Eye Twitching: ಕಣ್ಣಿನ ಸೆಳೆತ ಏನನ್ನು ಸೂಚಿಸುತ್ತದೆ? ಇದರ ಹಿಂದಿರುವ ಮೂಢನಂಬಿಕೆ ನಿಜವೇ?

ಯಾವುದಾದರೂ ಒಳ್ಳೆಯ ಕೆಲಸಕ್ಕೆ ಹೋಗುವಾಗ ಅಥವಾ ಶುಭ ಕಾರ್ಯ ಪ್ರಾರಂಭಿಸುವಾಗ ಕಣ್ಣಿನ ಸೆಳೆತ ಆರಂಭವಾದರೆ ಅದಕ್ಕೆ ಹಲವು ಅರ್ಥ ಕಲ್ಪಿಸುತ್ತಾರೆ. ಕೆಲವೊಮ್ಮೆ ಇದು ನಿಜವಾಗಬಹುದು? ಆಗದೆಯೂ ಇರಬಹುದು. ಇದು ಕೆಲವೇ ನಿಮಿಷ ಬಂದು ಹೋಗುವ ಸಮಸ್ಯೆಯಾದರೂ ಅದಕ್ಕೆ ನಮ್ಮಲ್ಲಿ ನೂರೆಂಟು ಅರ್ಥವಿದೆ. ಜೊತೆಗೆ ಹಿಂದೂ ಧರ್ಮದಲ್ಲಿ, ಕಣ್ಣಿನ ಸೆಳೆತ ಶುಭ ಅಥವಾ ಅಶುಭ ಸಂಕೇತವೆಂದು ನೋಡಲಾಗುತ್ತದೆ. ಹಾಗಾದರೆ ಇದು ಮಹಿಳೆ ಮತ್ತು ಪುರುಷರಲ್ಲಿ ಕಂಡು ಬಂದಾಗ ಯಾವ ರೀತಿಯ ಅರ್ಥವನ್ನು ನೀಡುತ್ತದೆ? ಈ ಮೂಢನಂಬಿಕೆ ನಿಜವೇ? ಇಲ್ಲಿದೆ ಮಾಹಿತಿ.

Eye Twitching: ಕಣ್ಣಿನ ಸೆಳೆತ ಏನನ್ನು ಸೂಚಿಸುತ್ತದೆ? ಇದರ ಹಿಂದಿರುವ ಮೂಢನಂಬಿಕೆ ನಿಜವೇ?
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on: Mar 28, 2024 | 3:32 PM

ಕಣ್ಣಿನ ಸೆಳೆತ ಅಥವಾ ರೆಪ್ಪೆ ಜೋರಾಗಿ ಬಡಿದುಕೊಳ್ಳುವುದು ಸಾಮಾನ್ಯ ವಿಷಯವಾಗಿದೆ. ಈ ಬಗ್ಗೆ ನಮಗೆ ಕೆಲವು ರೀತಿಯ ಮೂಢನಂಬಿಕೆಗಳಿವೆ. ಯಾವುದಾದರೂ ಒಳ್ಳೆಯ ಕೆಲಸಕ್ಕೆ ಹೋಗುವಾಗ ಅಥವಾ ಶುಭ ಕಾರ್ಯ ಪ್ರಾರಂಭಿಸುವಾಗ ಕಣ್ಣಿನ ಸೆಳೆತ ಆರಂಭವಾದರೆ ಅದಕ್ಕೆ ಹಲವು ಅರ್ಥ ಕಲ್ಪಿಸುತ್ತಾರೆ. ಕೆಲವೊಮ್ಮೆ ಇದು ನಿಜವಾಗಬಹುದು? ಆಗದೆಯೂ ಇರಬಹುದು. ಇದು ಕೆಲವೇ ನಿಮಿಷ ಬಂದು ಹೋಗುವ ಸಮಸ್ಯೆಯಾದರೂ ಅದಕ್ಕೆ ನಮ್ಮಲ್ಲಿ ನೂರೆಂಟು ಅರ್ಥವಿದೆ. ಜೊತೆಗೆ ಹಿಂದೂ ಧರ್ಮದಲ್ಲಿ, ಕಣ್ಣಿನ ಸೆಳೆತ ಶುಭ ಅಥವಾ ಅಶುಭ ಸಂಕೇತವೆಂದು ನೋಡಲಾಗುತ್ತದೆ. ಹಾಗಾದರೆ ಇದು ಮಹಿಳೆ ಮತ್ತು ಪುರುಷರಲ್ಲಿ ಕಂಡು ಬಂದಾಗ ಯಾವ ರೀತಿಯ ಅರ್ಥವನ್ನು ನೀಡುತ್ತದೆ? ಈ ಮೂಢನಂಬಿಕೆ ನಿಜವೇ? ಇಲ್ಲಿದೆ ಮಾಹಿತಿ.

ಮಹಿಳೆಯರಲ್ಲಿ ಕಣ್ಣಿನ ಸೆಳೆತ;

ಕಣ್ಣಿನ ಸೆಳೆತವು ಸಾಮಾನ್ಯವಾಗಿದ್ದರೂ ಕೂಡ ಹಿಂದೂ ಧರ್ಮದಲ್ಲಿ, ಈ ಸೆಳೆತವನ್ನು ಮಹಿಳೆಯರಲ್ಲಿ ಮತ್ತು ಪುರುಷರಲ್ಲಿ ವಿಭಿನ್ನವಾಗಿ ನೋಡಲಾಗುತ್ತದೆ. ಅಂದರೆ ಕೆಲವು ನಂಬಿಕೆಗಳ ಪ್ರಕಾರ ಮಹಿಳೆಯರಿಗೆ, ಎಡಗಣ್ಣಿನ ಸೆಳೆತವನ್ನು ಶುಭ ಶಕುನವೆಂದು ಹೇಳಲಾಗುತ್ತದೆ. ಆದರೆ ಬಲಗಣ್ಣಿನ ಸೆಳೆತವು ಮಹಿಳೆಯರಿಗೆ ಒಳ್ಳೆಯದಲ್ಲ, ಇದು ಮುಂದೆ ಬರುವ ಆಪತ್ತಿನ ಮುನ್ಸೂಚನೆ ಎನ್ನಲಾಗುತ್ತದೆ ಅಥವಾ ಏನಾದರೂ ಕೆಟ್ಟ ಘಟನೆ ನಿಮ್ಮ ಕುಟುಂಬದಲ್ಲಿ ಸಂಭವಿಸಲಿರುವ ಸುಳಿವು ಎಂಬ ನಂಬಿಕೆ ಇದೆ.

ಇದನ್ನೂ ಓದಿ: ಮನೆಯಲ್ಲಿರುವ ವಾಹನವನ್ನು ಯಾವ ದಿಕ್ಕಿನಲ್ಲಿ ನಿಲ್ಲಿಸಿದರೆ ಒಳ್ಳೆಯದು?

ಪುರುಷರಲ್ಲಿ ಕಣ್ಣಿನ ಸೆಳೆತ ಉಂಟಾದರೆ ಅದಕ್ಕೆ ಏನರ್ಥ?

ಪುರುಷರ ಬಗ್ಗೆ ಮಾತನಾಡುವುದಾದರೆ, ಬಲಗಣ್ಣಿನ ಸೆಳೆತವನ್ನು ಶುಭವೆಂದು ಎಡಗಣ್ಣಿನ ರೆಪ್ಪೆ ಬಲು ವೇಗವಾಗಿ ಬಡಿದು ಕೊಳ್ಳುವುದನ್ನು ಅಶುಭ ಎಂದು ಪರಿಗಣಿಸಲಾಗುತ್ತದೆ. ಬಲಗಣ್ಣಿನಲ್ಲಿ ಸೆಳೆತ ಉಂಟಾದರೆ ನಿಮಗೆ ಏನಾದರೂ ಒಳ್ಳೆಯ ಸುದ್ದಿ ಕೇಳಿ ಬರುತ್ತದೆ. ಆದರೆ ಎಡಗಣ್ಣಿನ ಸೆಳೆತ ಅಶುಭವೆಂದು ಪರಿಗಣಿಸಲಾಗುತ್ತದೆ. ಇದರರ್ಥ ನಿಮಗೆ ಏನಾದರೂ ಅಹಿತಕರ ಘಟನೆ ಸಂಭವಿಸಲಿದೆ ಎಂಬುದು ಹಿಂದಿನವರ ನಂಬಿಕೆಯಾಗಿದೆ.

ಇದನ್ನೂ ಓದಿ:

ವೈಜ್ಞಾನಿಕ ಕಾರಣವೇನು?

ಆದರೆ ಇದಕ್ಕೆ ನಿಜವಾದ ಕಾರಣವೇನು ಗೊತ್ತಾ? ಕಣ್ಣಿನ ಸೆಳೆತಕ್ಕೆ ಸಾಮಾನ್ಯ ಕಾರಣವೆಂದರೆ ಒತ್ತಡ. ಜೊತೆಗೆ ನಿಮಗೆ ಸಾಕಷ್ಟು ನಿದ್ರೆ ಸಿಗದಿದ್ದಾಗ ಅಥವಾ ನಿಮ್ಮ ಮನಸ್ಸಿನಲ್ಲಿ ಉದ್ವಿಗ್ನತೆ ಇದ್ದಾಗ ಅಥವಾ ನೀವು ಇಡೀ ದಿನ ಕಂಪ್ಯೂಟರ್ ಪರದೆಯ ಮುಂದೆ ಕಳೆದರೆ, ನೀವು ಸ್ವಲ್ಪ ಸಮಯಕ್ಕೂ ಸಹ ವಿರಾಮವನ್ನು ತೆಗೆದುಕೊಳ್ಳದಿದ್ದರೆ ಈ ಸಮಸ್ಯೆ ಕಂಡು ಬರುತ್ತದೆ. ಇದೆಲ್ಲದರ ಜೊತೆಗೆ ಒಣ ಕಣ್ಣುಗಳು ಕಣ್ಣಿನ ಸೆಳೆತಕ್ಕೆ ಕಾರಣವಾಗಬಹುದು. ಈ ರೀತಿಯ ಕಣ್ಣಿನ ಸೆಳೆತ ಉಂಟಾಗುವುದನ್ನು ಕಾಫಿ, ಟೀ ಸೇವನೆ ಕಡಿಮೆ ಮಾಡುವುದರ ಮೂಲಕ, ಮಧ್ಯಪಾನ ಸೇವಿಸದಿರುವುದು ಹೀಗೆ ಹಲವಾರು ಉಪಾಯಗಳನ್ನು ಕಂಡುಕೊಳ್ಳುವ ಮೂಲಕ ಈ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದು. ಪ್ರಸ್ತುತ ನಮ್ಮ ಜೀವನಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳುವುದು ಮುಖ್ಯವಾಗುತ್ತದೆ. ಕೆಲವು ಚಿಕ್ಕಪುಟ್ಟ ವಿಷಯಗಳಲ್ಲಿ ಬದಲಾವಣೆ ಮಾಡಿಕೊಳ್ಳುವುದರಿಂದ ಕಣ್ಣಿನ ಸೆಳೆತದಿಂದ ಉಂಟಾಗುವ ತೊಂದರೆಗಳನ್ನು ತಪ್ಪಿಸಬಹುದು. ಈ ಎಲ್ಲಾ ಪ್ರಯತ್ನಗಳ ನಂತರವೂ ನಿಮ್ಮ ಕಣ್ಣುಗಳು ಸೆಳೆಯುತ್ತಲೇ ಇದ್ದಲ್ಲಿ ವೈದ್ಯರ ಸೂಕ್ತ ಮಾಹಿತಿ ಹಾಗೂ ಚಿಕಿತ್ಸೆ ಅತ್ಯಗತ್ಯವಾಗಿದೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ