AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Sankashti Chaturthi 2024: ಭಾಲಚಂದ್ರ ಸಂಕಷ್ಟ ಚತುರ್ಥಿ ಯಾವಾಗ? ಈ ದಿನದ ಆಚರಣೆ ಹೇಗಿರಬೇಕು?

ಗಣೇಶನು ಜ್ಞಾನ ಮತ್ತು ಬುದ್ಧಿವಂತಿಕೆಯನ್ನು ನೀಡುತ್ತಾನೆ ಹಾಗಾಗಿ ಅವನ ಅನುಗ್ರಹದಿಂದ ಒಬ್ಬ ವ್ಯಕ್ತಿಯು ವೃತ್ತಿಜೀವನದಲ್ಲಿ ಪ್ರಗತಿಯನ್ನು ಪಡೆಯುತ್ತಾನೆ, ಜೊತೆಗೆ ಗಣಪನನ್ನು ನಂಬಿದರೆ ಆತ ತನ್ನ ಭಕ್ತರ ಅಡೆತಡೆಗಳನ್ನು ನಿವಾರಣೆ ಮಾಡುತ್ತಾನೆ. ಎಂದಿಗೂ ಕೈ ಬಿಡುವುದಿಲ್ಲ ಎನ್ನುವ ನಂಬಿಕೆ ಇದೆ. ಹಾಗಾದರೆ ಫಾಲ್ಗುಣ ಮಾಸದ ಭಾಲಚಂದ್ರ ಸಂಕಷ್ಟ ಚತುರ್ಥಿಯನ್ನು ಯಾವಾಗ ಆಚರಿಸಲಾಗುತ್ತದೆ? ಆಚರಣಾ ವಿಧಾನಗಳೇನು? ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

Sankashti Chaturthi 2024: ಭಾಲಚಂದ್ರ ಸಂಕಷ್ಟ ಚತುರ್ಥಿ ಯಾವಾಗ? ಈ ದಿನದ ಆಚರಣೆ ಹೇಗಿರಬೇಕು?
ಸಾಂದರ್ಭಿಕ ಚಿತ್ರ
ಪ್ರೀತಿ ಭಟ್​, ಗುಣವಂತೆ
| Edited By: |

Updated on:Mar 27, 2024 | 10:37 AM

Share

ಪ್ರತಿ ಮಾಸದ ಚತುರ್ಥಿ ತಿಥಿಯಂದು ಭಗವಾನ್ ಶ್ರೀ ಗಣೇಶನನ್ನು ಭಕ್ತಿಯಿಂದ ಆರಾಧಿಸಲಾಗುತ್ತದೆ. ಹಾಗಾಗಿ ಪ್ರತಿ ತಿಂಗಳ ಕೃಷ್ಣ ಪಕ್ಷದ ಚತುರ್ಥಿ ದಿನಾಂಕವನ್ನು ಸಂಕಷ್ಟ ಚತುರ್ಥಿ ಎಂದು ಕರೆಯಲಾಗುತ್ತದೆ. ಪೌರಾಣಿಕ ಗ್ರಂಥಗಳ ಪ್ರಕಾರ, ಈ ಉಪವಾಸವನ್ನು ಆಚರಿಸುವುದರಿಂದ ಭಕ್ತರ ಎಲ್ಲಾ ಕಷ್ಟಗಳು ನಿವಾರಣೆಯಾಗುತ್ತವೆ ಎನ್ನುವ ನಂಬಿಕೆ ಇದೆ. ಗಣೇಶನು ಜ್ಞಾನ ಮತ್ತು ಬುದ್ಧಿವಂತಿಕೆಯನ್ನು ನೀಡುತ್ತಾನೆ ಹಾಗಾಗಿ ಅವನ ಅನುಗ್ರಹದಿಂದ ಒಬ್ಬ ವ್ಯಕ್ತಿಯು ವೃತ್ತಿಜೀವನದಲ್ಲಿ ಪ್ರಗತಿಯನ್ನು ಪಡೆಯುತ್ತಾನೆ, ಜೊತೆಗೆ ಗಣಪನನ್ನು ನಂಬಿದರೆ ಆತ ತನ್ನ ಭಕ್ತರ ಅಡೆತಡೆಗಳನ್ನು ನಿವಾರಣೆ ಮಾಡುತ್ತಾನೆ. ಎಂದಿಗೂ ಕೈ ಬಿಡುವುದಿಲ್ಲ ಎನ್ನುವ ನಂಬಿಕೆ ಇದೆ. ಹಾಗಾದರೆ ಫಾಲ್ಗುಣ ಮಾಸದ ಭಾಲಚಂದ್ರ ಸಂಕಷ್ಟ ಚತುರ್ಥಿಯನ್ನು ಯಾವಾಗ ಆಚರಿಸಲಾಗುತ್ತದೆ? ಆಚರಣಾ ವಿಧಾನಗಳೇನು? ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಭಾಲಚಂದ್ರ ಸಂಕಷ್ಟ ಚತುರ್ಥಿಯ ದಿನಾಂಕ:

ಈ ಬಾರಿಯ ಭಾಲಚಂದ್ರ ಸಂಕಷ್ಟ ಚತುರ್ಥಿಯನ್ನು ಮಾ. 28 ರಂದು ಗುರುವಾರ ಆಚರಣೆ ಮಾಡಲಾಗುತ್ತದೆ. ಈ ದಿನ, ಉಪವಾಸವು ಸೂರ್ಯೋದಯದಿಂದ ಪ್ರಾರಂಭವಾಗುತ್ತದೆ ಬಳಿಕ ಚಂದ್ರೋದಯದ ನಂತರ, ಚಂದ್ರ ದೇವನನ್ನು ನೆನೆದು ಬಳಿಕ ಉಪವಾಸವನ್ನು ಕೊನೆಗೊಳಿಸಲಾಗುತ್ತದೆ. ಈ ದಿನ ಗಣಪನನ್ನು ಭಕ್ತಿಯಿಂದ ಪೂಜಿಸಿ, ಉಪವಾಸವನ್ನು ಕಟ್ಟುನಿಟ್ಟಾಗಿ ಪಾಲಿಸಿದಲ್ಲಿ ಸಂತೋಷ, ಅದೃಷ್ಟ ಎಲ್ಲವೂ ದುಪ್ಪಟ್ಟಾಗುತ್ತದೆ.

ಇದನ್ನೂ ಓದಿ: ರಾಮನವಮಿ ದಿನ ನಿಮ್ಮ ಪೂಜಾ ಆಚರಣೆಗಳು ಹೀಗಿರಲಿ!

ಪಂಚಾಂಗದ ಪ್ರಕಾರ, ಈ ದಿನದ ಪೂಜಾ ಮುಹೂರ್ತ:

ಬೆಳಿಗ್ಗೆ 10.54 ರಿಂದ ಮಧ್ಯಾಹ್ನ 12.26 ರ ವರೆಗೆ.

ಸಂಜೆಯ ಪೂಜಾ ಮುಹೂರ್ತ: 05.04 ರಿಂದ ಸಂಜೆ 06.37 ರ ವರೆಗೆ.

ಚಂದ್ರೋದಯ ಸಮಯ: ರಾತ್ರಿ 09.28ಕ್ಕೆ

ಭಾಲಚಂದ್ರ ಸಂಕಷ್ಟಿ ಚತುರ್ಥಿಯ ಪೂಜಾ ವಿಧಾನ ಹೇಗಿರಬೇಕು?

-ಈ ದಿನ ಬೆಳಿಗ್ಗೆ ಬೇಗ ಎದ್ದು ಸ್ನಾನ ಮಾಡಿದ ನಂತರ ಉಪವಾಸ ಮಾಡಲು ನಿರ್ಧರಿಸಬೇಕು.

-ಗಣೇಶನ ಮೂರ್ತಿ ಅಥವಾ ಫೋಟೋ ಇಟ್ಟು ದೇವರಿಗೆ ಅಲಂಕಾರ ಮಾಡಿ. ಕೆಂಪು ಗುಲಾಬಿ ಅಥವಾ ಕೆಂಪು ದಾಸವಾಳ ಸಿಕ್ಕಲ್ಲಿ 27 ಹೂವುಗಳನ್ನು ಅರ್ಪಿಸಿ. ಹೀಗೆ ಮಾಡುವುದರಿಂದ ಉದ್ಯೋಗ ಸಮಸ್ಯೆಗಳಿಂದ ಮುಕ್ತಿ ಸಿಗುತ್ತದೆ.

-ಕೇವಲ ಸಂಕಷ್ಟ ಚತುರ್ಥಿ ದಿನದಂದು ಮಾತ್ರವಲ್ಲ. ಪ್ರತಿದಿನವೂ ಈ ಗಣಪತಿ ವಿಗ್ರಹಕ್ಕೆ ಗುಲಾಬಿ ಮತ್ತು ಹಳದಿ ಬಣ್ಣದ ಹೂವುಗಳನ್ನು ಅರ್ಪಿಸಬಹುದು. ಇದು ನಿಮಗೆ ಶುಭ ಫಲಗಳನ್ನು ನೀಡುತ್ತದೆ.

-ದೇವರಿಗೆ ಎಳ್ಳು, ಬೆಲ್ಲ, ಲಡ್ಡು, ದುರ್ವೆ, ಗಂಧ ಮತ್ತು ಮೋದಕವನ್ನು ಅರ್ಪಿಸಿ. -ಪೂಜೆ ಮಾಡುವಾಗ “ಓಂ ಗಣಪತಯೇ ನಮಃ” ಎಂಬ ಮಂತ್ರವನ್ನು ಪಠಿಸಿ.

-ಈ ದಿನ ಗಣೇಶನನ್ನು ಆರಾಧನೆ ಮಾಡುವಾಗ ಆತನಿಗೆ ಸಂಬಂಧ ಪಟ್ಟ ಭಜನೆಗಳನ್ನು ಹೇಳಬಹುದು ಅಥವಾ ಗಣೇಶ ಕಥೆಯನ್ನು ಓದಬಹುದು.

-ಪೂಜೆ ಮುಗಿದ ನಂತರ ಗಣೇಶನಿಗೆ ಆರತಿ ಮಾಡಿ. ರಾತ್ರಿಯಲ್ಲಿ ಚಂದ್ರನಿಗೆ ಅರ್ಘ್ಯವನ್ನು ಅರ್ಪಿಸಿ ಬಳಿಕ ಉಪವಾಸವನ್ನು ಕೊನೆಗೊಳಿಸಿ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 10:36 am, Wed, 27 March 24

ಹಿಪೊಪೊಟಮಸ್​ಗಳಿಂದ ತುಂಬಿದ ಹೊಳೆಯಲ್ಲಿ ಹೆದರದೆ ನಿಂತ ಆನೆ
ಹಿಪೊಪೊಟಮಸ್​ಗಳಿಂದ ತುಂಬಿದ ಹೊಳೆಯಲ್ಲಿ ಹೆದರದೆ ನಿಂತ ಆನೆ
ಕೊಲ್ಕತ್ತಾ ಅಗ್ನಿ ದುರಂತದ ಮೃತರ ಕುಟುಂಬಕ್ಕೆ 2 ಲಕ್ಷ ಪರಿಹಾರ ಘೋಷಿಸಿದ ಮೋದಿ
ಕೊಲ್ಕತ್ತಾ ಅಗ್ನಿ ದುರಂತದ ಮೃತರ ಕುಟುಂಬಕ್ಕೆ 2 ಲಕ್ಷ ಪರಿಹಾರ ಘೋಷಿಸಿದ ಮೋದಿ
ಹರ್‌ಪ್ರೀತ್ ಮ್ಯಾಜಿಕಲ್ ಎಸೆತಕ್ಕೆ ರಾಹುಲ್ ಕ್ಲೀನ್ ಬೌಲ್ಡ್
ಹರ್‌ಪ್ರೀತ್ ಮ್ಯಾಜಿಕಲ್ ಎಸೆತಕ್ಕೆ ರಾಹುಲ್ ಕ್ಲೀನ್ ಬೌಲ್ಡ್
ಜೊಕೊವಿಕ್- ಅಲ್ಕರಾಜ್ ನಡುವೆ ಆಸ್ಟ್ರೇಲಿಯನ್ ಓಪನ್‌ ಫೈನಲ್​
ಜೊಕೊವಿಕ್- ಅಲ್ಕರಾಜ್ ನಡುವೆ ಆಸ್ಟ್ರೇಲಿಯನ್ ಓಪನ್‌ ಫೈನಲ್​
ನಟಿ, ಮಾಜಿ ರಾಜ್ಯಸಭಾ ಸದಸ್ಯೆ ಬಿ ಜಯಶ್ರೀಯ ಸತಾಯಿಸಿದ ಅಧಿಕಾರಿಗಳು
ನಟಿ, ಮಾಜಿ ರಾಜ್ಯಸಭಾ ಸದಸ್ಯೆ ಬಿ ಜಯಶ್ರೀಯ ಸತಾಯಿಸಿದ ಅಧಿಕಾರಿಗಳು
ಉದ್ಯಮ ಸಾಮ್ರಾಜ್ಯ ಕಟ್ಟಿದ್ದ ಸಿಜೆ ರಾಯ್ ಆತ್ಮಹತ್ಯೆ,ಕಮಿಷನರ್ ಹೇಳಿದ್ದಿಷ್ಟು
ಉದ್ಯಮ ಸಾಮ್ರಾಜ್ಯ ಕಟ್ಟಿದ್ದ ಸಿಜೆ ರಾಯ್ ಆತ್ಮಹತ್ಯೆ,ಕಮಿಷನರ್ ಹೇಳಿದ್ದಿಷ್ಟು
ದಾರಿ ಬಿಡಿ, ದಾರಿ ಬಿಡಿ.. ತವರಿನಲ್ಲಿ ಸಂಜು ಸ್ಯಾಮ್ಸನ್ ಕಾಲೆಳೆದ ಸೂರ್ಯ
ದಾರಿ ಬಿಡಿ, ದಾರಿ ಬಿಡಿ.. ತವರಿನಲ್ಲಿ ಸಂಜು ಸ್ಯಾಮ್ಸನ್ ಕಾಲೆಳೆದ ಸೂರ್ಯ
ಲಂಚ ಪಡೆಯುವಾಗ ತಗ್ಲಾಕೊಂಡ ಇನ್ಸ್​​ಪೆಕ್ಟರ್​​​​​​​ ಕೂಗಾಡಿ ರಂಪಾಟ!
ಲಂಚ ಪಡೆಯುವಾಗ ತಗ್ಲಾಕೊಂಡ ಇನ್ಸ್​​ಪೆಕ್ಟರ್​​​​​​​ ಕೂಗಾಡಿ ರಂಪಾಟ!
ವಿರೋಧದ ನಡುವೆ ಮುಸ್ಲಿಂ ಹುಡ್ಗನ ಮದ್ವೆಯಾಗಿ ಬೀದಿಗೆ ಬಿದ್ದ ಯುವತಿ
ವಿರೋಧದ ನಡುವೆ ಮುಸ್ಲಿಂ ಹುಡ್ಗನ ಮದ್ವೆಯಾಗಿ ಬೀದಿಗೆ ಬಿದ್ದ ಯುವತಿ
ಎಲ್ಲೆಂದರಲ್ಲಿ ಕಸ ಬಿಸಾಡಿದ್ರೇ ಇದೇ ಶಾಸ್ತಿ: ಆಗಿದ್ದೇನು? ವಿಡಿಯೋ ನೋಡಿ
ಎಲ್ಲೆಂದರಲ್ಲಿ ಕಸ ಬಿಸಾಡಿದ್ರೇ ಇದೇ ಶಾಸ್ತಿ: ಆಗಿದ್ದೇನು? ವಿಡಿಯೋ ನೋಡಿ