Pooja Vidhana: ಎಣ್ಣೆ ಅಥವಾ ತುಪ್ಪದ ದೀಪದಲ್ಲಿ ಯಾವುದು ಶ್ರೇಷ್ಠ?
ದೇವರ ಕೋಣೆಯಲ್ಲಿ ಅಥವಾ ದೇವಸ್ಥಾನದಲ್ಲಿ ತುಪ್ಪ ಅಥವಾ ವಿವಿಧ ರೀತಿಯ ಎಣ್ಣೆ ಹಾಕಿ ದೀಪ ಹಚ್ಚುತ್ತಾರೆ. ಪ್ರತಿಯೊಂದಕ್ಕೂ ಅದರದ್ದೇ ಆದ ಮಹತ್ವವಿದೆ. ಸಾಮಾನ್ಯವಾಗಿ ದೇವರ ಬಲಭಾಗದಲ್ಲಿ ತುಪ್ಪದ ದೀಪವನ್ನು ಮತ್ತು ದೇವರ ಎಡಭಾಗದಲ್ಲಿ ಎಣ್ಣೆಯ ದೀಪವನ್ನು ಹಚ್ಚುವುದು ಮಂಗಳಕರವೆನ್ನುವ ನಂಬಿಕೆಯಿದೆ. ಆದರೆ ದೇವರಿಗೆ ಯಾವ ದೀಪ ಶ್ರೇಷ್ಠ? ಇದರ ಮಹತ್ವವೇನು?
ಮನೆಯ ದೇವರ ಕೋಣೆಯಲ್ಲಿ ಅಥವಾ ದೇವಸ್ಥಾನದಲ್ಲಿ ತುಪ್ಪ ಅಥವಾ ವಿವಿಧ ರೀತಿಯ ಎಣ್ಣೆ ಹಾಕಿ ದೀಪ ಹಚ್ಚುತ್ತಾರೆ. ಪ್ರತಿಯೊಂದಕ್ಕೂ ಅದರದ್ದೇ ಆದ ಮಹತ್ವವಿದೆ. ಸಾಮಾನ್ಯವಾಗಿ ದೇವರ ಬಲಭಾಗದಲ್ಲಿ ತುಪ್ಪದ ದೀಪವನ್ನು ಮತ್ತು ದೇವರ ಎಡಭಾಗದಲ್ಲಿ ಎಣ್ಣೆಯ ದೀಪವನ್ನು ಹಚ್ಚುವುದು ಮಂಗಳಕರವೆನ್ನುವ ನಂಬಿಕೆಯಿದೆ. ಆದರೆ ದೇವರಿಗೆ ಯಾವ ದೀಪ ಶ್ರೇಷ್ಠ? ಇದರ ಮಹತ್ವವೇನು?
ತುಪ್ಪದ ದೀಪ ಅತ್ಯಂತ ಶ್ರೇಷ್ಠ. ಆದರೆ ಇಷ್ಟಾರ್ಥಗಳ ಈಡೇರಿಕೆಗಾಗಿ ಎಣ್ಣೆಯ ದೀಪವನ್ನು ಬೆಳಗಿಸುತ್ತಾರೆ. ಆರ್ಥಿಕ ಸ್ಥಿತಿ ಹದಗೆಟ್ಟಿದ್ದರೆ ದೇವರಿಗೆ ತುಪ್ಪದ ದೀಪ ಹಚ್ಚುವುದು ಒಳ್ಳೆಯದು. ಶನಿ ದೋಷ ನಿವಾರಣೆಗೆ ಅಥವಾ ದೋಷದಿಂದ ಮುಕ್ತಿ ಪಡೆದುಕೊಳ್ಳಲು ಎಣ್ಣೆ ದೀಪ ಹಚ್ಚುವುದು ಒಳ್ಳೆಯದು. ಮನೆಯಲ್ಲಿರುವ ದೇವರ ಕೋಣೆ ಅಥವಾ ದೇವಸ್ಥಾನದಲ್ಲಿ ತುಪ್ಪದ ದೀಪ ಹಚ್ಚುವುದು ಅತ್ಯಂತ ಶುಭ ಎನ್ನಲಾಗುತ್ತದೆ . ಇದರಿಂದ ಅನೇಕ ರೀತಿಯ ಆರೋಗ್ಯ ಪ್ರಯೋಜನಗಳಿವೆ. ಜೊತೆಗೆ ಮನೆಯ ವಾಸ್ತು ದೋಷಗಳು ಸಹ ನಿವಾರಣೆಯಾಗುತ್ತದೆ. ಶಿವ ಪುರಾಣದ ಪ್ರಕಾರ ಪ್ರತಿದಿನ ತುಪ್ಪದ ದೀಪವನ್ನು ಹಚ್ಚುವುದರಿಂದ ಮನೆಯಲ್ಲಿ ಸುಖ, ಶಾಂತಿ ಮತ್ತು ಸಮೃದ್ಧಿ ನೆಲೆಸುತ್ತದೆ ಎಂದು ಹೇಳಲಾಗಿದೆ.
ತುಪ್ಪದ ದೀಪವನ್ನು ಹಚ್ಚುವುದರಿಂದ ಗಾಳಿ ಶುದ್ಧವಾಗುತ್ತದೆ ಮತ್ತು ಗಾಳಿಯಲ್ಲಿರುವ ರೋಗಾಣುಗಳನ್ನು ನಾಶಮಾಡುತ್ತದೆ ಎಂದು ಹೇಳಲಾಗುತ್ತದೆ. ಇದರ ಪರಿಮಳ ಮಾನಸಿಕ ಸ್ಥಿತಿಯನ್ನು ಸುಧಾರಿಸುತ್ತದೆ ಮತ್ತು ಖಿನ್ನತೆಯನ್ನು ಹೋಗಲಾಡಿಸುತ್ತದೆ. ಅಲ್ಲದೆ ಇದರಿಂದ ಯಾವುದೇ ರೀತಿಯ ಚರ್ಮ ರೋಗಗಳು ಬರುವುದಿಲ್ಲ.
ಇದನ್ನೂ ಓದಿ: ಮನೆಯ ಬಾಗಿಲಿನ ಮೇಲೆ ದೇವರ ಫೋಟೋ ಇಟ್ಟಿದ್ದೀರಾ? ಈ ನಿಯಮ ಕಡ್ಡಾಯ ಪಾಲಿಸಿ
ಯಾವ ದೀಪ ಶ್ರೇಷ್ಠ?
ಎಣ್ಣೆ ದೀಪ ಹೆಚ್ಚು ಸಮಯ ಉರಿದರೆ ತುಪ್ಪದ ದೀಪ ಕಡಿಮೆ ಸಮಯ ಉರಿಯುತ್ತದೆ. ಎಣ್ಣೆ ದೀಪ ಕೇವಲ 1 ಮೀಟರ್ ಅಂತರದಲ್ಲಿರುವ ಸಾತ್ವಿಕತೆ ಗ್ರಹಿಸಬಹುದು ಆದರೆ ತುಪ್ಪದ ದೀಪ ಸ್ವರ್ಗಲೋಕದವರೆಗಿನ ಸಾತ್ವಿಕ ಲಹರಿ ಗ್ರಹಿಸುವ ಸಾಮರ್ಥ್ಯ ಹೊಂದಿದೆ ಎನ್ನಲಾಗುತ್ತದೆ. ಎಣ್ಣೆ ದೀಪದ ಪ್ರಭಾವ ಕೇವಲ ಅರ್ಧ ಗಂಟೆಗಳ ಕಾಲವಿದ್ದರೆ ತುಪ್ಪದ ದೀಪದ ಪ್ರಭಾವ 4 ಗಂಟೆಗಳ ಕಾಲ ಇರುತ್ತದೆ. ಹಾಗಾಗಿ ಎಣ್ಣೆಗಿಂತ ತುಪ್ಪದ ದೀಪವೇ ಶ್ರೇಷ್ಠ ಎನ್ನಲಾಗುತ್ತದೆ.
ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 4:59 pm, Sat, 4 May 24