ಆರೋಗ್ಯ ಸಲಹೆಗಳು: ಒಂದಾನೊಂದು ಕಾಲದಲ್ಲಿ ಮನೆಮಂದಿಯೆಲ್ಲಾ ಒಟ್ಟಾಗಿ ಸಾಲಾಗಿ ಅಥವಾ ವೃತ್ತಾಕಾರದಲ್ಲಿ ನೆಲದ ಮೇಲೆ ಕುಳಿತು (sitting cross legged) ಊಟ ಮಾಡುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ. ಅಂದಿನ ಮಾದರಿ ಅನುಸರಿಸದೆ ಎಲ್ಲರೂ ಡೈನಿಂಗ್ ಟೇಬಲ್ ನಲ್ಲಿ ಕುಳಿತುಕೊಳ್ಳಲು ಇಷ್ಟಪಡುತ್ತಾರೆ. ಇದಲ್ಲದೆ, ಒಟ್ಟಿಗೆ ಕುಳಿತು ತಿನ್ನಲು ಯಾರಿಗೂ ಸಮಯ ಇಲ್ಲವಾಗಿದೆ.
ಎಲ್ಲವೂ ಎಲ್ಲಾರೂ ಬ್ಯುಸಿ ಬ್ಯುಸಿ.. ಅವರವರ ಸಮಯ ಅವರದಾಗಿದೆ. ಶಾಂತಿಯಿಂದ ಒಟ್ಟಿಗೆ ಕುಳಿತು ನೆಮ್ಮದಿಯಿಂದ ಊಟ ಮಾಡುವ ಸಮಯ ಕಳೆದು ಹೋಗಿ ಯಾವುದೋ ಕಾಲವಾಗಿದೆ. ಆದರೆ, ಡೈನಿಂಗ್ ಟೇಬಲ್ ಮೇಲೆ ಕುಳಿತು ತಿನ್ನುವ ಅಭ್ಯಾಸವು ಅನೇಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ನೆಲದ ಮೇಲೆ ಕುಳಿತು ಆರಾಮವಾಗಿ ತಿನ್ನುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ. ಅಷ್ಟೇ ಅಲ್ಲ. ನೆಲದ ಮೇಲೆ ಕುಳಿತು ತಿನ್ನುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳು ಕಡಿಮೆಯಾಗುತ್ತವೆ ಎಂದು ಆರೋಗ್ಯ ತಜ್ಞರೇ ಹೇಳುತ್ತಾರೆ.. ಈಗ ತಿಳಿಯೋಣ ಬನ್ನೀ
ನೆಲದ ಮೇಲೆ ಕುಳಿತು ಊಟ ಮಾಡುವುದರಿಂದ ದೇಹದ ತೂಕ ಇಳಿಕೆಯಾಗುತ್ತದೆ. ಬೊಜ್ಜು ಬರುವುದಿಲ್ಲ. ನೆಲದ ಮೇಲೆ ಕುಳಿತು ಊಟ ಮಾಡುವುದರಿಂದ ದೇಹ ನೇರವಾಗಿರುತ್ತದೆ. ಈ ಕಾರಣದಿಂದಾಗಿ ಆಹಾರವನ್ನು ಸೇವಿಸಿದಾಗ, ಅದು ಸುಲಭವಾಗಿ ಜೀರ್ಣಾಂಗವ್ಯೂಹದ ಮೂಲಕ ದೇಹದ ವಿವಿಧ ಭಾಗಗಳನ್ನು ತಲುಪುತ್ತದೆ. ಹಾಗೆಯೇ ಮನಸ್ಸು ಶಾಂತವಾಗಿರುತ್ತದೆ. ಇಡೀ ಗಮನ ಆಹಾರದ ಮೇಲೆಯೇ ಇರುತ್ತದೆ. ಆದ್ದರಿಂದ ಅತಿಯಾಗಿ ತಿನ್ನುವುದಿಲ್ಲ. ಇದು ತೂಕವನ್ನು ನಿಯಂತ್ರಣದಲ್ಲಿಡುತ್ತದೆ. ಇದು ದೇಹದಲ್ಲಿ ರಕ್ತ ಪರಿಚಲನೆಯನ್ನೂ ಹೆಚ್ಚಿಸುತ್ತದೆ!
ಮೂಳೆಗಳನ್ನು ಬಲಪಡಿಸುತ್ತದೆ. ಅದು ಪದ್ಮಾಸನದ ಭಂಗಿ.. ಬೆನ್ನು ನೆಟ್ಟಗೆ ಇಟ್ಟುಕೊಳ್ಳುವುದರಿಂದ ನಮಗೆ ತಿಳಿಯದಂತೆ ಯೋಗ ಮಾಡಿದ ಲಾಭ ನಮದಾಗುತ್ತದೆ. ಕುಳಿತುಕೊಂಡು ತಿನ್ನುವುದರಿಂದ ಸ್ನಾಯುಗಳು ಬಲಗೊಳ್ಳುತ್ತವೆ. ನೆಲದ ಮೇಲೆ ಕುಳಿತು ಆಹಾರ ಸೇವಿಸುವವರು ಕ್ರಿಯಾಶೀಲ ಮತ್ತು ಹೊಂದಿಕೊಳ್ಳುವ ದೇಹವನ್ನು ಹೊಂದಿರುತ್ತಾರೆ. ಮೂಳೆ ದೌರ್ಬಲ್ಯವೂ ಕಡಿಮೆಯಾಗುತ್ತದೆ.
ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.. ಇದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ಜೀರ್ಣಕಾರಿ ಸಮಸ್ಯೆಗಳನ್ನು ನಿವಾರಿಸುತ್ತದೆ. ಜೀರ್ಣಕಾರಿ ರಸಗಳ ನಿಯಂತ್ರಣವನ್ನು ಹೆಚ್ಚಿಸುತ್ತದೆ. ಇದು ಹೊಟ್ಟೆಯ ಆಮ್ಲವನ್ನು ಹೆಚ್ಚಿಸಲು ಸಹಾಯ ಮಾಡುವ ಕಿಬ್ಬೊಟ್ಟೆಯ ಸ್ನಾಯುಗಳನ್ನು ಉತ್ತೇಜಿಸುತ್ತದೆ.
ಮನಸ್ಸನ್ನು ರಿಲ್ಯಾಕ್ಸ್ ಮಾಡುತ್ತದೆ. ಪದ್ಮಾಸನವು ಧ್ಯಾನಕ್ಕೆ ಸೂಕ್ತವಾಗಿದೆ. ಮನಸ್ಸನ್ನು ಆರಾಮವಾಗಿ ಮತ್ತು ಶಾಂತವಾಗಿಡುವ ಮೂಲಕ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಬಂಧಗಳನ್ನು ಬಲಪಡಿಸುತ್ತದೆ… ಸಾಂಪ್ರದಾಯಿಕವಾಗಿ ಭಾರತೀಯರು ಕುಟುಂಬವಾಗಿ ಒಟ್ಟಿಗೆ ತಿನ್ನುತ್ತಾರೆ. ಪರಸ್ಪರವಾಗಿ ದಿನದಲ್ಲಿ ಏನೆಲ್ಲಾ ಆಯಿತು, ಆ ದಿನ ಹೇಗೆ ಕಳೆಯಿತು ಎಂದು ತಿಳಿಯಲು, ಬಾಂಧವ್ಯಕ್ಕೆ ಸಹಾಯ ಮಾಡುತ್ತದೆ. ಇದು ಎಲ್ಲರಿಗೂ ಸಂತೋಷ ಮತ್ತು ವಿಶ್ರಾಂತಿ ನೀಡುತ್ತದೆ.
ನಿಮ್ಮ ಇಷ್ಟದ ಆಹಾರ ಸೇವಿಸಿ.. ಮನೆಯವರ ಜೊತೆ ನೆಲದ ಮೇಲೆ ಊಟ ಮಾಡುವುದರಿಂದ ಹಲವಾರು ಪ್ರಯೋಜನಗಳಿವೆ. ಇದು ನಿಮ್ಮನ್ನು ಪರಸ್ಪರ ಹತ್ತಿರವಾಗಿಸುತ್ತದೆ. ಇದು ಆರೋಗ್ಯಕರ ಆಹಾರವನ್ನು ಸಹ ಉತ್ತೇಜಿಸುತ್ತದೆ.