Astrological Prediction: 3 ವರ್ಷದಲ್ಲಿ ಪ್ರಧಾನಿ ಮೋದಿ ಈ ವಿಚಾರಗಳನ್ನು ಗೆಲ್ಲಲೇಬೇಕು, ಎಚ್ಚರ ತಪ್ಪಿದ್ರೆ ಸಂಕಷ್ಟ ಖಂಡಿತ!
ಖ್ಯಾತ ಜ್ಯೋತಿಷಿ ಮನೀಜಾ ಅಹುಜಾ ಅವರು 2025ರಿಂದ 2027ರವರೆಗೆ ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ಕಠಿಣ ಸಮಯ ಬರಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ಶನಿ ಮತ್ತು ಶುಕ್ರ ಅಷ್ಟಮ ಭಾವದಲ್ಲಿರುವುದರಿಂದ ತೀವ್ರ ಒತ್ತಡ ಮತ್ತು ಸಂಘರ್ಷಗಳು ಎದುರಾಗುವ ಸಾಧ್ಯತೆ ಇದೆ. ಆದಾಗ್ಯೂ, ಮೋದಿಯವರ ಸಾಮರ್ಥ್ಯ ಮತ್ತು ಬುದ್ಧಿವಂತಿಕೆಯಿಂದ ಈ ಸವಾಲುಗಳನ್ನು ನಿಭಾಯಿಸಲು ಸಾಧ್ಯವಾಗುವುದು ಎಂದು ಅವರು ವಿವರಿಸಿದ್ದಾರೆ.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ 2025ರಿಂದ 2027ರ ವರೆಗೆ ಪ್ರಧಾನಿ ನರೇಂದ್ರ ಮೋದಿ ಅವರ ಮುಂದಿನ ದಿನಗಳು ಹೇಗಿರಲಿವೆ ಎಂಬುದರ ಕುರಿತು ಖ್ಯಾತ ಜ್ಯೋತಿಷಿಗಳಾದ ಮನೀಜಾ ಅಹುಜಾ(Maneeza Ahuja) ಅವರು ವಿವರಿಸಿದ್ದಾರೆ. ಈ ಮೂರು ವರ್ಷ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಬಹಳ ಕಠಿಣ ಮತ್ತು ಸವಾಲಿನ ಕಾಲವಾಗಿರುತ್ತದೆ ಎಂದು ಎಚ್ಚರಿಸಿದ್ದಾರೆ. ಈ ಅವಧಿ ಅವರಿಗೆ ಸಂಕಷ್ಟದಿಂದ ಕೂಡಿದ್ದರೂ ಕೂಡ ಅವರ ಸಾಮರ್ಥ್ಯ ಮತ್ತು ಬುದ್ಧಿವಂತಿಕೆಯ ಮೂಲಕ ಅವರು ಇದನ್ನು ಯಶಸ್ವಿಯಾಗಿ ನಿಭಾಯಿಸುವ ಸಾಧ್ಯತೆಗಳೂ ಇವೆ ಎಂದು ಅಹುಜಾ ವಿವರಿಸಿದ್ದಾರೆ.
ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಭಯೋತ್ಪಾದಕ ತಾಣಗಳ ಮೇಲೆ ಯಶಸ್ವಿಯಾಗಿ ದಾಳಿ ನಡೆಸಿದ ಆಪರೇಷನ್ ಸಿಂಧೂರ ಕಾರ್ಯಾಚರಣೆಗೆ ಪ್ರಧಾನಿ ನರೇಂದ್ರ ಮೋದಿಗೆ ಎಲ್ಲೆಡೆಯಿಂದ ಶ್ಲಾಘನೆ ವ್ಯಕ್ತವಾಗಿದೆ. ಭಾರತದ ಪ್ರಧಾನಿಯ ಆಡಳಿತ ಕಾರ್ಯವೈಖರಿಯನ್ನು ಭಾರತೀಯರು ಕೊಂಡಾಡುತ್ತಿದ್ದಾರೆ. ಆದರೆ ಇನ್ನು ಮುಂದಿನ ಎರಡು ಮೂರು ವರ್ಷಗಳ ಆಡಳಿತಾವಧಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಭವಿಷ್ಯ ಹೇಗಿರಲಿವೆ ಎಂಬುದರ ಕುರಿತು @maneezaahuja ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿರುವ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.
ವಿಡಿಯೋ ಇಲ್ಲಿದೆ ನೋಡಿ:
View this post on Instagram
ಜ್ಯೋತಿಷಿಗಳಾದ ಮನೀಜಾ ಅಹುಜಾ ಅವರು ವಿಡಿಯೋದಲ್ಲಿ ಹೇಳಿರುವಂತೆ 2025ರಿಂದ 2027ರ ವರೆಗೆ ಪ್ರಧಾನಿ ಮೋದಿಯವರು ಕಠಿಣ ದಿನಗಳನ್ನು ಎದುರಿಸಲಿದ್ದಾರೆ. ಮೋದಿ ಅವರ ಜನ್ಮದಿನಾಂಕದ ಅನುಸಾರ ಅವರ ಜಾತಕದಲ್ಲಿ 2026ರ ಸೆಪ್ಟೆಂಬರ್ ವರೆಗೆ ಶನಿ ಮತ್ತು ಶುಕ್ರ ಅಷ್ಟಮ ಭಾವದಲ್ಲಿ ಇರುತ್ತಾರೆ. ಈ ಸ್ಥಿತಿ ತೀವ್ರ ಒತ್ತಡ ಮತ್ತು ಸಂಘರ್ಷದ ಪರಿಸ್ಥಿತಿಗಳತ್ತ ಸೂಚಿಸುತ್ತದೆ. ತಂತ್ರಾತ್ಮಕ ನಿರ್ಣಯಗಳನ್ನು ಮರುಪರಿಶೀಲನೆ ಮತ್ತು ಮರುನಿಗದಿಪಡಿಸುವ ಅಗತ್ಯವಿರುತ್ತದೆ. ಯುದ್ಧಸಮಾನ ಪರಿಸ್ಥಿತಿಗಳನ್ನು ಎದುರಿಸಬೇಕಾಗಬಹುದು, ಇದರಲ್ಲಿ ಎಚ್ಚರತೆ ಮತ್ತು ಬುದ್ಧಿವಂತಿಕೆ ಅತ್ಯಂತ ಅಗತ್ಯವಿರುತ್ತದೆ. ಅಂದರೆ, ಸವಾಲುಗಳು ಇದ್ದರೂ ಕೂಡ, ಅವುಗಳನ್ನು ಎದುರಿಸಿ ಜಯಿಸುವ ಸಾಮರ್ಥ್ಯವೂ ಇವರಲ್ಲಿ ಇರುತ್ತದೆ ಎಂದು ಹೇಳಿದ್ದಾರೆ.
ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




