AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Swapna Shastra: ನೀವು ನದಿಯಲ್ಲಿ ಸ್ನಾನ ಮಾಡುತ್ತಿರುವಂತೆ ಕನಸು ಕಂಡರೆ ಏನರ್ಥ?

ಸ್ವಪ್ನಶಾಸ್ತ್ರದ ಪ್ರಕಾರ, ನದಿಯಲ್ಲಿ ಸ್ನಾನ ಮಾಡುವಂತೆ ಕಾಣುವ ಕನಸು ಅನೇಕ ಅರ್ಥಗಳನ್ನು ಹೊಂದಿದೆ. ಅದರಂತೆ ನಿಮ್ಮ ಕನಸಿನಲ್ಲಿ ನೀವು ನದಿ ತೀರದಲ್ಲಿ ಸ್ನಾನ ಮಾಡುತ್ತಿರುವಂತೆ ಕನಸು ಕಂಡರೆ ಏನರ್ಥ, ಇದು ಶುಭವೋ ಅಥವಾ ಅಶುಭವೋ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ. ಕೆಲವೊಂದು ಕನಸುಗಳು ಶುಭವಾದರೆ ಇನ್ನೂ ಕೆಲವು ಕನಸುಗಳು ಅಶುಭ ಸೂಚನೆಯ ಮುನ್ಸೂಚನೆಯಾಗಿರಬಹುದು. ಆದ್ದರಿಂದ ಸ್ವಪ್ನಶಾಸ್ತ್ರವನ್ನು ನಿರ್ಲಕ್ಷ್ಯಿಸಬೇಡಿ ಎಂದು ಜ್ಯೋತಿಷ್ಯ ಶಾಸ್ತ್ರಜ್ಞರು ಎಚ್ಚರಿಸುತ್ತಾರೆ.

Swapna Shastra: ನೀವು ನದಿಯಲ್ಲಿ ಸ್ನಾನ ಮಾಡುತ್ತಿರುವಂತೆ ಕನಸು ಕಂಡರೆ ಏನರ್ಥ?
River Bath Dream Meaning
ಅಕ್ಷತಾ ವರ್ಕಾಡಿ
|

Updated on: May 13, 2025 | 10:27 AM

Share

ಸ್ವಪ್ನ ಶಾಸ್ತ್ರದ ಪ್ರಕಾರ ಪ್ರತಿಯೊಂದು ಕನಸಿಗೂ ವಿಶೇಷ ಅರ್ಥವಿದೆ. ಕೆಲವು ಕನಸುಗಳು ಶುಭ ಸೂಚನೆಯಾದರೆ ಕೆಲವು ಕನಸುಗಳನ್ನು ಅಶುಭ ಸೂಚನೆಯ ಮುನ್ಸೂಚನೆ ಎಂದು ಜ್ಯೋತಿಷ್ಯ ಶಾಸ್ತ್ರಜ್ಞರು ಎಚ್ಚರಿಸುತ್ತಾರೆ. ಅದರಂತೆ ನಿಮ್ಮ ಕನಸಿನಲ್ಲಿ ನೀವು ನದಿ ತೀರದಲ್ಲಿ ಸ್ನಾನ ಮಾಡುತ್ತಿರುವಂತೆ ಕನಸು ಕಂಡರೆ ಏನರ್ಥ, ಇದು ಶುಭವೋ ಅಥವಾ ಅಶುಭವೋ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ನದಿ ತೀರದಲ್ಲಿ ಪಾದಗಳನ್ನು ತೋರಿಯುತ್ತಿರುವಂತೆ ಕನಸು:

ಸ್ವಪ್ನ ಶಾಸ್ತ್ರದ ಪ್ರಕಾರ ನೀವು ನಿಮ್ಮ ಪಾದಗಳನ್ನು ತೊಳೆಯುತ್ತಿರುವಂತೆ ಕನಸು ಕಂಡರೆ, ಆ ಕನಸನ್ನು ತುಂಬಾ ಒಳ್ಳೆಯ ಕನಸು ಎಂದು ಪರಿಗಣಿಸಲಾಗುತ್ತದೆ. ನೀವು ಹಲವು ತಿಂಗಳುಗಳಿಂದ ಅಥವಾ ವರ್ಷಗಳಿಂದ ಒಂದು ಗುರಿಯನ್ನು ಸಾಧಿಸಲು ಹೆಣಗಾಡುತ್ತಿದ್ದೀರಾ ಅಥವಾ ಅದನ್ನು ಸಾಧಿಸಲು ಪ್ರಯತ್ನಿಸುತ್ತಿದ್ದೀರಾ ಮತ್ತು ಮುಂದಿನ ದಿನಗಳಲ್ಲಿ ನೀವು ಆ ಗುರಿಯನ್ನು ಸಾಧಿಸುತ್ತೀರಿ ಎಂಬುದು ಈ ಕನಸಿನ ಅರ್ಥ.

ನದಿಯಲ್ಲಿ ಸ್ನಾನ ಮಾಡುತ್ತಿರುವಂತೆ ಕನಸು:

ಜಲಪಾತ ಅಥವಾ ನದಿಯ ನೀರಿನಲ್ಲಿ ನೀವು ಸ್ನಾನ ಮಾಡುತ್ತಿರುವ ರೀತಿ ಕನಸು ಬಿದ್ದರೆ ಅದು ತುಂಬಾನೇ ಒಳ್ಳೆಯ ಕನಸು ಎಂದು ಹೇಳಲಾಗುತ್ತದೆ. ಮುಂಬರುವ ದಿನಗಳಲ್ಲಿ ನಿಮಗೆ ಸಂತೋಷ, ಧನ ಪ್ರಾಪ್ತಿಯಾಗುತ್ತದೆ ಎಂಬುದು ಇದರ ಅರ್ಥ. ಅಷ್ಟೇ ಅಲ್ಲದೆ ಬರುವ ದಿನಗಳಲ್ಲಿ ನಿಮ್ಮ ಆರೋಗ್ಯ ತುಂಬಾ ಚೆನ್ನಾಗಿರುತ್ತದೆ ಎಂಬುದರ ಸೂಚನೆಯೂ ಹೌದು.

ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು ಸ್ನಾನ ಮಾಡುತ್ತಿರುವಂತೆ ಕನಸು:

ನೀವು ಯಾವುದೋ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು ಸ್ನಾನ ಮಾಡುತ್ತಿರುವಂತೆ ಕನಸು ಕಂಡರೆ, ಈ ಕನಸಿನ ವ್ಯಾಖ್ಯಾನವು ಮುಂದಿನ ದಿನಗಳಲ್ಲಿ ನೀವು ಅನಾರೋಗ್ಯದಿಂದ ಚೇತರಿಸಿಕೊಳ್ಳುತ್ತೀರಿ ಎಂದು ಸೂಚಿಸುತ್ತದೆ. ನೀವು ಉತ್ತಮ ಆರೋಗ್ಯದಿಂದಿದ್ದು, ಇಂತಹ ಕನಸು ಕಂಡರೆ, ಮುಂದಿನ ದಿನಗಳಲ್ಲಿ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ನೀವು ಹೆಚ್ಚು ಜಾಗರೂಕರಾಗಿರುತ್ತೀರಿ ಎಂದರ್ಥ ಎಂದು ಹೇಳಲಾಗುತ್ತದೆ.

ಇದನ್ನೂ ಓದಿ: ಮೇಷದಿಂದ ವೃಷಭ ರಾಶಿಗೆ ಬುಧ ಸಂಚಾರ; ಈ 3 ರಾಶಿಗಳ ಲಕ್‌ ಬದಲಾಗಲಿದೆ!

ಕೊಳಕು ನೀರಿನಲ್ಲಿ ಸ್ನಾನ ಮಾಡುತ್ತಿರುವಂತೆ ಕನಸು:

ಮತ್ತೊಂದೆಡೆ, ನೀವು ಕೊಳಕು ನೀರಿನಲ್ಲಿ ಸ್ನಾನ ಮಾಡುವ ಕನಸು ಕಂಡರೆ, ಆ ಕನಸು ಒಳ್ಳೆಯದಲ್ಲ. ಈ ಕನಸು ಮುಂಬರುವ ದಿನಗಳಲ್ಲಿ ನೀವು ಕೆಲವು ಭಾವನಾತ್ಮಕ ಯಾತನೆಯನ್ನು ಅನುಭವಿಸುವಿರಿ ಎಂದು ಎಚ್ಚರಿಸುತ್ತದೆ. ಈ ಕನಸು ಅಪಾಯಕಾರಿ ಕೆಲಸಗಳ ಬಗ್ಗೆ ಬಹಳ ಜಾಗರೂಕರಾಗಿರಿ ಮತ್ತು ಕಾರ್ಯನಿರ್ವಹಿಸುವ ಮೊದಲು ಬುದ್ಧಿವಂತಿಕೆಯಿಂದ ಯೋಚಿಸಿ ಎಂಬ ಎಚ್ಚರಿಕೆಯ ಮುನ್ಸೂಚನೆ ಎಂದು ಹೇಳಲಾಗಿದೆ.

ಆಧ್ಯಾತ್ಮಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಅವಳಿ ಮಕ್ಕಳನ್ನ ಕೊಂದು ತಾಯಿ ಆತ್ಮಹತ್ಯೆಗೆ ಯತ್ನಿಸಿದ್ಯಾಕೆ?
ಅವಳಿ ಮಕ್ಕಳನ್ನ ಕೊಂದು ತಾಯಿ ಆತ್ಮಹತ್ಯೆಗೆ ಯತ್ನಿಸಿದ್ಯಾಕೆ?
‘ಭೀಮ ತೀರದಲ್ಲಿ’ ಸಿನಿಮಾ ಮರು ಬಿಡುಗಡೆ ಯಾಕೆ? ಕಾರಣ ತಿಳಿಸಿದ ಚಿತ್ರತಂಡ
‘ಭೀಮ ತೀರದಲ್ಲಿ’ ಸಿನಿಮಾ ಮರು ಬಿಡುಗಡೆ ಯಾಕೆ? ಕಾರಣ ತಿಳಿಸಿದ ಚಿತ್ರತಂಡ
ಸಚಿವರ ಬರ್ತ್​​ಡೇ: ಸರ್ಕಾರಿ ಶಾಲೆ ಮಕ್ಕಳಿಗೆ, ಪೋಷಕರಿಗೆ ವಿಮಾನಯಾನ ಭಾಗ್ಯ
ಸಚಿವರ ಬರ್ತ್​​ಡೇ: ಸರ್ಕಾರಿ ಶಾಲೆ ಮಕ್ಕಳಿಗೆ, ಪೋಷಕರಿಗೆ ವಿಮಾನಯಾನ ಭಾಗ್ಯ
ಬಹ್ರೇನ್​​ನ ಗಗನಚುಂಬಿ ಕಟ್ಟಡಗಳ ಮೇಲೆ ಇರಾನ್ ದಾಳಿ
ಬಹ್ರೇನ್​​ನ ಗಗನಚುಂಬಿ ಕಟ್ಟಡಗಳ ಮೇಲೆ ಇರಾನ್ ದಾಳಿ
ಸಚಿವ ಮಂಕಾಳು ವೈದ್ಯ ಮಾತಿಗೆ ಸಿಟ್ಟಾಗಿ ಸಭೆಯಿಂದ ಹೊರನಡೆದ ಸತೀಶ್ ಸೈಲ್
ಸಚಿವ ಮಂಕಾಳು ವೈದ್ಯ ಮಾತಿಗೆ ಸಿಟ್ಟಾಗಿ ಸಭೆಯಿಂದ ಹೊರನಡೆದ ಸತೀಶ್ ಸೈಲ್
ಮಿಸ್ ಆಗಿ ಅಮೆರಿಕದ 3 ಫೈಟರ್​​ ಜೆಟ್​​ಗಳನ್ನು ಹೊಡೆದುರುಳಿಸಿದ ಕುವೈತ್​​
ಮಿಸ್ ಆಗಿ ಅಮೆರಿಕದ 3 ಫೈಟರ್​​ ಜೆಟ್​​ಗಳನ್ನು ಹೊಡೆದುರುಳಿಸಿದ ಕುವೈತ್​​
ಫೋಕ್ಸೋ ಕೇಸ್: ಮಲ್ಲಿಕಾರ್ಜುನ ಮುತ್ಯಾ ಬೆಂಬಲಕ್ಕೆ ನಿಂತ ಭಕ್ತ ಸಮೂಹ
ಫೋಕ್ಸೋ ಕೇಸ್: ಮಲ್ಲಿಕಾರ್ಜುನ ಮುತ್ಯಾ ಬೆಂಬಲಕ್ಕೆ ನಿಂತ ಭಕ್ತ ಸಮೂಹ
ಎಲ್ಲಾ ಸರ್ಕಾರದಲ್ಲೂ ಫೋನ್ ಟ್ಯಾಪಿಂಗ್ ಇತ್ತು, ಈಗಲೂ ಇದೆ: HDK ಸ್ಫೋಟಕ ಮಾತು
ಎಲ್ಲಾ ಸರ್ಕಾರದಲ್ಲೂ ಫೋನ್ ಟ್ಯಾಪಿಂಗ್ ಇತ್ತು, ಈಗಲೂ ಇದೆ: HDK ಸ್ಫೋಟಕ ಮಾತು
ಸ್ವಾಮಿ ವಿವೇಕಾನಂದರ ಕೆನಡಾ ಭೇಟಿಯನ್ನು ಉಲ್ಲೇಖಿಸಿದ ಪ್ರಧಾನಿ ಕಾರ್ನಿ
ಸ್ವಾಮಿ ವಿವೇಕಾನಂದರ ಕೆನಡಾ ಭೇಟಿಯನ್ನು ಉಲ್ಲೇಖಿಸಿದ ಪ್ರಧಾನಿ ಕಾರ್ನಿ
Lunar Eclipse 2026: ಚಂದ್ರ ಗ್ರಹಣ ಯಾರಿಗೆ ಶುಭ ಸುದ್ದಿ ತರುತ್ತೆ?
Lunar Eclipse 2026: ಚಂದ್ರ ಗ್ರಹಣ ಯಾರಿಗೆ ಶುಭ ಸುದ್ದಿ ತರುತ್ತೆ?