Wednesday Remedies: ಗಣೇಶನ ಅನುಗ್ರಹ ಪ್ರಾಪ್ತಿಯಾಗಬೇಕಾ? ಈ ಕೆಲಸ ಮರೆಯದೆ ಮಾಡಿ

ಗಣಪ ಜ್ಞಾನ ಮತ್ತು ಬುದ್ಧಿವಂತಿಕೆಯನ್ನು ಹೆಚ್ಚಿಸುವುದರ ಜೊತೆಗೆ, ಜೀವನದಲ್ಲಿ ಬರುವ ಎಲ್ಲಾ ಅಡೆತಡೆಗಳನ್ನು ದೂರ ಮಾಡುತ್ತಾನೆ ಎಂಬ ನಂಬಿಕೆ ಇದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ವ್ಯಕ್ತಿಯ ಜಾತಕದಲ್ಲಿ ಬುಧನು ದುರ್ಬಲ ಸ್ಥಾನದಲ್ಲಿದ್ದರೆ, ಬುಧವಾರ ಕೆಲವು ಕ್ರಮಗಳನ್ನು ಕೈಗೊಳ್ಳುವುದು ಒಳ್ಳೆಯದು ಎನ್ನಲಾಗುತ್ತದೆ. ಇದರ ಜೊತೆಗೆ ಯಾವುದೇ ರೀತಿಯ ಸಮಸ್ಯೆ ಬಂದರೂ ಕೂಡ ಅದಕ್ಕೆ ಪರಿಹಾರ ಕಂಡುಕೊಳ್ಳಲು ಕೆಲವು ವಿಶೇಷ ಸಲಹೆಗಳನ್ನು ಸೂಚಿಸಲಾಗಿದೆ, ಇದನ್ನು ನೀವು ಕೂಡ ಪ್ರಯತ್ನಿಸಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು.

Wednesday Remedies: ಗಣೇಶನ ಅನುಗ್ರಹ ಪ್ರಾಪ್ತಿಯಾಗಬೇಕಾ? ಈ ಕೆಲಸ ಮರೆಯದೆ ಮಾಡಿ
ಸಾಂದರ್ಭಿಕ ಚಿತ್ರ
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on: Mar 25, 2024 | 6:09 PM

ಹಿಂದೂ ಧರ್ಮದಲ್ಲಿ ದೇವ ಗಣೇಶನಿಗೆ ಬಹಳ ಮುಖ್ಯವಾದ ಸ್ಥಾನವಿದೆ. ಎಲ್ಲಾ ರೀತಿಯ ಪೂಜೆ, ಶುಭ ಕಾರ್ಯಗಳಲ್ಲಿ ಗಣೇಶನನ್ನು ಮೊದಲು ಪೂಜಿಸಲಾಗುತ್ತದೆ. ಅದರಲ್ಲಿಯೂ ಬುಧವಾರದಂದು ಗಣೇಶನ ಆರಾಧನೆ ಮಾಡಲು ಪ್ರಶಸ್ತ ದಿನ ಎನ್ನಲಾಗುತ್ತದೆ. ಈ ದಿನ, ಭಕ್ತರು ಗಣೇಶನನ್ನು ಮೆಚ್ಚಿಸಲು ವಿಶೇಷ ಪ್ರಾರ್ಥನೆಗಳನ್ನು ಸಲ್ಲಿಸುತ್ತಾರೆ. ಗಣಪ ಜ್ಞಾನ ಮತ್ತು ಬುದ್ಧಿವಂತಿಕೆಯನ್ನು ಹೆಚ್ಚಿಸುವುದರ ಜೊತೆಗೆ, ಜೀವನದಲ್ಲಿ ಬರುವ ಎಲ್ಲಾ ಅಡೆತಡೆಗಳನ್ನು ದೂರ ಮಾಡುತ್ತಾನೆ ಎಂಬ ನಂಬಿಕೆ ಇದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ವ್ಯಕ್ತಿಯ ಜಾತಕದಲ್ಲಿ ಬುಧನು ದುರ್ಬಲ ಸ್ಥಾನದಲ್ಲಿದ್ದರೆ, ಬುಧವಾರ ಕೆಲವು ಕ್ರಮಗಳನ್ನು ಕೈಗೊಳ್ಳುವುದು ಒಳ್ಳೆಯದು ಎನ್ನಲಾಗುತ್ತದೆ. ಇದರ ಜೊತೆಗೆ ಯಾವುದೇ ರೀತಿಯ ಸಮಸ್ಯೆ ಬಂದರೂ ಕೂಡ ಅದಕ್ಕೆ ಪರಿಹಾರ ಕಂಡುಕೊಳ್ಳಲು ಕೆಲವು ವಿಶೇಷ ಸಲಹೆಗಳನ್ನು ಸೂಚಿಸಲಾಗಿದೆ, ಇದನ್ನು ನೀವು ಕೂಡ ಪ್ರಯತ್ನಿಸಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು.

ದುರ್ವೆ

ಗಣೇಶನಿಗೆ ದುರ್ವೆ ಎಂದರೆ ತುಂಬಾ ಪ್ರಿಯ ಎಂದು ನಂಬಲಾಗಿದೆ. ಹಾಗಾಗಿ ಬುಧವಾರ ಗಣೇಶನಿಗೆ ಪೂಜೆ ಮಾಡುವಾಗ ದುರ್ವೆಯನ್ನು ತಪ್ಪದೇ ಅರ್ಪಿಸಬೇಕು. ಅಥವಾ ಮನೆಯ ಬಳಿ ಗಣಪತಿ ದೇವಸ್ಥಾನ ಇರುವವರು, ಬೆಳಿಗ್ಗೆ ಬೇಗ ಎದ್ದು ಸ್ನಾನ ಮಾಡಿ ದೇವಾಲಯಕ್ಕೆ ಹೋಗಿ ಗಣೇಶನ ಪಾದದ ಬಳಿ 11 ಅಥವಾ 21 ದುರ್ವೆ ಇಟ್ಟು ಭಕ್ತಿಯಿಂದ ಮನಸ್ಸಿನಲ್ಲಿರುವ ಆಸೆಗಳನ್ನು ಬೇಡಿಕೊಳ್ಳಿ. ಬಳಿಕ ನಿಮ್ಮ ಜೀವನದಲ್ಲಿ ನಡೆಯುತ್ತಿರುವ ಎಲ್ಲಾ ಸಮಸ್ಯೆಗಳು ಕ್ರಮೇಣ ಕಡಿಮೆಯಾಗುತ್ತದೆ. ನೀವು ಬುಧವಾರ ಗಣೇಶನನ್ನು ಪೂಜಿಸಲು ದೇವಾಲಯಕ್ಕೆ ಹೋದಾಗ, ಹಸಿರು ಬಟ್ಟೆಗಳನ್ನು ಧರಿಸಿ. ಏಕೆಂದರೆ ಹಸಿರು ಬಣ್ಣ ಗಣೇಶನಿಗೆ ತುಂಬಾ ಪ್ರಿಯವೆಂದು ಪರಿಗಣಿಸಲಾಗುತ್ತದೆ.

ಹೆಸರು ಕಾಳು

ಗಣೇಶನ ಆಶೀರ್ವಾದ ಪಡೆಯಲು ಮತ್ತು ಜಾತಕದಲ್ಲಿ ಬುಧ ಗ್ರಹವನ್ನು ಬಲಪಡಿಸಲು, ಹೆಸರು ಬೇಳೆಯನ್ನು ಅಕ್ಕಿಯೊಂದಿಗೆ ಬೆರೆಸಿ ದಾನ ಮಾಡಬೇಕು. ಈ ಹೆಸರು ಬೇಳೆಯನ್ನು ನೀವು ಅಡಿಗೆಯಲ್ಲಿ ಬಳಸಿಯೂ ಸೇವಿಸಬಹುದು. ಬುಧವಾರ ಹೆಸರು ಕಾಳನ್ನು ಮೊಳಕೆಯೊಡೆಸಿ ಪಕ್ಷಿಗಳಿಗೆ ತಿನ್ನಲು ಕೊಡುವ ಮೂಲಕ, ಗಣೇಶನ ಆಶೀರ್ವಾದವನ್ನು ಸಹ ಪಡೆಯಬಹುದು. ಜೊತೆಗೆ ಈ ದಿನ ಬಡವರಿಗೆ ಹೆಸರು ಕಾಳು ದಾನ ಮಾಡುವ ಮೂಲಕ ಅಥವಾ ಬುಧವಾರ ದೇವಾಲಯಕ್ಕೆ ಹೋಗುವ ಮೂಲಕ, ಜಾತಕದಲ್ಲಿ ಬುಧ ಗ್ರಹದಿಂದ ಉಂಟಾಗುವ ತೊಂದರೆಗಳನ್ನು ಕಡಿಮೆ ಮಾಡಿಕೊಳ್ಳಬಹುದು.

ಇದನ್ನೂ ಓದಿ: ವರ್ಷದ ಮೊದಲ ಚಂದ್ರಗ್ರಹಣ ಭಾರತದಲ್ಲಿ ಗೋಚರವಿಲ್ಲ ಆದರೆ ಈ ಮೂರು ರಾಶಿಗಳ ಮೇಲೆ ಪ್ರಭಾವ

ಬುಧ ದೋಷ

ಜ್ಯೋತಿಷ್ಯದ ಪ್ರಕಾರ, ಒಬ್ಬ ವ್ಯಕ್ತಿಯ ಜಾತಕದಲ್ಲಿ ಬುಧ ಗ್ರಹವು ದುರ್ಬಲವಾಗಿದ್ದರೆ, ಪಿತೃ ದೋಷದಿಂದಾಗಿ ಅನೇಕ ಸಮಸ್ಯೆಗಳನ್ನು ಎದುರಿಸಬಹುದು. ಇದನ್ನು ತಡೆಯಲು ಪ್ರತಿದಿನ ಮನೆಯಲ್ಲಿ ಗಣೇಶನನ್ನು ಪೂಜೆ ಮಾಡಿ. ಹೀಗೆ ಮಾಡುವುದರಿಂದ ಜಾತಕ ದೋಷ ನಿವಾರಣೆಯಾಗುತ್ತದೆ. ಜೊತೆಗೆ ಮನೆಯಲ್ಲಿ ಯಾವುದೇ ರೀತಿಯ ಕೌಟುಂಬಿಕ ಸಮಸ್ಯೆಗಳಿದ್ದಲ್ಲಿ ಪರಿಹಾರವಾಗುತ್ತದೆ. ಹಾಗಾಗಿ ಗಣೇಶನ ಮೂರ್ತಿ ಅಥವಾ ಫೋಟೋ ಇಟ್ಟು ಪ್ರತಿದಿನ ಭಕ್ತಿಯಿಂದ ಪೂಜೆ ಮಾಡಿ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ನೀವು ಏನಾದರೂ ಅಂದುಕೊಳ್ರಿ ನಾನಿರೋದು ಹೀಗೆ: ಶಿವಣ್ಣ
ನೀವು ಏನಾದರೂ ಅಂದುಕೊಳ್ರಿ ನಾನಿರೋದು ಹೀಗೆ: ಶಿವಣ್ಣ
ತುಂಬಿ ಹರಿಯುವ ಹೊಳೆಯಲ್ಲೇ ಗರ್ಭಿಣಿ ಹೆಂಡತಿಯನ್ನು ಹೊತ್ತು ನಡೆದ ಗಂಡ
ತುಂಬಿ ಹರಿಯುವ ಹೊಳೆಯಲ್ಲೇ ಗರ್ಭಿಣಿ ಹೆಂಡತಿಯನ್ನು ಹೊತ್ತು ನಡೆದ ಗಂಡ
ನಾಳೆ ಹಮ್ಮಿಕೊಂಡಿದ್ದ ಚಾಮುಂಡಿ ಚಲೋ ರದ್ದು: ಪ್ರತಾಪ್ ಸಿಂಹ ಹೇಳಿದ್ದಿಷ್ಟು
ನಾಳೆ ಹಮ್ಮಿಕೊಂಡಿದ್ದ ಚಾಮುಂಡಿ ಚಲೋ ರದ್ದು: ಪ್ರತಾಪ್ ಸಿಂಹ ಹೇಳಿದ್ದಿಷ್ಟು
ಮಧ್ಯಪ್ರದೇಶದ ಶಾಜಾಪುರದಲ್ಲಿ ಭೀಕರ ಅಪಘಾತ; ಶಾಲಾ ಬಸ್ ಪಲ್ಟಿ, ಮಕ್ಕಳಿಗೆ ಗಾಯ
ಮಧ್ಯಪ್ರದೇಶದ ಶಾಜಾಪುರದಲ್ಲಿ ಭೀಕರ ಅಪಘಾತ; ಶಾಲಾ ಬಸ್ ಪಲ್ಟಿ, ಮಕ್ಕಳಿಗೆ ಗಾಯ
ಗ್ಯಾರಂಟಿ ಯೋಜನೆಗಳು, ಬಡವರ ಸುರಕ್ಷತೆ, ಕಲ್ಯಾಣ ಕೃತಿ ಬಿಡುಗಡೆ ಮಾಡಿದ ಸಿಎಂ
ಗ್ಯಾರಂಟಿ ಯೋಜನೆಗಳು, ಬಡವರ ಸುರಕ್ಷತೆ, ಕಲ್ಯಾಣ ಕೃತಿ ಬಿಡುಗಡೆ ಮಾಡಿದ ಸಿಎಂ
ಕೋಲಾರ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾರಾಮಾರಿ
ಕೋಲಾರ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾರಾಮಾರಿ
ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಕಾರು, ಸಿಟಿವಿಯಲ್ಲಿ ಭೀಕರ ದೃಶ್ಯ ಸೆರೆ
ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಕಾರು, ಸಿಟಿವಿಯಲ್ಲಿ ಭೀಕರ ದೃಶ್ಯ ಸೆರೆ
ಕೊತ್ವಾಲನ ಶಿಷ್ಯರು ವಿಧಾನಸೌಧಕ್ಕೆ ಬಂದ್ಮೇಲೆ ಕುಲಗೆಟ್ಟಿದ್ದು: ಹೆಚ್​ಡಿಕೆ
ಕೊತ್ವಾಲನ ಶಿಷ್ಯರು ವಿಧಾನಸೌಧಕ್ಕೆ ಬಂದ್ಮೇಲೆ ಕುಲಗೆಟ್ಟಿದ್ದು: ಹೆಚ್​ಡಿಕೆ
ಸ್ಯಾಮ್​ಸಂಗ್ ಎಲೆಕ್ಟ್ರಾನಿಕ್ಸ್ ಹಬ್ಬದ ವಿಶೇಷ ಮಾರಾಟ ಕೊಡುಗೆ ಆರಂಭ
ಸ್ಯಾಮ್​ಸಂಗ್ ಎಲೆಕ್ಟ್ರಾನಿಕ್ಸ್ ಹಬ್ಬದ ವಿಶೇಷ ಮಾರಾಟ ಕೊಡುಗೆ ಆರಂಭ
ಶಿವಣ್ಣ-ಉಪ್ಪಿ ನಟನೆಯ ‘45’ ಚಿತ್ರದ ಸುದ್ದಿಗೋಷ್ಠಿ ಲೈವ್ ನೋಡಿ
ಶಿವಣ್ಣ-ಉಪ್ಪಿ ನಟನೆಯ ‘45’ ಚಿತ್ರದ ಸುದ್ದಿಗೋಷ್ಠಿ ಲೈವ್ ನೋಡಿ