Garuda Purana: ಗರುಡ ಪರಾಣ ಎಲ್ಲರೂ ಕೇಳಬೇಕು, ಏಕೆ? ಏನಿದರ ಮಹತ್ವ? ತಿಳಿಯಿರಿ

| Updated By: Digi Tech Desk

Updated on: Oct 27, 2021 | 9:36 AM

Garuda purana in Kannada : ಮೃತನ ಆತ್ಮ ಗರುಡ ಪುರಾಣ ಆಲಿಸಿದ ಬಳಿಕವೇ ಅದು ತನ್ನ ಮುಕ್ತಿ ಮಾರ್ಗದಲ್ಲಿ ಹಜ್ಜೆ ಹಾಕುತ್ತದೆ. ತನ್ನ ಇಹಲೋಕದ ವ್ಯವಹಾರಗಳನ್ನೆಲ್ಲ ಇಲ್ಲಿಯೇ ಬಿಟ್ಟು ಪರ ಲೋಕ, ಪಾರಮಾರ್ಥಿಕ ಲೋಕದತ್ತ ನಡೆಯುತ್ತದೆ. ಈ ಮಹತ್ವಗಳನ್ನು ಅರಿಯುವಂತಾಗಲು ಗರುಡ ಪುರಾಣ ಆಲಿಸಬೇಕಾಗುತ್ತದೆ.

Garuda Purana: ಗರುಡ ಪರಾಣ ಎಲ್ಲರೂ ಕೇಳಬೇಕು, ಏಕೆ? ಏನಿದರ ಮಹತ್ವ? ತಿಳಿಯಿರಿ
Garuda Purana: ಗರುಡ ಪರಾಣ ಎಲ್ಲರೂ ಕೇಳಬೇಕು, ಏಕೆ? ಏನಿದರ ಮಹತ್ವ? ತಿಳಿಯಿರಿ
Follow us on

ಗರುಡ ಪುರಾಣದಲ್ಲಿ ಹೇಳಿರುವುದೆಲ್ಲ ಸ್ವಯಂ ನಾರಾಯಣನೇ ಹೇಳಿರುವುದಾಗಿದೆ. ಯಾರದೇ ಸಾವು ಸಂಭವಿಸಿದಾಗ ಪರಿವಾರದ ಜನರು ಗರುಡ ಪುರಾಣವನ್ನು ಪಠಿಸುವ ಪರಿಪಾಠವಿದೆ. ಇದರಿಂದ ಮೃತರ ಆತ್ಮಕ್ಕೆ ಸದ್ಗತಿ ಸಿಗುತ್ತದೆ ಎಂಬುದು ನಂಬಿಕೆ. ಅದರಿಂದ ಮುಂದಕ್ಕೆ ಕುಟುಂಬಸ್ಥರಿಗೆ ಸನ್ಮಾರ್ಗದಲ್ಲಿ ನಡೆಯುವುದಕ್ಕೆ ಪ್ರೇರಣೆ ಸಿಗುತ್ತದೆ, ದಾರಿದೀಪವಾಗುತ್ತದೆ. ಗರುಡ ಪುರಾಣದ ಮೂಲಕ ವ್ಯಕ್ತಿಯ ಕರ್ಮಗಳನ್ನು ಆಧರಿಸಿ, ಮೃತ್ಯುವಿನ ನಂತರದ ಸ್ಥಿತಿಗತಿಗಳು, ಸ್ವರ್ಗ ಪ್ರಾಪ್ತಿಯಾಗುತ್ತದೋ ಅಥವಾ ನರಕವೇ ಗತಿಯೋ ಎಂಬುದೂ ತಿಳಿದುಬರುತ್ತದೆ. ಹಿಂದೂಗಳ ಮಹಾಪುರಾಣವಾದ ಗರುಡ ಪುರಾಣದಲ್ಲಿ 19 ಸಾವಿರ ಶ್ಲೋಕಗಳು ಇವೆ. ಅದರಲ್ಲಿ 7 ಸಾವಿರ ಶ್ಲೋಕಗಳು ವ್ಯಕ್ತಿಯ ಜ್ಞಾನ, ಧರ್ಮ, ನೀತಿ, ರಹಸ್ಯ, ವ್ಯಾವಹಾರಿಕ ಜೀವನ, ಸದಾಚಾರ, ಯಕ್ಷ, ಯಜ್ಞ, ತಪ ಮುಂತಾದವುಗಳ ಮಹತ್ವವನ್ನು ತಿಳಿಯಹೇಳಲಾಗಿದೆ. ಇದು ಜನರನ್ನು ಸರಿಯಾದ ಮಾರ್ಗದಲ್ಲಿ ಜೀವನ ಸಾಗಿಸುವುದಕ್ಕೆ ಪ್ರೇರೇಪಿಸುತ್ತದೆ.

ಯಾರದೇ ಸಾವು ಸಂಭವಿಸಿದಾಗ ಆ ಸಾವಿನ ಮನೆಯಲ್ಲಿ ಗರುಡ ಪುರಾಣದ ಪಠನ ನಡೆದರೆ ಮೃತ್ಯುವಿನ ಕಾರಣವಾಗಿ ಅವರ ಸಂಬಂಧಿಕರು ಮುಂದೆ ತಮ್ಮ ತಮ್ಮ ಜೀವನಗಳಲ್ಲಿ ಸರಿಯಾದ ದಾರಿಯಲ್ಲಿ ಸಾಗುವುದಕ್ಕೆ ಅನುವು ಮಾಡಿಕೊಡುತ್ತದೆ. ತಪ್ಪುಗಳು ಮಾಡಿದರೆ ಏನಾಗುತ್ತದೆ ಎಂಬುದನ್ನೂ ಉದಾಹರಣೆಗಳೊಂದಿಗೆ ದೃಷ್ಟಾಂತಗಳೊಂದಿಗೆ ಗರುಡ ಪುರಾಣದಲ್ಲಿ ಹೇಳಲಾಗುತ್ತದೆ. ಇದನ್ನು ಆಲಿಸಿದ ಯಾರೇ ಆಗಲಿ ಮುಂದೆ ತಮ್ಮ ಜೀವನದ ಮಾರ್ಗದಲ್ಲಿ ಹೇಗೆ ಸಾಗಬೇಕು ಎಂಬುದನ್ನು ನಿರ್ಧರಿಸಿಬಿಡುತ್ತಾರೆ.

ಗರುಡ ಪುರಾಣದಲ್ಲಿ ಇನ್ನೂ ಒಂದು ಸಂಗತಿಯನ್ನು ಹೇಳಲಾಗಿದೆ. ಯಾರದೇ ಸಾವಿನ ಬಳಿಕ 13 ದಿನಗಳವರೆಗೆ ಮೃತನ ಆತ್ಮ ಅದೇ ಮನೆಯಲ್ಲಿ ವಾಸವಾಗಿರುತ್ತದೆ. ಆ ವೇಳೆಯಲ್ಲಿ ಗರುಡ ಪುರಾಣದ ಪಠನವಾದರೆ ಮೃತನ ಆತ್ಮವೂ ಅದನ್ನು ಆಲಿಸುತ್ತದೆ ಎಂಬ ನಂಬಿಕೆಯಿದೆ. ಇದರಿಂದ ಶಾಂತಿ ಸಿಗುತ್ತದೆ ಎಂದು ಗರುಡ ಪುರಾಣದಲ್ಲಿ ಹೇಳಲಾಗಿದೆ.

ಮೃತನ ಆತ್ಮ ಗರುಡ ಪುರಾಣ ಆಲಿಸಿದ ಬಳಿಕವೇ ಅದು ತನ್ನ ಮುಕ್ತಿ ಮಾರ್ಗದಲ್ಲಿ ಹಜ್ಜೆ ಹಾಕುತ್ತದೆ. ತನ್ನ ಇಹಲೋಕದ ವ್ಯವಹಾರಗಳನ್ನೆಲ್ಲ ಇಲ್ಲಿಯೇ ಬಿಟ್ಟು ಪರ ಲೋಕ, ಪಾರಮಾರ್ಥಿಕ ಲೋಕದತ್ತ ನಡೆಯುತ್ತದೆ. ಈ ಮಹತ್ವಗಳನ್ನು ಅರಿಯುವಂತಾಗಲು ಗರುಡ ಪುರಾಣ ಆಲಿಸಬೇಕಾಗುತ್ತದೆ.

Published On - 7:29 am, Wed, 27 October 21