Hindu Rituals: ವಿವಾಹಿತ ಮಹಿಳೆಯರು ದಾರವನ್ನು ಯಾವ ಕೈಯಲ್ಲಿ ಕಟ್ಟಬೇಕು? ನಿಯಮಗಳೇನು?

| Updated By: ಅಕ್ಷಯ್​ ಪಲ್ಲಮಜಲು​​

Updated on: Apr 15, 2024 | 10:30 AM

 ಹಿಂದೂ ಧರ್ಮದಲ್ಲಿ ಕಲವಾ ಕಟ್ಟುವುದಕ್ಕೆ ವಿಶೇಷ ಮಹತ್ವವಿದೆ. ಯಾವುದೇ ಶುಭ ಕಾರ್ಯವನ್ನು ಮೌಲಿ ಅಥವಾ ಕಲವಾವನ್ನು ಕಟ್ಟುವ ಮೂಲಕ ಪ್ರಾರಂಭಿಸಲಾಗುತ್ತದೆ. ಈ ಮೌಲಿಯನ್ನು ರಕ್ಷಾ ಸೂತ್ರ ಎಂದೂ ಕೂಡ ಕರೆಯುತ್ತಾರೆ. ಆದರೆ ಇದನ್ನು ಕಟ್ಟಲು ಕೆಲವು ನಿಯಮಗಳಿವೆ. ಜೊತೆಗೆ ವಿವಾಹಿತ ಮಹಿಳೆಯರು ಕಲವಾವನ್ನು ಯಾವ ಕೈಯಲ್ಲಿ ಕಟ್ಟಬೇಕು ಎಂಬುದನ್ನು ತಿಳಿದುಕೊಳ್ಳಬೇಕಾಗುತ್ತದೆ.

Hindu Rituals: ವಿವಾಹಿತ ಮಹಿಳೆಯರು ದಾರವನ್ನು ಯಾವ ಕೈಯಲ್ಲಿ ಕಟ್ಟಬೇಕು? ನಿಯಮಗಳೇನು?
Follow us on

ಮೌಲಿ, ಕಲವಾ, ರಕ್ಷಾಸೂತ್ರ ಅಥವಾ ಹಸಿ ದಾರ ಹೀಗೆ ನಾನಾ ಹೆಸರುಗಳಿಂದ ಕರೆಯುವ ದಾರವನ್ನು ಕೈಯ ಮಣಿಕಟ್ಟಿನ ಮೇಲೆ, ಸೊಂಟದ ಮೇಲೆ, ಕುತ್ತಿಗೆಯ ಮೇಲೆ, ಕಲಶದ ಮೇಲೆ, ಮರಕ್ಕೆ, ಹೊಸದಾದ ವಸ್ತುಗಳ ಮೇಲೆ ಮತ್ತು ದೇವರ ಸ್ಥಳದಲ್ಲಿ ಕಟ್ಟುವುದನ್ನು ನೀವು ಗಮನಿಸಿರಬಹುದು. ವ್ರತವನ್ನು ಆಚರಿಸುವ ಅಥವಾ ವ್ರತ ಮಾಡುವುದಾಗಿ ಪ್ರತಿಜ್ಞೆಯನ್ನು ತೆಗೆದುಕೊಂಡವರು ಈ ದಾರ ಕಟ್ಟುವುದನ್ನು ನೀವು ಗಮನಿಸಿರಬಹುದು. ಅದರಲ್ಲಿಯೂ ಈ ಮೌಲಿಯನ್ನು ಕಟ್ಟುವುದು ಹಿಂದೂ ಧರ್ಮದಲ್ಲಿ ವಿಶೇಷ ಮಹತ್ವವನ್ನು ಹೊಂದಿದೆ. ಯಾವುದೇ ಶುಭ ಕಾರ್ಯವನ್ನು ಮೌಲಿ ಅಥವಾ ಕಲವಾವನ್ನು ಕಟ್ಟುವ ಮೂಲಕ ಪ್ರಾರಂಭಿಸಲಾಗುತ್ತದೆ. ಈ ಮೌಲಿಯನ್ನು ರಕ್ಷಾ ಸೂತ್ರ ಎಂದೂ ಕೂಡ ಕರೆಯುತ್ತಾರೆ. ಆದರೆ ಇದನ್ನು ಕಟ್ಟಲು ಕೆಲವು ನಿಯಮಗಳಿವೆ. ಜೊತೆಗೆ ವಿವಾಹಿತ ಮಹಿಳೆಯರು ಕಲವಾವನ್ನು ಯಾವ ಕೈಯಲ್ಲಿ ಕಟ್ಟಬೇಕು ಎಂಬುದನ್ನು ತಿಳಿದುಕೊಳ್ಳಬೇಕಾಗುತ್ತದೆ.

  • ಅವಿವಾಹಿತ ಹುಡುಗಿಯರು ಮತ್ತು ಹುಡುಗರು ಯಾವಾಗಲೂ ದಾರವನ್ನು ತಮ್ಮ ಬಲಗೈಗೆ ಕಟ್ಟಬೇಕು. ವಿವಾಹಿತ ಮಹಿಳೆಯರು ತಮ್ಮ ಎಡಗೈಗೆ ಕಲವಾ ಕಟ್ಟುವುದು ಶುಭಕರ.
  • ಯಾವಾಗಲೂ ದಾರ ಕಟ್ಟುವಾಗ ಸ್ವಲ್ಪ ದಕ್ಷಿಣೆಯನ್ನು ನಿಮ್ಮ ಕೈಯಲ್ಲಿ ಇಟ್ಟುಕೊಳ್ಳಿ. ಜೊತೆಗೆ ಆ ಮುಷ್ಠಿಯನ್ನು ಮುಚ್ಚಿಡಿ. ಅಲ್ಲದೆ, ದಾರ ಕಟ್ಟುವಾಗ, ಒಂದು ಕೈ ತಲೆಯ ಮೇಲೆ ಇರಬೇಕು.
  • ಕೈಯಿಗೆ ದಾರವನ್ನು ಕಟ್ಟುವಾಗ, 3, 5 ಅಥವಾ 7 ಬಾರಿ ತಿರುಗಿಸುವ ಅಥವಾ ಸುತ್ತುವುದನ್ನು ಮರೆಯಬೇಡಿ.
  • ಯಾವಾಗಲಾದರೂ ಈ ದಾರವನ್ನು ತೆಗೆದುಹಾಕಬೇಕು ಎಂದು ಅನಿಸಿದಲ್ಲಿ ಮಂಗಳವಾರ ಅಥವಾ ಶನಿವಾರ ಅದನ್ನು ತೆಗೆದುಹಾಕಿ. ಈ ದಾರ ಅಥವಾ ಕಲವಾವನ್ನು ತೆಗೆದ ಬಳಿಕ ಅದನ್ನು ಎಸೆಯಬೇಡಿ, ಅದನ್ನು ಶುದ್ಧ ನೀರಿನಲ್ಲಿ ತೊಳೆದು ಅರಳಿ ಮರದ ಕೆಳಗೆ ಇರಿಸಿ, ಅಥವಾ ಹರಿಯುವ ನೀರಿನಲ್ಲಿ ಬಿಡಿ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ