
ದೀಪಾವಳಿ ಹಬ್ಬವನ್ನು ಸಂತೋಷ, ಬೆಳಕು ಮತ್ತು ಸಮೃದ್ಧಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಈ ಪವಿತ್ರ ದಿನದಂದು ಸಂಪತ್ತಿನ ದೇವತೆಯಾದ ಲಕ್ಷ್ಮಿ ದೇವಿ ಮತ್ತು ವಿಘ್ನಹರ್ತ ಗಣೇಶನನ್ನು ವಿಶೇಷವಾಗಿ ಪೂಜಿಸಲಾಗುತ್ತದೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ದೀಪಾವಳಿಯ ರಾತ್ರಿ ಲಕ್ಷ್ಮಿ ದೇವಿಯು ಪ್ರತಿ ಮನೆಗೆ ಭೇಟಿ ನೀಡಿ ತನ್ನ ಭಕ್ತರಿಗೆ ಸುಖ, ಶಾಂತಿ ಮತ್ತು ಸಮೃದ್ಧಿಯನ್ನು ಕರುಣಿಸುತ್ತಾಳೆ. ಹೀಗಾಗಿ, ಲಕ್ಷ್ಮಿ ದೇವಿಯನ್ನು ಸ್ವಾಗತಿಸಲು ಮತ್ತು ಮನೆಯಲ್ಲಿ ಸಕಾರಾತ್ಮಕತೆಯನ್ನು ಕಾಪಾಡಿಕೊಳ್ಳಲು ಜನರು ದೀಪಾವಳಿಗೂ ಮುನ್ನ ತಮ್ಮ ಮನೆಗಳನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸುತ್ತಾರೆ. ವಾಸ್ತು ಶಾಸ್ತ್ರ ಮತ್ತು ಧಾರ್ಮಿಕ ನಂಬಿಕೆಗಳ ಪ್ರಕಾರ, ಮನೆಯಲ್ಲಿ ಕೆಲವು ವಸ್ತುಗಳು ನಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತವೆ. ದೀಪಾವಳಿ ಶುಚಿಗೊಳಿಸುವ ಸಮಯದಲ್ಲಿ ಅಂತಹ ಅಶುಭ ವಸ್ತುಗಳನ್ನು ಮನೆಯಿಂದ ತೆಗೆದುಹಾಕುವುದು ಅತ್ಯಂತು ಮುಖ್ಯವಾಗಿದೆ.
ಮನೆಯ ದೇವಸ್ಥಾನದಲ್ಲಿ ಅಥವಾ ಯಾವುದೇ ಮೂಲೆಯಲ್ಲಿ ಇರಿಸಲಾಗಿರುವ ಮುರಿದ ದೇವರ ವಿಗ್ರಹಗಳು ಹಾಗೂ ದೇವತೆಗಳ ಹರಿದ ಚಿತ್ರಗಳನ್ನು ಇಡುವುದು ಅಶುಭವೆಂದು ಪರಿಗಣಿಸಲಾಗುತ್ತದೆ. ಅಂತಹ ವಿಗ್ರಹ ಅಥವಾ ಫೋಟೋಗಳನ್ನು ಪವಿತ್ರ ನದಿಯಲ್ಲಿ ವಿಸರ್ಜಿಸಬೇಕು ಅಥವಾ ಅರಳಿ ಮರದ ಕೆಳಗೆ ಇಡಬೇಕು.
ಮನೆಯಲ್ಲಿ ಓಡದೆ ನಿಂತಿರುವ, ಕೈತಪ್ಪಿ ಮುರಿದುಹೋದ ಗಡಿಯಾರಗಳನ್ನು ಇಟ್ಟುಕೊಳ್ಳುವುದು ವ್ಯಕ್ತಿಯ ಜೀವನದ ಪ್ರಗತಿಗೆ ಅಡ್ಡಿ ಮತ್ತು ದುರದೃಷ್ಟದ ಸಂಕೇತವೆಂದು ನಂಬಲಾಗಿದೆ. ಅಂತಹ ಗಡಿಯಾರಗಳನ್ನು ತಕ್ಷಣವೇ ದುರಸ್ತಿ ಮಾಡಿಸಿ ಅಥವಾ ಮನೆಯಿಂದ ಹೊರಹಾಕಿ. ಇದಲ್ಲದೇ, ಮನೆಯಲ್ಲಿ ಒಡೆದ ಕನ್ನಡಿಗಳು, ಒಡೆದ ಗಾಜಿನ ಸಾಮಾಗ್ರಿಗಳು ಅಥವಾ ಮುರಿದ ಪಾತ್ರೆಗಳನ್ನು ಇಡಬಾರದು. ಇದು ವಾಸ್ತು ದೋಷಗಳಿಗೆ ಕಾರಣವಾಗುವುದಲ್ಲದೆ, ಮನೆಯಲ್ಲಿ ಆರ್ಥಿಕ ತೊಂದರೆಗಳನ್ನು ಹೆಚ್ಚಿಸುತ್ತದೆ.
ಬಳಕೆಯಲ್ಲಿಲ್ಲದ, ದೀರ್ಘಕಾಲದಿಂದ ಮೂಲೆ ಸೇರಿರುವ ಹಳೆಯ ಅಥವಾ ಹರಿದ ಬಟ್ಟೆಗಳನ್ನು ಮನೆಯಲ್ಲಿ ಇಟ್ಟುಕೊಳ್ಳಬೇಡಿ. ಇವುಗಳನ್ನು ನಿರ್ಗತಿಕರಿಗೆ ದಾನ ಮಾಡಿ ಅಥವಾ ಕಳಚಿ ಹಾಕಿ, ಏಕೆಂದರೆ ಇವು ನಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತವೆ.
ನೀವು ಇನ್ನು ಮುಂದೆ ಧರಿಸದ, ಹರಿದುಹೋಗಿರುವ ಅಥವಾ ಅನುಪಯುಕ್ತವಾದ ಬೂಟುಗಳು ಮತ್ತು ಚಪ್ಪಲಿಗಳು ಮನೆಯಲ್ಲಿ ನಕಾರಾತ್ಮಕತೆಯನ್ನು ಉಂಟುಮಾಡುತ್ತವೆ. ಅಂತಹ ಪಾದರಕ್ಷೆಗಳನ್ನು ಕೂಡಲೇ ಮನೆಯಿಂದ ಹೊರಹಾಕಿ. ಮನೆಯಲ್ಲಿ ಸಂಗ್ರಹವಾಗಿರುವ ಹಳೆಯ ಪತ್ರಿಕೆಗಳು, ಅನಗತ್ಯ ನಿಯತಕಾಲಿಕೆಗಳು ಮತ್ತು ಅನುಪಯುಕ್ತ ಕಾಗದಗಳನ್ನು ಮನೆಯಲ್ಲಿ ತುಂಬಿಸಿಡಬೇಡಿ. ಇವುಗಳನ್ನು ಕಸದ ವ್ಯಾಪಾರಿಗೆ ಮಾರಿ ಅಥವಾ ವಿಲೇವಾರಿ ಮಾಡಿ ಮನೆಗೆ ಜಾಗ ಮಾಡಿಕೊಡಿ.
ಇದನ್ನೂ ಓದಿ: ಮನೆಯ ಮುಂಭಾಗದಲ್ಲಿ ನಿಂಬೆ ಗಿಡವಿದ್ದರೆ ಅಶುಭವೇ? ವಾಸ್ತು ಶಾಸ್ತ್ರ ಹೇಳುವುದೇನು?
ಅಡುಗೆಮನೆಯಲ್ಲಿ ಬಳಕೆಯಲ್ಲಿಲ್ಲದ ಅವಧಿ ಮುಗಿದ ಮಸಾಲೆ ಪದಾರ್ಥಗಳು, ಹಳೆಯ ಆಹಾರ ವಸ್ತುಗಳು ಹಾಗೂ ನಿಮ್ಮ ಪ್ರಥಮ ಚಿಕಿತ್ಸಾ ಪೆಟ್ಟಿಗೆಯಲ್ಲಿರುವ (First Aid Box) ಅವಧಿ ಮುಗಿದ ಔಷಧಿಗಳು ಮತ್ತು ಹಳೆಯ ಸೌಂದರ್ಯವರ್ಧಕಗಳನ್ನು (Cosmetics) ತಕ್ಷಣ ಎಸೆದುಬಿಡಿ.
ಮನೆಯಲ್ಲಿ ಮೂಲೆ ಸೇರಿರುವ ಮುರಿದ ವಿದ್ಯುತ್ ಉಪಕರಣಗಳು, ದೋಷಯುಕ್ತ ಚಾರ್ಜರ್ಗಳು ಅಥವಾ ಜಟಿಲವಾಗಿ ಹೆಣೆದುಕೊಂಡಿರುವ ಹಳೆಯ ತ್ಯಾಜ್ಯ ತಂತಿಗಳನ್ನು (ಇ-ತ್ಯಾಜ್ಯ) ಮನೆಯಿಂದ ತೆಗೆದುಹಾಕಿ. ಇದು ಮನೆಯ ಸೌಂದರ್ಯವನ್ನು ಹೆಚ್ಚಿಸುವುದಲ್ಲದೆ ವಾಸ್ತು ದೋಷವನ್ನು ನಿವಾರಿಸುತ್ತದೆ.
ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ