ಸ್ವಪ್ನ ಶಾಸ್ತ್ರದ ಪ್ರಕಾರ ಪ್ರತಿಯೊಂದು ಕನಸಿಗೂ ವಿಶೇಷ ಅರ್ಥವಿದೆ. ಕೆಲವು ಕನಸುಗಳು ಶುಭ ಸೂಚನೆಯಾದರೆ ಕೆಲವು ಕನಸುಗಳನ್ನು ಅಶುಭ ಸೂಚನೆಯ ಮುನ್ಸೂಚನೆ ಎಂದು ಜ್ಯೋತಿಷ್ಯ ಶಾಸ್ತ್ರಜ್ಞರು ಎಚ್ಚರಿಸುತ್ತಾರೆ. ಅದರಂತೆ ನಿಮ್ಮ ಕನಸಿನಲ್ಲಿ ನೀವು ನದಿ ತೀರದಲ್ಲಿ ಸ್ನಾನ ಮಾಡುತ್ತಿರುವಂತೆ ಕನಸು ಕಂಡರೆ ಏನರ್ಥ, ಇದು ಶುಭವೋ ಅಥವಾ ಅಶುಭವೋ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.
ಸ್ವಪ್ನ ಶಾಸ್ತ್ರದ ಪ್ರಕಾರ ನೀವು ನಿಮ್ಮ ಪಾದಗಳನ್ನು ತೊಳೆಯುತ್ತಿರುವಂತೆ ಕನಸು ಕಂಡರೆ, ಆ ಕನಸನ್ನು ತುಂಬಾ ಒಳ್ಳೆಯ ಕನಸು ಎಂದು ಪರಿಗಣಿಸಲಾಗುತ್ತದೆ. ನೀವು ಹಲವು ತಿಂಗಳುಗಳಿಂದ ಅಥವಾ ವರ್ಷಗಳಿಂದ ಒಂದು ಗುರಿಯನ್ನು ಸಾಧಿಸಲು ಹೆಣಗಾಡುತ್ತಿದ್ದೀರಾ ಅಥವಾ ಅದನ್ನು ಸಾಧಿಸಲು ಪ್ರಯತ್ನಿಸುತ್ತಿದ್ದೀರಾ ಮತ್ತು ಮುಂದಿನ ದಿನಗಳಲ್ಲಿ ನೀವು ಆ ಗುರಿಯನ್ನು ಸಾಧಿಸುತ್ತೀರಿ ಎಂಬುದು ಈ ಕನಸಿನ ಅರ್ಥ.
ಜಲಪಾತ ಅಥವಾ ನದಿಯ ನೀರಿನಲ್ಲಿ ನೀವು ಸ್ನಾನ ಮಾಡುತ್ತಿರುವ ರೀತಿ ಕನಸು ಬಿದ್ದರೆ ಅದು ತುಂಬಾನೇ ಒಳ್ಳೆಯ ಕನಸು ಎಂದು ಹೇಳಲಾಗುತ್ತದೆ. ಮುಂಬರುವ ದಿನಗಳಲ್ಲಿ ನಿಮಗೆ ಸಂತೋಷ, ಧನ ಪ್ರಾಪ್ತಿಯಾಗುತ್ತದೆ ಎಂಬುದು ಇದರ ಅರ್ಥ. ಅಷ್ಟೇ ಅಲ್ಲದೆ ಬರುವ ದಿನಗಳಲ್ಲಿ ನಿಮ್ಮ ಆರೋಗ್ಯ ತುಂಬಾ ಚೆನ್ನಾಗಿರುತ್ತದೆ ಎಂಬುದರ ಸೂಚನೆಯೂ ಹೌದು.
ನೀವು ಯಾವುದೋ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು ಸ್ನಾನ ಮಾಡುತ್ತಿರುವಂತೆ ಕನಸು ಕಂಡರೆ, ಈ ಕನಸಿನ ವ್ಯಾಖ್ಯಾನವು ಮುಂದಿನ ದಿನಗಳಲ್ಲಿ ನೀವು ಅನಾರೋಗ್ಯದಿಂದ ಚೇತರಿಸಿಕೊಳ್ಳುತ್ತೀರಿ ಎಂದು ಸೂಚಿಸುತ್ತದೆ. ನೀವು ಉತ್ತಮ ಆರೋಗ್ಯದಿಂದಿದ್ದು, ಇಂತಹ ಕನಸು ಕಂಡರೆ, ಮುಂದಿನ ದಿನಗಳಲ್ಲಿ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ನೀವು ಹೆಚ್ಚು ಜಾಗರೂಕರಾಗಿರುತ್ತೀರಿ ಎಂದರ್ಥ ಎಂದು ಹೇಳಲಾಗುತ್ತದೆ.
ಇದನ್ನೂ ಓದಿ: ಮೇಷದಿಂದ ವೃಷಭ ರಾಶಿಗೆ ಬುಧ ಸಂಚಾರ; ಈ 3 ರಾಶಿಗಳ ಲಕ್ ಬದಲಾಗಲಿದೆ!
ಮತ್ತೊಂದೆಡೆ, ನೀವು ಕೊಳಕು ನೀರಿನಲ್ಲಿ ಸ್ನಾನ ಮಾಡುವ ಕನಸು ಕಂಡರೆ, ಆ ಕನಸು ಒಳ್ಳೆಯದಲ್ಲ. ಈ ಕನಸು ಮುಂಬರುವ ದಿನಗಳಲ್ಲಿ ನೀವು ಕೆಲವು ಭಾವನಾತ್ಮಕ ಯಾತನೆಯನ್ನು ಅನುಭವಿಸುವಿರಿ ಎಂದು ಎಚ್ಚರಿಸುತ್ತದೆ. ಈ ಕನಸು ಅಪಾಯಕಾರಿ ಕೆಲಸಗಳ ಬಗ್ಗೆ ಬಹಳ ಜಾಗರೂಕರಾಗಿರಿ ಮತ್ತು ಕಾರ್ಯನಿರ್ವಹಿಸುವ ಮೊದಲು ಬುದ್ಧಿವಂತಿಕೆಯಿಂದ ಯೋಚಿಸಿ ಎಂಬ ಎಚ್ಚರಿಕೆಯ ಮುನ್ಸೂಚನೆ ಎಂದು ಹೇಳಲಾಗಿದೆ.
ಆಧ್ಯಾತ್ಮಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ