Vastu Tips for Cars: ಮನೆಯಲ್ಲಿರುವ ವಾಹನವನ್ನು ಯಾವ ದಿಕ್ಕಿನಲ್ಲಿ ನಿಲ್ಲಿಸಿದರೆ ಒಳ್ಳೆಯದು?

ಕಾರು ಮತ್ತು ಬೈಕ್ ನಮ್ಮ ಜೀವನದ ಪ್ರಮುಖ ಭಾಗವಾಗಿ ಹೋಗಿದೆ. ಆದರೆ ವಾಸ್ತು ಪ್ರಕಾರ ಅವುಗಳನ್ನು ಸರಿಯಾದ ಸ್ಥಳದಲ್ಲಿ ನಿಲ್ಲಿಸುವುದು ಕೂಡ ಮುಖ್ಯ ಎಂಬುದು ನಿಮಗೆ ತಿಳಿದಿದೆಯಾ? ಮನೆಯಲ್ಲಿ ವಾಹನಗಳ ನಿಲುಗಡೆ ಮಾಡಲು ಕೆಲವು ನಿಯಮಗಳನ್ನು ವಾಸ್ತು ಶಾಸ್ತ್ರದಲ್ಲಿ ನೀಡಲಾಗಿದೆ. ಆ ಪ್ರಕಾರವಾಗಿ, ಭವಿಷ್ಯದ ಅಪಘಾತಗಳಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳಲು ಕೆಲವು ಸಲಹೆಗಳಿವೆ. ಅಂತಹ ಕೆಲವು ವಾಸ್ತು ನಿಯಮಗಳನ್ನು ಇಲ್ಲಿ ನೀಡಲಾಗಿದೆ.

Vastu Tips for Cars: ಮನೆಯಲ್ಲಿರುವ ವಾಹನವನ್ನು ಯಾವ ದಿಕ್ಕಿನಲ್ಲಿ ನಿಲ್ಲಿಸಿದರೆ ಒಳ್ಳೆಯದು?
ಸಾಂದರ್ಭಿಕ ಚಿತ್ರ
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​

Updated on: Mar 28, 2024 | 9:44 AM

ಕಾರು ಮತ್ತು ದ್ವಿಚಕ್ರ ವಾಹನ ಇಲ್ಲದ ನಮ್ಮ ಜೀವನವನ್ನು ಊಹಿಸಲೂ ಸಾಧ್ಯವಿಲ್ಲ. ಪ್ರತಿದಿನ ಬೆಳಿಗ್ಗೆ ಕಚೇರಿ, ಶಾಲೆ ಅಥವಾ ಕಾಲೇಜಿಗೆ ಹೋಗಲು ಅಥವಾ ಇನ್ನಿತರ ಕೆಲಸಗಳಿಗೆ ನಮ್ಮ ವಾಹನ ಇಲ್ಲದೆ ಹೋದರೆ ತುಂಬಾ ಕಷ್ಟ ಎನಿಸುತ್ತದೆ. ಇದೆಲ್ಲಾ ಕಾರಣದಿಂದ ಕಾರು ಮತ್ತು ಬೈಕ್ ನಮ್ಮ ಜೀವನದ ಪ್ರಮುಖ ಭಾಗವಾಗಿ ಹೋಗಿದೆ. ಆದರೆ ವಾಸ್ತು ಪ್ರಕಾರ ಅವುಗಳನ್ನು ಸರಿಯಾದ ಸ್ಥಳದಲ್ಲಿ ನಿಲ್ಲಿಸುವುದು ಕೂಡ ಮುಖ್ಯ ಎಂಬುದು ನಿಮಗೆ ತಿಳಿದಿದೆಯಾ? ಮನೆಯಲ್ಲಿ ವಾಹನಗಳ ನಿಲುಗಡೆಗೆ ಮಾಡಲು ಕೆಲವು ನಿಯಮಗಳನ್ನು ವಾಸ್ತು ಶಾಸ್ತ್ರದಲ್ಲಿ ನೀಡಲಾಗಿದೆ. ಆ ಪ್ರಕಾರವಾಗಿ, ಭವಿಷ್ಯದ ಅಪಘಾತಗಳಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳಲು ಕೆಲವು ಸಲಹೆಗಳಿವೆ. ಅಂತಹ ಕೆಲವು ವಾಸ್ತು ಶಾಸ್ತ್ರದಲ್ಲಿ ತಿಳಿಸಿರುವಂತಹ ನಿಯಮಗಳನ್ನು ಇಲ್ಲಿ ನೀಡಲಾಗಿದೆ.

ಮನೆಯಲ್ಲಿ ವಾಹನ ನಿಲುಗಡೆ ಮಾಡಲು ವಾಸ್ತು ಸಲಹೆಗಳು;

ನಿಮ್ಮ ಮನೆಯಲ್ಲಿ ಕಾರು ಅಥವಾ ಸ್ಕೂಟರ್ ಅನ್ನು ನಿಲ್ಲಿಸುವ ಮೊದಲು, ದಿಕ್ಕುಗಳ ಬಗ್ಗೆ ವಿಶೇಷ ಗಮನ ನೀಡಬೇಕಾಗುತ್ತದೆ. ಮೊದಲನೆಯದಾಗಿ ವಾಹನಗಳನ್ನು ಈಶಾನ್ಯ ದಿಕ್ಕಿನಲ್ಲಿ ನಿಲ್ಲಿಸುವುದನ್ನು ತಪ್ಪಿಸಬೇಕು. ಇನ್ನು ಪೂರ್ವ ಮತ್ತು ಉತ್ತರ ದಿಕ್ಕಿನಲ್ಲಿ ಕಾರು ಮತ್ತು ಬೈಕ್ ಗಳನ್ನು ನಿಲ್ಲಿಸುವುದು ಉತ್ತಮವೆಂದು ಪರಿಗಣಿಸಲಾಗುತ್ತದೆ. ಇದಲ್ಲದೆ, ದಕ್ಷಿಣ ಮತ್ತು ಪಶ್ಚಿಮ ದಿಕ್ಕಿಗೆ ದೊಡ್ಡ ವಾಹನಗಳ ನಿಲುಗಡೆಗೆ ಮಾಡಬಹುದು ಆದರೆ ಆ ಜಾಗ ಎಲ್ಲಾ ಕಡೆಗಳಿಂದ ಮುಚ್ಚುವಂತಿರಬೇಕು ಎನ್ನಲಾಗುತ್ತದೆ.

ಗ್ಯಾರೇಜ್ ಅಥವಾ ನೆಲಮಾಳಿಗೆಯಲ್ಲಿ ಪಾರ್ಕಿಂಗ್ ಮಾಡಲು ವಾಸ್ತು ಸಲಹೆಗಳು;

ಗ್ಯಾರೇಜ್ ನಲ್ಲಿ ಅಥವಾ ನೆಲಮಾಳಿಗೆಯಲ್ಲಿ ಕಾರು ಅಥವಾ ಸ್ಕೂಟರ್ ಅನ್ನು ನಿಲ್ಲಿಸುವ ಬಗ್ಗೆ ಜನರ ಮನಸ್ಸಿನಲ್ಲಿ ಕೆಲವು ರೀತಿಯ ಪ್ರಶ್ನೆಗಳು ಉದ್ಭವಿಸುತ್ತವೆ. ನೆಲಮಾಳಿಗೆಯಲ್ಲಿ ವಾಹನವನ್ನು ನಿಲ್ಲಿಸುವುದು ಹೇಗೆ? ವಾಸ್ತು ಪ್ರಕಾರ ಗ್ಯಾರೇಜ್ ಹೇಗೆ ಇರಬೇಕು? ನಿಮಗೆ ಈ ರೀತಿಯ ಸಮಸ್ಯೆ ಇದ್ದಲ್ಲಿ ನೀವು ಉತ್ತರ ಅಥವಾ ಪೂರ್ವ ದಿಕ್ಕಿನಲ್ಲಿ ನಿಮ್ಮ ವಾಹನವನ್ನು ಇಡಲು ಪ್ರಯತ್ನಿಸಿ ಆದರೆ ವಾಹನದ ಪ್ರವೇಶವು ಆಗ್ನೇಯ ಅಥವಾ ನೈಋತ್ಯ ದಿಕ್ಕಿನಲ್ಲಿ ಇರಬಾರದು ಎಂಬುದನ್ನು ನೆನಪಿನಲ್ಲಿಡಿ. ಗ್ಯಾರೇಜ್ ನಲ್ಲಿ ಸಾಕಷ್ಟು ಬೆಳಕಿರಲಿ, ಗ್ಯಾರೇಜ್ ನೆಲದ ಇಳಿಜಾರು ಭಾಗವನ್ನು ಪೂರ್ವ ಅಥವಾ ಉತ್ತರ ದಿಕ್ಕಿನಲ್ಲಿ ಇರಿಸಲು ಪ್ರಯತ್ನಿಸಿ.

ಇದನ್ನೂ ಓದಿ: ಭಾಲಚಂದ್ರ ಸಂಕಷ್ಟ ಚತುರ್ಥಿ ಯಾವಾಗ? ಈ ದಿನದ ಆಚರಣೆ ಹೇಗಿರಬೇಕು?

ವರಾಂಡಾ ಅಥವಾ ಮೈದಾನದಲ್ಲಿ ವಾಹನ ನಿಲುಗಡೆಗೆ ಮಾಡುವವರಿಗೆ ವಾಸ್ತು ಸಲಹೆಗಳು;

ನಿಮಗೆ ವಾಹನ ನಿಲ್ಲಿಸಲು ಯಾವುದೇ ರೀತಿಯ ಸರಿಯಾದ ಸ್ಥಳಾವಕಾಶ ಇಲ್ಲದ ಪರಿಸ್ಥಿತಿಯಲ್ಲಿ ಅಥವಾ ವರಾಂಡಾಗಳಲ್ಲಿ ನಿಲ್ಲಿಸುತ್ತಿದ್ದಲ್ಲಿ ನೀವು ಉತ್ತರ ಅಥವಾ ಈಶಾನ್ಯ ದಿಕ್ಕಿನಲ್ಲಿ ನಿಮ್ಮ ವಾಹನದ ಮುಖ ಬರುವ ರೀತಿ ನಿಲ್ಲಿಸಿ. ಜೊತೆಗೆ ಪಾರ್ಕಿಂಗ್ ಸ್ಥಳದ ಸುತ್ತಲೂ ಕನಿಷ್ಠ 2- 3 ಅಡಿ ಜಾಗವಿರಲಿ. ನಿಮ್ಮ ಕಾರನ್ನು ಬಿಸಿಲು ಮತ್ತು ಮಳೆಯಿಂದ ರಕ್ಷಿಸಲು ಶೀಟ್ ಗಳ ಅಡಿಯಲ್ಲಿ ವಾಹನ ನಿಲ್ಲಿಸುತ್ತಿದ್ದರೆ ಪೂರ್ವ ಭಾಗದಲ್ಲಿ ನಿಮ್ಮ ವಾಹನ ನಿಲ್ಲಿಸಿ. ನೀವು ಅಲ್ಲಿ ವಿವಿಧ ರೀತಿಯ ಸಸ್ಯವನ್ನು ಸಹ ನೆಡಬಹುದು. ಇದನ್ನು ಅದೃಷ್ಟವೆಂದು ಪರಿಗಣಿಸಲಾಗುತ್ತದೆ ಜೊತೆಗೆ ಇದು ನಿಮಗೆ ಆರ್ಥಿಕ ಲಾಭವಾಗಲು ಸಹಾಯ ಮಾಡುತ್ತದೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ