ಧನತ್ರಯೋದಶಿ, ಇದನ್ನು ಧನ್‌ತೇರಸ್ ಎಂದೂ ಕರೆಯುತ್ತಾರೆ. ಐದು ದಿನಗಳ ದೀಪಾವಳಿ ಹಬ್ಬವು ಧನತೇರಸ್ ಅಥವಾ ಧನತ್ರಯೋದಶಿಯೊಂದಿಗೆ ಪ್ರಾರಂಭವಾಗುತ್ತದೆ. ಅಂದರೆ ಐದು ದಿನಗಳ ದೀಪಾವಳಿ ಹಬ್ಬಗಳ ಆರಂಭವನ್ನು ಸೂಚಿಸುತ್ತದೆ.ಪ್ರತಿ ವರ್ಷ ಕಾರ್ತಿಕ ಮಾಸದ ಕೃಷ್ಣ ಪಕ್ಷದ ತ್ರಯೋದಶಿಯಂದು ಧನತ್ರಯೋದಶಿ ಆಚರಿಸಲಾಗುತ್ತದೆ. ಈ ವರ್ಷ ಈ ವಿಶೇಷ ಹಬ್ಬ ನವೆಂಬರ್ 10 ಶುಕ್ರವಾರದಂದು ಬಂದಿದೆ. ಈ ದಿನ ಭಗವಾನ್ ಧನ್ವಂತರಿ, ಕುಬೇರ ಮತ್ತು ಯಮದೇವನನ್ನು ಪೂಜಿಸಲಾಗುತ್ತದೆ. ಈ ದಿನದಂದು ಏನನ್ನಾದರೂ ಖರೀದಿಸುವ ಸಂಪ್ರದಾಯವೂ ಇದೆ. ವಿಶೇಷವಾಗಿ ಜನರು ಈ ದಿನ ಚಿನ್ನ ಅಥವಾ ಬೆಳ್ಳಿ ವಸ್ತುಗಳನ್ನು ಖರೀದಿಸುತ್ತಾರೆ. ಸನಾತನ ಧರ್ಮದಲ್ಲಿ, ಧನತ್ರಯೋದಶಿ ದಿನದಂದು ಚಿನ್ನ ಬೆಳ್ಳಿ ಖರೀದಿಸುವುದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಇದಲ್ಲದೇ ಈ ದಿನ ಪಾತ್ರೆಗಳು ಅಥವಾ ಇತರ ಗೃಹೋಪಯೋಗಿ ವಸ್ತುಗಳನ್ನು ಖರೀದಿಸುವುದು ಲಾಭದಾಯಕವಾಗಿದೆ. ಈ ದಿನದಂದು ಶುಭ ಮುಹೂರ್ತದಲ್ಲಿ ಖರೀದಿ ಮಾಡುವುದರಿಂದ ಸಂಪತ್ತು ಹದಿಮೂರು ಪಟ್ಟು ಹೆಚ್ಚಾಗುತ್ತದೆ ಎಂದು ನಂಬಲಾಗಿದೆ. ಆದ್ದರಿಂದ ವಸ್ತು ಖರೀದಿಗೆ ಮತ್ತು ಪೂಜೆಗೆ ಮಂಗಳಕರ ಸಮಯ ಯಾವುದು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.
ನೀವು ಚಿನ್ನ, ಬೆಳ್ಳಿ, ಪಾತ್ರೆ ಅಥವಾ ಯಾವುದೇ ಗೃಹೋಪಯೋಗಿ ವಸ್ತುಗಳನ್ನು ಖರೀದಿಸಲು ಬಯಸಿದರೆ, ನವೆಂಬರ್ 10 ರಂದು ಮಧ್ಯಾಹ್ನ 2:35 ರಿಂದ 6:40 ರ ಒಳಗಡೆ ಖರೀದಿಸಬಹುದು. ಈ ದಿನದಂದು ನೀವು ಖರೀದಿಸಲು ಸಾಧ್ಯವಾಗದಿದ್ದರೆ, ನೀವು ನವೆಂಬರ್ 11 ರಂದು ಮಧ್ಯಾಹ್ನ 1:57 ರ ಒಳಗೆ ಖರೀದಿಸಬಹುದು. ಇದಾದ ನಂತರ ತ್ರಯೋದಶಿ ತಿಥಿ ಮುಗಿಯುತ್ತದೆ.
ಇದನ್ನೂ ಓದಿ: ಈ ಬಾರಿ ನರಕ ಚತುರ್ದಶಿ ಯಾವಾಗ? ದೀಪಾವಳಿಯಲ್ಲಿ ಯಮ ದೀಪದ ವೈಶಿಷ್ಟ್ಯ ಏನೆಂದರೆ…
ಈ ದಿನದಂದು, ಪ್ರದೋಷ ಕಾಲ ಅಂದರೆ ಸಂಜೆ ಭಗವಾನ್ ಧನ್ವಂತರಿ , ಕುಬೇರ ಮತ್ತು ಲಕ್ಷ್ಮಿ ದೇವಿಯನ್ನು ಪೂಜಿಸಲು ಮಂಗಳಕರ ಸಮಯ. ಪಂಚಾಂಗದ ಪ್ರಕಾರ, ಪ್ರದೋಷ ಕಾಲವು ನವೆಂಬರ್ 10 ರಂದು ಸಂಜೆ 06:02 ರಿಂದ ರಾತ್ರಿ 08:34 ರವರೆಗೆ ಇರುತ್ತದೆ. ಈ ಸಮಯದಲ್ಲಿ ಪೂಜಿಸುವುದು ಅತ್ಯಂತ ಪ್ರಯೋಜನಕಾರಿ ಎಂದು ನಂಬಲಾಗಿದೆ. ಚಿನ್ನ, ಬೆಳ್ಳಿ, ಪಾತ್ರೆಗಳು, ಆಸ್ತಿ, ವಾಹನಗಳು, ಖಾತೆಗಳು, ಆಭರಣಗಳು ಇತ್ಯಾದಿಗಳನ್ನು ಖರೀದಿಸುವುದು ಬಹಳ ಫಲಪ್ರದವೆಂದು ಪರಿಗಣಿಸಲಾಗಿದೆ. ಈ ದಿನದಂದು ಖರೀದಿಸಿದ ವಸ್ತುಗಳು ದೀರ್ಘಾವಧಿಯ ಸಮೃದ್ಧಿಯನ್ನು ನೀಡುತ್ತದೆ ಎಂದು ಹೇಳಲಾಗುತ್ತದೆ.
ಮತ್ತಷ್ಟು ಆಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: