Chanakya Niti: ಈ ನಾಲ್ಕು ವಿಷಯಗಳಲ್ಲಿ ಮಹಿಳೆಯರು ಪುರುಷರಿಗಿಂತ ಹೆಚ್ಚು ಬಲಶಾಲಿಗಳು!

| Updated By: ಸಾಧು ಶ್ರೀನಾಥ್​

Updated on: Oct 13, 2021 | 8:05 AM

ಆಚಾರ್ಯ ಚಾಣಕ್ಯ ತನ್ನ ಚಾಣಕ್ಯ ನೀತಿ ಗ್ರಂಥದಲ್ಲಿ ಬರೆದಿರುವುದನ್ನು ನಾವು ಅನುಸರಿಸಿದರೆ ಒಳ್ಳೆಯ ಜೀವನ ಮಾರ್ಗದರ್ಶನ ಲಭಿಸುತ್ತೆ. ಚಾಣಕ್ಯನ ಜೀವನ ತ್ಯಾಗ, ತೇಜಸ್ಸುಮಯ, ದೃಢತೆ ಮತ್ತು ಪುರುಷಾರ್ಥದ ಪ್ರತೀಕವಾಗಿದೆ. ಇಂತಹ ಆಚಾರ್ಯ ಚಾಣಕ್ಯರು ಪುರುಷರಿಗಿಂತ ಮಹಿಳೆಯರು ಯಾವ ಯಾವ ವಿಷಯಗಳಲ್ಲಿ ಮುಂದಿರುತ್ತಾರೆ, ಶಕ್ತಿಶಾಲಿಗಳಾಗಿರುತ್ತಾರೆ ಎಂಬುದರ ವಿವರಣೆ ಕೊಟ್ಟಿದಾರೆ.

Chanakya Niti: ಈ ನಾಲ್ಕು ವಿಷಯಗಳಲ್ಲಿ ಮಹಿಳೆಯರು ಪುರುಷರಿಗಿಂತ ಹೆಚ್ಚು ಬಲಶಾಲಿಗಳು!
ಈ ನಾಲ್ಕು ವಿಷಯಗಳಲ್ಲಿ ಮಹಿಳೆಯರು ಪುರುಷರಗಿಂತ ಹೆಚ್ಚು ಬಲಶಾಲಿಗಳು!
Follow us on

ಚಾಣಕ್ಯನ ನೀತಿ (Chanakya Niti). ಆಚಾರ್ಯ ಚಾಣಕ್ಯ ತನ್ನ ಜೀವನದುದ್ದಕ್ಕೂ ಅನೇಕ ಸಂಘರ್ಷಗಳನ್ನು ಎದುರಿಸಿದ. ಚಾಣಕ್ಯ ಎಂದಿಗೂ, ಎಂಥದ್ದೇ ಪರಿಸ್ಥಿತಿಯಲ್ಲೂ ಧೃತಿಗೆಡಲಿಲ್ಲ, ಅಧೀರನಾಗಲಿಲ್ಲ; ಬದಲಿಗೆ ಎಂಥದ್ದೆ ಪರಿಸ್ಥಿತಿಯನ್ನು ಧೈರ್ಯವಾಗಿ ಎದುರಿಸುತ್ತಾ ಬಲಾಢ್ಯನಾದ. ಅಂತಹ ದುರ್ಭರ ಪರಿಸ್ಥಿತಿಗಳು ಜೀವನದ ಪಾಠಗಳನ್ನು ಉಣಬಡಿಸಿದವು. ಅವೇ ಮುಂದೆ ಚಾಣಕ್ಯನ ನೀತಿಗಳಾಗಿ ಇತರರಿಗೂ ದಾರಿದೀಪವಾದವು.

ಆಚಾರ್ಯ ಚಾಣಕ್ಯ ಹೇಳುವಂತೆ ಕೆಲವು ವಿಷಯಗಳಲ್ಲಿ ಮಹಿಳೆಯರು ಪುರುಷರಗಿಂತ ಹೆಚ್ಚು ಶಕ್ತಿಶಾಲಿಗಳು! ಚಾಣಕ್ಯನ ಪ್ರಕಾರ ಮಹಿಳೆಯರು ಪುರುಷರಿಗಿಂತ ಹೆಚ್ಚು ಸಾಹಸಿಗಳು ಮತ್ತು ಬುದ್ಧಿವಂತರು. ಆಚಾರ್ಯ ಚಾಣಕ್ಯ ತನ್ನ ಚಾಣಕ್ಯ ನೀತಿ ಗ್ರಂಥದಲ್ಲಿ ಬರೆದಿರುವುದನ್ನು ನಾವು ಅನುಸರಿಸಿದರೆ ಒಳ್ಳೆಯ ಜೀವನ ಮಾರ್ಗದರ್ಶನ ಲಭಿಸುತ್ತೆ. ಚಾಣಕ್ಯನ ಜೀವನ ತ್ಯಾಗ, ತೇಜಸ್ಸುಮಯ, ದೃಢತೆ ಮತ್ತು ಪುರುಷಾರ್ಥದ ಪ್ರತೀಕವಾಗಿದೆ. ತಕ್ಷಶಿಲೆಯಲ್ಲಿ ಆಚಾರ್ಯ ಚಾಣಕ್ಯ ಅನೇಕ ವರ್ಷಗಳ ಕಾಲ ಮಕ್ಕಳಿಗೆ ಪಾಠ ಹೇಳಿಕೊಡುತ್ತಿದ್ದರು. ಇಂತಹ ಆಚಾರ್ಯ ಚಾಣಕ್ಯರು ಪುರುಷರಿಗಿಂತ ಮಹಿಳೆಯರು ಯಾವ ಯಾವ ವಿಷಯಗಳಲ್ಲಿ ಮುಂದಿರುತ್ತಾರೆ, ಶಕ್ತಿಶಾಲಿಗಳಾಗಿರುತ್ತಾರೆ ಎಂಬುದರ ವಿವರಣೆ ಕೊಟ್ಟಿದಾರೆ.

1. ಆಚಾರ್ಯ ಚಾಣಕ್ಯ ಪ್ರಕಾರ ಪುರುಷರಿಗಿಂತ ಮಹಿಳೆಯರು ಹೆಚ್ಚು ಆಹಾರ ತಿನ್ನುತ್ತಾರೆ. ಸ್ರ್ತೀಣಾ ದಿಗ್ಗುಣ ಆಹಾರೋ – ಎಂದು ಚಾಣಕ್ಯ ಬರೆದಿದ್ದಾರೆ. ಅದರರ್ಥ ಹೀಗಿದೆ: ಪುರುಷರಿಗಿಂತ ಮಹಿಳೆಯರಿಗೆ ದುಪ್ಪಟ್ಟು ಹಸಿವು ಹೆಚ್ಚಿರುತ್ತದೆ. ಏಕೆಂದರೆ ಮಹಿಳೆಯರು ಪುರುಷರಿಗಿಂತ ಹೆಚ್ಚು ಕೆಲಸ ಮಾಡಬೇಕಾಗುತ್ತದೆ.

2. ಚಾಣಕ್ಯ ಪ್ರಕಾರ ಮಹಿಳೆಯರು ಪುರುಷರಿಗಿಂತ ಹೆಚ್ಚು ಬುದ್ಧಿವಂತರು. ಅವರು ಪುರುಷರಿಗಿಂತ ಅನೇಕ ಅರ್ಥಗಳಲ್ಲಿ ತಮ್ಮ ಬುದ್ಧಿಮತ್ತೆಯನ್ನು ಹೆಚ್ಚು ಹೆಚ್ಚು ಉಪಯೋಗಿಸುತ್ತಾರೆ. ಮಹಿಳೆಯರು ಪುರುಷರಿಗಿಂತ ಹೆಚ್ಚು ಚತುರರು ಮತ್ತು ಬುದ್ಧಿವಂತರೂ ಆಗಿರುತ್ತಾರೆ. ಸಂಕಷ್ಟಗಳು ಬಂದಾಗ ಮಹಿಳೆಯರು ಅಧೀರರಾಗುವುದಿಲ್ಲ. ದೃಢವಾಗಿ ನಿಂತು ಪರಿಸ್ಥಿತಿಗಳನ್ನು ಎದುರಿಸುತ್ತಾರೆ.

3. ಚಾಣಕ್ಯನ ಅನುಸಾರ ಮಹಿಳೆಯರು ಪುರುಷರಿಗಿಂತ ಎಂಟು ಪಟ್ಟು ಹೆಚ್ಚು ಕಾಮುಕರಾಗಿರುತ್ತಾರೆ. ವಾಸ್ತವವಾಗಿ ಮಹಿಳೆಯರು ಬಾಹ್ಯವಾಗಿ ಕಾಮುಕ ಶಕ್ತಿಯನ್ನು ಹೆಚ್ಚು ಪ್ರಕಟಪಡಿಸುತ್ತಾರೆ. ಹಾಗಾಗಿ ಪುರುಷರಿಗಿಂತ ಮಹಿಳೆಯರು ಹೆಚ್ಚು ಕಾಮುಕರು ಎಂಬರ್ಥದಲ್ಲಿ ಆಚಾರ್ಯ ಚಾಣಕ್ಯ ತನ್ನ ನೀತಿಯಲ್ಲಿ ಹೇಳಿದ್ದಾರೆ.

4. ಚಾಣಕ್ಯ ನೀತಿಯ ಪ್ರಕಾರ ಮಹಿಳೆಯರು ಪುರುಷರಿಗಿಂತ ಹೆಚ್ಚು ಸಾಹಸಶೀಲರಾಗಿರುತ್ತಾರೆ. ಚಾಣಕ್ಯ ಹೇಳಿರುವಂತೆ ಸಾಹಸಂ ಷಟ್ಗುಣ. ಈ ಶ್ಲೋಕದ ಅರ್ಥ ಏನೆಂದರೆ ಮಹಿಳೆಯರು ಪುರುಷರಿಗಿಂತ ಆರು ಪಟ್ಟು ಹೆಚ್ಚು ಸಾಹಸಿಗಳು. ಅವರು ಪುರುಷರ ಎದುರು ಅನೇಕ ವಿಷಯಗಳಲ್ಲಿ ತುಂಬಾ ಮುಂದಿರುತ್ತಾರೆ.