರವರ ಅರ್ಥ ವಿವೇಚನೆಗೆ ಬಿಟ್ಟ ವಿಷಯವಾಗಿದೆ.

ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:10 pm, Tue, 16 May 23

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್