AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Garuda Purana: ಸತ್ತವರು ಕನಸಿನಲ್ಲಿ ಕಂಡರೆ ಏನರ್ಥ? ಗರುಡ ಪುರಾಣ ಹೇಳುವುದೇನು?

ಮರಣಿಸಿದವರು ಕನಸಿನಲ್ಲಿ ಕಾಣಿಸಿಕೊಂಡಾಗ ಅದರ ಅರ್ಥವೇನು? ಎಂಬುದರ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ನೀಡಿರುವ ಮಾಹಿತಿ ಇಲ್ಲಿದೆ. ಕನಸುಗಳ ಫಲಿತಾಂಶಗಳು ವಿಭಿನ್ನವಾಗಿರುತ್ತವೆ. ಕೋಪದಿಂದ ಕಾಣಿಸಿಕೊಂಡರೆ ಅಶುಭ. ಸೈಲೆಂಟ್ ಆಗಿ ಬಂದರೆ ಎಚ್ಚರಿಕೆಯ ಸೂಚನೆ. ಪೂರ್ವಜರು ಪದೇ ಪದೇ ಕಾಣಿಸಿಕೊಂಡರೆ ಕಾರ್ಯಗಳು ಬಾಕಿ ಇವೆ ಎಂದರ್ಥ.

Garuda Purana: ಸತ್ತವರು ಕನಸಿನಲ್ಲಿ ಕಂಡರೆ  ಏನರ್ಥ? ಗರುಡ ಪುರಾಣ ಹೇಳುವುದೇನು?
ಗರುಡ ಪುರಾಣ
ಅಕ್ಷತಾ ವರ್ಕಾಡಿ
|

Updated on:Jun 19, 2026 | 5:11 PM

Share

ಜಾತಸ್ಯ ಮರಣಂ ಧ್ರುವಂ – ಮನುಷ್ಯನಿಗೆ ಹುಟ್ಟು ಎಷ್ಟು ಸತ್ಯವೋ ಸಾವು ಅಷ್ಟೇ ಸತ್ಯ. ಈ ಭೂಮಿ ಮೇಲೆ ಹುಟ್ಟಿದ ಪ್ರತಿಯೊಬ್ಬರೂ ಒಂದು ದಿನ ದೇಹವನ್ನು ತ್ಯಜಿಸಬೇಕಾಗುತ್ತದೆ. ಜನನ ಅನಿಶ್ಚಿತವಾದರೆ, ಮರಣ ಶಾಶ್ವತ ಎಂದು ಹೇಳಲಾಗುತ್ತದೆ. ಅಂತಹ ಮರಣಿಸಿದ ವ್ಯಕ್ತಿಗಳು ಕನಸಿನಲ್ಲಿ ಬಂದಾಗ, ಅದರ ಹಿಂದಿನ ಶುಭ ಅಥವಾ ಅಶುಭ ಫಲಗಳು ಏನು ಎಂದು ಗರುಡ ಪುರಾಣ ವಿವರಿಸುತ್ತದೆ. ಸಾಕ್ಷಾತ್ ಶ್ರೀಮನ್ನಾರಾಯಣರು ಗರುಡರಿಗೆ ಅನೇಕ ವಿಷಯಗಳನ್ನು ತಿಳಿಸಿದ್ದು, ಅದರಲ್ಲಿ ಇದೂ ಸಹ ಒಂದು. ಈ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ನೀಡಿರುವ ಮಾಹಿತಿ ಇಲ್ಲಿದೆ.

ರಾತ್ರಿಯ ನಿದ್ರಾವಸ್ಥೆಯಲ್ಲಿ ಬೀಳುವ ಕನಸುಗಳಿಗೆ ಜ್ಯೋತಿಷ್ಯ, ಪುರಾಣ, ವಿಶೇಷವಾಗಿ ಗರುಡ ಪುರಾಣಗಳಲ್ಲಿ ಮಹತ್ವದ ಸ್ಥಾನವಿದೆ. ಕನಸಿನಲ್ಲಿ ಕಾಣಿಸುವ ಮರಣಿಸಿದವರ ರೀತಿಯ ಆಧಾರದ ಮೇಲೆ, ಅವುಗಳ ಅರ್ಥ ಮತ್ತು ಫಲಿತಾಂಶಗಳು ಭಿನ್ನವಾಗಿರುತ್ತವೆ.

ಪೂರ್ವಜರು ಪದೇ ಪದೇ ಕಾಣಿಸಿಕೊಂಡಾಗ:

ನಮ್ಮದೇ ಆದ ಪಿತೃಗಳು, ಕುಟುಂಬದಲ್ಲಿ ಮರಣಿಸಿದ ತಂದೆ ಅಥವಾ ತಾಯಿ ಕಡೆಯ ಸಂಬಂಧಿಕರು ಕನಸುಗಳಲ್ಲಿ ಪದೇ ಪದೇ ಕಾಣಿಸಿಕೊಂಡರೆ, ಅವರ ಕಾರ್ಯಗಳನ್ನು ಮಾಡಬೇಕು ಎಂದರ್ಥ. “ನೀನು ನನ್ನನ್ನು ಮರೆಯುತ್ತಿದ್ದೀಯಾ” ಎಂದು ಅವರು ಸೂಚಿಸುತ್ತಿರಬಹುದು. ಅಮಾವಾಸ್ಯೆ, ಮಹಾಲಯ ಅಮಾವಾಸ್ಯೆ ಸಂದರ್ಭಗಳಲ್ಲಿ ಅವರ ಹೆಸರಿನಲ್ಲಿ ಕಾರ್ಯಗಳನ್ನು ನೆರವೇರಿಸುವುದು ಸೂಕ್ತ.

ಕೋಪಗೊಂಡ ಮರಣಿಸಿದ ವ್ಯಕ್ತಿಗಳು ಕನಸಿನಲ್ಲಿ:

ಯಾವುದೇ ಪರಿಚಯಸ್ಥ ಅಥವಾ ಮರಣಿಸಿದ ವ್ಯಕ್ತಿ ಕೋಪಿಷ್ಠರಾಗಿ, ಕಿರುಚಾಡುತ್ತಾ, ಕೂಗಾಡುತ್ತಾ ಕನಸಿನಲ್ಲಿ ಕಾಣಿಸಿಕೊಂಡರೆ ಅದು ಅಶುಭದ ಸಂಕೇತ. ಇಂತಹ ಕನಸುಗಳ ಪರಿಣಾಮ ಮೂರು ದಿನಗಳವರೆಗೆ ಮಾತ್ರ ಇರುತ್ತದೆ ಎಂದು ಹೇಳಲಾಗುತ್ತದೆ. ಇಂತಹ ಕನಸು ಬಿದ್ದಾಗ, ಇಷ್ಟದೇವರು ಅಥವಾ ಕುಲದೇವರ ದರ್ಶನ ಪಡೆದು ಪ್ರಾರ್ಥಿಸಬೇಕು. ಉದಾಹರಣೆಗೆ, ಕುಲದೇವರು ವೆಂಕಟೇಶ್ವರನಾಗಿದ್ದರೆ, ತಿರುಪತಿ ಅಥವಾ ಹತ್ತಿರದ ವೆಂಕಟೇಶ್ವರ ದೇವಾಲಯಕ್ಕೆ ಹೋಗಿ ಅರ್ಚನೆ ಮಾಡಿಸುವುದರಿಂದ ಶುಭವಾಗುತ್ತದೆ.

ಇದನ್ನೂ ಓದಿ: ಫ್ಯಾಶನ್​​ಗಾಗಿ ವಜ್ರ ಧರಿಸುವ ಮುನ್ನ ಎಚ್ಚರ! ಈ ರಾಶಿಯವರು ವಜ್ರ ಧರಿಸಿದರೆ ಕಷ್ಟ ತಪ್ಪಿದ್ದಲ್ಲ!

ಶಾಂತವಾಗಿ ಕಾಣಿಸಿಕೊಂಡಾಗ:

ಮರಣಿಸಿದ ವ್ಯಕ್ತಿಗಳು ಕನಸಿನಲ್ಲಿ ಸೈಲೆಂಟ್ ಆಗಿ ಅಥವಾ ಶಾಂತವಾಗಿ ಬಂದರೆ, ಅದು ನಮಗೆ ಒಂದು ಎಚ್ಚರಿಕೆ ಅಥವಾ ಸೂಚನೆಯಾಗಿರುತ್ತದೆ. “ನಿನ್ನ ಜವಾಬ್ದಾರಿಗಳನ್ನು ನಿನಗೆ ಗುರುತಿಸುತ್ತಿದ್ದೇನೆ, ಎಚ್ಚೆತ್ಕೋ, ಅಲರ್ಟ್ ಆಗು” ಎಂದು ಅವರು ತಿಳಿಸುತ್ತಿರಬಹುದು. ಇದು ಜೀವನದ ವಿವಿಧ ವಿಚಾರಗಳ ಬಗ್ಗೆ ಗಮನ ಹರಿಸಲು ಪ್ರೇರೇಪಿಸುತ್ತದೆ.

ಅಳು ಅಥವಾ ರೋದನೆ ಕಂಡಾಗ:

ಕನಸಿನಲ್ಲಿ ಯಾರಾದರೂ ಅಳುತ್ತಿರುವುದು, ರೋದನೆ ಮಾಡುವುದು ಅಥವಾ ಸಂಕಟ ಪಡುತ್ತಿರುವುದು ಕಂಡರೆ, ಅದು ಮನೆಯಲ್ಲಿ ಯಾರಿಗೋ ತೊಂದರೆ ಎದುರಾಗಲಿದೆ ಎಂಬುದರ ಸೂಚನೆ. ಅಂತಹ ಕನಸು ಬಿದ್ದಾಗ, ಯಾವುದೇ ಪ್ರಮುಖ ಪ್ರಯಾಣಗಳು ಅಥವಾ ಕಾರ್ಯಕ್ರಮಗಳನ್ನು ಆದಷ್ಟು ಮುಂದೂಡುವುದು ಒಳ್ಳೆಯದು.

ಒಟ್ಟಾರೆಯಾಗಿ, ಯಾವುದೇ ವ್ಯಕ್ತಿಗಳು ಮರಣಿಸಿದ ನಂತರ ಕನಸಿನಲ್ಲಿ ಕಾಣಿಸಿಕೊಂಡಾಗ ಅದಕ್ಕೊಂದು ನಿರ್ದಿಷ್ಟ ಅರ್ಥವಿರುತ್ತದೆ ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:43 am, Thu, 18 June 26

Follow Us
ಅಕ್ಷತಾ ವರ್ಕಾಡಿ
ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ – ಮೂಲತಃ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿಯವರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು, ಟಿವಿ9 ಡಿಜಿಟಲ್​ ಮೂಲಕ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ. ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇವರಿಗಿದೆ. ಆಧ್ಯಾತ್ಮ, ಶಿಕ್ಷಣ, ಉದ್ಯೋಗವಕಾಶ, ಆರೋಗ್ಯ ಮತ್ತು ವೈರಲ್ ಸುದ್ದಿಗಳ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಇವರು ಓದುಗರಿಗೆ ಉತ್ತಮ ಹಾಗೂ ಆಸಕ್ತಿದಾಯಕ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
ಜಿಬಿಎಗೆ 2.77 ಕೋಟಿ ರೂ. ದಂಡ ವಿಧಿಸಿದ ಹೈಕೋರ್ಟ್!
ಜಿಬಿಎಗೆ 2.77 ಕೋಟಿ ರೂ. ದಂಡ ವಿಧಿಸಿದ ಹೈಕೋರ್ಟ್!
ಆರ್​ಆರ್ ನಗರದಲ್ಲಿ ವ್ಯಕ್ತಿಯ ಕೊಂದಿದ್ದ ಕಾಡಾನೆ ಕೊನೆಗೂ ಕಾಡಿಗೆ
ಆರ್​ಆರ್ ನಗರದಲ್ಲಿ ವ್ಯಕ್ತಿಯ ಕೊಂದಿದ್ದ ಕಾಡಾನೆ ಕೊನೆಗೂ ಕಾಡಿಗೆ
ಧಾರಾಕಾರ ಮಳೆಗೆ ವೈಟ್​ಫಿಲ್ಡ್, ಮಾರತ್ತಹಳ್ಳಿ, ಔಟರ್ ರಿಂಗ್ ರಸ್ತೆ ಜಲಾವೃತ
ಧಾರಾಕಾರ ಮಳೆಗೆ ವೈಟ್​ಫಿಲ್ಡ್, ಮಾರತ್ತಹಳ್ಳಿ, ಔಟರ್ ರಿಂಗ್ ರಸ್ತೆ ಜಲಾವೃತ
ಅಸಹ್ಯದಲ್ಲೇ ಅಸಹ್ಯ, ಅದಕ್ಕೆ ನಾಮಿನೇಟ್ ಮಾಡಿದೆ; ಕಿರಣ್​​ ನಾಮಿನೇಟ್
ಅಸಹ್ಯದಲ್ಲೇ ಅಸಹ್ಯ, ಅದಕ್ಕೆ ನಾಮಿನೇಟ್ ಮಾಡಿದೆ; ಕಿರಣ್​​ ನಾಮಿನೇಟ್
ರಾತ್ರಿಯಿಡೀ ಮಳೆ ಅಬ್ಬರ: ಮಲ್ಲೇಶ್ವರಂನಲ್ಲಿ ಮರಬಿದ್ದು 2 ಕಾರುಗಳು ಜಖಂ
ರಾತ್ರಿಯಿಡೀ ಮಳೆ ಅಬ್ಬರ: ಮಲ್ಲೇಶ್ವರಂನಲ್ಲಿ ಮರಬಿದ್ದು 2 ಕಾರುಗಳು ಜಖಂ
ಇಂದು ಸಂಕಷ್ಟ ಚತುರ್ಥಿ; ಗಜಗೌರಿ ವ್ರತ ಮಾಡುವವರಿಗೆ ಮಹತ್ವದ ದಿನ
ಇಂದು ಸಂಕಷ್ಟ ಚತುರ್ಥಿ; ಗಜಗೌರಿ ವ್ರತ ಮಾಡುವವರಿಗೆ ಮಹತ್ವದ ದಿನ
ವಿದ್ಯಾರ್ಥಿಗಳಿಗೆ ಟಂಟಂಗಳೇ ಆಸರೆ: ಸ್ವಲ್ಪ ಯಾಮಾರಿದ್ರೂ ಪ್ರಾಣಕ್ಕೇ ಕುತ್ತು
ವಿದ್ಯಾರ್ಥಿಗಳಿಗೆ ಟಂಟಂಗಳೇ ಆಸರೆ: ಸ್ವಲ್ಪ ಯಾಮಾರಿದ್ರೂ ಪ್ರಾಣಕ್ಕೇ ಕುತ್ತು
ಸ್ಪೀಕರ್​ನಲ್ಲಿ ಭಜನೆ ಹಾಕಿದ್ದಕ್ಕೆ ಪಕ್ಕದ ಮನೆಯವರಿಂದ ಅರ್ಚಕನ ಮೇಲೆ ಹಲ್ಲೆ
ಸ್ಪೀಕರ್​ನಲ್ಲಿ ಭಜನೆ ಹಾಕಿದ್ದಕ್ಕೆ ಪಕ್ಕದ ಮನೆಯವರಿಂದ ಅರ್ಚಕನ ಮೇಲೆ ಹಲ್ಲೆ
ಬಂಗಾಳದ ಪ್ರವಾಸದ ವೇಳೆ ಝಲ್ಮುರಿ ಸವಿದ ಬಿಜೆಪಿ ಅಧ್ಯಕ್ಷ ನಿತಿನ್ ನವೀನ್
ಬಂಗಾಳದ ಪ್ರವಾಸದ ವೇಳೆ ಝಲ್ಮುರಿ ಸವಿದ ಬಿಜೆಪಿ ಅಧ್ಯಕ್ಷ ನಿತಿನ್ ನವೀನ್
ನೇಪಾಳದಲ್ಲಿ ಭಾರೀ ಹಿಮಪಾತ; 4 ಮೃತದೇಹಗಳ ಪತ್ತೆ, 12 ಜನ ನಾಪತ್ತೆ
ನೇಪಾಳದಲ್ಲಿ ಭಾರೀ ಹಿಮಪಾತ; 4 ಮೃತದೇಹಗಳ ಪತ್ತೆ, 12 ಜನ ನಾಪತ್ತೆ