Ram Navami 2024: ರಾಮನವಮಿ ದಿನ ನಿಮ್ಮ ಪೂಜಾ ಆಚರಣೆಗಳು ಹೀಗಿರಲಿ!

ರಾಮ ನವಮಿ ಹಬ್ಬದ ದಿನ ಭಗವಾನ್ ರಾಮನು ಮಾನವ ರೂಪದಲ್ಲಿ ಭೂಮಿಯ ಮೇಲೆ ಅವತರಿಸಿದ ಎಂದು ಹೇಳಲಾಗುತ್ತದೆ. ಆದ್ದರಿಂದ, ಈ ಶುಭ ಸಂದರ್ಭವನ್ನು ಸಂಭ್ರಮಿಸಲು ರಾಮ ನವಮಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಇದಲ್ಲದೆ, ಈ ದಿನ ದೇವಿ ಭಕ್ತರು ದುರ್ಗಾ ಮಾತೆಯ ಒಂಬತ್ತನೇ ರೂಪವಾದ ಸಿದ್ಧಿಧಾತ್ರಿಯನ್ನು ಕೂಡ ಪೂಜಿಸುತ್ತಾರೆ.

Ram Navami 2024: ರಾಮನವಮಿ ದಿನ ನಿಮ್ಮ ಪೂಜಾ ಆಚರಣೆಗಳು ಹೀಗಿರಲಿ!
Ram Navami 2024
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷತಾ ವರ್ಕಾಡಿ

Updated on: Mar 26, 2024 | 6:21 PM

ಪ್ರತಿ ವರ್ಷ ಚೈತ್ರ ಮಾಸದ ಒಂಬತ್ತನೇ ದಿನದಂದು ರಾಮನವಮಿಯನ್ನು ಆಚರಿಸಲಾಗುತ್ತದೆ. ಹಿಂದೂ ಪಂಚಾಗದ ಪ್ರಕಾರ ಈ ವರ್ಷ, ಅಂದರೆ 2024 ರಲ್ಲಿ, ರಾಮ ನವಮಿ ಹಬ್ಬವನ್ನು ಎ.17 ರಂದು ಆಚರಣೆ ಮಾಡಲಾಗುತ್ತದೆ. ಈ ದಿನ ಭಗವಾನ್ ರಾಮನು ಮಾನವ ರೂಪದಲ್ಲಿ ಭೂಮಿಯ ಮೇಲೆ ಅವತರಿಸಿದ ಎಂದು ಹೇಳಲಾಗುತ್ತದೆ. ಆದ್ದರಿಂದ, ಈ ಶುಭ ಸಂದರ್ಭವನ್ನು ಸಂಭ್ರಮಿಸಲು ರಾಮ ನವಮಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಇದಲ್ಲದೆ, ಈ ದಿನ ದೇವಿ ಭಕ್ತರು ದುರ್ಗಾ ಮಾತೆಯ ಒಂಬತ್ತನೇ ರೂಪವಾದ ಸಿದ್ಧಿಧಾತ್ರಿಯನ್ನು ಕೂಡ ಪೂಜಿಸುತ್ತಾರೆ.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ರಾಮನವಮಿ ಪೂಜೆಯು ಬೆಳಿಗ್ಗೆ 11:03 ರಿಂದ ಮಧ್ಯಾಹ್ನ 1:38 ರ ನಡುವೆ ನಡೆಸಬಹುದಾಗಿದೆ. ಭಗವಾನ್ ರಾಮನು ಮಧ್ಯಾಹ್ನ 12:21 ಕ್ಕೆ ಜನಿಸಿದನೆಂದು ನಂಬಲಾಗಿದೆ. ಈ ಸಮಯದಲ್ಲಿ, ಭಕ್ತರು ಮನೆಯಲ್ಲಿ ಅಥವಾ ದೇವಾಲಯಗಳಿಗೆ ಹೋಗಿ ಪೂಜೆಯನ್ನು ಮಾಡಬಹುದು. ಈ ದಿನ ಭಗವಾನ್ ಶ್ರೀರಾಮ ಚಂದ್ರನನ್ನು ಪೂಜಿಸುವವರು ತಮ್ಮ ಜೀವನದಲ್ಲಿನ ದುಃಖ ಮತ್ತು ತೊಂದರೆಗಳಿಂದ ಪರಿಹಾರ ಕಂಡುಕೊಳ್ಳಬಹುದು ಎಂದು ನಂಬಲಾಗಿದೆ ಜೊತೆಗೆ ಈ ದಿನವನ್ನು ಭಕ್ತಿಯಿಂದ ಆಚರಣೆ ಮಾಡಿದವರಿಗೆ ಭಗವಾನ್ ರಾಮನ ಪೂರ್ಣ ಆಶೀರ್ವಾದ ಪ್ರಾಪ್ತವಾಗುತ್ತದೆ ಎನ್ನುವ ನಂಬಿಕೆಯೂ ಇದೆ.

ಇದನ್ನೂ ಓದಿ: ಗಣೇಶನ ಅನುಗ್ರಹ ಪ್ರಾಪ್ತಿಯಾಗಬೇಕಾ? ಈ ಕೆಲಸ ಮರೆಯದೆ ಮಾಡಿ

ಈ ದಿನದ ಪೂಜಾ ಆಚರಣೆಗಳು ಹೇಗಿರಬೇಕು?

  1. ರಾಮ ನವಮಿಯ ದಿನ ಬ್ರಹ್ಮ ಮುಹೂರ್ತದಲ್ಲಿ ಎದ್ದು, ಗಂಗಾ ಜಲ ಬೆರೆಸಿದ ನೀರಿನಲ್ಲಿ ಸ್ನಾನವನ್ನು ಮುಗಿಸಿ ಭಗವಾನ್ ರಾಮ ಮತ್ತು ಮಾತಾ ಜಾನಕಿಗೆ ಭಕ್ತಿಯಿಂದ ನಮಿಸಬೇಕು.
  2. ಈ ದಿನದಂದು ಮನೆಗಳನ್ನು ಸ್ವಚ್ಛಗೊಳಿಸಿ, ಬಾಗಿಲಿಗೆ ಮಾವಿನ ತೋರಣ ಕಟ್ಟಿ, ಮನೆಯ ಮುಂದೆ ರಂಗೋಲಿ ಹಾಕಿ ಮನೆಯನ್ನು ಸಿಂಗರಿಸಬೇಕು. ರಾಮ ಜನಿಸಿದ ಖುಷಿ ಪ್ರತಿ ಹಿಂದೂ ಮನೆಗಳಲ್ಲಿಯೂ ಕಾಣಬೇಕು.
  3. ಪೂಜೆಗೆ ಎಲ್ಲಾ ರೀತಿಯ ತಯಾರಿ ನಡೆಸಿದ ನಂತರ ಸ್ವಚ್ಛವಾದ ಹಳದಿ ಬಟ್ಟೆಗಳನ್ನು ಧರಿಸಿ ಸೂರ್ಯ ದೇವರಿಗೆ ನಮಸ್ಕಾರ ಮಾಡಿ.
  4. ಕೆಂಪು ಅಥವಾ ಹಳದಿ ಬಟ್ಟೆಯನ್ನು ಪೂಜಾ ಕೋಣೆಯಲ್ಲಿಟ್ಟು ಅದರ ಮೇಲೆ ಭಗವಾನ್ ರಾಮನ ಕುಟುಂಬದವರ ವಿಗ್ರಹ ಅಥವಾ ಫೋಟೋ ಇಟ್ಟು ಹೂವು, ಹಣ್ಣುಗಳನ್ನಿಟ್ಟು ಅಲಂಕಾರ ಮಾಡಿ.
  5. ಭಕ್ತಿಯಿಂದ ದೇವರ ಬಳಿ ಪ್ರಾರ್ಥನೆ ಮಾಡಿ, ಮಂತ್ರ ಪಠಿಸುತ್ತಾ ಭಗವಾನ್ ರಾಮನನ್ನು ಧ್ಯಾನಿಸಿ.
  6. ಪೂಜೆಯ ಸಮಯದಲ್ಲಿ ರಾಮ ರಕ್ಷಾ ಸ್ತೋತ್ರವನ್ನು ಪಠಿಸಿ.
  7. ಪೂಜೆ ಮುಗಿದ ಬಳಿಕ ಆರತಿ ಮಾಡಿ, ಭಕ್ತಿಯಿಂದ ನಿಮ್ಮ ಆಸೆಗಳನ್ನು ದೇವರ ಮುಂದೆ ಬೇಡಿಕೊಳ್ಳಿ. ನೈವೇದ್ಯಕ್ಕೆ ಇಟ್ಟ ಪ್ರಸಾದ ಮತ್ತು ಹಣ್ಣುಗಳನ್ನು ಎಲ್ಲರಿಗೂ ವಿತರಿಸಿ.
  8. ಈ ರೀತಿ ಮಾಡುವುದರಿಂದ ಸಂತೋಷ, ಸಮೃದ್ಧಿ ಮತ್ತು ಸಂಪತ್ತು ಎಲ್ಲವೂ ಪ್ರಾಪ್ತಿಯಾಗುತ್ತದೆ.
  9. ರಾಮನವಮಿ ಹಬ್ಬದ ದಿನ ಮಾಂಸಾಹಾರ ಸೇವನೆ ಮಾಡಬೇಡಿ, ಅಡುಗೆಯಲ್ಲಿ ಬೆಳ್ಳುಳ್ಳಿ, ಈರುಳ್ಳಿಯನ್ನು ಸೇರಿಸಬೇಡಿ. ಸಾಧ್ಯವಾದಲ್ಲಿ ಉಪ್ಪು ಬೆರೆಸಿದ ಆಹಾರಗಳನ್ನು ಕೂಡ ಸೇವನೆ ಮಾಡಬೇಡಿ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ