Swapna Shastra: ಕನಸಿನಲ್ಲಿ ಚಿನ್ನ ಕಂಡರೆ ಏನಾಗುತ್ತದೆ? ಈ ಅಪಾಯದ ಮುನ್ಸೂಚನೆಯ ಬಗ್ಗೆ ತಿಳಿಯಿರಿ

ಚಿನ್ನದ ಆಭರಣಗಳ ಕನಸುಗಳು ವಿವಿಧ ಅರ್ಥಗಳನ್ನು ಹೊಂದಿವೆ. ಈ ಲೇಖನದಲ್ಲಿ ಚಿನ್ನಾಭರಣಕ್ಕೆ ಸಂಬಂಧಿಸಿದಂತೆ ವಿವಿಧ ರೀತಿಯ ಕನಸುಗಳ ಅರ್ಥಗಳನ್ನು ವಿವರಿಸಲಾಗಿದೆ. ಕನಸುಗಳ ಹಲವು ಅರ್ಥಗಳ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ತಜ್ಞೆ ಡಾ. ಆರತಿ ದಹಿಯಾ ಅವರು ನೀಡಿರುವ ಮಾಹಿತಿ ಇಲ್ಲಿದೆ.

Swapna Shastra: ಕನಸಿನಲ್ಲಿ ಚಿನ್ನ ಕಂಡರೆ ಏನಾಗುತ್ತದೆ? ಈ ಅಪಾಯದ ಮುನ್ಸೂಚನೆಯ ಬಗ್ಗೆ ತಿಳಿಯಿರಿ
Dreaming Of Gold Jewelry

Updated on: Mar 09, 2025 | 10:24 AM

ಕನಸುಗಳಿಗೆ ಹಲವು ಅರ್ಥಗಳಿವೆ. ಕೆಲವು ಕನಸುಗಳನ್ನು ಮುಂಬರುವ ಘಟನೆಗಳ ಮುನ್ಸೂಚನೆ ಎಂದು ನಂಬಲಾಗುತ್ತದೆ. ಅದರಂತೆ ಇಂದು ಚಿನ್ನದ ಆಭರಣಗಳಿಗೆ ಸಂಬಂಧಿಸಿದ ಕನಸಿನ ಕಂಡರೆ ಅದರ ಅರ್ಥವೇನು? ಹಾಗೂ ಈ ರೀತಿಯ ಕನಸು ಬೀಳಲು ಕಾರಣವೇನು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ನಿಮ್ಮ ಕನಸಿನಲ್ಲಿ ಚಿನ್ನದ ಆಭರಣಗಳು ಕಾಣಿಸಿಕೊಳ್ಳಲು ಹಲವಾರು ಕಾರಣಗಳಿವೆ. ಇದು ಹಲವು ರೂಪಗಳನ್ನು ತೆಗೆದುಕೊಳ್ಳಬಹುದು, ನೀವು ನೆಲದ ಮೇಲೆ ಬಿದ್ದಿರುವ ಆಭರಣಗಳ ಕನಸು ಅಥವಾ, ನೀವು ಆಭರಣಗಳನ್ನು ಖರೀದಿಸುವ, ಧರಿಸಿರುವ ಕನಸುಗಳನ್ನು ಕಂಡರೆ ಅದಕ್ಕೆ ಹಲವು ಅರ್ಥಗಳಿವೆ ಎಂದು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ತಜ್ಞೆ ಡಾ. ಆರತಿ ದಹಿಯಾ ಅವರು ಹೇಳುತ್ತಾರೆ.

ನೆಲದ ಮೇಲೆ ಬಿದ್ದಿರುವ ಚಿನ್ನದ ಆಭರಣಗಳು:

ಕನಸಿನಲ್ಲಿ ಚಿನ್ನದ ಆಭರಣಗಳು ನೆಲದ ಮೇಲೆ ಬಿದ್ದಿರುವುದನ್ನು ಕಂಡರೆ ಅದು ನಿಮ್ಮ ಜೀವನದಲ್ಲಿ ಆರ್ಥಿಕ ನಷ್ಟವನ್ನು ಅನುಭವಿಸುವ ಸೂಚನೆಯಾಗಿರಬಹುದು. ಇದು ನಿಮ್ಮ ಮನೆಯ ಆರ್ಥಿಕ ಕುಸಿತವನ್ನು ಸಹ ಸೂಚಿಸುತ್ತದೆ. ನೀವು ಅಂತಹ ಕನಸುಗಳನ್ನು ಕಾಣುತ್ತಿದ್ದರೆ, ಮುಂದಿನ ದಿನಗಳಲ್ಲಿ ಹಣವನ್ನು ಖರ್ಚು ಮಾಡುವಾಗ ಸ್ವಲ್ಪ ಜಾಗರೂಕರಾಗಿರಬೇಕು. ಇದರರ್ಥ ನೀವು ಹಣವನ್ನು ತಪ್ಪು ಸ್ಥಳದಲ್ಲಿ ಖರ್ಚು ಮಾಡುವುದನ್ನು ತಪ್ಪಿಸಬೇಕು ಎಂದು ಎಚ್ಚರಿಸುತ್ತಾರೆ.

ಇದನ್ನೂ ಓದಿ
ಮನೆಯಿಂದಲೇ ಕೆಲಸ ಮಾಡುತ್ತಿದ್ದೀರಾ? ಹಾಗಿದ್ರೆ ಈ ವಾಸ್ತು ಸಲಹೆ ಅನುಸರಿಸಿ
ಈ ಮೂರು ರಾಶಿಯವರಿಗೆ ಗಜಕೇಸರಿ ಯೋಗ; ಅದೃಷ್ಟ ಖುಲಾಯಿಸಲಿದೆ
ದೇವಸ್ಥಾನದಲ್ಲಿ ಪ್ರದಕ್ಷಿಣೆ ಹಾಕುವಾಗ ಈ ವಿಷ್ಯ ನೆನಪಿಟ್ಟುಕೊಳ್ಳಿ
ನರಸಿಂಹ ದ್ವಾದಶಿ ಯಾವಾಗ? ದಿನಾಂಕ, ಶುಭ ಸಮಯ ಮತ್ತು ಪೂಜಾ ವಿಧಾನ ತಿಳಿಯಿರಿ

ಚಿನ್ನದ ಆಭರಣಗಳನ್ನು ಖರೀದಿಸುವ ಕನಸು:

ನೀವು ಚಿನ್ನದ ಆಭರಣಗಳನ್ನು ಖರೀದಿಸುವ ಕನಸು ಕಂಡರೆ, ಅದು ನಿಮಗೆ ಶುಭ ಶಕುನ. “ಕನಸಿನ ವಿಜ್ಞಾನದ ಪ್ರಕಾರ, ಅಂತಹ ಕನಸು ಎಂದರೆ ಅದೃಷ್ಟ ಶೀಘ್ರದಲ್ಲೇ ನಿಮ್ಮ ದಾರಿಗೆ ಬರುತ್ತದೆ ಮತ್ತು ಅದರೊಂದಿಗೆ ಜೀವನದಲ್ಲಿ ದೊಡ್ಡ ಯಶಸ್ಸು ಸಿಗುತ್ತದೆ ಎಂದು ನಂಬಲಾಗಿದೆ.

ಇದನ್ನೂ ಓದಿ: ಹೋಳಿ ಹಬ್ಬದಂದೇ ಚಂದ್ರಗ್ರಹಣ; ಈ 4 ರಾಶಿಯವರು ಜಾಗರೂಕರಾಗಿರಿ!

ಚಿನ್ನದ ಆಭರಣಗಳನ್ನು ಧರಿಸಿರುವ ಕನಸು:

ಕನಸಿನಲ್ಲಿ ಚಿನ್ನದ ಆಭರಣಗಳನ್ನು ಧರಿಸಿರುವುದನ್ನು ನೋಡುವುದು ನಿಮಗೆ ಅಶುಭ ಸಂಕೇತ. ಅಂತಹ ಕನಸು ಮುಂದಿನ ದಿನಗಳಲ್ಲಿ ನಿಮ್ಮ ಹತ್ತಿರದ ಸಂಬಂಧಿಯೊಬ್ಬರ ಆರೋಗ್ಯಕ್ಕೆ ಸಂಬಂಧಿಸಿದ ಕೆಲವು ಕೆಟ್ಟ ಸುದ್ದಿಗಳನ್ನು ನೀವು ಸ್ವೀಕರಿಸಬಹುದು ಎಂದು ಸೂಚಿಸುತ್ತದೆ. ಇದರರ್ಥ ನಿಮ್ಮ ಮನೆಯಲ್ಲಿರುವ ಯಾರ ಆರೋಗ್ಯವನ್ನೂ ನೀವು ನಿರ್ಲಕ್ಷಿಸಬಾರದು ಮತ್ತು ಯಾವುದೇ ಸಮಸ್ಯೆಗಳು ಎದುರಾದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ.

ಮತ್ತಷ್ಟು ಅಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 10:24 am, Sun, 9 March 25