Chanakya Niti: ಈ 4 ಜನರೊಂದಿಗೆ ಎಂದಿಗೂ ಸ್ನೇಹ ಬೆಳೆಸಬೇಡಿ

| Updated By: ಅಕ್ಷಯ್​ ಪಲ್ಲಮಜಲು​​

Updated on: May 02, 2024 | 4:38 PM

ಜೀವನದಲ್ಲಿ ಯಾವ ರೀತಿಯ ಜನರಿಂದ ದೂರವಿರಬೇಕು? ಯಾರೊಂದಿಗೆ ಸ್ನೇಹ ಬೆಳೆಸಬೇಕು? ಆಚಾರ್ಯ ಚಾಣಕ್ಯರು ಈ ಬಗ್ಗೆ ಜನರಿಗೆ ಕೆಲವು ಮಾರ್ಗದರ್ಶನಗಳನ್ನು ನೀಡಿದ್ದಾರೆ. ಇದನ್ನು ಸರಿಯಾಗಿ ಪಾಲನೆ ಮಾಡಿದರೆ ಸುಲಭವಾಗಿ ಜೀವನ ಸಾಗಿಸಬಹುದು. ಜೊತೆಗೆ ಒಳ್ಳೆಯ ವ್ಯಕ್ತಿಯ ಜೊತೆ ಸ್ನೇಹ ಬೆಳೆಸಬಹುದು.

Chanakya Niti: ಈ 4 ಜನರೊಂದಿಗೆ ಎಂದಿಗೂ ಸ್ನೇಹ ಬೆಳೆಸಬೇಡಿ
Follow us on

ಜಗತ್ತು ವಿಶಾಲವಾಗಿದೆ, ಅನೇಕ ರೀತಿಯ ಜನರನ್ನು ನಾವಿಲ್ಲಿ ಭೇಟಿಯಾಗುತ್ತೇವೆ. ಕೆಲವೊಮ್ಮೆ ಅವರು ತುಂಬಾ ಆಪ್ತರಾಗುತ್ತಾರೆ, ಇನ್ನು ಕೆಲವೊಮ್ಮೆ ಶತ್ರುಗಳಾಗುತ್ತಾರೆ. ಯಾರೋ ತಿಳಿಯದವರು ನಿಮ್ಮ ಸಹಾಯಕ್ಕೆ ಬರುತ್ತಾರೆ. ಇನ್ನಾರೋ ಮೋಸ ಮಾಡಿ ಹೋಗುತ್ತಾರೆ. ಹಾಗಾದರೆ ನೀವು ಜೀವನದಲ್ಲಿ ಯಾವ ರೀತಿಯ ಜನರಿಂದ ದೂರವಿರಬೇಕು? ಯಾರೊಂದಿಗೆ ಸ್ನೇಹ ಬೆಳೆಸಬೇಕು? ಆಚಾರ್ಯ ಚಾಣಕ್ಯರು ಈ ಬಗ್ಗೆ ಜನರಿಗೆ ಕೆಲವು ಮಾರ್ಗದರ್ಶನಗಳನ್ನು ನೀಡಿದ್ದಾರೆ. ಇದನ್ನು ಸರಿಯಾಗಿ ಪಾಲನೆ ಮಾಡಿದರೆ ಸುಲಭವಾಗಿ ಜೀವನ ಸಾಗಿಸಬಹುದು. ಜೊತೆಗೆ ಒಳ್ಳೆಯ ವ್ಯಕ್ತಿಯ ಜೊತೆ ಸ್ನೇಹ ಬೆಳೆಸಬಹುದು.

ಮೂರ್ಖರನ್ನು ನಿಮ್ಮ ಸ್ನೇಹಿತರನ್ನಾಗಿ ಮಾಡಿಕೊಳ್ಳಬೇಡಿ

ಆಚಾರ್ಯ ಚಾಣಕ್ಯರು ಮೂರ್ಖ ವ್ಯಕ್ತಿಗಳು ಪ್ರಾಣಿಗೆ ಸಮಾನ ಎಂದು ವರ್ಣಿಸಿದ್ದಾರೆ. ಅವನು ಮನುಷ್ಯನಾಗಿದ್ದರೂ ಕೂಡ ಬುದ್ಧಿವಂತಿಕೆ ಮತ್ತು ವಿವೇಚನೆ ಇಲ್ಲದವನು ಪ್ರಾಣಿಯಂತೆ. ಆದ್ದರಿಂದ ಅವರ ಸಹವಾಸ ಮಾಡಬಾರದು. ತಪ್ಪಿ ಮಾಡಿದಲ್ಲಿ ವ್ಯಕ್ತಿಯು ಯಾವಾಗಲೂ ತೊಂದರೆಗಳನ್ನು ಎದುರಿಸುತ್ತಾನೆ. ಆದ್ದರಿಂದ ಬುದ್ಧಿವಂತ ಶತ್ರುವಿದ್ದರೂ ಪರವಾಗಿಲ್ಲ ಆದರೆ ಮೂರ್ಖ ಸ್ನೇಹಿತ ಇರಬಾರದು ಎಂದಿದ್ದಾರೆ.

ದುರಹಂಕಾರಿ ವ್ಯಕ್ತಿಗಳ ಸ್ನೇಹಿತರಾಗಬೇಡಿ

ಚಾಣಕ್ಯನು ಹೇಳುವಂತೆ, ಅಹಂಕಾರ ಸ್ವಭಾವ ಹೊಂದಿರುವ ಮತ್ತು ತನ್ನನ್ನು ಅತ್ಯಂತ ಜ್ಞಾನಿ ಎಂದು ತಿಳಿದಿರುವ ವ್ಯಕ್ತಿಯ ಜೊತೆಗೆ ಎಂದಿಗೂ ಸ್ನೇಹ ಬೆಳೆಸಬೇಡಿ. ತಮ್ಮನ್ನು ತಾವು ದೊಡ್ಡವರು ಎಂದು ತಿಳಿದುಕೊಂಡವರು ನಿಮ್ಮ ವ್ಯಕ್ತಿತ್ವವನ್ನು ಹಾಳುಮಾಡಬಹುದು, ಸಮಾಜದಲ್ಲಿ ನೀವು ಅವಮಾನ ಎದುರಿಸುವಂತೆ ಆಗಬಹುದು. ಆದ್ದರಿಂದ, ಸಂಪತ್ತು ಅಥವಾ ಜ್ಞಾನದ ಬಗ್ಗೆ ಗೌರವ ಇಲ್ಲದವರೊಂದಿಗೆ ಸ್ನೇಹ ಬೆಳೆಸಬೇಡಿ. ಅವರು ಯಾವುದೇ ಸಂದರ್ಭದಲ್ಲೂ ನಿಮ್ಮನ್ನು ಬಿಟ್ಟು ಹೋಗಬಹುದು.

ಇದನ್ನೂ ಓದಿ: ಸೂರ್ಯಾಸ್ತದ ಸಮಯದಲ್ಲಿ ಈ ಕೆಲಸಗಳನ್ನು ಮಾಡಬೇಡಿ

ದುರಾಸೆಯ ಜನರಿಂದ ದೂರವಿರಿ

ಜೀವನದಲ್ಲಿ ದುರಾಸೆಯ ಜನರನ್ನು ಎಂದಿಗೂ ಹತ್ತಿರವೂ ಸೇರಿಸಬಾರದು. ನಿಮ್ಮಂತೆಯೇ ಇರುವ ಜನರೊಂದಿಗೆ ಯಾವಾಗಲೂ ಸ್ನೇಹ ಬೆಳೆಸಿ. ದುರಾಸೆ ಇರುವ ವ್ಯಕ್ತಿ ತನ್ನ ಸ್ವಂತ ಲಾಭಕ್ಕಾಗಿ ಯಾವುದೇ ಸಮಯದಲ್ಲಿ ನಿಮ್ಮನ್ನು ಬಿಟ್ಟು ಹೋಗಬಹುದು ಅಥವಾ ನಿಮ್ಮ ಎದುರಾಳಿಯ ಜೊತೆ ಸ್ನೇಹ ಬೆಳೆಸುವ ಮೂಲಕ ನಿಮಗೆ ಹಾನಿ ಮಾಡಬಹುದು. ಆದ್ದರಿಂದ, ಜೀವನದಲ್ಲಿ ಅಲ್ಪ ತೃಪ್ತರಾಗಿರುವವರ ಜೊತೆ ಮಾತ್ರ ಆಪ್ತರಾಗಿ, ಯಾರನ್ನೂ ಕುರುಡಾಗಿ ನಂಬಬೇಡಿ.

ದುಷ್ಟ ವ್ಯಕ್ತಿಯ ಜೊತೆ ಸ್ನೇಹ ಮಾಡಬೇಡಿ

ಆಚಾರ್ಯ ಚಾಣಕ್ಯರು ಹೇಳಿರುವ ಪ್ರಕಾರ ದುಷ್ಟ ವ್ಯಕ್ತಿಯ ಜೊತೆ ಎಂದಿಗೂ ಸ್ನೇಹ ಇಟ್ಟುಕೊಳ್ಳಬೇಡಿ. ಇಂತಹ ಜನರು ಹಾವುಗಳಿಗಿಂತ ಹೆಚ್ಚು ಅಪಾಯಕಾರಿಯಾಗಿರುತ್ತಾರೆ. ಹಾಗಾಗಿ ಯಾವಾಗಲೂ ಒಳ್ಳೆಯ ಮತ್ತು ಸುಸಂಸ್ಕೃತ ಜನರೊಂದಿಗೆ ಮಾತ್ರ ಸ್ನೇಹ ಬೆಳೆಸಿಕೊಳ್ಳಿ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ