AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Vastu Tips: ಮನೆಯಲ್ಲಿ ಗಡಿಯಾರವನ್ನು ಯಾವ ದಿಕ್ಕಿನಲ್ಲಿಡಬೇಕು?

ವಾಸ್ತು ಶಾಸ್ತ್ರದ ಪ್ರಕಾರ ಗಡಿಯಾರವನ್ನು ಸರಿಯಾದ ದಿಕ್ಕಿನಲ್ಲಿ ಇಡುವುದು ಕೂಡ ಮುಖ್ಯ ಎಂಬುದು ನಿಮಗೆ ತಿಳಿದಿದೆಯಾ? ಏಕೆಂದರೆ ಗಡಿಯಾರದ ದಿಕ್ಕು ನಮ್ಮ ಕೆಲಸದಲ್ಲಿ ಸಿಗುವ ಫಲಿತಾಂಶಗಳನ್ನು ನಿರ್ಧರಿಸಲು ಸಹಾಯಕವಾಗಿದೆ. ಹಾಗಾದರೆ ಗಡಿಯಾರ ಇಡುವಾಗ ಯಾವ ದಿಕ್ಕನ್ನು ಆಯ್ಕೆ ಮಾಡಬೇಕು? ಯಾವುದು ಉತ್ತಮ? ಇಲ್ಲಿದೆ ಮಾಹಿತಿ.

Vastu Tips: ಮನೆಯಲ್ಲಿ ಗಡಿಯಾರವನ್ನು ಯಾವ ದಿಕ್ಕಿನಲ್ಲಿಡಬೇಕು?
ಪ್ರೀತಿ ಭಟ್​, ಗುಣವಂತೆ
| Edited By: |

Updated on:Apr 29, 2024 | 4:55 PM

Share

ನಾವು ಎಲ್ಲಾ ಕೆಲಸಗಳನ್ನು ಸಮಯಕ್ಕೆ ಅನುಗುಣವಾಗಿ ಮಾಡಲು, ಮನೆ ಅಥವಾ ಕಚೇರಿಯಲ್ಲಿ ಗಡಿಯಾರ ಇಟ್ಟುಕೊಳ್ಳಬೇಕಾಗುತ್ತದೆ. ಆದರೆ ವಾಸ್ತು ಶಾಸ್ತ್ರದ ಪ್ರಕಾರ ಗಡಿಯಾರವನ್ನು ಸರಿಯಾದ ದಿಕ್ಕಿನಲ್ಲಿ ಇಡುವುದು ಕೂಡ ಮುಖ್ಯ ಎಂಬುದು ನಿಮಗೆ ತಿಳಿದಿದೆಯಾ? ಏಕೆಂದರೆ ಗಡಿಯಾರದ ದಿಕ್ಕು ನಮ್ಮ ಕೆಲಸದಲ್ಲಿ ಸಿಗುವ ಫಲಿತಾಂಶಗಳನ್ನು ನಿರ್ಧರಿಸಲು ಸಹಾಯಕವಾಗಿದೆ. ವಾಸ್ತು ಪ್ರಕಾರ, ಗಡಿಯಾರವನ್ನು ಮನೆ ಅಥವಾ ಕಚೇರಿಯ ಪೂರ್ವ, ಪಶ್ಚಿಮ ಅಥವಾ ಉತ್ತರ ದಿಕ್ಕಿನಲ್ಲಿರುವ ಗೋಡೆಯ ಮೇಲೆ ಇಡಬೇಕು. ಈ ದಿಕ್ಕುಗಳು ಮನೆಯಲ್ಲಿ ಸಕಾರಾತ್ಮಕ ಶಕ್ತಿಯನ್ನು ತರುತ್ತವೆ. ಜೊತೆಗೆ ಗಡಿಯಾರವನ್ನು ಈ ದಿಕ್ಕಿನಲ್ಲಿ ಇಡುವುದರಿಂದ ನಾವು ಮಾಡುವ ಎಲ್ಲಾ ಕೆಲಸಗಳು ಕೂಡ ಯಾವುದೇ ಅಡೆತಡೆಯಿಲ್ಲದೆ ಸುಗಮವಾಗಿ ನಡೆಯುತ್ತವೆ. ಆದ್ದರಿಂದ, ಗಡಿಯಾರವನ್ನು ಇಡುವಾಗ ಈ ದಿಕ್ಕುಗಳಲ್ಲಿ ಒಂದನ್ನು ಆಯ್ಕೆ ಮಾಡುವುದು ಉತ್ತಮ.

ಗಡಿಯಾರವನ್ನು ಯಾವ ದಿಕ್ಕಿನಲ್ಲಿ ಇಡಬಾರದು?

ಗಡಿಯಾರವನ್ನು ಸರಿಯಾದ ದಿಕ್ಕಿನಲ್ಲಿ ಇಡುವುದು ಉತ್ತಮ, ಇಲ್ಲವಾದಲ್ಲಿ ಇದು ನಕಾರಾತ್ಮಕ ಶಕ್ತಿಯನ್ನು ಸೆಳೆಯುತ್ತದೆ. ಆದ ಕಾರಣ ಸರಿಯಾದ ದಿಕ್ಕನ್ನು ಆಯ್ಕೆ ಮಾಡುವುದು ಬಹಳ ಮುಖ್ಯ. ವಾಸ್ತು ಶಾಸ್ತ್ರದ ಪ್ರಕಾರ, ಮನೆ ಅಥವಾ ಕಚೇರಿಯ ದಕ್ಷಿಣ ದಿಕ್ಕಿಗಿರುವ ಗೋಡೆಯ ಮೇಲೆ ಗಡಿಯಾರವನ್ನು ಇಡಬಾರದು, ಏಕೆಂದರೆ ದಕ್ಷಿಣ ಯಮ ದೇವನ ದಿಕ್ಕು ಎಂದು ಹೇಳಲಾಗುತ್ತದೆ ಹಾಗಾಗಿ ಈ ದಿಕ್ಕಿಗೆ ಗಡಿಯಾರ, ದುಡ್ಡು ಇಡುವ ಕಪಾಟುಗಳು ಇನ್ನಿತರ ವಸ್ತುಗಳನ್ನು ಇಡುವುದಿಲ್ಲ. ಮನೆಯ ದಕ್ಷಿಣ ದಿಕ್ಕನ್ನು ಹೊರತುಪಡಿಸಿ, ಗಡಿಯಾರವನ್ನು ಮನೆಯ ಮುಖ್ಯ ದ್ವಾರದ ಮೇಲೆ ಇಡಬೇಡಿ.

ಇದನ್ನೂ ಓದಿ: ಮದುವೆಗೆ ಸಂಬಂಧಿಸಿದ ಕನಸುಗಳು ಬೀಳುತ್ತಾ? ಇದು ಯಾವುದರ ಸೂಚನೆ ಗೊತ್ತಾ?

ದಿಂಬಿನ ಕೆಳಗೆ ಗಡಿಯಾರವನ್ನು ಇಡಬೇಡಿ!

ಜನರು ಮಲಗುವಾಗ ಕೈಯಲ್ಲಿ ಧರಿಸುವ ಕೈ ಗಡಿಯಾರವನ್ನು ದಿಂಬಿನ ಕೆಳಗೆ ಇಡುತ್ತಾರೆ. ಆದರೆ ವಾಸ್ತು ಶಾಸ್ತ್ರದ ಪ್ರಕಾರ, ದಿಂಬಿನ ಕೆಳಗೆ ಗಡಿಯಾರವನ್ನು ಇಟ್ಟುಕೊಂಡು ಎಂದಿಗೂ ಮಲಗಬಾರದು. ಅದರ ಶಬ್ದವು ನಮ್ಮ ನಿದ್ರೆಗೆ ಭಂಗ ತರುವುದರ ಜೊತೆಗೆ ಅದರಿಂದ ಹೊರಹೊಮ್ಮುವ ತರಂಗಗಳು ನಮ್ಮ ಮೆದುಳು ಮತ್ತು ಹೃದಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ. ಈ ಅಲೆಗಳಿಂದಾಗಿ, ಇಡೀ ಕೋಣೆಯಲ್ಲಿ ನಕಾರಾತ್ಮಕ ಶಕ್ತಿ ಸೃಷ್ಟಿಯಾಗುತ್ತದೆ, ಇದು ನಿಮ್ಮ ಮನಸ್ಸಿನ ಶಾಂತಿಯನ್ನು ಭಂಗಗೊಳಿಸುತ್ತದೆ. ಹಾಗಾಗಿ ಈ ಅಭ್ಯಾಸ ನಿಮ್ಮಲ್ಲಿದ್ದರೆ ಅದನ್ನು ಬಿಟ್ಟುಬಿಡಿ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 4:54 pm, Mon, 29 April 24