Garuda Purana 2023: ಗರುಡ ಪುರಾಣದ ಪ್ರಕಾರ, ಹೀಗೆಲ್ಲ ಮಾಡಿದರೆ ಮನೆಯಲ್ಲಿ ಬಹಳಷ್ಟು ಕಷ್ಟ-ದುಃಖಗಳು ಎದುರಾಗುತ್ತವೆ

ಗರುಡ ಪುರಾಣ: ಮನ- ಮನೆಯಲ್ಲಿ ನಮಗೆ ದುಃಖವನ್ನು ಉಂಟುಮಾಡುವ ಕೆಲವು ಕಾರ್ಯಗಳ ಬಗ್ಗೆ ಗರುಡ ಪುರಾಣದಲ್ಲಿ ಹೇಳಲಾಗಿದೆ. ಜೊತೆಗೆ ಈ ಕೆಲಸಗಳನ್ನು ಮಾಡುವುದರಿಂದ ಮನೆಯಲ್ಲಿ ಬಡತನವು ನೆಲೆಸಲು ಪ್ರಾರಂಭಿಸುತ್ತದೆ ಎಂಬುದೂ ಗಮನಾರ್ಹ. ಆ ಕೆಲಸಗಳು ಯಾವುವು ಬನ್ನೀ ತಿಳಿಯೋಣ.

Garuda Purana 2023: ಗರುಡ ಪುರಾಣದ ಪ್ರಕಾರ, ಹೀಗೆಲ್ಲ ಮಾಡಿದರೆ ಮನೆಯಲ್ಲಿ ಬಹಳಷ್ಟು ಕಷ್ಟ-ದುಃಖಗಳು ಎದುರಾಗುತ್ತವೆ
ಗರುಡ ಪುರಾಣ 2023
Follow us
TV9 Web
| Updated By: ಸಾಧು ಶ್ರೀನಾಥ್​

Updated on:Mar 14, 2023 | 3:22 PM

ಗರುಡ ಪುರಾಣ, ಭಗವಾನ್ ವಿಷ್ಣುವಿನ ನೀತಿಗಳು: ಗರುಡ ಪುರಾಣವು (Garuda Purana) 18 ಮಹಾಪುರಾಣಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟಿರುವ ಹಿಂದೂ ಧರ್ಮದ ಮಹತ್ವದ ಪುಸ್ತಕವಾಗಿದೆ. ಗರುಡ ಪುರಾಣದಲ್ಲಿ ಹೇಳಲಾದ ಜ್ಞಾನ ಮತ್ತು ನೀತಿಗಳನ್ನು ಅನುಸರಿಸುವ ವ್ಯಕ್ತಿಯು ಜೀವನದಲ್ಲಿ ಯಾವುದೇ ಕಷ್ಟವನ್ನು ಎದುರಿಸುವುದಿಲ್ಲ. ಗರುಡ ಪುರಾಣದಲ್ಲಿ, ಭಗವಾನ್ ವಿಷ್ಣುವು (Lord Vishnu) ಯಾವ ಕೆಲಸವು ಕರ್ಮ ಮತ್ತು ಧರ್ಮಕ್ಕೆ ಹೊಂದಿಕೆಯಾಗುತ್ತದೆ ಮತ್ತು ಯಾವುದು ಅಲ್ಲ ಎಂಬುದನ್ನು ವಿವರಿಸಲಾಗಿದೆ. ಧರ್ಮ ಮತ್ತು ಕರ್ಮ, ನೀತಿ ಅನೀತಿಗಳ ಮಧ್ಯೆ ಗರುಡ ಪುರಾಣವು ಯಮಲೋಕದ ಪ್ರಯಾಣ ಮತ್ತು ಮರಣಾನಂತರದ ಸ್ವರ್ಗ-ನರಕದ ಬಗ್ಗೆಯೂ ಸೂಕ್ಷ್ಮವಾಗಿ ಹೇಳಿದೆ. ಗರುಡ ಪುರಾಣದ ಬೋಧನೆಗಳನ್ನು ಅನುಸರಿಸುವ ಮೂಲಕ ಯಾವುದೆ ವ್ಯಕ್ತಿ ತನ್ನ ಸರಿ ಮತ್ತು ತಪ್ಪು ಕ್ರಿಯೆಗಳ ನಡುವಿನ ವ್ಯತ್ಯಾಸವನ್ನು ಕಲಿಯುತ್ತಾರೆ. ಇದರಿಂದ ಜನ ಕರ್ಮ ಧರ್ಮದ ಮಾರ್ಗವನ್ನು ಅನುಸರಿಸಿ ಉತ್ತಮ ಜೀವನವನ್ನು ನಡೆಸಬಹುದು. ಇದರಿಂದ ಒಬ್ಬ ವ್ಯಕ್ತಿಯು ಜೀವನದಲ್ಲಿ ಸಂತೋಷವಾಗಿರುವುದು ಮಾತ್ರವಲ್ಲದೆ ಸಾವಿನ ನಂತರ ಮೋಕ್ಷವನ್ನು (Spiritual) ಪಡೆಯುತ್ತಾನೆ.

ಗರುಡ ಪುರಾಣದಲ್ಲಿ ಇಂತಹ ಕೆಲವು ಕೆಲಸಗಳನ್ನು ಹೇಳಲಾಗಿದೆ. ಅದನ್ನು ಅಪ್ಪಿತಪ್ಪಿಯೂ ಮಾಡಬಾರದು. ಅದರಲ್ಲೂ ಮನೆಯಲ್ಲಿ ಮಹಿಳೆಯರು ಈ ಕೆಲಸವನ್ನು ಮಾಡಲೇಬಾರದು. ಈ ಕೆಲಸಗಳು ಮನೆಯಲ್ಲಿ ದುಃಖ ಮತ್ತು ಬಡತನವನ್ನು ಉಂಟುಮಾಡುತ್ತವೆ. ಆ ಕೆಲಸ ಏನೆಂದು ತಿಳಿಯಿರಿ.

ಅನ್ನದಾನ ಮಾಡದಿರುವುದು: ಅನ್ನದಾನ ಮಾಡುವುದು ಅತ್ಯಂತ ಪುಣ್ಯದ ಕಾರ್ಯ. ಅನ್ನದಾನ ಮಾಡುವುದರಿಂದ ನಿಮಗೆ ಮಾತ್ರವಲ್ಲದೆ ಏಳು ತಲೆಮಾರುಗಳಿಗೂ ಲಾಭವಾಗುತ್ತದೆ. ಅದಕ್ಕಾಗಿಯೇ ನಿಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಆಹಾರವನ್ನು ದಾನ ಮಾಡಿ ಮತ್ತು ಹಸಿದವರಿಗೆ ಮತ್ತು ಅಗತ್ಯವಿರುವವರಿಗೆ ಆಹಾರವನ್ನು ನೀಡಿ.

ಇದನ್ನೂ ಓದಿ:

Spiritual: ಪ್ರೀತಿಯಿಂದ ಶುದ್ಧಭಾವದಿಂದ ಕೆಲಸ ಕಾರ್ಯವನ್ನು ಮಾಡಬೇಕು ಯಾಕೆ? ಭಾವಕ್ಕೆ ತಕ್ಕಂತೆ ಫಲ

ಗಂಡನಿಂದ ದೂರವಿರಬಾರದು: ಹೆಂಡತಿಯು ಗಂಡನ ಉತ್ತಮ ಅರ್ಧ ಭಾಗದವಳಾಗಿದ್ದಾಳೆ. ಅಂದರೆ ನಾವು ನೀವೆಲ್ಲ ಕೇಳಿರುವಂತೆ ಅರ್ಧಾಂಗಿ. ಅಂದ್ರೆ ಗಂಡನ ದೇಹದ ಅರ್ಧ ಭಾಗ ಅವಳೇ ಎಂದರ್ಥ. ಗರುಡ ಪುರಾಣದ ಪ್ರಕಾರ ಯಾವುದೇ ಹೆಂಡತಿ ತನ್ನ ಗಂಡನಿಂದ ದೂರ ಇರಬಾರದು. ಸುಖ ದಾಂಪತ್ಯ ಜೀವನಕ್ಕೆ ಪತಿ-ಪತ್ನಿ ಒಟ್ಟಿಗೆ ಬಾಳುವುದು ಬಹಳ ಮುಖ್ಯ. ಇಬ್ಬರ ನಡುವೆ ಭಿನ್ನಾಭಿಪ್ರಾಯವಿದ್ದರೂ ಪತಿಯಿಂದ ದೂರ ಉಳಿಯಬೇಡಿ. ಪತಿ-ಪತ್ನಿಯಿಂದ ದೀರ್ಘ ಕಾಲ ದೂರ ಉಳಿಯುವುದರಿಂದ ಸಂಬಂಧದಲ್ಲಿ ಬಿರುಕು ಉಂಟಾಗಿ ಕೌಟುಂಬಿಕ ಸಮಸ್ಯೆಗಳು ಹೆಚ್ಚಾಗುತ್ತವೆ.

ಯಾರನ್ನೂ ಅವಮಾನಿಸಬೇಡಿ: ಯಾರನ್ನೂ ಅವಮಾನಿಸಬೇಡಿ. ನಿಮ್ಮ ಬಾಯಿಂದ ಅಂತಹ ಕಟುವಾದ ಮಾತುಗಳನ್ನು ಮಾತನಾಡಬೇಡಿ. ಅದಕ್ಕಾಗಿ ನಿಮಗಿಂತ ಚಿಕ್ಕವರು ಅಥವಾ ಹಿರಿಯರು, ಎಲ್ಲರೊಂದಿಗೆ ಸೌಜನ್ಯದಿಂದ ಮಾತನಾಡಿ ಮತ್ತು ತಪ್ಪು ಪದಗಳನ್ನು ಬಳಸಬೇಡಿ.

ಇನ್ನಷ್ಟು ಅಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 3:17 pm, Tue, 14 March 23

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ