ಊಟ ಮುಗಿಸಿದ ತಕ್ಷಣ ನೀರು ಕುಡಿಯುವ ಅಭ್ಯಾಸ ಇದೆಯೇ? ಹಾಗಿದ್ದರೆ ಅದನ್ನು ಇಂದೇ ಬಿಟ್ಟು ಬಿಡಿ

| Updated By: Skanda

Updated on: Jul 24, 2021 | 6:50 AM

ಊಟದ ನಂತರ ತಕ್ಷಣವೇ ನೀರು ಕುಡಿದಾಗ ಅದು ಜೀರ್ಣ ಕ್ರಿಯೆಗೆ ತಡೆಯೊಡ್ಡಿ, ದೇಹಕ್ಕೆ ಅದರಿಂದ ದೊರಕಬೇಕಾದ ಶಕ್ತಿ ಸಿಗದಂತೆ ಮಾಡುತ್ತದೆ. ಹಾಗಾದಾಗ ಕೆಲವೊಮ್ಮೆ ಜೀರ್ಣವಾಗದೇ ಉಳಿದ ಆಹಾರ ಹೊಟ್ಟೆಯಲ್ಲೇ ಉಳಿದು ಆರೋಗ್ಯಕ್ಕೆ ತೊಂದರೆ ಮಾಡುವ ಸಾಧ್ಯತೆ ಇರುತ್ತದೆ.

ಊಟ ಮುಗಿಸಿದ ತಕ್ಷಣ ನೀರು ಕುಡಿಯುವ ಅಭ್ಯಾಸ ಇದೆಯೇ? ಹಾಗಿದ್ದರೆ ಅದನ್ನು ಇಂದೇ ಬಿಟ್ಟು ಬಿಡಿ
ಚಾಣಕ್ಯ ನೀತಿ
Follow us on

ನೀರನ್ನು ಜೀವಜಲ ಎಂದೇ ಕರೆಯುತ್ತೇವೆ. ಆಹಾರವಿಲ್ಲದೇ ಮನುಷ್ಯ ಕೆಲ ದಿನಗಳನ್ನು ಕಳೆಯಬಲ್ಲನಾದರೂ ಪ್ರಾಣವಾಯು ಹಾಗೂ ಜೀವಜಲದ ಸಹಾಯವಿಲ್ಲದೇ ದಿನದೂಡುವುದು ಕಷ್ಟ. ಹೀಗಾಗಿ ನೀರು ನಮ್ಮ ಪಾಲಿಗೆ ಬಾಯಾರಿಕೆ ನೀಗಿಸುವುದಷ್ಟೇ ಅಲ್ಲದೇ ಜೀವ ರಕ್ಷಿಸುವ ಪದಾರ್ಥವೂ ಆಗಿದೆ. ಪ್ರತಿನಿತ್ಯವೂ ನಿಯಮಿತವಾಗಿ ಶುದ್ಧ ನೀರು (Pure Water) ಸೇವಿಸುವುದರಿಂದ ನಮ್ಮ ದೇಹ ಸಮತೋಲನ ಕಾಪಾಡಿಕೊಳ್ಳುವುದು ಸುಲಭವಾಗುತ್ತದೆ. ದೇಹದೊಳಗಿನ ಕಲ್ಮಶಗಳನ್ನು ಹೊರ ನೂಕುವುದಕ್ಕೂ ಸಹಕರಿಸುವ ನೀರು ನಮ್ಮನ್ನು ರೋಗಮುಕ್ತವಾಗಿರಿಸಲು (Healthy) ಸಹಾಯ ಮಾಡುತ್ತದೆ. ಆದರೆ, ಇಷ್ಟೆಲ್ಲಾ ವಿಶೇಷತೆಗಳನ್ನೊಳಗೊಂಡ ಜೀವಜಲವೇ ಕೆಲವು ಸನ್ನಿವೇಶಗಳಲ್ಲಿ ಪ್ರಾಣ ಕಂಟಕವಾಗಿ ಕಾಡಬಹುದೆಂದು ಆಚಾರ್ಯ ಚಾಣಕ್ಯರು (Acharya Chanakya) ಎಚ್ಚರಿಸಿದ್ದಾರೆ. ಬದುಕಿನ ಅನುಭವಗಳ ಮೂಲಕವೇ ರಾಜಕೀಯ, ಧಾರ್ಮಿಕ, ಸಾಮಾಜಿಕ, ನೈತಿಕ ಪ್ರಜ್ಞೆಯನ್ನು ಬಿತ್ತಿರುವ ಕೌಟಿಲ್ಯರು ಆರೋಗ್ಯದ (Health) ಬಗ್ಗೆಯೂ ಸಾಕಷ್ಟು ಅರ್ಥಪೂರ್ಣ ಮಾಹಿತಿಗಳನ್ನು ದಾಖಲಿಸಿದ್ದು, ಅದರಲ್ಲಿ ನೀರಿನ ಸೇವನೆ ಯಾವೆಲ್ಲಾ ಸಂದರ್ಭದಲ್ಲಿ ಉತ್ತಮವಲ್ಲ ಎನ್ನುವುದನ್ನು ಹೇಳಿದ್ದಾರೆ.

ಆಚಾರ್ಯ ಚಾಣಕ್ಯರು ಹೇಳುವಂತೆ ಯಾವತ್ತಿಗೂ ಊಟವಾದ ತಕ್ಷಣವೇ ನೀರು ಕುಡಿಯಬಾರದಂತೆ. ಕೆಲವರು ಊಟಕ್ಕೆ ಕುಳಿತಾಗ, ಊಟವಾದ ಮರುಕ್ಷಣ ಅತ್ಯಧಿಕ ಪ್ರಮಾಣದಲ್ಲಿ ನೀರು ಸೇವಿಸಿ ಸುಧಾರಿಸಿಕೊಳ್ಳುತ್ತಾರೆ. ಆದರೆ, ಅದು ದೇಹಕ್ಕೆ ಬಲು ಅಪಾಯಕಾರಿ ಎನ್ನುವುದು ಚಾಣಕ್ಯರ ಮಾತು. ಏಕೆಂದರೆ, ಊಟವಾದ ತಕ್ಷಣ ನೀರು ಕುಡಿದರೆ ಅದು ಜೀರ್ಣಕ್ರಿಯೆಯನ್ನು ನಿಧಾನಗೊಳಿಸುವುದಲ್ಲದೇ ಸಾಕಷ್ಟು ಅಡ್ಡಪರಿಣಾಮಗಳನ್ನೂ ಉಂಟುಮಾಡುತ್ತದೆಯಂತೆ.

ಊಟದ ನಂತರ ತಕ್ಷಣವೇ ನೀರು ಕುಡಿದಾಗ ಅದು ಜೀರ್ಣ ಕ್ರಿಯೆಗೆ ತಡೆಯೊಡ್ಡಿ, ದೇಹಕ್ಕೆ ಅದರಿಂದ ದೊರಕಬೇಕಾದ ಶಕ್ತಿ ಸಿಗದಂತೆ ಮಾಡುತ್ತದೆ. ಹಾಗಾದಾಗ ಕೆಲವೊಮ್ಮೆ ಜೀರ್ಣವಾಗದೇ ಉಳಿದ ಆಹಾರ ಹೊಟ್ಟೆಯಲ್ಲೇ ಉಳಿದು ಆರೋಗ್ಯಕ್ಕೆ ತೊಂದರೆ ಮಾಡುವ ಸಾಧ್ಯತೆ ಇರುತ್ತದೆ. ಆಹಾರ ಹೊಟ್ಟೆಯೊಳಗೇ ತ್ಯಾಜ್ಯದಂತೆ ಪರಿವರ್ತನೆ ಹೊಂದಿದಾಗ ಅದು ಒಂದಷ್ಟು ಅನಿಲಗಳನ್ನು ಉತ್ಪಾದಿಸಿ ಅಜೀರ್ಣಕ್ಕೆ ಹಾದಿಯಾಗುತ್ತದೆ.

ಅದರಿಂದಾಗಿ ಎದೆಯುರಿ, ಹೊಟ್ಟೆಯುರಿ ಸೇರಿದಂತೆ ಉದರಕ್ಕೆ ಸಂಬಂಧಿಸಿದ ಅನೇಕ ಸಮಸ್ಯೆಗಳು ಹುಟ್ಟಿಕೊಂಡು ನಮ್ಮನ್ನು ಕಾಡಲಾರಂಭಿಸುತ್ತವೆ. ಯಾವಾಗ ಒಬ್ಬ ವ್ಯಕ್ತಿಗೆ ಹೊಟ್ಟೆಯಲ್ಲೇ ಸಮಸ್ಯೆ ಶುರುವಾಗುತ್ತದೋ ಆಗ ಇಡೀ ದೇಹವೂ ಅಸಮತೋಲನಗೊಂಡು ಬೇರೆ ಬೇರೆ ಕಾಯಿಲೆಗಳು ಹುಟ್ಟಿಕೊಳ್ಳುತ್ತವೆ. ಹೀಗಾಗಿ ಯಾವುದೇ ಕಾರಣಕ್ಕೂ ಊಟವಾದ ತಕ್ಷಣ ನೀರು ಕುಡಿಯಲೇಬಾರದು ಎಂದು ಆಚಾರ್ಯ ಚಾಣಕ್ಯ ಎಚ್ಚರಿಸುತ್ತಾರೆ.

ಯಾವಾಗ ನೀರು ಕುಡಿಯುವುದು ಉತ್ತಮ?
ಊಟ ಮುಗಿಸಿದ ನಂತರ ಜೀರ್ಣಕ್ರಿಯೆಗೆ ಕೊಂಚ ಅನುವು ಮಾಡಿಕೊಟ್ಟು ನೀರು ಸೇವಿಸುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು. ಅಂದರೆ, ಊಟವಾದ ಸುಮಾರು 45 ನಿಮಿಷಗಳ ನೀರು ಸೇವಿಸಬೇಕು. ಆಗ ಅದು ಜೀರ್ಣಕ್ರಿಯೆಗೂ ಸಹಕಾರಿ ಮಾಡುವುದಲ್ಲದೇ ಶಕ್ತಿ ವರ್ಧಕವಾಗಿ ಕೆಲಸ ಮಾಡುತ್ತದೆ ಹಾಗೂ ಉದರ ಸಂಬಂಧಿ ಸಮಸ್ಯೆಗಳ ನಿವಾರಣೆಗೂ ಸಹಾಯ ಮಾಡುತ್ತದೆ.

ಇದನ್ನೂ ಓದಿ:
Chanakya Niti: ಈ ಮೂರು ವಿಚಾರಗಳನ್ನು ಪಾಲಿಸುವವರ ಮನೆಯಲ್ಲಿ ಲಕ್ಷ್ಮಿ ಸದಾ ನೆಲೆಸುತ್ತಾಳೆ; ಚಾಣಕ್ಯ ನೀತಿ 

Chanakya Niti: ಈ 4 ಅಂಶಗಳನ್ನು ಪಾಲಿಸಿದರೆ ಗೆಲುವು ನಿಮ್ಮ ಬಳಿ ಇರುತ್ತದೆ; ಚಾಣಕ್ಯ ನೀತಿ

(Chanakya Niti Drinking water immediately after lunch will become Poison according to Acharya Chanakya)