ಮನೆಯ ಬಾಗಿಲುಗಳನ್ನು ಸಿಂಗರಿಸಲು ಅನೇಕ ರೀತಿಯ ಅಲಂಕಾರಗಳನ್ನು ಮಾಡುತ್ತಾರೆ. ಕೆಲವರು ತಮ್ಮ ಮನೆಯ ದ್ವಾರದ ಮೇಲೆ ದೇವರ ಫೋಟೋವನ್ನು ನೇತು ಹಾಕುತ್ತಾರೆ. ನೀವು ಕೂಡ ಮನೆ ಬಾಗಿಲಿನಲ್ಲಿ ದೇವರ ಫೋಟೋ ಇಟ್ಟಿದ್ದರೆ ಕೆಲವು ಪ್ರಮುಖ ವಿಷಯಗಳನ್ನು ತಿಳಿದುಕೊಳ್ಳಬೇಕು. ದೇವರ ಫೋಟೋವನ್ನು ಮನೆಯ ಬಾಗಿಲಿನ ಮೇಲೆ ಇಡಬೇಕೇ ಅಥವಾ ಬೇಡವೇ ಮತ್ತು ಅದನ್ನು ಇರಿಸಿದರೆ ಯಾವ ನಿಯಮಗಳನ್ನು ಅನುಸರಿಸಬೇಕು ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ.
ವಾಸ್ತು ಶಾಸ್ತ್ರದ ಪ್ರಕಾರ ದೇವರ ಚಿತ್ರವನ್ನು ಮನೆಯ ಬಾಗಿಲುಗಳ ಮೇಲೆ, ವಿಶೇಷವಾಗಿ ಮುಖ್ಯ ದ್ವಾರದ ಮೇಲೆ ಇಡಬಾರದು ಎಂದು ಹೇಳಲಾಗುತ್ತದೆ. ಏಕೆಂದರೆ ದೇವರು ನಿಮ್ಮ ದ್ವಾರಪಾಲಕನಲ್ಲ. ನೀವು ಮನೆಯ ಮುಖ್ಯ ದ್ವಾರದಲ್ಲಿ ಅಥವಾ ಬೇರೆ ಯಾವುದೇ ಬಾಗಿಲಿನ ಮೇಲೆ ದೇವರ ಚಿತ್ರವನ್ನು ನೇತುಹಾಕಲು ಅಥವಾ ಇಡಲು ಬಯಸಿದಲ್ಲಿ, ಕೆಲವು ವಿಶೇಷ ನಿಯಮಗಳನ್ನು ಅನುಸರಿಸುವ ಮೂಲಕ ಗಣೇಶ, ಹನುಮಂತ ಮತ್ತು ಮಾತೆ ಲಕ್ಷ್ಮೀಯ ಫೋಟೋಗಳನ್ನು ಇಡಬಹುದು ಎಂದು ಕೆಲವು ವಾಸ್ತು ತಜ್ಞರು ಹೇಳುತ್ತಾರೆ. ಆದರೆ ದೇವರ ಫೋಟೋದ ಗಾತ್ರವು ದೊಡ್ಡದಾಗಿರಬೇಕು ಮತ್ತು ಈ ಫೋಟೋವನ್ನು ಗಾಜಿನ ಚೌಕಟ್ಟಿನಲ್ಲಿನಲ್ಲಿಯೇ ಇಡಬೇಕು ಎಂಬುದನ್ನು ನೆನಪಿನಲ್ಲಿಡಿ.
ಜೊತೆಗೆ ದೇವರ ಚಿತ್ರವಿರುವ ದ್ವಾರದ ಮೇಲೆ ಯಾವಾಗಲೂ ಬೆಳಕು ಬರುವಂತಿರಬೇಕು. ನೀವು ಮನೆಯಲ್ಲಿ ಇಲ್ಲದಿದ್ದರೂ ಸಹ ಆ ಸ್ಥಳಕ್ಕೆ ಬೆಳಕು ಬರಬೇಕು. ಪ್ರತಿದಿನ ದೇವರ ಚಿತ್ರವನ್ನು ಸ್ವಚ್ಛಗೊಳಿಸಬೇಕು. ಸಾಧ್ಯವಾದರೆ, ಪ್ರತಿದಿನ ಚಿತ್ರದ ಮುಂದೆ ದೀಪವನ್ನು ಹಚ್ಚಿಡಿ. ಬಾಗಿಲಿನ ಮೇಲೆ ದೇವರ ಚಿತ್ರವಿದ್ದರೆ, ಅಲ್ಲಿಯೇ ಕೆಳಗೆ ಶೂ ಮತ್ತು ಚಪ್ಪಲಿಗಳನ್ನು ಇಡಬೇಡಿ. ಬಾಗಿಲಿನ ಮೇಲೆ ದೇವರ ಚಿತ್ರವನ್ನು ಹಾಕುವುದು ಒಳ್ಳೆಯದೇ ಅಥವಾ ಇಲ್ಲವೇ ಎಂಬ ಬಗ್ಗೆ ನೀವು ವಾಸ್ತು ತಜ್ಞರಿಂದ ಸಲಹೆ ಪಡೆದುಕೊಳ್ಳಬಹುದು. ಈ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು, ನಿಮ್ಮ ಮನೆಯ ಬಾಗಿಲಿನ ಮೇಲೆ ದೇವರ ಚಿತ್ರವನ್ನು ಇಟ್ಟಲ್ಲಿ ನೀವು ಶುಭ ಫಲಿತಾಂಶಗಳನ್ನು ಪಡೆಯುತ್ತೀರಿ.
ಇದನ್ನೂ ಓದಿ: ಮನೆಯಲ್ಲಿ ಗಡಿಯಾರವನ್ನು ಯಾವ ದಿಕ್ಕಿನಲ್ಲಿಡಬೇಕು?
ಈ ನಿಯಮಗಳನ್ನು ಅನುಸರಿಸಿ, ದೇವರ ಫೋಟೋವನ್ನು ಮುಖ್ಯ ದ್ವಾರದ ಮೇಲೆ ಇಟ್ಟರೆ ಮನೆಯ ವಾಸ್ತು ದೋಷ ನಿವಾರಣೆಯಾಗುತ್ತದೆ ನಿಮ್ಮ ವೃತ್ತಿ ಜೀವನ ಕೂಡ ಚೆನ್ನಾಗಿರುತ್ತದೆ. ಮನೆಯಲ್ಲಿರುವವರ ಆರೋಗ್ಯವು ಉತ್ತಮವಾಗಿರುತ್ತದೆ. ಜೊತೆಗೆ ದೇವರ ಆಶೀರ್ವಾದದಿಂದ, ನಿಮ್ಮ ಮನೆಯಲ್ಲಿ ಯಾವುದೇ ರೀತಿಯಲ್ಲಿ ಜಗಳ ಮನಸ್ತಾಪಗಳು ಬರುವುದಿಲ್ಲ.
ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ