Hanuman Jayanti 2024: ಆಂಜನೇಯನ ಜನ್ಮೋತ್ಸವ ಯಾವಾಗ? ಪೂಜಾ ತಯಾರಿ ಹೇಗಿರಬೇಕು?

| Updated By: ಅಕ್ಷಯ್​ ಪಲ್ಲಮಜಲು​​

Updated on: Mar 29, 2024 | 2:30 PM

ಭಗವಾನ್ ರಾಮನ ಮಹಾನ್ ಭಕ್ತನಾದ ಹನುಮಂತನ ಜನ್ಮದಿನಕ್ಕೆ ಹೆಚ್ಚಿನ ಮಹತ್ವವಿದೆ. ನಂಬಿಕೆಯ ಪ್ರಕಾರ, ಈ ದಿನ ಹನುಮಂತನನ್ನು ಭಕ್ತಿಯಿಂದ ಪೂಜಿಸುವುದರಿಂದ ಭಕ್ತರ ಎಲ್ಲಾ ಕಷ್ಟಗಳು ಪರಿಹಾರವಾಗುತ್ತದೆ. ಯಾವುದೇ ರೀತಿಯ ಭಯವಿರಲಿ ಅಥವಾ ತೊಂದರೆಗಳಿರಲಿ ಅದರಿಂದ ಮುಕ್ತಿ ಪಡೆಯುತ್ತಾರೆ ಎನ್ನುವ ನಂಬಿಕೆ ಇದೆ. ಹಾಗಾದರೆ ಈ ಬಾರಿ ಎಪ್ರಿಲ್ ನಲ್ಲಿ ಹನುಮಾನ್ ಜಯಂತಿ ಯಾವ ದಿನದಂದು ಬರುತ್ತದೆ? ಈ ದಿನಕ್ಕೆ ಸಂಬಂಧಿಸಿದ ಧಾರ್ಮಿಕ ಮಹತ್ವವೇನು? ಇಲ್ಲಿದೆ ಮಾಹಿತಿ.

Hanuman Jayanti 2024: ಆಂಜನೇಯನ ಜನ್ಮೋತ್ಸವ ಯಾವಾಗ? ಪೂಜಾ ತಯಾರಿ ಹೇಗಿರಬೇಕು?
Follow us on

ಹಿಂದೂಗಳ ಪ್ರಮುಖ ಹಬ್ಬಗಳಲ್ಲಿ ಹನುಮ ಜಯಂತಿಯೂ ಒಂದಾಗಿದೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ಈ ಹಬ್ಬವನ್ನು ವರ್ಷಕ್ಕೆ ಎರಡು ಬಾರಿ ಆಚರಿಸಲಾಗುತ್ತದೆ. ಅದರ ಹಿಂದೆ ಎರಡು ವಿಭಿನ್ನ ನಂಬಿಕೆಗಳಿವೆ. ಚೈತ್ರ ಮಾಸದಲ್ಲಿ ಬರುವ ಹನುಮ ಜಯಂತಿಯು ಆಂಜನೇಯನ ಜನ್ಮದಿನವಾಗಿ ಆಚರಿಸಲಾಗುತ್ತದೆ. ವರ್ಷದ ಎರಡನೇ ಹನುಮ ಜಯಂತಿಯೂ ದೀಪಾವಳಿಯ ಹಬ್ಬದ ಹತ್ತಿರ ಬರುತ್ತದೆ. ಅದನ್ನು ಕಾರ್ತಿಕ ಮಾಸದ ಕೃಷ್ಣ ಪಕ್ಷದ ಚತುರ್ದಶಿಯಂದು ಆಚರಿಸಲಾಗುತ್ತದೆ. ಇದು ಕೆಟ್ಟದ್ದರ ವಿರುದ್ಧ ಆತನ ಜಯದ ಆಚರಣೆಯಾಗಿದೆ. ಇದನ್ನು ವಿಜಯ ಅಭಿನಂದನೆಯ ಹಬ್ಬವಾಗಿ ಆಚರಿಸಲಾಗುತ್ತದೆ. ಹಾಗಾದರೆ ಈ ಬಾರಿ ಎಪ್ರಿಲ್ ನಲ್ಲಿ ಹನುಮಾನ್ ಜಯಂತಿ ಯಾವ ದಿನದಂದು ಬರುತ್ತದೆ? ಈ ದಿನಕ್ಕೆ ಸಂಬಂಧಿಸಿದ ಧಾರ್ಮಿಕ ಮಹತ್ವವೇನು? ಇಲ್ಲಿದೆ ಮಾಹಿತಿ.

ಹನುಮಾನ್ ಜಯಂತಿ ಯಾವಾಗ?

ಆಂಜನೇಯನ ಜನ್ಮೋತ್ಸವವನ್ನು ಪ್ರತಿವರ್ಷ ಚೈತ್ರ ಮಾಸದ ಹುಣ್ಣಿಮೆಯ ದಿನದಂದು ಆಚರಿಸಲಾಗುತ್ತದೆ. ಹಿಂದೂ ಕ್ಯಾಲೆಂಡರ್ ಪ್ರಕಾರ, ಈ ಬಾರಿ ಹುಣ್ಣಿಮೆ ತಿಥಿಯು ಎ. 23 ರಂದು ಮುಂಜಾನೆ 3:25 ಕ್ಕೆ ಪ್ರಾರಂಭವಾಗಿ ಎ. 24 ರಂದು ಬೆಳಿಗ್ಗೆ 5:18 ಕ್ಕೆ ಕೊನೆಗೊಳ್ಳುತ್ತದೆ. ಹಾಗಾಗಿ ಎ. 23ರ ಮಂಗಳವಾರ ಹನುಮ ಜಯಂತಿಯನ್ನು ಆಚರಿಸಲಾಗುತ್ತದೆ.

ಹನುಮಾನ್ ಜಯಂತಿಯ ಮಹತ್ವವೇನು?

ಭಗವಾನ್ ರಾಮನ ಮಹಾನ್ ಭಕ್ತನಾದ ಹನುಮಂತನ ಜನ್ಮದಿನಕ್ಕೆ ಹೆಚ್ಚಿನ ಮಹತ್ವವಿದೆ. ನಂಬಿಕೆಯ ಪ್ರಕಾರ, ಈ ದಿನ ಹನುಮಂತನನ್ನು ಭಕ್ತಿಯಿಂದ ಪೂಜಿಸುವುದರಿಂದ ಭಕ್ತರ ಎಲ್ಲಾ ಕಷ್ಟಗಳು ಪರಿಹಾರವಾಗುತ್ತದೆ. ಯಾವುದೇ ರೀತಿಯ ಭಯವಿರಲಿ ಅಥವಾ ತೊಂದರೆಗಳಿರಲಿ ಅದರಿಂದ ಮುಕ್ತಿ ಪಡೆಯುತ್ತಾರೆ ಎನ್ನುವ ನಂಬಿಕೆ ಇದೆ.

ಇದನ್ನೂ ಓದಿ: ಕಣ್ಣಿನ ಸೆಳೆತ ಏನನ್ನು ಸೂಚಿಸುತ್ತದೆ? ಇದರ ಹಿಂದಿರುವ ಮೂಢನಂಬಿಕೆ ನಿಜವೇ?

ಈ ದಿನ ಹನುಮನನ್ನು ಹೇಗೆ ಪೂಜಿಸಬೇಕು?

ಬೆಳಿಗ್ಗೆ ಬೇಗನೆ ಎದ್ದು ಹನುಮಂತನನ್ನು ನೆನಪಿಸಿಕೊಳ್ಳುವ ಮೂಲಕ, ಅವನಿಗೆ ಗೌರವ ಸಲ್ಲಿಸಿ. ದೈನಂದಿನ ದಿನಚರಿ ಮುಗಿಸಿಕೊಂಡು ಬಂದ ನಂತರ, ಮನೆಯನ್ನು ಸ್ವಚ್ಛಗೊಳಿಸಿ ಬಳಿಕ ಸ್ನಾನ ಮಾಡಿ. ಮನೆಯಲ್ಲಿ ಗಂಗಾ ಜಲವಿದ್ದಲ್ಲಿ ಅದನ್ನು ಸ್ನಾನ ಮಾಡುವ ನೀರಿನಲ್ಲಿ ಬೆರೆಸಿಕೊಂಡು ಸ್ನಾನ ಮಾಡಿ. ಕೆಂಪು ಬಣ್ಣದ ಹೂವು, ಹಣ್ಣುಗಳು, ಧೂಪದ್ರವ್ಯ, ತುಪ್ಪದ ದೀಪ, ಕುಂಕುಮ ಇತ್ಯಾದಿಗಳಿಂದ ಹನುಮಂತನನ್ನು ಪೂಜಿಸುವುದು ಶುಭವೆಂದು ಪರಿಗಣಿಸಲಾಗಿದೆ. ನಂಬಿಕೆಯ ಪ್ರಕಾರ, ಈ ದಿನ ಹನುಮಾನ್ ಚಾಲೀಸಾ ಮತ್ತು ಅವನಿಗೆ ಸಂಬಂಧ ಪಟ್ಟ ಶ್ಲೋಕ ಪಠಣ ಮಾಡಿ, ಇದರಿಂದ ಹನುಮನು ಬೇಗನೆ ಸಂತೋಷಗೊಳ್ಳುತ್ತಾನೆ ಜೊತೆಗೆ ಎಲ್ಲಾ ಆಸೆಗಳು ಈಡೇರುತ್ತದೆ. ಈ ದಿನದಂದು ಸುಂದರ ಕಾಂಡ ಪಾರಾಯಣವನ್ನು ಸಹ ಮಾಡಲಾಗುತ್ತದೆ. ಈ ದಿನ ದೇವಸ್ಥಾನ ಅಥವಾ ಮನೆಯಲ್ಲಿ ಹನುಮಂತನನ್ನು ಆರಾಧನೆ ಮಾಡಿ ಆರತಿ ಮಾಡಿ ಪೂಜೆಯನ್ನು ಮುಕ್ತಾಯಗೊಳಿಸಿ. ಇದರಿಂದ ನಿಮಗೆ ಸಂತೋಷ, ಸಮೃದ್ಧಿ, ಶಕ್ತಿ, ಬುದ್ಧಿವಂತಿಕೆ ಎಲ್ಲವೂ ಪ್ರಾಪ್ತಿಯಾಗುತ್ತದೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ